ಧ್ವನಿ ಎತ್ತಿದಾಗ ಮಾತ್ರ ನ್ಯಾಯ ದೊರೆಯಲು ಸಾಧ್ಯ; ದೇವರಾಜ

oppo_32
oppo_32
Published on

ರಾಣೆಬೆನ್ನೂರ: ಸಂಘಟನೆಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ನ್ಯಾಯ ದೊರೆಯಲು ಸಾಧ್ಯ ಎಂದು ಬರಹಗಾರ ದೇವರಾಜ ಹುಣಸಿಕಟ್ಟಿ ಹೇಳಿದರು.
ಇಲ್ಲಿಯ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಎಸ್​ಎ್​ಐ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ತತ್ವಗಳನ್ನು ಆದರ್ಶಗಳನ್ನು ತುಂಬುವುದು ಮಾತೃ ಹೃದಯ ಮಾಡುವ ಕೆಲಸ. ಅಂತಹ ಕಾರ್ಯವನ್ನು ಎಸ್​ಎಫ್​ಐ ಸಂಘಟನೆ ಸಮಾಜದಲ್ಲಿ ಮಾಡುತ್ತಿದೆ ಎಂಬ ಹೆಮ್ಮೆಯಿದೆ. ಎಲ್ಲಿ ಅನ್ಯಾಯ ನಡೆಯುತ್ತದೆ ಅಲ್ಲಿ ಸರ್ಕಾರದ ಅಧಿಕಾರಶಾಹಿ ವರ್ಗವನ್ನು ಪ್ರಶ್ನಿಸಲು ಸಾಧ್ಯವಿಲ್ಲವೋ ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಪ್ರಶ್ನೆ ಮಾಡುವ ಮೂಲಕ ವಿದ್ಯಾಥಿರ್ ಸಮುದಾಯಕ್ಕೆ ನ್ಯಾಯವನ್ನು ಕೊಡಿಸುವ ಕಾರ್ಯವನ್ನು ಎಸ್​ಎಫ್​ಐ ಮಾಡುತ್ತಿದೆ ಎಂದರು.
ಉಪನ್ಯಾಸಕ ಡಾ. ಹೊನ್ನಪ್ಪ ಹೊನ್ನಪ್ಪನವರ, ಎಸ್​.ಡಿ. ಬಳಿಗಾರ, ಎಸ್​ಎಫ್​ಐ ಜಿಲ್ಲಾ ಸಹ ಕಾರ್ಯದಶಿರ್ ಬಸವರಾಜ ಎಸ್​., ತಾಲೂಕು ಅಧ್ಯಕ್ಷ ಶ್ರೀಧರ ಸಿ., ಕೀರ್ತನಾ ಎಚ್​., ಶೃತಿ ಆರ್​.ಎಂ., ಸಿಂಚನ ಮಾಗನೂರ, ಬಸವರಾಜ ಕೊಣಸಾಲಿ, ಮಹೇಶ ಮರೋಳ, ಗಜೇಂದ್ರ ಆರೇರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net