ಅಮ್ಮನೆಂಬ ಪ್ರೀತಿಯ ಕಡಲು: ಪಿಯುಸಿ ಫೇಲಾದಾಗ...

Mom
Published on

ಅಮ್ಮನಿಲ್ಲದೆ ಬದುಕಿಲ್ಲ, ಅವಳೊಂದು ದೊಡ್ಡ ಭಾವಶಕ್ತಿ. ಅವಳ ಅಂತಃಕರಣದ ಲೋಕದಲ್ಲಿ ಬೆಳೆದ ಮಕ್ಕಳು ಎಷ್ಟೇ ದೊಡ್ಡವರಾದರೂ, ಆ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಪ್ರೇರಣೆಯನ್ನು ಮರೆಯಲು ಸಾಧ್ಯವಿಲ್ಲ. ಹಾಗಾಗಿ, ಜೀವನದಲ್ಲಿ "ತಾಯಿಯೇ ದೇವರು' ಎಂದೆನಿಸಿದ ಸಂದರ್ಭಗಳನ್ನು ಹಂಚಿಕೊಳ್ಳುವಂತೆ ನೀಡಿದ ಕರೆಗೆ ಓದುಗರಿಂದ ಬಂದಿರುವ ಪ್ರತಿಕ್ರಿಯೆ ಅಭೂತಪೂರ್ವ. ಅಮ್ಮನ ದಿನದ ನಿಮಿತ್ತ ಅಂಥ ಕೆಲ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.

ಪಿಯುಸಿ ಫೇಲಾದಾಗ... ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕಿಯಾದ ನನ್ನವ್ವ, ನಾನು ಪಿಯುಸಿಯಲ್ಲಿ ೇಲ್​ ಆದಾಗ ನನಗೆ ಧೈರ್ಯ ತುಂಬಿದ ರೀತಿ ಈಗಲೂ ನೆನಪಿದೆ "ಇಷ್ಟಕ್ಕೆಲ್ಲ ಧೈರ್ಯ ಕಳ್ಕೋಬೇಡ. ಒಂದ ಕಿರಾಣಿ ಅಂಗಡಿ ಇಡೋನು, ನಾ ಶಾಲಿಗಿ ಹೋಗಿ ಬರುವವರೆಗೂ ಮಾತ್ರ ನೀ ನೋಡಕೊ. ಉಳದ ಟೈಮ್​ ನಾನ ನಡಸತಿನಿ. ನೀ ಭಾಳ ಶ್ಯಾನೆ ಆಗದಿದ್ರೂ ಚಿಂತಿ ಇಲ್ಲ. ಒಬ್ಬ ಒಳ್ಳೆಯ ಮನುಷ್ಯ ಆಗ' ಅಂದಾಕಿ. ಅವಳದ್ದೇ ಆಶೀರ್ವಾದದ ಲವೇನೊ ನಾನು ಇವತ್ತು ಆರೋಗ್ಯ ಇಲಾಖೆಯ ನೌಕರಿಯಲ್ಲಿದ್ದೇನೆ. ಅದೂ ನನ್ನೂರಲ್ಲೇ.

| ಪ್ರಶಾಂತ ಸುಣಗಾರ ಸುರೇಬಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net