ಈ ಹಿಂದೆಯೂ Saif Ali Khan ಮೇಲೆ ನಡೆದಿತ್ತು ಹಲ್ಲೆ! ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ರು ನಟ

Saif Ali Khan
Published on

ಮುಂಬೈ: ಬಾಲಿವುಡ್​ ನಟ ಸೈಫ್​ ಅಲಿ ಖಾನ್​ಗೆ (Saif Ali Khan) ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದಿದ್ದು, ಸದ್ಯ ನಟ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್​ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಘಟನೆಯ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದೆ. ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನಿಸಿ ಹಲವರು ಟ್ವೀಟ್​ ಮಾಡುತ್ತಿದ್ದು, ಪೊಲೀಸರು ಆರೋಪಿಯನ್ನು ಹುಡುಕಲು ವಿಶೇಷ ತಂಡವನ್ನು ರಚಿಸಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್​ (Saif Ali Khan) ಮನೆಗೆ ನುಗ್ಗಿದ ದುಷ್ಕರ್ಮಿಯೋರ್ವ ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದ್ದು, ಮೊದಲಿಗೆ ಸೈಫ್ ಅಲಿ ಖಾನ್​ ಅವರ ಮನೆ ಕೆಲಸದವರ ಮೇಲೆ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಸೈಫ್​ ಅವರಿಗೆ ದುಷ್ಕರ್ಮಿ ದೇಹದ ಆರು ಕಡೆ ಚಾಕುವಿನಿಂದ ಇರಿದಿದ್ದು, ಬಳಿಕ ಆತ ಎಸ್ಕೇಪ್​ ಆಗಿದ್ದಾನೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ದುಷ್ಕರ್ಮಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದ್ದು, ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಇನ್ನೂ ನಟ ಸೈಫ್​ ಅಲಿ ಖಾನ್​ (Saif Ali Khan) ಅವರ ಮೇಲೆ ಹಲ್ಲೆ ನಡೆದಿರುವುದು ಇದೇ ಮೊದಲಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸೈಫ್​, ಮೈನ್ ಖಿಲಾಡಿ ತು ಅನಾರಿ ಚಿತ್ರದ ಪ್ರೀಮಿಯರ್​ ಶೋ ಬಳಿಕ ನಾನು ನನ್ನ ಸ್ನೇಹಿತರೊಂದಿಗೆ ನೈಟ್​ಕ್ಲಬ್​ ಒಂದಕ್ಕೆ ಹೋಗಿದ್ದೆ. ಈ ವೇಳೆ ಇಬ್ಬರು ಹುಡುಗಿಯರು ಅವರ ಜೊತೆ ಡ್ಯಾನ್ಸ್​ ಮಾಡುವಂತೆ ಮನವಿ ಮಾಡಿದರು. ಕೆಲಕಾಲ ನಾನು ಅವರೊಟ್ಟಿಗೆ ಡ್ಯಾನ್ಸ್​ ಮಾಡಿದೆ. ಆ ಬಳಿಕ ಅವರು ತಮ್ಮ ಬಾಯ್​ಫ್ರೆಂಡ್​ಗಳ ಜೊತೆ ಇದ್ದರು. 

ನಾನು ಅವರ ಬಾಯ್​ಫ್ರೆಂಡ್ಸ್​ಗೆ ಹುಷಾರಾಗಿ ಕರೆದುಕೊಂಡು ಹೋಗುವಂತೆ ಹೇಳಿದೆ. ಆದರೆ, ಆತ ನನ್ನ ಹೇಳಿಕೆಯನ್ನು ಯಾವ ರೀತಿ ಅರ್ಥ ಮಾಡಿಕೊಂಡರೆಂಬುದು ತಿಳಿದಿಲ್ಲ. ಆತ ಏಕಾಏಕಿ ನನ್ನ ಮುಖಕ್ಕೆ ಗುದ್ದಿದ. ಈ ಘಟನೆಗೆ ಸಂಬಂಧಿಸಿದಂತೆ ಅಂದು ನನ್ನ ಜೊತೆಗಿದ್ದವರದ್ದು ಯಾವುದೇ ತಪಪ್ಇಲ್ಲ. ನಾನು ಕೂಡ ಪೊಲೀಸರಿಗೆ ದೂರು ನೀಡಲು ಹೋಗಲಿಲ್ಲ. ಅನಗತ್ಯ ಪ್ರಚಾರವನ್ನು ಬಯಸದ ಕಾರಣ ನಾನು ಪೊಲೀಸರಿಗೆ ದೂರು ನೀಡಲಿಲ್ಲ ಎಂದು ನಟ ಸೈಫ್​ ಅಲಿ ಖಾನ್​ (Saif Ali Khan) ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net