ಸೀನನ್ನು ಬಲವಂತವಾಗಿ ತಡೆ ಹಿಡಿದ ವ್ಯಕ್ತಿ: ಮುಂದೆ ನಡೆದದ್ದು ಮಾತ್ರ ಜೀವನ ಪೂರ್ತಿ ಮರೆಯೊಲ್ಲ ಈತ..

SNEEZ
ಸಾಂದರ್ಭಿಕ ಚಿತ್ರ
Published on

ಬ್ರಿಟನ್: ನೈಸರ್ಗಿಕ ಪ್ರಕ್ರಿಯೆಗಳನ್ನು ನಿಲ್ಲಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗೆ ಮಾಡಿದರೆ ಮುಂದೆ ಅನೇಕ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸುತ್ತಾರೆ. ಆದರೆ ಕೆಲವರು ಈ ರೀತಿಯ ವಿಷಯಗಳನ್ನು ತುಂಬಾ ಲಘುವಾಗಿ ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಹೀಗೆ ಮಾಡಿ ವ್ಯಕ್ತಿಯೊಬ್ಬ ಸೀನು ತಡೆಯಲು ಹೋಗಿ ಜೀವನವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಪತ್ನಿ ಹತ್ಯೆಗೈದು ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದ ಪತಿ..


ಬ್ರಿಟನ್‌ನ 34 ವರ್ಷದ ವ್ಯಕ್ತಿಯೊಬ್ಬ ವ್ಯಕ್ತಿಯೊಬ್ಬನಿಗೆ ಸೀನು ಬಂದಿದ್ದು, ಈ ವೇಳೆ ಆತ ಸೀನು ಬರದಂತೆ ಮೂಗು ಮತ್ತು ಬಾಯಿಯನ್ನು ಬಿಗಿಯಾಗಿ ಮುಚ್ಚಿಕೊಂಡಿದ್ದ. ಸೀನು ನಿಲ್ಲಿಸಿದ ನಂತರ ಆತ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಯಾವುದೇ ಆಹಾರವನ್ನು ನುಂಗಲು ಆಗದೇ ಇರುವುದು, ಗಂಟಲಿನಲ್ಲಿ ಏನೋ ಕಿರಿಕಿರಿ, ಕುತ್ತಿಗೆ ಊತ, ಅಸಹನೀಯ ನೋವು ಹೀಗೆ ಅನೇಕ ತೊಂದರೆಗಳು ಕಾಣಿಸಿಕೊಂಡಿದ್ದು ಆತ ಆಸ್ಪತ್ರೆಗೆ ತೆರಳಿದ್ದಾನೆ.

SNEEZ CRACK


ಆತನ ವೈದ್ಯಕೀಯ ಪರೀಕ್ಷೆ ವೇಳೆ ವೈದ್ಯರು ಆತನ ಗಂಟಲಿನ ಅಂಗಾಂಶ ಬಿರುಕು ಬಿಟ್ಟಿದ್ದನ್ನು ಪತ್ತೆ ಹಚ್ಚಿದ್ದು, ಇದೊಂದು ಅಪರೂಪದ ಘಟನೆ ಎಂದು ವೈದ್ಯರು ತೀರ್ಮಾನಿಸಿ ಆತನಿಗೆ ಕುತ್ತಿಗೆ ಸೋಂಕು ತಗಲುವ ಅಪಾಯವಿದೆಯೇ ಎಂದು ತಿಳಿಯಲು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ಬಳಿಕೆ ವೈದ್ಯರು ಆತನಿಗೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆ ಸಮಯದಲ್ಲಿ ಟ್ಯೂಬ್‌ಗಳ ಮೂಲಕ ಆ್ಯಂಟಿಬಯೋಟಿಕ್​ಗಳನ್ನು ಮಾತ್ರ ನೀಡಲಾಗುತ್ತಿತ್ತು. ತದನಂತರ ಹಲವು ದಿನಗಳ ಬಳಿಕ ಯುವಕ ಚೇತರಿಸಿಕೊಂಡು ಮೃದುವಾದ ಆಹಾರವನ್ನು ತಿನ್ನಲು ಪ್ರಾರಂಭಿಸಿದ್ದಾನೆ ಎಂದು ಬ್ರಿಟೀಷ್​ ವೈದ್ಯಕೀಯ ಜರ್ನಲ್​​ ಈ ಘಟನೆ ಬಗ್ಗೆ ಬಹಿರಂಗಪಡಿಸಿದೆ.(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net