500 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಳಸುತ್ತಿರುವ ವಾಟ್ಸ್​ಆ್ಯಪ್​ ನ ಈ ಫೀಚರ್​​​ಗೆ ಸೇರಿಸಲಾಗಿದೆ 3 ಹೊಸ ಆಯ್ಕೆಗಳು

WA
Published on

ಬೆಂಗಳೂರು: ವಾಟ್ಸ್​ಆ್ಯಪ್​ ಅನ್ನು ವಿಶ್ವದಾದ್ಯಂತ 2 ಶತಕೋಟಿಗೂ ಹೆಚ್ಚು ಜನರು ಬಳಸುತ್ತಾರೆ. ಈ ಅಪ್ಲಿಕೇಶನ್ ಬಳಸುವುದು ತುಂಬಾ ಸುಲಭ. ಕಾಲಕಾಲಕ್ಕೆ ಕಂಪನಿಯು ವಾಟ್ಸ್​ಆ್ಯಪ್​ಗೆ ಹೊಸ ವೈಶಿಷ್ಟ್ಯ ಅಥವಾ ಫೀಚರ್​​​​​ಗಳನ್ನು ಸೇರಿಸುತ್ತಲೇ ಇರುತ್ತದೆ. ಕಳೆದ ವರ್ಷ, ಹೊಸ ಫೀಚರ್​​​​ನಲ್ಲಿ ವಾಟ್ಸಾಪ್ ಚಾನೆಲ್​​ ಮಾಡಲಾಯಿತು. ಅದರ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಸಂಸ್ಥೆಗಳು, ಸೆಲೆಬ್ರಿಟಿಗಳು ಇತ್ಯಾದಿಗಳಿಗೆ ಮೊಬೈಲ್ ಸಂಖ್ಯೆ ಇಲ್ಲದೆ ಫಾಲೋ ಮಾಡಬಹುದಾಗಿತ್ತು. ಇದು ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ, ವಾಟ್ಸ್​ಆ್ಯಪ್ ಚಾನಲ್ 500 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಈಗ ಕಂಪನಿಯು ಚಾನಲ್‌ಗಾಗಿ ಕೆಲವು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ.

3 ಹೊಸ ವೈಶಿಷ್ಟ್ಯಗಳು 
ವಾಟ್ಸಾಪ್ 3 ಹೊಸ ವೈಶಿಷ್ಟ್ಯಗಳನ್ನು ಚಾನಲ್‌ಗಳಿಗೆ ಸೇರಿಸಿದೆ. ಇದರಲ್ಲಿ ವಾಯ್ಸ್​​​ ನೋಟ್ಸ್​​, ಮಲ್ಟಿಪಲ್​​​​ ಅಡ್ಮಿನ್ಸ್, ಸ್ಟೇಟಸ್​​​ ಶೇರಿಂಗ್​​ ಹಾಗೂ ಸಮೀಕ್ಷೆಗಳನ್ನು ಒಳಗೊಂಡಂತೆ ಹೊಸ ಫೀಚರ್​​​ಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ವೈಶಿಷ್ಟ್ಯದ ಅಡಿಯಲ್ಲಿ, ಚಾನಲ್ ಅಡ್ಮಿನ್ಸ್ ಒಂದಕ್ಕಿಂತ ಹೆಚ್ಚು ಅಡ್ಮಿನ್ಸ್ ಕ್ರಿಯೇಟ್​​​ ಮಾಡಬಹುದು. ಇದರಿಂದ ಅವರ ಅನುಪಸ್ಥಿತಿಯಲ್ಲಿಯೂ ಚಾನಲ್‌ನಲ್ಲಿ ಅಪ್​​​​ಡೇಟ್ಸ್​​​ ಪಡೆಯಬಹುದು.

ವಾಟ್ಸ್​ಆ್ಯಪ್ ಚಾನೆಲ್‌ಗಾಗಿ ಹೊಸ ವೈಶಿಷ್ಟ್ಯಗಳನ್ನು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದಾರೆ. ವಾಯ್ಸ್ ಮೆಸೇಜ್ ಫೀಚರ್ ಮೂಲಕ, ಚಾನಲ್ ಅಡ್ಮಿನ್ಸ್ ತಮ್ಮ ಸಂದೇಶವನ್ನು ಧ್ವನಿಯ ಮೂಲಕವೂ ಜನರಿಗೆ ತಲುಪಿಸಬಹುದು. ಇದು ಚಾನಲ್ ಅಡ್ಮಿನ್ಸ್ ಮತ್ತು ಅನುಯಾಯಿಗಳ ನಡುವೆ ಸಂಪರ್ಕವನ್ನು ಸೃಷ್ಟಿಸುತ್ತದೆ. ಪೋಲ್ಸ್ ವೈಶಿಷ್ಟ್ಯವನ್ನು ಬಳಸಿಕೊಂಡು, ಅಡ್ಮಿನ್ಸ್ ಜನರು ಇಷ್ಟಪಡುವ ಯಾವುದೇ ವಿಷಯದ ಕುರಿತು ಅಭಿಪ್ರಾಯವನ್ನು ತೆಗೆದುಕೊಳ್ಳಬಹುದು.

ಚಾನಲ್‌ ಫಾಲೋ ಮಾಡುವ ಬಳಕೆದಾರರು ಈಗ ಅದರಲ್ಲಿ ಬರುವ ಮಲ್ಟಿಮೀಡಿಯಾ ಸಂದೇಶಗಳನ್ನು ನೇರವಾಗಿ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಳ್ಳಬಹುದು. ಸ್ಟೇಟಸ್ ಮೂಲಕ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ದಿನನಿತ್ಯದ ಪೋಸ್ಟಿಂಗ್‌ಗಳನ್ನು ನಿಮ್ಮ ಸ್ನೇಹಿತರಿಗೆ ತೋರಿಸಬಹುದು. ನೀವು ವಾಟ್ಸ್​ಆ್ಯಪ್​ ನಲ್ಲಿ ನಿಮ್ಮ ಸ್ವಂತ ಚಾನಲ್ ಅನ್ನು ಸಹ ಕ್ರಿಯೇಟ್​​​ ಮಾಡಬಹುದು. ಚಾನಲ್ ಕ್ರಿಯೇಟ್​​​ ಮಾಡಲು, ನೀವು ಸ್ಟೇಟಸ್‌ ಟ್ಯಾಬ್ ಅಡಿಯಲ್ಲಿ ಹೊಸ ಚಾನಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net