ಕೈಕೊಟ್ಟ ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್​; ಮೆಸೇಜಿಂಗ್​ನಲ್ಲಿ ಭಾರಿ ವ್ಯತ್ಯಯ!

WhatsApp
Published on

ಬೆಂಗಳೂರು: ಡಿಜಿಟಲ್ ಮೀಡಿಯಾ ಅರ್ಥಾತ್​ ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್​ಗಳನ್ನು ಬಳಸುತ್ತಿರುವವರಿಗೆ ಇದ್ದಕ್ಕಿದ್ದಂತೆ ಸರ್ವರ್​ ಕೈಕೊಟ್ಟಿದೆ.

ಸೋಷಿಯಲ್​ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್​ ಆಗಿದ್ದು, ಸಂವಹನ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯವಾಗಿದೆ.

ಈ ಬಗ್ಗೆ ಬಳಕೆದಾರರು ಟ್ವಿಟರ್​ನಲ್ಲಿ ಸಮಸ್ಯೆ ಹೇಳಿಕೊಳ್ಳಲಾರಂಭಿಸಿರುವುದರಿಂದ ವಾಟ್ಸ್​​ಆ್ಯಪ್ ಕುರಿತು ಲಕ್ಷಾಂತರ ಟ್ವೀಟ್​ ಪೋಸ್ಟ್ ಆಗಿರುವುದರಿಂದ​ ಟ್ವಿಟರ್​ನಲ್ಲಿ ಈಗಾಗಲೇ ಟ್ರೆಂಡಿಂಗ್​ನಲ್ಲಿದೆ. ಅಲ್ಲದೆ ಮೆಸೇಜಿಂಗ್​ಗೆ ಹಲವರು ಈಗ ಟೆಲಿಗ್ರಾಮ್​ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು, ಇನ್​ಸ್ಟಾಲ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net