

ಬೆಂಗಳೂರು: ಅಪರೂಪಕ್ಕೊಮ್ಮೆ ತಾಂತ್ರಿಕ ಸಮಸ್ಯೆಗೆ ಒಳಗಾಗುವರ ವಾಟ್ಸ್ಆ್ಯಪ್ ಇದೀಗ ಗ್ರಹಣದ ದಿನ್ನ ಇನ್ನೊಮ್ಮೆ ಕೈಕೊಟ್ಟಿದ್ದು, ಬಳಕೆದಾರರರು ಪರದಾಡುವಂತೆ ಮಾಡಿದೆ.
ವಾಟ್ಸ್ಆ್ಯಪ್ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವೇ ಹೊತ್ತಿನಲ್ಲಿ ಟ್ವಿಟರ್ನಲ್ಲಿ ವಾಟ್ಸ್ಆ್ಯಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್ಆ್ಯಪ್ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ.