

| ರುದ್ರಣ್ಣ ಹರ್ತಿಕೋಟೆ ಬೆಳಗಾವಿ
ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾಗಿರುವ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವುದರಿಂದ ಈ ಭಾಗದ ಅಭಿವೃದ್ಧಿಗೆ ನಿಜಕ್ಕೂ ಅನುಕೂಲವಾಗಿದೆಯೇ? ಇದೀಗ 11ನೇ ಅಧಿವೇಶನ ನಡೆಯುತ್ತಿದ್ದು, ಒಟ್ಟಾರೆ 110 ದಿನಗಳ ಕಾಲ ಇಲ್ಲಿ ಕಲಾಪ ನಡೆದಂತಾಗಲಿದೆ. ಇದಕ್ಕಾಗಿ ಅಂದಾಜು 168 ಕೋಟಿ ರೂ. ವೆಚ್ಚವಾಗಿದೆ. ಪ್ರತಿ ಬಾರಿಯೂ 2 ದಿನ ಉತ್ತರ ಕರ್ನಾಟಕದ ವಿಚಾರಗಳ ಚರ್ಚೆಗಳಾಗಿದ್ದರೂ ನಿರೀಕ್ಷಿತ ಫಲ ನೀಡಿಲ್ಲವೆಂಬ ಅಸಮಾಧಾನ ಜನರಿಗಿದೆ.
ಅಧಿವೇಶನ ನಡೆದಿದೆ ಎಂಬುದನ್ನು ಬಿಟ್ಟರೆ ಆಗಿರುವುದೇನು ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಯತ್ನದ ಫಲವಾಗಿ 8 ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ಬೆಳಗಾವಿಯಲ್ಲಿ ನೀಡಲಾಗಿದೆ. ಆದರೆ, ಒಟ್ಟಾರೆ ನೀರಾವರಿ ಯೋಜನೆಗಳ ಬಳಕೆಯಲ್ಲಿ ಹಿಂದಿದ್ದೇವೆ ಎಂಬ ಅಸಮಾಧಾನವೂ ಇದೆ. ಸಣ್ಣಪುಟ್ಟ ಇಲಾಖೆಗಳ ಬದ ಲಿಗೆ ಪ್ರತಿ ಇಲಾಖೆಯನ್ನು ವಿಭಜಿಸಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಕಚೇರಿಗಳನ್ನು ಸ್ಥಾಪಿಸಲಿ, ಮುಖ್ಯಮಂತ್ರಿ ಸಚಿವಾಲಯದ ಕಚೇರಿಯೂ ಇಲ್ಲಿರಬೇಕು. ಸಚಿವ ಸಂಪುಟ ಸಭೆಗಳನ್ನು ನಡೆಸಬೇಕು.
ಈ ಭಾಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಇಲ್ಲಿಯೇ ನಿರ್ಣಯಿಸಬೇಕು. ಆ ಮೂಲಕ ಬೆಂಗಳೂರಿಗೆ ಅಲೆಯುವ ಕೆಲಸ ತಪ್ಪಬೇಕು ಎಂಬ ಆಗ್ರಹ ಇಲ್ಲಿದೆ. ಅಧಿವೇಶನ ಇಲ್ಲಿ ನಡೆದರೂ ಈ ಭಾಗಕ್ಕೆ ಏನು ಬೇಕೆಂದು ಯಾವ ಪ್ರಮಾಣದಲ್ಲಿ ದನಿ ಎತ್ತಬೇಕಾಗಿತ್ತೋ ಅಷ್ಟು ಆಗುತ್ತಿಲ್ಲ; ಪಕ್ಷಭೇದ ಮರೆತು ಬೇಡಿಕೆಗಳ ಬಗ್ಗೆ ಆಗ್ರಹಿಸಬೇಕೆಂಬುದು ಜನರ ಅನಿಸಿಕೆ.
* ತಿಂಗಳಿಗೊಂದು ಸಚಿವ ಸಂಪುಟ ಸಭೆ
* ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರ
* ಎಲ್ಲ ಇಲಾಖೆಗಳನ್ನು ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕವೆಂದು ವಿಭಜಿಸಿ ಕಚೇರಿಗಳ ಸ್ಥಾಪನೆ
* ಮುಖ್ಯಮಂತ್ರಿ ಸಚಿವಾಲಯದ ಕಚೇರಿ ಸ್ಥಾಪನೆ, ಕಾರ್ಯದರ್ಶಿಮಟ್ಟದ ಅಧಿಕಾರಿ ನಿಯೋಜನೆ
* ಕೈಗಾರಿಕೆಗಳ ಸ್ಥಾಪನೆ
* ಸಂಪರ್ಕ ವೃದ್ಧಿಗೆ ಆದ್ಯತೆ
* ನೀರಾವರಿ ಯೋಜನೆಗಳ ಹೆಚ್ಚಳ
* ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ
* ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ನೀರಿನ ಪಾಲು ಸಂಪೂರ್ಣ ಬಳಕೆ
* ತುಂಗಭದ್ರಾಕ್ಕೆ ಸಮಾನಾಂತರ ಅಣೆಕಟ್ಟು
* ನೆರೆ ಸಂತ್ರಸ್ತರ ಪುನರ್ವಸತಿ
* ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ
* ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಬೇಕು
* ಯುಕೆಪಿ ಮೂರನೇ ಹಂತದ ಯೋಜನೆಗೆ ವೇಗ ನೀಡುವುದು
ಜಿಲ್ಲಾಡಳಿತ ಭವನ: ಬೆಳಗಾವಿ, ಧಾರವಾಡ, ವಿಜಯಪುರಗಳಲ್ಲಿ ಜಿಲ್ಲಾಡಳಿತ ಭವನಗಳಿಲ್ಲ. ಆದ್ದರಿಂದ ಮೂರು ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತವಾದ ಜಿಲ್ಲಾಡಳಿತ ಭವನಗಳನ್ನು ನಿರ್ವಿುಸಬೇಕು ಎಂಬ ಒತ್ತಾಯವಿದೆ.
ಮಹಾರಾಷ್ಟ್ರಕ್ಕೆ ಸಂದೇಶ: ಪದೇಪದೆ ಗಡಿ ಕ್ಯಾತೆ ಮಾಡುವ, ಬೆಳಗಾವಿ ಬೇಕೆಂದು ವಿವಾದ ಮಾಡುವ ಮಹಾರಾಷ್ಟ್ರದ ಬಾಯಿ ಮುಚ್ಚಿಸುವ ಉದ್ದೇಶದಿಂದಲೇ ಇಲ್ಲಿ ಅಧಿವೇಶನ ನಡೆಸುವುದಕ್ಕೆ ಆರಂಭ ಮಾಡಿದ್ದು, ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ನೆಲಕಚ್ಚುವಂತೆ ಮಾಡಿರುವುದು ದೊಡ್ಡ ಸಾಧನೆ ಎಂಬುದು ಸರ್ಕಾರದ ಹೇಳಿಕೆ.
ಎರಡನೇ ರಾಜಧಾನಿ?: ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸುವುದಾಗಿ ಸರ್ಕಾರ ಹೇಳುತ್ತಿದೆ. ಅಧಿಕೃತವಾಗಿ ಘೋಷಣೆ ಮಾಡಲಾಗದು. ಆದರೆ, ಆ ನಿಟ್ಟಿನಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
ಚಳಿಗಾಲದ ಅಧಿವೇಶನ ಬಿಟ್ಟರೆ ಬೇರೆ ಏನೂ ಅಗಿಲ್ಲ. ಉದ್ಯಮಗಳ ಸ್ಥಾಪನೆ ಆಗಿಲ್ಲ, ನೀರಾವರಿ ಯೋಜನೆಗಳು ಪೂರ್ಣವಾಗಿಲ್ಲ. ಸಂಪರ್ಕ ವ್ಯವಸ್ಥೆ ಸಾಲದು. ನಮ್ಮ ಭಾಗದ ಜನರು ದನಿ ಎತ್ತಬೇಕು. ತಾರತಮ್ಯ ಧೋರಣೆ ಸಂಪೂರ್ಣ ಹೋಗಬೇಕು. | ಕೃಷ್ಣ ಕುಲಕರ್ಣಿ ಸಾಹಿತಿ, ವಿಜಯಪುರ
ಬಜೆಟ್ಪೂರ್ವ ಸಭೆ ನಡೆಸಿ: ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲು ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಮತ್ತು ಹೋರಾಟಗಾರರ ಸಭೆಯನ್ನು ಸಿಎಂ ನಡೆಸುವ ಸಂಪ್ರದಾಯ ಆರಂಭವಾಗಬೇಕು ಎಂಬ ಅಭಿಪ್ರಾಯವಿದೆ.
ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂಬುದನ್ನು ಒಪು್ಪವುದಿಲ್ಲ. ಎಲ್ಲ ಸರ್ಕಾರಗಳು ಅಭಿವೃದ್ಧಿಗೆ ಆದ್ಯತೆ ನೀಡಿವೆ. ಇನ್ನಷ್ಟು ಕೆಲಸ ಆಗಬೇಕಾಗಿದೆ. ಅದು ಆಗುತ್ತದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ. ಸುವರ್ಣಸೌಧಕ್ಕೆ 23 ಜಿಲ್ಲಾ ಕಚೇರಿಗಳ ಸ್ಥಳಾಂತರವಾಗಿದೆ. ಪ್ರತಿ ಕ್ಷೇತ್ರಕ್ಕೆ ಕೋಟ್ಯಂತರ ರೂ.ಅನುದಾನ ಸಿಕ್ಕಿದೆ. ಎಂಇಎಸ್ನ ಪುಂಡಾಟಿಕೆ ಕಡಿಮೆಯಾಗಿದೆ. | ಗೋವಿಂದ ಕಾರಜೋಳ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಅಧಿವೇಶನ ನಡೆಸುವುದರಿಂದ ಏನೂ ಉಪಯೋಗವಾಗುತ್ತಿಲ್ಲ. ಅದರ ಬದಲು ಸಚಿವ ಸಂಪುಟ ಸಭೆಯನ್ನು ತಿಂಗಳಿಗೊಮ್ಮೆ ನಡೆಸಿ, ಸಿಎಂ ಕಚೇರಿ ಶಾಖೆ ಸ್ಥಾಪಿಸಲಿ, ಸರ್ಕಾರಿ ಕಚೇರಿಗಳು ಸ್ಥಾಪನೆಯಾಗಲಿ. | ಅಶೋಕ್ ಚಂದರಗಿ ಕನ್ನಡಪರ ಹೋರಾಟಗಾರ, ಬೆಳಗಾವಿ