ಸಮಾನಾಂತರ ಮದುವೆ! ಇದು ಹೇಗೆ ಎಂದರೆ, ಮದುವೆಯಾದ ಜೋಡಿ, ತಮ್ಮ ವೈವಾಹಿಕ ಬಾಳನ್ನು ಬದುಕುತ್ತಿರುತ್ತಾರೆ. ಸಮಾಜದ ಪ್ರಕಾರ, ಇಬ್ಬರೂ ಎಲ್ಲರ ಕಣ್ಣಿಗೂ ಗಂಡ-ಹೆಂಡತಿಯೇ. ಆದರೆ, ಅವರಿಬ್ಬರಿಗಲ್ಲ. ದಂಪತಿಗಳು ಮನೆಯ ಬಾಡಿಗೆ ಕಟ್ಟುವುದರಿಂದ ಹಿಡಿದು, ಮಕ್ಕಳನ್ನು ಬೆಳೆಸುವುದು, ಮನೆಗೆ ಸಂಬಂಧಿಸಿದ ಬಿಲ್‌ಗಳನ್ನು ಸಮ ಪಾಲಿನಿಂದ ಪಾವತಿಸುವುದು, ತಮ್ಮಿಬ್ಬರಿಗೆ ಸಂಬಂಧಪಟ್ಟ ಕೆಲಸಗಳನ್ನು ನಿರ್ವಹಿಸುವುದು ಸೇರಿ ಒಂದಷ್ಟು ಕೆಲಸಗಳನ್ನು ಜತೆಯಾಗಿ ಹಂಚಿಕೊಂಡು ಮಾಡ್ತಾರೆ. ಆದರೆ, ಅವರಿಬ್ಬರ ನಡುವೆ ಯಾವುದೇ ಭಾವನಾತ್ಮಕ ಸಂಪರ್ಕ ಅಥವಾ ಸಂಬಂಧವಿರುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.