Height Weight Chart: ಯಾವ ವಯಸ್ಸಿನಲ್ಲಿ ಎಷ್ಟು ತೂಕವನ್ನು ಹೊಂದಿರಬೇಕು ಗೊತ್ತಾ ? ಈ ಒಂದು ರಹಸ್ಯ ತಿಳಿದ್ರೆ ಕಾಯಿಲೆಗಳು ಹತ್ತಿರವು ಸುಳಿಯಲ್ಲ...

weight
Published on

 ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವರು ಒಂದೇ ವಾರದಲ್ಲಿ ತೂಕವನ್ನು ಕಳೆದುಕೊಳ್ಳಬೇಕೆಂದು (Height Weight Chart) ಬಯಸುತ್ತಾರೆ. ಅಂತವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಸಾಧ್ಯವಾಗುತ್ತದೆ.

Lose weight

ಅಧಿಕ ತೂಕವು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ವಯಸ್ಸಿಗೆ ಸೂಕ್ತವಾದ ತೂಕವನ್ನು ಕಾಪಾಡಿಕೊಳ್ಳುವುದು ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುವಲ್ಲಿ ಬಹಳ  ಸಹಾಯವಾಗುತ್ತದೆ. ಆದರೆ ಅಧಿಕ ತೂಕ ಹೊಂದಿರುವ ಎಲ್ಲರಿಗೂ ಆರೋಗ್ಯ ಸಮಸ್ಯೆಗಳಿರುವುದಿಲ್ಲ. ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿಯಿಂದ ಯಾರಾದರೂ ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಸಾಮಾನ್ಯ ತೂಕ ಏನಾಗಿರಬೇಕು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವ್ಯಕ್ತಿಯ ದೇಹದ ಪ್ರಕಾರ, ಎತ್ತರ, ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ಅವಲಂಬಿಸಿ ತೂಕವೂ ಬದಲಾಗಬಹುದು.

ವಯಸ್ಸಿನ ಪ್ರಕಾರ ತೂಕಕ್ಕೆ ಸಂಬಂಧಿಸಿದಂತೆ.. 12 ರಿಂದ 14 ವರ್ಷಗಳು 32-36 ಕೆಜಿ, 15 ರಿಂದ 20 ವರ್ಷಗಳು 45 ಕೆಜಿ, 21 ರಿಂದ 30 ವರ್ಷಗಳು 50-60 ಕೆಜಿ, 31 ರಿಂದ 40 ವರ್ಷಗಳು 60-65 ಕೆಜಿ, 41 ರಿಂದ 60 ವರ್ಷಗಳು 59 -63 ಕೆಜಿ. . ಇರಬೇಕು ವ್ಯಕ್ತಿಯ ವಯಸ್ಸಾದಂತೆ ತೂಕದ ಮಾನದಂಡಗಳು ಹೆಚ್ಚಾಗುತ್ತವೆ ಎಂದರ್ಥ.

ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ಬಯಸಿದರೆ, ನಿಮ್ಮ ಜೀವನಶೈಲಿಯನ್ನು ನೀವು ಸರಿಯಾಗಿ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರ ತೆಗೆದುಕೊಳ್ಳಿ. ಪ್ರತಿದಿನ 10 ನಿಮಿಷ ಈ ವ್ಯಾಯಾಮ ಮಾಡಿದ್ರೆ ತೂಕ ಇಳಿಸಬಹುದು.

ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net