

ಹೈದರಾಬಾದ್: 2024ರ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡು ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಪುಷ್ಪ-2 ಸಿನಿಮಾ ಆ ಬಳಿಕ ಕೆಲಕ್ಷನ್ ವಿಚಾರಕ್ಕಿಂತ ಕಾಲ್ತುಳಿತಕ್ಕೆ ಹೆಚ್ಚು ಸದ್ದು ಮಾಡಿತ್ತು. ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ (Allu Arjun) ವಿಚಾರಣೆಯನ್ನು ಸಹ ಎದುರಿಸಿದ್ದರು. ಇದೀಗ ಕಾಲ್ತುಳಿತ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ನಟ ಅಲ್ಲು ಅರ್ಜುನ್ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಸಂಧ್ಯ ಥಿಯೇಟರ್ನಲ್ಲಿ ಸಂಭವಿಸಿದ ಕಾಲ್ತುಳಿತದ ಬಳಿ ಎಚ್ಚೆತ್ತುಕೊಂಡಿರುವ ನಟ ಅಲ್ಲು ಅರ್ಜುನ್ (Allu Arjun) ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ರವಾನೆಯಾಗಬಾರದೆಂಬ ಕಾರಣಕ್ಕೆ ವಕ್ತಾರರೊಬ್ಬರನ್ನು ನೇಮಿಸಿದ್ದಾರೆ. ವಿವಾದಗಳಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳ ಜೊತೆ ಹಾಗೂ ಅಭಿಮಾನಿಗಳಿಗೆ ತಮ್ಮ ಸಿನಿಮಾಗಳ ಅಪ್‌ಡೇಟ್ ಕೊಡಲು ವಕ್ತಾರರನ್ನು ನೇಮಿಸೋದು ಸೂಕ್ತ ಎಂದು ನಟ ನಿರ್ಧರಿಸಿದ್ದು, ಇನ್ಮುಂದೆ ವಕ್ತಾರರೇ ಮಾಹಿತಿ ನೀಡಲಿದ್ದಾರೆ.
ಸಾಮಾನ್ಯವಾಗಿ ಪಕ್ಷಗಳಿಗೆ ಅಥವಾ ಸಂಘಗಳಿಗೆ ವಕ್ತಾರರು ಇರುತ್ತಾರೆ. ಮಾಧ್ಯಮಗಳ ಜೊತೆ ಈ ವಕ್ತಾರರೇ ಮಾತನಾಡುತ್ತಾರೆ. ಈಗ ಅಲ್ಲು ಅರ್ಜುನ್ (Allu Arjun) ಕೂಡ ವಕ್ತಾರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈಗ ಅವರು ವಕ್ತಾರರನ್ನು ನೇಮಿಸಲಿದ್ದು, ಅಲ್ಲು ಅರ್ಜುನ್ ಬಗ್ಗೆ ಹಾಗೂ ಅವರ ಸಿನಿಮಾಗಳ ಬಗ್ಗೆ ವಕ್ತಾರರೇ ಮಾಹಿತಿ ನೀಡಲಿದ್ದಾರೆ.
ಅಲ್ಲು ಅರ್ಜುನ್ ವಕ್ತಾರರು ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲು ಅರ್ಜುನ್ ಬಗ್ಗೆ ಯಾವುದೇ ವಿಚಾರ ಬಂದರೂ ಅವರೇ ಉತ್ತರ ನೀಡುತ್ತಾರೆ. ಈ ಮೂಲಕ ಅಲ್ಲು ಅರ್ಜುನ್ಗೆ ಮಾಧ್ಯಮದ ಎದುರು ಬರೋದು ಕೂಡ ತಪ್ಪಲಿದೆ. ಮಾರ್ಚ್ನಿಂದ ಇದು ಜಾರಿಗೆ ಬರೋ ಸಾಧ್ಯತೆ ಇದೆ. ‘ತಾಂಡೇಲ್’ ಚಿತ್ರದ ಪ್ರಚಾರದ ವೇಳೆ ಅಲ್ಲು ಅರ್ಜುನ್ ಆಪ್ತ, ನಿರ್ಮಾಪಕ ಬನ್ನಿ ವಾಸ್ ಈ ವಿಚಾರವನ್ನು ತಿಳಿಸಿದ್ದಾರ.