

hotels; ಭಾರತದಲ್ಲಿ ಬಹುತೇಕ ದೊಡ್ಡ ಉದ್ಯಮಗಳಲ್ಲಿ ಈ ಹೋಟೆಲ್ ಉದ್ಯಮ ಕೂಡ ಒಂದಾಗಿದೆ. ಅತ್ಯಂತ ಕೆಳಮಟ್ಟದ ವ್ಯಕ್ತಿಯಿಂದ ಹಿಡಿದು, ಶ್ರೀಮಂತರ ವರೆಗೂ ಸಹ ಈ ಹೋಟೆಲ್ಗಳಿಗೆ ಭೇಟಿ ನೀಡಿರುತ್ತಾರೆ. ಆದರೆ ಒಬ್ಬೊಬ್ಬರ ಆರ್ಥಿಕತೆಗೆ ತಕ್ಕಂತೆ ಅವರು ಭೇಟಿ ನೀಡುವ ಹೋಟೆಲ್‌ಗಳಲ್ಲಿ ಬದಲಾವಣೆ ಕಂಡುಬರುತ್ತದೆ.
5 ಸ್ಟಾರ್ಗಳಿಗೆ ಹೋಲಿಸಿದರೆ, ಈ ಹೋಟೇಲ್ಗಳು ವಿಶಾಲವಾದ ಕೊಠಡಿಗಳು, ಪ್ರೀಮಿಯಂ ಪೀಠೋಪಕರಣಗಳನ್ನು ಒಳಗೊಂಡಿರುತ್ತವೆ. ಅದೇ ರೀತಿ ಟಿವಿ, ಬಾರ್, ವೈ-ಫೈ ಸೇರಿದಂತೆ ಕಣ್ಣಿಗೆ ಆಕರ್ಷಣೀಯವಾಗುವಂತೆ ಇಲ್ಲಿನ ವಿನ್ಯಾಸ ಇರುತ್ತದೆ. ಇವೆಲ್ಲವುಗಳನ್ನೂ ನಿಮಗೆ ಐಷಾರಾಮಿ ಅನುಭವ ನೀಡುವ ಜೊತೆಗೆ ಆರಾಮದಾಯಕ ಕ್ಷಣವನ್ನು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿರುತ್ತದೆ.
ದೊಡ್ಡ ಹೋಟೆಲ್‌ಗಳನ್ನು ಅವುಗಳ ಐಷಾರಾಮಿ ಸೌಕರ್ಯ, ಬೆರಗುಗೊಳಿಸುವ ವಿಭಿನ್ನ ವಿನ್ಯಾಸ ಹಾಗೂ ವಿಶೇಷ ಸೇವೆಯಿಂದಾಗಿ ಅವುಗಳನ್ನು 7ಸ್ಟಾರ್ ಎಂದು ಕರೆಯಲಾಗುತ್ತದೆ. ಈ ಹೋಟೆಲ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದಿರುತ್ತವೆ. ಇನ್ನೂ ಈ 5 ಸ್ಟಾರ್ ಹೋಟೆಲ್‌ಗಳು ಸಾಮಾನ್ಯವಾಗಿ ಸ್ಪಾ, ಜಿಮ್, ಈಜುಕೊಳ ಇತ್ಯಾದಿ ಸೌಲಭ್ಯಗಳನ್ನು ಹೊಂದಿರುತ್ತವೆ. ಆದರೆ 7 ಸ್ಟಾರ್ ಹೋಟೆಲ್‌ಗಳು ಇವುಗಳು ಜೊತೆಗೆ ವಿಶ್ವಪ್ರಸಿದ್ಧ ಬಾಣಸಿಗರು ಬೇಯಿಸಿದ ವಿಶೇಷ ಅಡುಗೆಗಳು, ಕೆಲವೊಮ್ಮೆ ಹೋಟೆಲ್ ಮಿನಿ ಥಿಯೇಟರ್, ಕಲಾ ಗ್ಯಾಲರಿಗಳು ಮತ್ತು ಐಷಾರಾಮಿ ಶಾಪಿಂಗ್ ಪ್ರದೇಶಗಳನ್ನು ಸಹ ಹೊಂದಿರುತ್ತದೆ.
ರಜೆ, ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವಾಗ ಮೊದಲು ನಮ್ಮ ಮನಸ್ಸಿಗೆ ಬರುವುದೇ ಈ ಹೋಟೆಲ್‌ಗಳು. ಇಲ್ಲಿ ನೀಡಲಾಗುವ ಊಟ, ಕೊಠಡಿ, ವಸತಿ ಮತ್ತು ಇತರ ಸೇವೆಯು ನಮ್ಮ ಅನುಭವವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಈ ಹೋಟೆಲ್‌ಗಳು 1 ಸ್ಟಾರ್ 5ಸ್ಟಾರ್ನಿಂದ ಹಿಡಿದು 7 ಸ್ಟಾರ್ಗಳ ರೇಟಿಂಗ್ಅನ್ನು ಹೊಂದಿರುತ್ತವೆ.
(ಏಜೆನ್ಸೀಸ್)
ಹಾಗಾಗಿ ನೀವು 5 ಸ್ಟಾರ್ ಹೋಟೆಲ್‌ನಲ್ಲಿ ಐಷಾರಾಮಿಯಾಗಿ ಆನಂದಿಸಬಹುದು. ಆದರೆ 7 ಸ್ಟಾರ್ ಹೋಟೆಲ್‌ನಲ್ಲಿ ನೀವು ರಾಜಮನೆತನದ ಜೀವನವನ್ನು ನಡೆಸುತ್ತಿರುವಂತೆ ಭಾಸವಾಗುತ್ತದೆ. ಈ 7 ಸ್ಟಾರ್ ಹೋಟೆಲ್‌ಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳು, ಖಾಸಗಿ ಹೆಲಿಪ್ಯಾಡ್ ಸೌಲಭ್ಯ ಮತ್ತು ಅತಿಥಿಗಳಿಗಾಗಿ ಖಾಸಗಿ ದೋಣಿ ಸೇವೆಗಳನ್ನು ಸಹ ಒದಗಿಸಲಾಗಿರುತ್ತದೆ.
ಎಷ್ಟೋ ಜನ 5ಸ್ಟಾರ್ ಹೋಟೆಲ್ ಹಾಗೂ 7ಸ್ಟಾರ್ ಹೋಟೆಲ್‌ಗಳು ಬಹುತೇಕ ಒಂದೇ ರೀತಿ ಇರುತ್ತವೆ ಎಂದು ಭಾವಿಸುತ್ತಾರೆ. ಆದರೆ 7 ಸ್ಟಾರ್ ಹೋಟೆಲ್‌ಗಳಲ್ಲಿ ಪ್ರತಿಯೊಂದು ಕೋಣೆಯನ್ನು ರಾಜಮನೆತನದ ಅರಮನೆಯಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಕೊಠಡಿಗಳು ಚಿನ್ನ ಮತ್ತು ಬೆಳ್ಳಿಯಂತೆ ಕಾಣುವ ಅಲಂಕಾರಿಕಾ ವಸ್ತುಗಳಿಂದ ಕಂಗೊಳಿಸುತ್ತದೆ. 7 ಸ್ಟಾರ್ ಹೋಟೆಲ್‌ನಲ್ಲಿ ಪ್ರತಿಯೊಬ್ಬ ಅತಿಥಿಗೂ ಒಬ್ಬ ವೈಯಕ್ತಿಕ ಸಹಾಯಕನನ್ನು ನೇಮಿಸಲಾಗಿರುತ್ತದೆ.