ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಮಲಗುವ ಕೋಣೆಗೆ ಯಾವ ಬಣ್ಣ ಉತ್ತಮ; ವಾಸ್ತು ಶಾಸ್ತ್ರ ಹೇಳೋದೇನು.? vastu

bed room
Published on

vastu : ಹಿಂದಿನಿಂದ ಹಾಗೂ ಇತ್ತೀಚಿನ ಕಾಲದಲ್ಲೂ ಸಹ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹೆಚ್ಚಿನವರು ವಾಸ್ತು ಶಾಸ್ತ್ರದ ಪ್ರಕಾರ ತಾವು ವಾಸಿಸುವ ಮನೆಗಳನ್ನು ಅಥವಾ ದೊಡ್ಡ-ದೊಡ್ಡ ಕಟ್ಟಡಗಳನ್ನು ಕಟ್ಟುತ್ತಾರೆ. ಇದರ ಜೊತೆಗೆ ಗೋಡೆಯ ಬಣ್ಣವನ್ನು ಹಚ್ಚುವುದು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಣ್ಣಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಮನೆಯ ಬಣ್ಣ ಕುಟುಂಬದ ಸದಸ್ಯರ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ನಿಮ್ಮ ಮಲಗುವ ಕೋಣೆಯನ್ನು ವಿನ್ಯಾಸಗೊಳಿಸುವಾಗ, ಗೋಡೆಗಳ ಬಣ್ಣವು ಮನಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ಬಣ್ಣಗಳು ಸಾಮರಸ್ಯ, ಪ್ರೀತಿ, ಸಮೃದ್ಧಿಯನ್ನು ಆಕರ್ಷಿಸಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವಾಸ್ತು ಪ್ರಕಾರ ಮಲಗುವ ಕೋಣೆಗೆ ತಿಳಿ ನೀಲಿ ಬಣ್ಣವು ಅತ್ಯುತ್ತಮ ಬಣ್ಣಗಳಲ್ಲಿ ಒಂದಾಗಿದೆ. ಇದು ಶಾಂತಿ ಮತ್ತು ಪ್ರಶಾಂತತೆಯನ್ನು ತರುತ್ತದೆ. ಇದು ದೀರ್ಘ ದಿನದ ನಂತರ ವಿಶ್ರಾಂತಿ ಪಡೆಯಲು ಅನುಕೂಲಾ ಮಡಿಕೊಡುತ್ತದೆ. ದೊಡ್ಡ ಕೋಣೆಗಳಲ್ಲಿ ಮಾತ್ರ ಇದನ್ನು ಬಳಸಬೇಕು.

ತಿಳಿ ನೀಲಿ ಬಣ್ಣ

ಹಸಿರು ಬಣ್ಣ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ವಯಸ್ಸಾದವರಿಗೆ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಯಾರಿಗಾದರೂ ಇದು ಸಹಕಾರಿ. ಗೋಡೆಗಳಿಗೆ ಹಸಿರು ಬಣ್ಣ ಬಳಿಯಲು ಸಾಧ್ಯವಾಗದಿದ್ದರೆ, ಒಳಾಂಗಣ ಸಸ್ಯಗಳನ್ನಿಡುವುದು ಉತ್ತಮ.

ಹಸಿರು ಬಣ್ಣ

ಹಳದಿ ಬಣ್ಣವು ಸಂತೋಷ ಮತ್ತು ಆಶಾವಾದದ ಬಣ್ಣವಾಗಿದೆ. ವಾಸ್ತು ಪ್ರಕಾರ, ಇದು ಸಣ್ಣ ಮಲಗುವ ಕೋಣೆಗಳನ್ನು ವಿಶಾಲ ಮತ್ತು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ.

ಹಳದಿ

ಗುಲಾಬಿ ಬಣ್ಣವು ಪ್ರೀತಿ, ಸಂತೋಷ ಮತ್ತು ಅನ್ಯೋನ್ಯತೆಯೊಂದಿಗೆ ಸಂಬಂಧ ಹೊಂದಿದೆ. ಇದು ದಂಪತಿಗಳ ಮಲಗುವ ಕೋಣೆಗೆ ಅತ್ಯುತ್ತಮ ಆಯ್ಕೆಯಾಗಿದೆ.

ಗುಲಾಬಿ

ಕಂದು ಮತ್ತು ಬೀಜ್ ಬಣ್ಣಗಳು ಉಷ್ಣತೆ ಮತ್ತು ಸ್ಥಿರತೆಯನ್ನು ಕಾಪಾಡುತ್ತವೆ. ನೈಋತ್ಯ ದಿಕ್ಕಿನಲ್ಲಿರುವ ಮಲಗುವ ಕೋಣೆಗಳಿಗೆ ಇದು ಉತ್ತಮ ಇದು ಸುರಕ್ಷತೆಯ ಭಾವನೆಯನ್ನು ನೀಡುತ್ತದೆ.

ಕಂದು ಬಣ್ಣ

(ಏಜೆನ್ಸೀಸ್)

ನೇರಳೆ ಬಣ್ಣವು ನೀಲಿ ಬಣ್ಣದ ಶಾಂತತೆಯನ್ನು ಕೆಂಪು ಬಣ್ಣದ ಶಕ್ತಿಯೊಂದಿಗೆ ಬೆರೆಸುತ್ತದೆ. ಇದು ಸಂಪತ್ತು, ಸ್ವಾಭಿಮಾನ ಮತ್ತು ಸಮತೋಲನವನ್ನು ಸಂಕೇತಿಸುತ್ತದೆ.

ನೇರಳೆ ಬಣ್ಣ

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net