ಕಲಾಪಕ್ಕೆ ಅಡ್ಡಿಪಡಿಸಿದ ಆರೋಪ; ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನದಿಂದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅಮಾನತು| Suvendu Adhikari

Suvendu Adhikari
Published on

Suvendu Adhikari: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದ ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ನೀಡುವ ಕಿರುಕುಳವನ್ನು ಖಂಡಿಸುವ ನಿರ್ಣಯದ ಚರ್ಚೆಗೆ ಕರೆದಿದ್ದ ವಿಧಾನಸಭೆ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆ ಬಿಜೆಪಿ ನಾಯಕ ಮತ್ತು ವಿಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ಉಳಿದ ಅಧಿವೇಶನ ಅವಧಿಯವರಿಗೆ ಅಮಾನತು ಮಾಡಿ ಸ್ಪೀಕರ್ ಬಿಮನ್ ಬ್ಯಾನರ್ಜಿ ಆದೇಶ ಹೊರಡಿಸಿದ್ದಾರೆ.

ಬಂಗಾಳಿ ಮಾತನಾಡುವ ವಲಸಿಗರ ಮೇಲಿನ ದಾಳಿಗಳನ್ನು ಖಂಡಿಸುವ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರು ಭಾರತೀಯ ಸೇನೆಯ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸುವೇಂದು ಅಧಿಕಾರಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಸು ಅವರ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಪೀಕರ್ ಅವರ ಮನವಿಯನ್ನು ನಿರಾಕರಿಸಿದ್ದಾರೆ.

ಈ ವೇಳೆ ಪದೇ ಪದೇ ಸಚಿವರು ಮಾತನಾಡುವುದಕ್ಕೆ ಅಡ್ಡಿ ಪಡಿಸಿದ್ರೆ, ಬಾವಿಗಿಳಿದು ಪ್ರತಿಭಟಿಸಿದ್ರೆ ನಿಮ್ಮನ್ನು ಸದನದಿಂದ ಅಮಾನತುಗೊಳಿಸಬೇಕಾಗುತ್ತೆ ಎಂದು ಎಚ್ಚರಿಸಿದರು, ಮುಂದುವರೆಸಿದ್ದರಿಂದ ಈ ಅಧಿವೇಶ ಉಳಿದ ಅವಧಿಯವರೆಗೆ ಸುವೇಂದು ಅಧಿಕಾರಿಯವರನ್ನು ಅಮಾನತುಗೊಳಿಸಿಲಾಗಿದೆ ಎಂದು ಸ್ಪೀಕರ್ ಬಿಮನ್ ಬ್ಯಾನರ್ಜಿ ಪಿಟಿಐಗೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸುವೇಂದು ಅಧಿಕಾರಿ ಆಡಳಿತ ಪಕ್ಷ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮನ್ನು ಅನೈತಿಕವಾಗಿ ಬಲವಂತವಾಗಿ ಅಧಿವೇಶನದಿಂದ ಹೊರದಬ್ಬಲಾಗಿದೆ. ಭಾರತೀಯ ಸೇನೆಯ ವಿರುದ್ಧ ಬಸು ಅವರ ಅವಹೇಳನಕಾರಿ ಹೇಳಿಕೆಗಳನ್ನು ವಿರೋಧಿಸಿದ್ದರಿಂದ ನನ್ನನ್ನು ಅಮಾನತುಗೊಳಿಸಲಾಯಿತು. ಆ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net