VIDEO | ಸೀಲ್​ಡೌನ್ ವೇಳೆ ದಾಂಧಲೆ ನಡೆಸಿದ ಪಾದರಾಯನಪುರ ಪುಂಡರಿಗೆ ರೆಡ್ ಕಾರ್ಪೆಟ್ ಸ್ವಾಗತ

padarayanapura
Published on

ಬೆಂಗಳೂರು: ಸೀಲ್​ಡೌನ್​ ವೇಳೆ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಪುಂಡರನ್ನು ಶಾಸಕ ಜಮೀರ್​ ಅಹಮದ್​ ಹಾಗೂ ಆರೋಪಿಗಳ ಕುಟುಂಬಸ್ಥರು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ.

ದಾಂಧಲೆ ನಡೆಸಿದ 126 ಮಂದಿಯನ್ನು ಪೊಲೀಸರು ಬಂಧಿಸಿ ಹಳೇಗುಡ್ಡದಹಳ್ಳಿಯ ಹಜ್​ಭವನದಲ್ಲಿ ಇಟ್ಟಿದ್ದರು. ಹೈಕೋರ್ಟ್​ ಆರೋಪಿಗಳಿಗೆ 2 ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು. ಕೋರ್ಟ್​ಗೆ 1.26 ಕೋಟಿ ರೂಪಾಯಿ ಮೊತ್ತದ ಶ್ಯೂರಿಟಿ ನೀಡಿ ಜಾಮೀನು ಪಡೆಯಲಾಗಿದೆ. ಈ ಹಣವನ್ನು ಶಾಸಕ ಜಮೀರ್​ ಅಹಮದ್​ ಭರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಬೆಳಗ್ಗೆ ಆರೋಪಿಗಳನ್ನು ಬಿಡಿಸಿಕೊಳ್ಳಲು ಶಾಸಕ ಜಮೀರ್ ಖುದ್ದಾಗಿ ಹಜ್‌ಭವನಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳಿಗೆ ಸ್ಯಾನಿಟೈಸರ್ ನೀಡಿ ಬಳಿಕ ತಮ್ಮ ಮಾಲೀಕತ್ವದ ಬಸ್‌ಗಳಲ್ಲಿ ಮನೆಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net