

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮಕ್ಕೆ ಶನಿವಾರ ಆಗಮಿಸಿದ ಸಂವಿಧಾನ ರಥಕ್ಕೆ ಪೂರ್ಣಕುಂಭ ಸ್ವಾಗತ ಕೋರುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗ್ರಾಮ ಪಂಚಾಯಿತಿ ಅವರಣದಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿ ಪುಷ್ಪಾಚರ್ನೆ ಸಲ್ಲಿಸಿದರು. ಬಳಿಕ ಎಲ್ಲರಿಗೂ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಕುಮಾರ್, ಸದಸ್ಯ ಸಿ.ಪಿ.ಸುರೇಶ್, ವೈದ್ಯಾಧಿಕಾರಿ ಡಾ.ಸಂದೀಪ್, ಪಿಡಿಒ ಶ್ರೀದೇವಿ, ಗ್ರಾಮ ಆಡಳಿತಾಧಿಕಾರಿ ಪ್ರದೀಪ್, ಕಾರ್ಯದರ್ಶಿ ಕುಮಾರ್, ಎಫ್.ಡಿ.ಎ ಮಂಜುನಾಥ್, ಬಿಲ್ ಕಲೆಕ್ಟರ್ ರಮಣಯ್ಯ, ಮುಖ್ಯ ಶಿಕ್ಷಕ ಶಿವಾನಂದ ಇತರರಿದ್ದರು.