ಶಿಲೆಗಳಿಗೆ ಪೂರ್ಣಕುಂಭ ಸ್ವಾಗತ

anp
ಆನಂದಪುರ ಕಡ್ಲೆಹಂಕ್ಲು ಮಾರಿಕಾಂಬೆ ತವರು ಮನೆ ದೇಗುಲ ನಿರ್ಮಾಣಕ್ಕೆ ಆಗಮಿಸಿದ ಶಿಲೆಗಳನ್ನು ಪೂರ್ಣಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
Published on

ಆನಂದಪುರ: ಗ್ರಾಮ ದೇವತೆ ಕಡ್ಲೆಹಂಕ್ಲು ಶ್ರೀ ಮಾರಿಕಾಂಬೆ ತವರು ಮನೆಯ ಶಿಲಾಮಯ ದೇಗುಲ ನಿರ್ಮಾಣಕ್ಕೆ ಸೋಮವಾರ ಮುರುಡೇಶ್ವರದಿಂದ ಶಿಲೆಗಳು ಆಗಮಿಸಿದವು. ಗ್ರಾಮದ ಗಡಿ ಸಿದ್ದೇಶ್ವರ ಕಾಲನಿಯಲ್ಲಿ ಶ್ರದ್ಧಾಭಕ್ತಿಯಿಂದ ಹಾರಾರ್ಪಣೆ ಮಾಡಿ, ಪೂಜೆ ಮಾಡಿ ಸ್ವಾಗತಿಸಲಾಯಿತು. ಅಲ್ಲಿಂದ ದಾಸಕೊಪ್ಪ ವೃತ್ತ ಮತ್ತು ಬಸ್ ನಿಲ್ದಾಣ ವೃತ್ತದ ಮೂಲಕ ಅಶೋಕ ರಸ್ತೆಯ ತಿರುವಿನಲ್ಲಿರುವ ಮಾರಿಕಾಂಬೆಯ ತವರು ಮನೆ ಆವರಣದವರೆಗೆ ಪೂರ್ಣಕುಂಭ ಮೆರವಣಿಗೆ ನಡೆಸಲಾಯಿತು. ಬೀಸನಗದ್ದೆ ತಂಡದಿಂದ ಡೊಳ್ಳು ಸೇವೆ, ಆವಿನಹಳ್ಳಿ ಸಮೀಪದ ಕಾಗೇಹಳ್ಳದ ತಂಡದಿಂದ ಚಂಡೆ ಪ್ರದರ್ಶನ ಮೆರುಗು ನೀಡಿದವು. ದೇವಾಲಯ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಗಳು ಮತ್ತು ಖಜಾಂಚಿ, ಪದಾಧಿಕಾರಿಗಳು, ಸದಸ್ಯರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net