

ಮೇಷ ರಾಶಿಯವರಿಗೆ ಚತುರ್ಗ್ರಹಗಳು ಹತ್ತರಲ್ಲಿದ್ದು ಗುರುವೇ ರಕ್ಷಣೆ ನೀಡುತ್ತಾನೆ. ಸನ್ಮಾರ್ಗದಲ್ಲಿ ನಡೆದರೆ ಲಗ್ನಾಧಿಪತಿ ಕುಜನು ವಿಶೇಷ ಫಲನೀಡುವನು. ವೃಷಭದ ರಾಹುವು ಧನದ ಕೊರತೆ ನೀಗುತ್ತಾನೆ. ಸಮಯವನ್ನು ಒಳ್ಳೆಯ ಕಾರ್ಯಗಳಿಗಾಗಿ ಕಾದಿರಿಸಿ. ಸೂರ್ಯಾಷ್ಟೋತ್ತರ ಪಠಿಸಿ. ಸುಬ್ರಹ್ಮಣ್ಯನ ಆರಾಧನೆ ಅತಿ ಮುಖ್ಯ.
ಒಂಬತ್ತರ ನಾಲ್ಕು ಗ್ರಹಗಳ ಸಮ್ಮೇಳನ ನಿಮ್ಮ ಇಷ್ಟಾರ್ಥ ನೆರವೇರಿಸುತ್ತದೆ. 12ರ ಅಂಗಾರಕನು ಅಡೆತಡೆ ತರಬಹುದು. ದಶಮದಲ್ಲಿ ಬುಧನು ಶನಿಯ ಮನೆಯಲ್ಲಿದ್ದು ನಿಮ್ಮ ವ್ಯಕ್ತಿತ್ವ ಕಾಪಾಡುತ್ತಾನೆ. ವೃಷಭ ರಾಶಿಯವರು ಶುಕ್ರನ ಆಧಿಪತ್ಯ ಇರುವುದರಿಂದ ದಾನ-ಧರ್ಮ ಮಾಡಲೇಬೇಕು. ಕಾಳಿಕಾ, ದುರ್ಗಾ, ಸರಸ್ವತಿ ಆರಾಧನೆ ಮಾಡಿ.
ಅಷ್ಟಮದಲ್ಲಿ ಮೂರು ಪಾಪಗ್ರಹಗಳ ಜತೆ ಶುಭ ಗ್ರಹವಿದ್ದು, ಜನ್ಮಾಂತರದಲ್ಲಿ ಮಾಡಿದ ಪುಣ್ಯವು ಅಷ್ಟಮ ಗುರು, ಶನಿಯಿಂದ ಆಚೆ ಬರಬೇಕು. ರಾಶ್ಯಾಧಿಪತಿ ಬುಧನು ಒಂಭತ್ತರಲ್ಲಿದ್ದು, ಸಮಾಧಾನಕ್ಕೆ ಬರುವಷ್ಟು ಧನವನ್ನು ಕೊಡುತ್ತಾನೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಚಿತ್ತ ಶುದ್ಧವಾಗಿರಲಿ. ಪಿತ್ತ, ವಾತ, ಕಫಗಳಿಂದ ದೂರವಿರಿ.
ಸಪ್ತಮ ಗುರುವು ಏನನ್ನು ಬೇಕಾದರೂ ತಡೆಯುತ್ತಾನೆ. ಗುರುವಿನ ಸಾಮರ್ಥ್ಯಕ್ಕೆ ಯಾವ ಗ್ರಹಗಳೂ ಸಾಟಿ ಇಲ್ಲ. ಶನಿ ಸ್ವಕ್ಷೇತ್ರದಲ್ಲಿದ್ದು, ಸೂರ್ಯನು ಪುಷ್ಟಿ ಕೊಡುತ್ತಾನೆ. ಹರ್ಷವನ್ನು ಸಮೃದ್ಧಿಯಾಗಿ ಕೊಟ್ಟು ಕಾಪಾಡುತ್ತಾನೆ. ಚಂದ್ರಾಷ್ಟೋತ್ತರ ಪಠಿಸಿ. ಈಶ್ವರ- ಪಾರ್ವತಿಯನ್ನು ಪೂಜಿಸಿ. ತಂದೆ- ತಾಯಿ ಆಶೀರ್ವಾದವನ್ನು ಪಡೆಯಿರಿ.
ಆರರ ಶನಿ ಬಲಿಷ್ಠವಾದ ಗ್ರಹ- ಗುರುವನ್ನು ಮನೆಯಲ್ಲಿಟ್ಟುಕೊಂಡು ಅನುಗ್ರಹಿಸುವ ಕಾಲ. ಸೂರ್ಯನ ರಾಶಿ ಸಿಂಹ. ಅವನು ಜಗವನ್ನೇ ಬೆಳಗುತ್ತಾನೆ. ಮನೆಯ ಬೆಳಕಾಗಿ, ನಾಡಿನ ಬೆಳಕಾಗಿ ತಪು್ಪಗಳನ್ನು ಮಾಡದೆ ಸಾಗಿದಲ್ಲಿ ಎಲ್ಲವೂ ಸಿಕ್ಕುವುದು. ಲೋಕ ಕಂಟಕ ನಿವಾರಿಸಿ ಎಂದು ಸೂರ್ಯನನ್ನು ಪ್ರಾರ್ಥನೆ ಮಾಡಿ. ರುದ್ರಸೂಕ್ತ ಪಠಿಸಿ.
ಪಂಚಮ, ನವಮ, ಏಕಾದಶ, ದ್ವಿತೀಯ ಗುರುವಿಗೆ ಶುಭಸ್ಥಾನಗಳು. ಜಗತ್ತಿನಲ್ಲಿ ಹುಟ್ಟಿದ ಮೇಲೆ ನಿಮ್ಮಲ್ಲಿರುವ ಪರಮಾತ್ಮನು ಜೀವಾತ್ಮನಿಗೆ ಏನು ಕೊಡುತ್ತಾನೋ ಅದೇ ಪುಣ್ಯವಾದ ಕೆಲಸ. ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ. ಬಡವರಿಗೆ, ಇತರರಿಗೆ ಒಳ್ಳೆಯದನ್ನು ಮಾಡಿ ಆನಂದವಾಗಿರಿ. ಕೆಲಸದಲ್ಲಿ ಒತ್ತಡ ಬೇಡ.
ಶನಿ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗವಿದ್ದು ಪಂಚಮ ಬುಧನಿದ್ದು, ವ್ಯಾಪಾರ ವಹಿವಾಟುಗಳಲ್ಲಿ ಶುದ್ಧ ಮನಸ್ಸಿನಿಂದ ಕೆಲಸವನ್ನು ಮಾಡಿದಲ್ಲಿ ದೇವರು ಸಾಫಲ್ಯ ಕೊಡುತ್ತಾನೆ. ಮಾಡುವ ಕೆಲಸದಲ್ಲಿ ಆತುರ ಬೇಡ. ಜೀವನ ಶ್ರೇಷ್ಠವಾದದ್ದು. ಮುತ್ತು ಒಡೆದರೆ ಕೊಳ್ಳಬಹುದು. ಕೀರ್ತಿ ಹೋದರೆ ಪಡೆಯಲಾರೆವು. ದೇವರ ಧ್ಯಾನ ಸದಾ ಇರಲಿ.
ಬಾಯಾರಿಕೆ ನೀಗಿಸಲು ಕುಡಿಯಲು ಕೊಡಪಾನ ನೀರು ಬೇಡ. ಅಲ್ಪ ನೀರೇ ದಾಹವನ್ನು ನೀಗಿಸುತ್ತದೆ. ನಿಮಗೆ ಬರಬೇಕಾದ ಹಣವು ನಿಧಾನವಾಗಿ ಬಂದರೂ ಸ್ಥಿರವಾಗಿ ನಿಲ್ಲುವ ಕಾಲ. ಲಗ್ನದಲ್ಲಿ ಕೇತುವಿರುವುದರಿಂದ ಮಾತಿನಲ್ಲಿ ಎಚ್ಚರಿಕೆ ಇರಲಿ. ತೃತೀಯ ಶನಿಯಿಂದ ನ್ಯಾಯವಾಗಿ ನಿಮಗೆ ಬರಬೇಕಾದುದು ಬಂದೇ ಬರುತ್ತದೆ.
ಶನಿಯು ಆಸೆ-ನಿರಾಸೆ, ಸಂತೋಷ-ದುಃಖ ಕೊಟ್ಟು ಕಟ್ಟಿಹಾಕಿದ್ದಾನೆ. ಮುಂದೆ ಎಲ್ಲವುದಕ್ಕೂ ಪರಿಹಾರ ಹಾಗೂ ಸಂತೋಷ ಇದ್ದೇ ಇದೆ. ಎರಡನೇ ಮನೆಯ ಗುರು ಮುಂದೆ ತೃತೀಯ ಶನಿ ಬಂದಾಗ ಸಂತೋಷದಿಂದ ಇರುತ್ತೀರಿ. ಈಗ ಕಲಿತ ಪಾಠ ನಂತರ ಅಳವಡಿಸಿಕೊಳ್ಳಿ. ರಾಮದೇವರ ಕೃಪೆ ಪಡೆಯಲು ರಾಮ ಪಟ್ಟಾಭಿಷೇಕ ಸರ್ಗ ಪಠಿಸಿ.
ರಾಶ್ಯಾಧಿಪತಿ ಶನಿ ಗುರು, ಶುಕ್ರನೊಡನೆ ಇದ್ದಾನೆ. ಮನುಷ್ಯನು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕಾಲ ಪುರುಷನಿಗೆ ಕೊಡುವುದು ತೆಗೆದುಕೊಳ್ಳುವುದೂ ಗೊತ್ತಿರುತ್ತದೆ. ಶನಿ ಮಕರ ರಾಶಿಯಲ್ಲಿರುವುದರಿಂದ ಪ್ರತಿ ಸೋಮವಾರ ಈಶ್ವರನನ್ನು ಬಿಲ್ವಪತ್ರೆಯಿಂದ ಅರ್ಚಿಸಿ. ಮುಖ್ಯವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
ದ್ವಾದಶದಲ್ಲಿ ಶನಿಯು ಇದ್ದು, ರಾಶಿಗೆ ಬುಧನು ಬಂದಿದ್ದಾನೆ. ಅಲ್ಪ ಸುಖವಿದೆ. ಆತ್ಮಶುದ್ದಿಯ ಭಕ್ತಿಯೊಂದೇ ದ್ವಾದಶ, ಜನ್ಮದಲ್ಲಿ ದ್ವಿತೀಯ ಶನಿಗೆ ಪರಿಹಾರ. ಸ್ವಕ್ಷೇತ್ರ ಶನಿ ಹೆಚ್ಚು ಕೆಡಕು ಮಾಡುವುದಿಲ್ಲ, ಭಯಬೇಡ. ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈಶ್ವರನ ಆರಾಧನೆ ಮಾಡಿ. ಮನಸ್ಸಿಗೆ ತೃಪ್ತಿ ತಂದುಕೊಂಡು ವ್ಯವಹರಿಸಿ.
ಮನುಷ್ಯನ ಕೈಯಲ್ಲಿರುವ ಐದು ಬೆರಳುಗಳು ಕೂಡಿದ್ದು ಪಂಚತತ್ವವನ್ನು ಸಾರುತ್ತವೆ. ಭೂಮಿ, ಆಕಾಶ, ಜಲ, ಅಗ್ನಿ, ವಾಯು ಇವುಗಳ ತತ್ವವನ್ನು ಅನುಸರಿಸಿ ಬಾಳಿರಿ. ಯಾವುದಕ್ಕೂ ಕೊರತೆಯಿಲ್ಲದ ಜೀವನದಲ್ಲಿ ಇನ್ನೊಬ್ಬರ ಕೊರತೆ ನೀಗಿಸಬೇಕು. ದಾನ-ಧರ್ಮವಿರಲಿ. ಎಲ್ಲವನ್ನು ಪಡೆದು ಆನಂದಿಸಿ. ದತ್ತನನ್ನು ಪೂಜಿಸಲು ಮರೆಯದಿರಿ.