ಈ ರಾಶಿಯವರು ಗುರುವು ಸುಖ-ಸಂತೋಷ, ಸಮೃದ್ಧಿಯನ್ನು ಕೊಟ್ಟು ಕಾಪಾಡುತ್ತಾನೆ: ವಾರಭವಿಷ್ಯ

Vaara-Bhavishya
Published on

ಮೇಷ: ಶರದ್ ಋತುವು ಮುಗಿದು, ಕಾರ್ತಿಕ ಮಾಸದ ಅಮಾವಾಸ್ಯೆ, ಉಪರಿ ಪಾಡ್ಯವು ಆರಂಭವಾಗುವ ಪರ್ವಕಾಲವಿದು. ಮಾರ್ಗಶಿರ ಮಾಸವು ಉತ್ತಮ ಮಾಸವೆಂದು ಹೇಳುತ್ತಾರೆ. ದತ್ತ ನವರಾತ್ರಿಯು ಆರಂಭವಾಗಿ, ಡಿ. 15ರಂದು ಸಂಪನ್ನಗೊಳ್ಳುತ್ತದೆ. ಮೇಷ ರಾಶಿಗೆ ಶನಿ ದೃಷ್ಟಿಯು ಬರುವುದರಿಂದ ಮೈಲಾರಲಿಂಗನನ್ನು ಪ್ರಾರ್ಥಿಸಿ ದೈವ ಶಕ್ತಿ ಸಂಪಾದಿಸಿಕೊಳ್ಳಿ.

ವೃಷಭ: ಗುರುವು ಲಗ್ನದಲ್ಲಿ, ಷಷ್ಠದಲ್ಲಿ ಸೂರ್ಯನಿದ್ದು ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಿ. ರಾಹುವಿಗೆ ಉಚ್ಚ ಮನೆ ಆಗಿರುವುದರಿಂದ ದುರ್ಗೆಯನ್ನು ಪ್ರಾರ್ಥಿಸಿ ಐಚ್ಛಿಕ ಕಾರ್ಯವನ್ನು ನೆರವೇರಿಸಿಕೊಳ್ಳಬಹುದು. ಜೀವನದಲ್ಲಿ ಒಳ್ಳೆಯ ಗಳಿಗೆ ಬರುತ್ತದೆ. ದ್ವಿತೀಯಕ್ಕೆ ಗುರು ಬಂದು ಒಳ್ಳೆಯ ಸ್ಥಾನಮಾನ ಕೊಟ್ಟು ಕಾಪಾಡುತ್ತಾನೆ.

ಮಿಥುನ: ಗುರು ದ್ವಾದಶದಲ್ಲಿದ್ದಾನೆ. 9ರ ಶನಿಯು ದಶಮಕ್ಕೆ ಬಂದು, ಶನಿ-ರಾಹು ಸಂಪರ್ಕಕ್ಕೆ ಬರುತ್ತಾರೆ. ದೈವಬಲ ಒಂದಿದ್ದರೆ ಸಾಕು. ಅನನ್ಯವಾಗಿ ಶಂಖ- ಚಕ್ರ-ಗದಾ ಪದ್ಮನಿಂದ ಶೋಭಾಯಮಾನವಾದ ಮಹಾ ವಿಷ್ಣುವನ್ನು ಪೂಜಿಸಿ.

ಕಟಕ: ಅಷ್ಟಮ ಶನಿ, ಏಕಾದಶದಲ್ಲಿ ಗುರುವಿದ್ದು, ಗುರುವು ಸುಖ-ಸಂತೋಷ, ಸಮೃದ್ಧಿಯನ್ನು ಕೊಟ್ಟು ಕಾಪಾಡುತ್ತಾನೆ. ಗುರುವೇ ಇರುವಾಗ ಬೇರೆ ಯಾವ ಗ್ರಹಗಳ ಸ್ಥಾನಮಾನಗಳು ನಿಮಗೆ ಕೆಡುಕನ್ನು ಉಂಟುಮಾಡವು. ರಕ್ಷತೋ ರಕ್ಷಿತಃ ಎಂದು ಈಶ್ವರನೇ ನಿಮ್ಮನ್ನು ಕಾಪಾಡುತ್ತಾನೆ.

ಸಿಂಹ: ಶನಿ ಗ್ರಹವು ಅಷ್ಟಮಕ್ಕೆ ಬರುವ ಮುಂಚೆಯೇ ಸಪ್ತಮದಲ್ಲಿ ಇರುವಾಗಲೂ ಮಾಡುವ ಕಾರ್ಯಗಳಲ್ಲಿ ದೋಷಗಳು ಉಂಟಾಗಿರುತ್ತದೆ. ಅಷ್ಟಮಕ್ಕೆ ಶನಿ ಹೋದರೂ ಗುರು ಮನೆ ಆಗಿರುವುದರಿಂದ ಬಾಧೆಗಳು ಕಡಿಮೆಯಾಗಿ ಗುರುವೇ ಕೈಹಿಡಿದು ಎತ್ತಿ ಕೆಲಸ ಕಾರ್ಯ ಪರಿಪೂರ್ಣ ಮಾಡಿಕೊಡುತ್ತಾನೆ. ಶುದ್ಧಾತ್ಮದಲ್ಲಿ ‘ಶುದ್ಧ ಬ್ರಹ್ಮ ಪರಾತ್ಪರ ರಾಮ’ ಎಂದು ರಾಮನನ್ನು ಪ್ರಾರ್ಥಿಸಿ.

ಕನ್ಯಾ: 9ರಲ್ಲಿ ಗುರುವಿದ್ದು, 6ರ ಶನಿಯ ಭಾಗ್ಯ ಅನುಭವಿಸಬೇಕಾದರೆ ವಿಘ್ನೇಶ್ವರನನ್ನು ಪೂಜಿಸಿ. ಗಣನಾಯಕನಿಗೆ ಕಡುಬನ್ನು ತಿನ್ನಿಸಿ. ಯಾರಿಗೂ ಮನಸ್ಸಿಗೆ ನೋವುಂಟಾಗದಂತೆ ವರ್ತಿಸಿ. ಮಾಡಿಕೊಟ್ಟ ಕೆಲಸಗಳಿಗೆ ಸತ್ಕಾರ ಮಾಡಿದಲ್ಲಿ ಗಣೇಶನೇ ನಿಮ್ಮನ್ನು ಮುನ್ನಡೆಸುತ್ತಾನೆ. ನೀವು ಏನು ಮಾಡಿದ್ದೀರಿ, ಏನು ಮಾಡಿಲ್ಲವೆಂಬ ಸತ್ಯಾಸತ್ಯತೆಯನ್ನು ದೇವರೇ ತೀರ್ವನಿಸುತ್ತಾನೆ.

ತುಲಾ: ತುಲಾ ರಾಶಿಯವರಿಗೆ ಅಷ್ಟಮದಲ್ಲಿ ಗುರುವಿದ್ದರೂ ವೃಷಭ ರಾಶಿಯ ಗುರು, ನಿಮ್ಮನ್ನು ಎಲ್ಲೂ ಸಿಲುಕಿಸದೆ ಎಲ್ಲಾ ಕಾರ್ಯಗಳಲ್ಲಿ ಮುನ್ನಡೆಸುತ್ತಾನೆ. ಕೆಲಸ ಕಾರ್ಯದಲ್ಲಿ ಚಾಕಚಕ್ಯತೆ ಇರಲಿ. ನಾಳೆಯ ಕೆಲಸವನ್ನು ಇಂದೇ ಮಾಡುವುದು ನಿಮ್ಮ ಗುರಿಯಾಗಲಿ. ರಾಹುವಿಗೆ ದುರ್ಗೆಯನ್ನು ಪ್ರಾರ್ಥಿಸಿ. 12ರ ಕೇತುವಿಗೆ ಇಡಗುಂಜಿ ಗಣಪತಿಯನ್ನು ಪ್ರಾರ್ಥಿಸಿ. ಶ್ರೇಯಸ್ಸು ಉಂಟಾಗುತ್ತದೆ.

ವೃಶ್ಚಿಕ: ನಾರದರು ತ್ರಿಲೋಕ ಸಂಚಾರಿ. ರಾವಣನನ್ನು ಸಂಧಿಸಿ, ಅವನಿಗೆ ಒಳ್ಳೆಯ ಬುದ್ಧಿಯನ್ನು ಹೇಳುವಂತಹ ಪುಣ್ಯ ಕೆಲಸಗಳನ್ನು ಮಾಡುವುದು ದೇವರ ಒಂದು ವಿಶಿಷ್ಟ ಕೆಲಸ. ಈ ಸಂದರ್ಭದಲ್ಲಿ ಸಪ್ತಮದಲ್ಲಿರುವ ಗುರುವಿಗಾಗಿ ಧರ್ಮಸ್ಥಳದ ಅಣ್ಣಪ್ಪನನ್ನು ದರ್ಶನ ಮಾಡಿ ಬನ್ನಿ. ಮಂಜುನಾಥ ಸ್ವಾಮಿಯನ್ನು ದರ್ಶಿಸಿ. ಅಲ್ಲಿಯೇ ಮೂಡಪ್ಪ ಸೇವೆಯನ್ನು ಮಾಡುವ ಹರಕೆ, ಪ್ರಾರ್ಥನೆ ಇಟ್ಟರೆ ಧನಕ್ಕೆ ಧಕ್ಕೆಯಿಲ್ಲ. ತೆನೆಯಲ್ಲಿ ಭತ್ತವು ಇದ್ದೇ ಇರುತ್ತದೆ.

ಧನಸ್ಸು: ಧನುರ್ ರಾಶಿಯವರಿಗೆ ಇನ್ನು 3ನೇ ಮನೆಯಲ್ಲಿ ಶನಿಯು 6ರಲ್ಲಿ ಗುರುವಿದ್ದು, ನಾಲಿಗೆಯ ಮೇಲೆ ಹತೋಟಿ ಇರಲಿ. ಶನಿ 4ನೇ ಮನೆಗೆ ಸಾಗಿದಾಗ ಧರ್ಮ ಕರ್ಮಗಳನ್ನು ಪರಮಾತ್ಮನೇ ನೀಡುತ್ತಾನೆ. ನ್ಯಾಯ ಸಮ್ಮತವಾದ ಕೆಲಸಗಳ ತೀರ್ಪು ದೇವರ ಕೈಲಿದೆ. ಗುರು ದತ್ತಾತ್ರೇಯನನ್ನು ಪೂಜಿಸಿ-ಪ್ರಾರ್ಥಿಸಿ.

ಮಕರ: ಮಕರ ರಾಶಿಯವರು ಶನಿ ಸಂಚಾರದ ಅಂತ್ಯದಲ್ಲಿರುವುದರಿಂದ ದೇವರನ್ನು ಧ್ಯಾನಿಸಿ ಮನಸ್ಸನ್ನು ಹತೋಟಿಯಲ್ಲಿಟ್ಟು ಹಿಂದಿನ ಕಷ್ಟಗಳಿಂದ ಪಾಠ ಕಲಿತು, ಗ್ರಹಬಲವೂ ಇರುವುದರಿಂದ ಮುಂದೆ ಸಾಗಬಹುದು. ಗ್ರಹಗಳು ಎಲ್ಲೇ ಇರಲಿ, ತ್ರಿಕಾಲದಲ್ಲಿ 15 ನಿಮಿಷ ಕಾಲವಾದರೂ ದೇವ ಪ್ರಾರ್ಥನೆ ಬೇಕೇ ಬೇಕು. ರಾಶ್ಯಾಧಿಪತಿಯು ಶನಿಯಾಗಿರುವುದರಿಂದ, ಈಶ್ವರನನ್ನು ಭಜಿಸಿ, ಭವಾನಿ ಶಂಕರನನ್ನು ಪೂಜಿಸಿ.

ಕುಂಭ: ಜನ್ಮ ಶನಿಗೆ 3 ತಿಂಗಳ ಮುಂಚೆಯೇ ಮುಂದಿನ ಮನೆಯ ದೃಷ್ಟಿ ಇರುತ್ತದೆ. ರಾಶಿಯಲ್ಲಿ ಕುಳಿತಿರುವ ಶನಿಯು ಕೆಲವೊಂದು ಅಡೆತಡೆ ತಂದಿರಬಹುದು. ನಿನ್ನೆಯನ್ನು ಮರೆತು ನಾಳೆಯ ಸೂರ್ಯನನ್ನು ಕಾದು ಪುಣ್ಯ ಕೆಲಸಗಳನ್ನು ಮಾಡಬಹುದು. ಆದ್ದರಿಂದ ನೀವು ನಿಧಾನವಾಗಿ ರ್ಚಚಿಸಿ, ಯೋಚಿಸಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಮುಂದಾಗಿರಿ. ದೈವಕೃಪೆಯು ನಿಮ್ಮನ್ನು ಕಾಪಾಡುತ್ತದೆ.

ಮೀನ: ಶನಿಯು ಮಾರ್ಚ್ 29ರಿಂದ ಮೀನ ರಾಶಿ ಸೇರಿ, ಲಗ್ನಕ್ಕೆ ಬರುತ್ತಾನೆ. ಕೆಲವೊಂದು ಪ್ರಮುಖ ವಿಚಾರಗಳಲ್ಲಿ ತಾತ್ಕಾಲಿಕ ತಡೆ ನೀಡಿ ನಿಮ್ಮ ದೈವಭಕ್ತಿಯನ್ನು ಪರೀಕ್ಷಿಸುತ್ತಾನೆ. ನಿಮ್ಮ ತಪ್ಪು ಒಪ್ಪುಗಳನ್ನು ಕ್ಷಮಿಸಲು ಸುಖನಿದ್ರೆಯ ಚಿಂತೆಯನ್ನು ಮಾಡದೆ ಯಾವ ಆಸೆಗೂ ಬಲಿಯಾಗದೇ ಮೀನಾಕ್ಷಿ ಸುಂದರೇಶ್ವರನನ್ನು ಪೂಜಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net