

ಈ ರಾಶಿಯವರಿಗೆ ಏಕಾದಶದಲ್ಲಿ ಗುರು, ದಶಮದಲ್ಲಿ ಶನಿ ಇರುವುದರಿಂದ ಬೇರೆ ಯಾವುದೇ ಗ್ರಹಗಳು ಬಾಧಿಸುವುದಿಲ್ಲ. ಮೇಷ-ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಧರ್ಮಯುಕ್ತರಾಗಿ, ದೇವತಾ ಆರಾಧಕರಾಗಿ ಇದ್ದಲ್ಲಿ ಸತ್ಪಲ ಹೊಂದಿ, ಅನ್ಯರಿಗೆ ಉಪಕಾರ ಮಾಡಿ ಶ್ರೇಯಸ್ಸು ಪಡೆಯಬಹುದು. ಅಂಗಾರಕನು ಸಿಂಹದಲ್ಲಿ ಇರುವುದರಿಂದ ವಿಪರೀತ ಖಾರಪದಾರ್ಥ ತ್ಯಜಿಸಿ.
ರಾಶಿಗೆ ಅಧಿಪತಿ ಶುಕ್ರನು ಕನ್ಯಾ ರಾಶಿಗೆ ಆ.11ರಂದು ಬಂದು ಪಂಚಮದಲ್ಲಿ ಬುಧನ ಮನೆಯನ್ನು ಸೇರುವುದರಿಂದ ಬಾಕಿಯಿರುವ ಕೆಲಸಗಳು ಈಡೇರುತ್ತವೆ. ಇದು ಹಣ ಬರುವ ಸಮಯ. ನೀವು ಸ್ವಲ್ವ ಓಡಾಡಿ ಶ್ರಮಪಟ್ಟರೆ, ಪ್ರತಿನಿಧಿ ನಿಯೋಜಿಸಿ ಹಳೆಯ ಹಣಕಾಸು ವ್ಯವಹಾರ ಸರಿಪಡಿಸಿಕೊಳ್ಳಬಹುದು. ಲಕ್ಷ್ಮೀ ಅಷ್ಟಕವನ್ನು ಪಾರಾಯಣ ಮಾಡಿ.
ಉಪಾಯವಾಗಿ ಜೀವನ ಸಾಗಿಸಿದಲ್ಲಿ ಅಪಾಯ ಬರುವುದಿಲ್ಲ. ಅರ್ಧನಾರೀಶ್ವರ ಸ್ತೋತ್ರ ಪಾರಾಯಣ ಮಾಡಿ. ಮನಸ್ಸಿಗೆ ಹಿತವೂ, ಬೇಕಾದ ಕೆಲಸ ಆಗುವ ಸಮಯ ಬರುತ್ತದೆ. ಗ್ರಹಗಳ ಚಲನೆ ಮುಂದೆ ಹೋಗುವ ತನಕ ದೈವವನ್ನು ನಂಬಿ ಮುಂದೆ ಸಾಗಿರಿ.
ಈ ರಾಶಿಯವರಿಗೆ 9ರ ಗುರುವಿನ ಭಾಗ್ಯವೇ ಭಾಗ್ಯೋದಯ ಎಂದು ಹೇಳಬೇಕು. ಭಗವಂತನೇ ದಾರಿ ತೋರಿಸುತ್ತಾನೆ. ನಿಮ್ಮ ಹೃದಯ ಮಂದಿರದಲ್ಲಿ ದೇವರನ್ನು ಇಟ್ಟು ಪೂಜಿಸಿ. ಇಷ್ಟಾರ್ಥಗಳನ್ನು ಪ್ರಾರ್ಥಿಸಿ. ವಾಂಚಿತ ಫಲ ದೊರಕುತ್ತದೆ.
ಮೇಷಾಧಿಪತಿ ಸಿಂಹದಲ್ಲಿದ್ದು ಶುಕ್ರನ ಸಹಯೋಗ ದಲ್ಲಿದ್ದಾನೆ. ಬಂದಿದ್ದನ್ನು ಉಳಿಸಬೇಕಾದರೆ ದೈವಬಲವೇ ಬೇಕು. ದೇವರು ಸುಖ-ಶಾಂತಿ, ನೆಮ್ಮದಿ ಕೊಡುತ್ತಾನೆ. ಧನವನ್ನು ಶಿಸ್ತಿನಿಂದ ಖರ್ಚು ಮಾಡಿಕೊಂಡು ಸುಖಪಡಿರಿ. ಸೂರ್ಯಾರಾಧನೆ ಅಗತ್ಯ. 9ನೇ ತಾರೀಖಿನಿಂದ ಆರಂಭವಾಗುವ ಶ್ರಾವಣ ಮಾಸದಲ್ಲಿ ಮಾಲಸ-ಮಾರ್ತಾಂಡ (ಖಂಡೋಬ) ಮೈಲಾರಲಿಂಗೇಶ್ವರನನ್ನು ಪೂಜಿಸಿ.
ಧೈರ್ಯಂ, ಧನಂ ಸರ್ವತ್ರಯೇತ್. ಧೈರ್ಯವು-ಧನವೂ ಒಟ್ಟುಗೂಡಿದಲ್ಲಿ ಕೆಲಸವು ಸುಗಮ ವಾಗುತ್ತದೆ. ಆ.11ರಂದು ಕನ್ಯಾರಾಶಿಗೆ ಶುಕ್ರನು ಬಂದು ನಿಮ್ಮ ಕಷ್ಟವನ್ನು ಅಲ್ಪಮಟ್ಟಿಗೆ ಪರಿಹರಿ ಸುತ್ತಾನೆ. ಪಂಚಮ ಶನಿ-ಷಷ್ಠಿ ಗುರು ನಿಮ್ಮನ್ನು ಕಟ್ಟಿ ಹಾಕಿ ಕೂರಿಸುತ್ತಾರೆ. ಭಯವನ್ನು ಧರಿಸದೆ ಹಯಗ್ರೀವ ದೇವರನ್ನು ಪೂಜಿಸಿ. ದೇವರಿಗೆ ಹಯಗ್ರೀವ ಸಿಹಿಯನ್ನು ನೈವೇದ್ಯ ಮಾಡಿರಿ.
ಮನುಷ್ಯನ ದೇಹವು ದೇವರು ಕೊಟ್ಟ ಆಸ್ತಿ. ಹೃದಯಮಂದಿರದಲ್ಲಿ ಅವನಿರುವಾಗ ದೇವರಿಗ್ಯಾಕೆ ಹುಡುಕಾಟ ಮಾಡುವಿರಿ? ಸ್ವಚ್ಛವಾದ ಮನಸ್ಸು, ಸುಂದರವಾದಾಗ ದೇವರು ನೆಲೆಸಿರುತ್ತಾನೆ. ಎಲ್ಲ ವಿಚಾರದಲ್ಲೂ ಜಯವನ್ನು ಪಡೆಯುವ ಸಮಯವಿದು. ಮನಸ್ಸನ್ನು ಇಳಿಮುಖ ಮಾಡಿಕೊಳ್ಳದೆ ಶಾಂತಚಿತ್ತರಾಗಿ ಕೆಲಸ ಮಾಡಿ. ಎಲ್ಲವೂ ಶುಭಗ್ರಹವೇ ಆಗಿ ನಿಮಗೆ ಶುಭವನ್ನು ಮಾಡುತ್ತದೆ.
ಈ ರಾಶಿಗೆ ಆ.11ರಂದು ಏಕಾದಶದಲ್ಲಿ ಶುಕ್ರನು ಬಂದು ನಿಮ್ಮ ದೀರ್ಘಕಾಲದ ಹಣದ ಬೇಡಿಕೆಯನ್ನು, ಯಶಸ್ಸನ್ನು ನಿರ್ವಹಿಸಿ ದಾರಿಯನ್ನು ತೋರಿ ದುಡ್ಡನ್ನು ಕೊಡುತ್ತಾನೆ. ಕಷ್ಟಗಳನ್ನು ಪರಿಹರಿಸುತ್ತಾನೆ. ಅನಗತ್ಯವಾಗಿ ಚಿಂತಿಸದಿರಿ. ಈ ವಾರದಲ್ಲಿ ಚಿಂತಾಮಣಿ ಗಣಪತಿಯನ್ನು ಪೂಜಿಸಿ.
ಧನುರ್ ರಾಶಿ ಅಧಿಪತಿ ತೃತೀಯದಲ್ಲಿ, ದ್ವಾದಶದಲ್ಲಿ ಕೇತುವಿದ್ದಾನೆ. ಓಟದ ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲುವುದು ಅಸಾಧ್ಯ. ಹಾಗೂ ಗೆಲ್ಲುತ್ತೀರ ಎಂದರೆ ಅನಂತವಾಗಿ ದೇವರ ಕಟಾಕ್ಷ ಬೇಕೇ ಬೇಕು. ಈಗಿರುವ ಗ್ರಹಸ್ಥಿತಿಯಲ್ಲಿ ನಿಮ್ಮನ್ಯಾರು ಹಿಮ್ಮೆಟ್ಟಿಸಲು ಆಗುವುದಿಲ್ಲ. ಬರುವ ಭಾಗ್ಯ ತಡೆಯಲಾಗುವುದಿಲ್ಲ. ದೋಣಿ ಮುಂದೆ ಹೋಗಲಿ. ದೂರ ತೀರವ ಸೇರಲಿ. ನಿಮ್ಮ ದೈವವೂ ನಿಮ್ಮನ್ನು ಕಾಪಾಡಿ ಧೈರ್ಯವನ್ನೂ, ಯಶಸ್ಸನ್ನು ಕೊಟ್ಟೇ ಕೊಡುತ್ತಾನೆ. ಸದಾಕಾಲ ರಾಮನ ಧ್ಯಾನವಿರಲಿ.
ದ್ವಿತೀಯದಲ್ಲಿ ಗುರುವು ಸೆ. 17ರಿಂದ ಮಕರ ರಾಶಿಗೆ ಬಂದು ಸೇರುತ್ತಾನೆ. ಶನಿಸಂಚಾರದಲ್ಲಿ ನೀವು ಇದ್ದರೂ ನಿಮ್ಮ ಸಮಯ ಸುಧಾರಿಸಿದೆ. ನಂಬಿದವರನ್ನು ಕೈ ಬಿಡದೆ ನಡೆಸುವವನು ತ್ರಿಮೂರ್ತಿ ಸ್ವರೂಪ ದತ್ತಾತ್ರೇಯನೊಬ್ಬನೇ. ನಿಮ್ಮ ಭಕ್ತಿಭಾವಗಳು ಸಾಕು ನಿಮ್ಮನ್ನು ನೀವು ಕಾಪಾಡಿಕೊಳ್ಳುವುದಕ್ಕೆ. ಶನಿಯ ಪ್ರೀತಿಗಾಗಿ ಅವನ ಸ್ತೋತ್ರವನ್ನು ಪಾರಾಯಣ ಮಾಡಿ.
ಲಗ್ನಸ್ಥಿತ ಗುರುವು, ದ್ವಾದಶಸ್ಥಿತೇ ಶನಿ ಇವರು ಅವರವರ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ. ದ್ವಾದಶ ಶನಿಗೆ ಪ್ರಾರ್ಥನೆಯೂ ಬೇಕು, ಗುರುಕಟಾಕ್ಷವೂ ಇರಬೇಕು. ‘ಏನಿದ್ದರೆ ಏನಯ್ಯ ದೈವಕ್ಕಿಂತ ಮಿಗಿಲಾದ್ದಿಲ್ಲಯ್ಯ’ ಎಂದು ಬಸವಣ್ಣ ಹೇಳಿದ್ದಾರೆ. ಆದ್ದರಿಂದ ದೈವವನ್ನು ನೆನೆದು ಇಷ್ಟದೇವರನ್ನು ಪೂಜಿಸಿ.
ನವಗ್ರಹಗಳು ಕೊಡುವದನ್ನು ಎಲ್ಲವೂ ಕೊಡಲು ಏಕಾದಶ ಶನಿ ಒಬ್ಬನೇ ಸಾಕು. ಭಕ್ತಸಾಗರದಲ್ಲಿ ನಿಮ್ಮನ್ನು ನೀವು ಕೊಂಡೊಯ್ದರೆ ಅದೇ ಕ್ಷೀರಸಾಗರವಾಗಿ ಅಮೃತವನ್ನೇ ಕುಡಿಸುತ್ತಾನೆ. ಗುರುವು 12ರಲ್ಲಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ. ದತ್ತಾತ್ರೇಯನನ್ನು ಪ್ರಾರ್ಥಿಸಿ.