

ರಾಶ್ಯಾಧಿಪತಿ ಕುಜನು ಫೆ.21ರಂದು ತನ್ನ ಸ್ಥಾನವನ್ನು ಬದಲಿಸ ಲಿದ್ದಾನೆ. ಕುಜ-ರಾಹು ಸಂಧಿಯಾಗುತ್ತದೆ. ಮೇಷ-ವೃಷಭ ರಾಶಿಯವರು ಆರೋಗ್ಯ, ವ್ಯವಹಾರದಲ್ಲಿ ಜಾಗರೂಕರಾಗಿರಿ. ದಶಮ ಗುರು, ರವಿ, ಬುಧರು ನಿಮ್ಮ ರಕ್ಷಣೆಗೆ ಒಲವು ತೋರಿದರೂ ಎಚ್ಚರಿಕೆಯಲ್ಲಿರಿ. ಗಣಪತಿಯನ್ನು ಪೂಜಿಸಿ, ದುರ್ಗೆ, ಸುಬ್ರಹ್ಮಣ್ಯನಿಗೆ ಅರ್ಘ್ಯಪಾದ್ಯ ಅಮೃತವನ್ನು ನೈವೇದ್ಯ ಮಾಡಿ.
ರಾಶಿಯಲ್ಲಿ ರಾಹು-ಕುಜರ ಸಂಧಿಯ ಕಾಲದಲ್ಲಿ ನಿಮ್ಮ ವ್ಯವಹಾರ, ಅನ್ಯರ ಜತೆ ಅತಿಯಾದ ವಿಶ್ವಾಸ, ಸ್ನೇಹ ಕೇಡನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ ಸತ್ಪುರುಷರ ಸಂಗವಿದ್ದರೆ ಆರೋಗ್ಯಕ್ಕೆ ಶುದ್ಧವಾದ ಆಮ್ಲಜನಕ ಒದಗಿ ನಿಮ್ಮ ಶತ್ರುಗಳನ್ನು ದೂರಮಾಡಿಕೊಳ್ಳುವ ಸಮಯ. 9ರ ಗುರು ಹಾಗೂ ಸ್ವಕ್ಷೇತ್ರ ಶನಿಯೇ ಶ್ರೀರಕ್ಷೆ. ಕಾಮಾಕ್ಯ ದೇವಿಯನ್ನು ಅರ್ಚಿಸಿ.
ಅಷ್ಟಮದಲ್ಲಿ ಮಿಥುನಾಧಿಪತಿ ಬುಧನು, ಹನ್ನೆರಡರ ವೃಷಭ ರಾಹು- ಅಂಗಾರಕನು, ಅಷ್ಟಮ ಶನಿಯು ಶುಕ್ರನೊಂದಿಗೆ ಸೇರಿ ನಿಮ್ಮಲ್ಲಿ ಬೆವರನ್ನು ಇಳಿಸುತ್ತಾರೆ. ದೈವಬಲವೊಂದರಿಂದಲೇ ಇದೆಲ್ಲವನ್ನು ದಾಟಬೇಕು. ಆರೋಗ್ಯಕ್ಕೆ ಉದ್ವೇಗ ಒಳ್ಳೆಯದಲ್ಲ. ನಿಮ್ಮ ಕುಲದೇವರು, ಮಹಾವಿಷ್ಣುವನ್ನು ಸಹಸ್ರನಾಮ ಪಾರಾಯಣದಿಂದ ಪೂಜಿಸಿ. ಎಚ್ಚರದಿಂದ ಸಾಗುವುದು ಒಳಿತು.
ಸಪ್ತಮ ಗುರುವು ಎಲ್ಲಾ ವಿಧದಲ್ಲೂ ಕಾಪಾಡಿ ನಿಮ್ಮ ಸುಖಕ್ಕೆ ಭಂಗ, ಅಡ್ಡಿಯನ್ನು ಉಂಟುಮಾಡುವುದಿಲ್ಲ. ನಿಮ್ಮ ಅಂತರಾತ್ಮದ ಮೊದಲ ಸಲಹೆಗೆ ಓಗೊಟ್ಟು ‘ಓಂ’ಕಾರ ಬರೆದಲ್ಲಿ ಜೀವನವು ಸಂತಸದಿಂದ ಕೂಡಿರುತ್ತದೆ. ತಲೆಯಲ್ಲಿ ಇಲ್ಲದ ವಿಚಾರವನ್ನು ತೂರಿಸಿಕೊಳ್ಳಬೇಡಿ. ಶುದ್ಧೀಕರಣಕ್ಕೆ ಲಕ್ಷ್ಮೀ ನರಸಿಂಹನನ್ನು, ಆತ್ಮಾವಲೋಕನಕ್ಕೆ ದತ್ತಾತ್ರೇಯನನ್ನು ಪೂಜಿಸಿ-ಧ್ಯಾನಿಸಿ.
ಷಷ್ಠ ಗುರುವು ಏನು ಕೊಡದಿದ್ದರೂ ಸ್ವಕ್ಷೇತ್ರದ ಆರನೇ ಶನಿಯು ಕೊಡಬೇಕಾದ್ದನ್ನು ಕೊಟ್ಟೇ ಕೊಡುತ್ತಾನೆ. ಸೂರ್ಯನಾರಾಯಣ ಕವಚ ಪಠಿಸಿ. ನಿತ್ಯವೂ ಸಾಯಂಕಾಲದಲ್ಲಿ ನವಗ್ರಹ ಶ್ಲೋಕಪಾರಾಯಣ ಮಾಡಿ. ಆಗಬೇಕಾದ ಕೆಲಸ, ನಿರೀಕ್ಷೆಯಲ್ಲಿರುವ ಹಣವು ಬಂದು ಸೇರುವುದು. ಕೊಡುವವನು ದೇವನೊಬ್ಬನೆಂದು ನಂಬಿ ಪೂಜಿಸಿ.
‘ಪಂಚಮಂ ಕಾರ್ಯಸಿದ್ಧಿಃ’ ಎನ್ನುತ್ತಾರೆ. ಗುರುವು ಐದನೇ ಮನೆಯಲ್ಲಿದ್ದು ಕಾರ್ಯಸಾಧನೆಯಾಗುತ್ತದೆ. ನೀವು ನಿಮ್ಮ ಗುರುಗಳಿಗೋ, ತಂದೆ-ತಾಯಿಗೋ ಏನು ಮಾಡುವಿರೆಂದು ಲೆಕ್ಕ ಹಾಕಿಕೊಳ್ಳಿ. ಶನಿಯು ವೈಮನಸ್ಯ ತಂದು, ಆಲಸ್ಯದಿಂದಲೂ ಚಿಂತೆಗೀಡುಮಾಡುತ್ತಾನೆ. ಗುರುವನ್ನು ನಂಬಿ, ಬೃಹಸ್ಪತಿ ಅಷ್ಟೋತ್ತರ ಪಠಿಸಿ ಸುಗಮ ದಾರಿಯನ್ನು ಪಡೆಯಬಹುದು.
ತುಲಾ ರಾಶಿಯಲ್ಲಿ ಕೇತುವಿದ್ದು ಚತುರ್ಥ ಗುರು, ಪಂಚಮ ಬುಧ ವ್ಯವಹಾರ ನಡೆಸಿಕೊಡುತ್ತಾರಾ ದರೂ ಆಗಬೇಕಾದ ಕೆಲಸವಾಗಲಿ ಅಥವಾ ನಿಲುಕಬೇಕಾದ ಹಣವಾಗಲೀ ಪೂರ್ತಿ ಬರುವುದಿಲ್ಲ. ಬುಧನು ಕುಂಭರಾಶಿಗೆ ಬಂದಾಗ ಎಲ್ಲವೂ ಬಂದು ಸೇರುತ್ತದೆ. ತುಲಾ ರಾಶಿಯವರು ಸಾಲಿಗ್ರಾಮ ನರಸಿಂಹನನ್ನು ಪೂಜಿಸಿ ತಪ್ಪದೇ ಕಾಳಿಕಾ ಅಷ್ಟೋತ್ತರ ಪಾರಾಯಣ ಮಾಡಿ.
ದ್ವಾದಶದಲ್ಲಿ ಕೇತುವಿರುವುದು. ಒಮ್ಮೊಮ್ಮೆ ಎಷ್ಟು ನೀರು ಕುಡಿದರೂ ಬಾಯಾರಿಕೆ ಇಂಗುವುದಿಲ್ಲ. ಹಾಗೆಯೇ ನಿಮಗೆ ಬರುವ ಹಣ ಸಾಕಾಗದೆ ಮತ್ತೆ ಬಾಯಾರಬಹುದು. ಆದರೆ 3ರಲ್ಲಿ ಶನಿ ಇರುವುದರಿಂದ ಯಾವ ವ್ಯವಹಾರವೂ ನಿಲ್ಲುವುದಿಲ್ಲ. ಕೇತುವಿಗೆ ಗಣಪತಿ ಪ್ರಾರ್ಥನೆ ಇರಲಿ. ತೃತೀಯ ಗುರುವಿಗೆ ದತ್ತದೇವರ ಧ್ಯಾನ, ಮೂಲಮಂತ್ರ ಬೀಜಾಕ್ಷರದ ಜಪವಿರಲಿ.
ಆಸೆ-ನಿರಾಸೆ, ಬೇಕು-ಬೇಡಗಳ ನಡುವೆ ಜಿಜ್ಞಾಸೆಗೆ ಸಿಲುಕಿ ಸಮಯ ವ್ಯರ್ಥಮಾಡಿಕೊಳ್ಳಬೇಡಿ. ಶನಿ ಪೂರ್ವಾಷಾಢ ನಕ್ಷತ್ರ ಬಿಟ್ಟು ಶ್ರವಣ ನಕ್ಷತ್ರದಲ್ಲಿದ್ದು ನೀವು ಏನೇನು ಬಯಸಿದ್ದೀರೋ ಅದೆಲ್ಲವೂ ಕೈಗೂಡುವುದು. ಅಲ್ಲಿಯವರೆಗೂ ತಾಳ್ಮೆಯಿರಲಿ. ಅನನ್ಯವಾಗಿ ಶ್ರೀಕೃಷ್ಣನನ್ನು ಪೂಜಿಸಿ. ನವನೀತ ಬೆಲ್ಲವನ್ನು ನೈವೇದ್ಯ ಮಾಡಿ.
ದ್ವಾದಶದಿಂದ ಜನ್ಮಶನಿ ಲಗ್ನದಲ್ಲೇ ಇದ್ದು, ಗುರು ಸಂಪರ್ಕದಲ್ಲಿ ಇರುತ್ತಾನೆ. ಗುರುಕಟಾಕ್ಷದಿಂದ ಮಾತ್ರವೇ ಸಮಯ ಒಳಿತಾಗುವುದು. ಗುರು, ಕುಂಭರಾಶಿಗೆ ಬಂದಾಗ ಸ್ವಲ್ಪ ಸುಧಾರಿಸಿ ಸುಖವು ಲಭಿಸುತ್ತದೆ. ಶನಿಯ ಸಂಚಾರ ಮುಗಿದಲ್ಲಿ ನಿಮ್ಮ ಬಾಳಲ್ಲಿ ಸಂತಸವಿರುತ್ತದೆ. ಶನಿವಾರದಂದು ರಾಮನಾಮ ಜಪಮಾಡಿ. ಎಲ್ಲವೂ ಸೇರದಿದ್ದರೂ ತಕ್ಕಮಟ್ಟಿಗೆ ಜೀವನ ಸಾಗಿಸುತ್ತಾನೆ.
ಬಾಯಾರಿದಾಗ, ಹಸಿದಾಗ ಜಲವೇ ಸಾಕಾಗುತ್ತದೆ. ಅಂದರೆ ಹೊಟ್ಟೆತುಂಬಲು ನಾವು ಮಾಡಿದ ಅನ್ನದಾನ ಫಲ ನೀಡುತ್ತದೆ. 12ರ ಶನಿ ಜನ್ಮಕ್ಕೆ ಬರುವವರೆಗೆ ತೃಪ್ತಿ ಇರಲಿ. ಮನಸ್ಸನ್ನು ಸ್ತಿಮಿತದಲ್ಲಿ ಇಟ್ಟುಕೊಂಡು ವ್ಯವಹಾರಿಸಿ. ಶುಕ್ರವಾರಗಳ ಸಾಯಂಕಾಲ ಲಕ್ಷ್ಮೀಸ್ವರೂಪ ದೇವಿಯನ್ನು ಪೂಜಿಸಿ. ಅಗೋಚರ ಶುಭಫಲ ದೊರೆಯುತ್ತದೆ.
ಆಕಾಶ ನೋಡಲು ಯಾರ ಅಪ್ಪಣೆಯೂ ಬೇಡ. ಭೂಮಿಯಲ್ಲಿ ನಿಲ್ಲಲು ನಿಮ್ಮ ಜಾಗದಲ್ಲಿ ಮಾತ್ರ ಅನುಮತಿ ಇರುತ್ತದೆ. ನಿಮ್ಮ ಜೀವನದ ಸುಸಮಯವಿದು. ಬುದ್ಧಿವಂತರಾಗಿ, ಬೇಕು-ಬೇಡ ತಿಳಿದುಕೊಂಡು ವ್ಯವಹರಿಸಿದಲ್ಲಿ ಬೇಕಾದಷ್ಟು ಹಣ, ಸಂತಸ ಎಲ್ಲವೂ ನಿಮ್ಮಲ್ಲೇ ಇರುತ್ತದೆ. ಶಿವಸಹಸ್ರನಾಮ ಪಾರಾಯಣ ಮಾಡಿ. ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.