

ದಕ್ಷಿಣಾಯಣದ ಕಡೆಯ ಹಂತದಲ್ಲಿರುವ ನಾವು ಈ ಇಡೀ ಸಮಯದಲ್ಲಿ ಪೂಜಾದಿಗಳನ್ನು ಮಾಡಿ ಪಾಪವನ್ನು ತೊಳೆದುಕೊಳ್ಳಬೇಕು. ಮಹಾ ವಿಷ್ಣುವನ್ನು ಆರಾಧಿಸಿದಲ್ಲಿ ಏಕಾದಶ ಗುರುವು ಸತ್ಪಲ-ಸಂತಸ ನೀಡುತ್ತಾನೆ. ಎಲ್ಲೇ ಇರಲಿ ಗುರು ಒಬ್ಬನೇ ಸಕಲವನ್ನು ಕೊಟ್ಟು ಮನದಾಸೆ ಈಡೇರಿಸಲು. ಮೇಷಾಧಿಪತಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.
ಒಂದೇ ಕೆಲಸವನ್ನು ಸಾಧಿಸಿರಿ. ಅದೇ ನೂರುಪಟ್ಟು ಸಂತಸವನ್ನೂ, ಧನವನ್ನೂ ನೀಡುತ್ತದೆ. 15.12.21ರ ನಂತರದಲ್ಲಿ ರವಿ-ಬುಧ ಒಂದೇ ಮನೆಗೆ ಬಂದು ಸೇರಿ ನಿಮ್ಮ ಕೆಲಸ, ಕಾರ್ಯಗಳಲ್ಲಿ ಬೆಳಕನ್ನುಕೊಟ್ಟು ಆಸೆಯನ್ನು ಪೂರೈಸುತ್ತಾರೆ. ಕುಜ-ಕೇತು ಸಂಯೋಗ ಇರುವುದರಿಂದ ವಿಶೇಷ ವಿಚಾರಗಳನ್ನು ಸಂಯಮದಿಂದ ನಿರ್ವಹಿಸಿ. ಯಾವ ಕೆಲಸ-ಸಂಬಂಧಗಳು ಹಾಳಾಗದೆ ಚೆನ್ನಾಗಿ ಉಳಿದುಕೊಂಡಿರಲಿ.
ಅಷ್ಟಮದಲ್ಲಿ ಶುಕ್ರ-ಶನಿ ಸೇರಿ ಕೆಲಸಗಳಲ್ಲಿ ಕೆಲವು ಅಡೆತಡೆಗಳನ್ನು ತಂದರೂ 9ರ ಗುರುವು ಎಲ್ಲ ಗ್ರಹಗಳಿಗಿಂತ ಮುಂದೆ ಸಾಗಿ ದೈವಬಲದಿಂದ ನೀವು ಅಂದುಕೊಂಡ ಕೆಲಸಗಳು ನಡೆದುಹೋಗುತ್ತವೆ. ಗುರುವಿನ ಪ್ರಾರ್ಥನೆ ಮಾಡಿ, ಕಡಲೆಬೇಳೆಯನ್ನು ದಾನಕೊಡಬೇಕು. ನಂದೀಶ್ವರನಿಗೆ ಕಡಲೆಕಾಯಿ ಬೀಜ, ಬೆಲ್ಲವನ್ನು ಆಹಾರವಾಗಿ ಕೊಡಿ. ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.
ಒಳ್ಳೆಯ ಕಾಲವು ಬರಬೇಕಾದರೆ 2022ರ ಏಪ್ರಿಲ್ 13ರವರೆಗೆ ನಿರೀಕ್ಷಿಸಬೇಕು. ಅಲ್ಲಿಯವರೆಗೂ ಇರುವ ಕೆಲಸ, ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಿ. ದೇವರು ಏನು ಕೊಟ್ಟರೂ ಅದೇ ಲಾಭವೆಂದು ಸಂತೃಪ್ತರಾಗಿರಿ. ದತ್ತಾತ್ರೇಯನನ್ನು ಪೂಜಿಸಿ. ಮನೋಬಲಕ್ಕಾಗಿ ಚಂದ್ರಷ್ಟೋತ್ತರ ಪಾರಾಯಣ ಮಾಡಿ.
ಸಿಂಹ ರಾಶಿಯವರಿಗೆ ಪೂರ್ವ ಪುಣ್ಯದ ಹಾಗೂ ಪಿತೃಗಳ ಆಶೀರ್ವಾದವಿದ್ದು, ಈ ಸಮಯದಲ್ಲಿ ಒಳ್ಳೆಯ ಗ್ರಹಗತಿ ಹೊಂದಿರುವ ನೀವು ಏನೇ ಬೇಕಾದರೂ ಸಾಧಿಸಬಹುದು. ವ್ಯಾಪಾರ ವಹಿವಾಟು, ಗೃಹಸಂಪತ್ತು, ಕೀರ್ತಿ, ಲಾಭ, ಆರೋಗ್ಯ ಎಲ್ಲವೂ ನಿಮ್ಮನ್ನು ಕೂಡಿಕೊಂಡಿರುತ್ತದೆ. ಸೂರ್ಯನಾರಾಯಣನನ್ನು ಚತುರ್ಥದಲ್ಲಿರುವ ಕುಜ-ಕೇತುವಿಗೆ ಗಣಪತಿ ಸಹಿತ ಷಣ್ಮುಖನನ್ನು ಪ್ರಾರ್ಥಿಸಿ.
ನಿಮ್ಮ ಜೀವನವು 2022 ಏಪ್ರಿಲ್ 13ರ ನಂತರದಲ್ಲಿ ಸುಧಾರಿಸುತ್ತದೆ. ಒಳ್ಳೆಯ ಕಾಲ ಬರುತ್ತದೆ. ಯಾರೇ ನಿಷ್ಠುರ ಮಾಡಲಿ, ಒಂದೊಮ್ಮೆ ಅವಾಚ್ಯ ಶಬ್ದದಿಂದ ನಿಮ್ಮನ್ನು ಹಳಿದರೂ ಸೈರಣೆಯಿಂದ ಮೌನವಹಿಸಿ. ಮಾರ್ಗಶಿರ ಪುಷ್ಯ ಮಾಸದ ಅಧಿಪತಿಯಾದ ವೆಂಕಟೇಶ್ವರನನ್ನು ಪ್ರಾರ್ಥಿಸಿ.
ತುಲಾರಾಶಿಯವರು ಜೀವನಮಾರ್ಗದಲ್ಲಿ ಎಂದೆಂದೂ ದುರ್ಗೆಯನ್ನು ಪ್ರಾರ್ಥನೆ ಮಾಡುವುದನ್ನು ಮರೆಯಬಾರದು. ದುರ್ಗೆಯ ಪ್ರಸಾದದಿಂದ ದುಃಖ-ದಾರಿದ್ರ್ಯ ಬರುವುದೇ ಇಲ್ಲ. ನಿಮ್ಮ ಜೀವನದಲ್ಲಿ ಯಾವುದೋ ಮಹಾತ್ಕಾರ್ಯ ಪಂಚಮ ಗುರುವಿದ್ದಾಗ ನಡೆಯುತ್ತದೆ.
‘ತಾಳಿದವನು ಬಾಳಿಯಾನು’ ಎಂಬಂತೆ ಸ್ವಲ್ಪ ಸಮಯ ಕಾದರೆ ನಿಮ್ಮ ಕೆಲಸದಲ್ಲಿ, ವ್ಯಾಪಾರ-ವಹಿವಾಟಿನಲ್ಲಿ ಏನೇ ಅಡೆತಡೆ ಇದ್ದರೂ ಸುಖವನ್ನು ಪಡೆಯುತ್ತೀರ. ಇನ್ನು ಐದು ಮಂಗಳವಾರಗಳು ನರಸಿಂಹನ ದರ್ಶನ, ಪೂಜೆಯನ್ನು ಮರೆಯದಿರಿ. ಒಳಿತಾಗುತ್ತದೆ.
ಧನಸ್ಸು ರಾಶಿಗೆ ಡಿ.15ನೇ ತಾರೀಖು ಸೂರ್ಯನು ಬಂದು, ಕತ್ತಲನ್ನು ಕಳೆದು ಬೆಳಕನ್ನು ನೀಡುವ ಸಮಯ. ಗುರುವು 3ನೇ ಮನೆಯಲ್ಲಿದ್ದು, ರಕ್ಷಣೆಯನ್ನು ನೀಡುತ್ತಾನೆ. ಯಾರಿಗೂ ಕಠೋರವಾಗಿ ಮಾತನ್ನು ಆಡಬೇಡಿ. ಕುಲಗುರುಗಳ ದರ್ಶನ ಮಾಡಿ, ಯಾವ ಕೆಲಸ ಮಾಡಿದರೂ ಸಂತೋಷ. ಶ್ರೀರಾಮನಂತೆ ಪಿತೃಭಕ್ತಿ ತೋರಿ ಎಲ್ಲವನ್ನೂ ಜಯಿಸಬಹುದು. ಗುರುಚರಿತಾ ಪಾರಾಯಣವನ್ನು ಮರೆಯಬೇಡಿ.
ವಹಿವಾಟು ಮಾಡುವಾಗ ಎಚ್ಚರವಹಿಸಿ. ಯಾವುದೇ ವಿಚಾರದಲ್ಲಿ ಯಾರಿಗಾದರೂ ಮಾತುಕೊಟ್ಟರೆ ಅದನ್ನು ನಡೆಸಲು ಸಾಧ್ಯವಾಗುವುದಿಲ್ಲ. ದ್ವಿತೀಯ ಗುರುವಿಗೆ ಶಿವಾರಾಧನೆ ಇರಲಿ. ಶಿವನೇ ಗುರುವಾಗಿ ನಿಮ್ಮನ್ನು ಸಂರಕ್ಷಿಸುತ್ತಾನೆ.
ಗುರುವು ಶನಿಯ ಮನೆಯಲ್ಲಿ ಶುಭಾಂಶದಲ್ಲಿ ನೀವು ಬೇಡಿದ್ದನ್ನು ಕೊಡುತ್ತಾನೆ. ಗಳಿಸಿದ್ದನ್ನು ವೆಚ್ಚ ಮಾಡುವಾಗ ಲೆಕ್ಕಾಚಾರ ತಪ್ಪಬಾರದು. ದೇವರು ಕೊಟ್ಟ ಧನವನ್ನು ಎಚ್ಚರದಿಂದ ನಿರ್ವಹಿಸಿದರೆ ತೊಂದರೆ, ನಿರಾಸೆ ಇರುವುದಿಲ್ಲ. ಲಗ್ನದಲ್ಲೇ ಗುರುವಿರುವಾಗ ರಾಮನಾಮ ಸಹಸ್ರನಾಮ ಪಾರಾಯಣ ಮಾಡಿರಿ.
ಗ್ರಹಸಂಚಾರ ದೂರವಿಟ್ಟು ಏಕಾದಶ ಶನಿಯ ಫಲವನ್ನು ದೈವಬಲದಿಂದ ಪರಿಪೂರ್ಣವಾಗಿ ಪಡೆಯಬಹುದು. ಕಾಲಭೈರವನನ್ನು ಪೂಜಿಸಿ; ಕಾಲಭೈರವ ಅಷ್ಟೋತ್ತರ ಪಠಿಸಿ. ದೇವರಿಗೆ ಕ್ಷೀರಪಾಯಸ ನೈವೇದ್ಯ ಮಾಡಿರಿ. ಏಕಾದಶ ಶನಿ ಎಲ್ಲವನ್ನೂ ಕೊಟ್ಟು ಕಾಪಾಡುತ್ತಾನೆ.