

ಮೇಷ
ಮೇಷ ರಾಶಿ ಅಧಿಪತಿ ಅಂಗಾರಕನು 12ನೇ ಮನೆ ಸಂಚಾರಕ್ಕೆ ಬಂದು ಆರ್ಥಿಕ ವಿಚಾರದಲ್ಲಿ ಕೆಲವೊಂದು ಗೊಂದಲ, ನಾನಾ ವಿಚಾರಗಳಲ್ಲಿ ಗಲಿಬಿಲಿ ಉಂಟುಮಾಡುತ್ತಾನೆ. ಗುರುವು 9ನೇ ಮನೆಯಲ್ಲಿರುವುದರಿಂದಲೂ 2ರಲ್ಲಿ ರಾಹು ಇರುವುದರಿಂದಲೂ ಸ್ವಲ್ಪಮಟ್ಟಿಗೆ ಸುಧಾರಿಸುವ ಆಶಾಭಾವನೆ ಇರಿಸಿಕೊಳ್ಳಬಹುದು. ಗಣಪತಿಯನ್ನು, ವ್ಯಾಸರೂಪದ ಮಹಾವಿಷ್ಣುವನ್ನು ಪೂಜಿಸಿ. ಸ್ವಲ್ಪಮಟ್ಟಿಗೆ ನಿಮ್ಮ ಸಾಧನೆಯಲ್ಲಿ ಜಯಶೀಲರಾಗುತ್ತೀರ.
ವೃಷಭ
ಲಗ್ನದಲ್ಲಿ ರಾಹು ಇರುವುದರಿಂದ ದೇಹ-ಮನಸ್ಸಿಗೆ ಅತಿ ಬಳಲಿಕೆ ಬೇಡ. ಏಕಾದಶದಲ್ಲಿ ಅಂಗಾರಕನ ಸಾನ್ನಿಧ್ಯ ಒಳ್ಳೆಯ ಫಲ ನೀಡುತ್ತದೆ. ಅಕಸ್ಮಾತಾಗಿ ಅವಘಡ, ಸೋಂಕು, ಬೆಂಕಿಯಿಂದ ಕೆಲವು ಅನಿಷ್ಟಗಳು ಆಗಬಹುದು. ಅಥವಾ ಆಗಿಹೋಗಿರಬಹುದು. ಅಷ್ಟಮ ಗುರುವು ವಿಧ್ಯುಕ್ತವಾಗಿ ಮಕರ ರಾಶಿ ಪ್ರವೇಶಿಸಿದ ನಂತರ ಒಳಿತಾಗುತ್ತದೆ. ರಾಶ್ಯಾಧಿಪತಿ ಶುಕ್ರನು ಚತುರ್ಧದಲ್ಲಿದ್ದು ಅನಗತ್ಯ ಖರ್ಚನ್ನು ನೀಡುತ್ತಾನೆ. ಖರ್ಚುವೆಚ್ಚದಲ್ಲಿ ಹಿಡಿತವಿರಬೇಕು.
ಮಿಥುನ
ದ್ವಾದಶ ರಾಹು, ಆರನೇ ಕೇತುವನ್ನು ಸಪ್ತಮ ಗುರುವು ಕಟ್ಟಿಹಾಕಿರುತ್ತಾನೆ. ಅಂದರೆ ದೈವಕೃಪೆ ನಿಮ್ಮ ಮೇಲಿದೆ. ಕುಲದೇವರನ್ನು ಆರಾಧಿಸಿ. ಬುಧನ ಆಧಿಪತ್ಯ ಇರುವುದರಿಂದ ವ್ಯಾಪಾರ ವ್ಯವಹಾರಗಳನ್ನು ಬುದ್ಧಿವಂತಿಕೆಯಿಂದ ಮಾಡಿ. ಮಹಾಲಕ್ಷ್ಮಿ ಸಹಸ್ರನಾಮ ಪಾರಾಯಣವನ್ನು ಮಾಡಿ. ಮಹಾವಿಷ್ಣುವಿನ ಪತ್ನಿ ಲಕ್ಷ್ಮೀಯನ್ನು ಒಲಿಸಿಕೊಳ್ಳಿ. ಲಕ್ಷ್ಮಿಯ ವಿಗ್ರಹವಿದ್ದಲ್ಲಿ ಬಿಲ್ವಪತ್ರೆಯಿಂದ ಅರ್ಚಿಸಿ. ಇಷ್ಟಾರ್ಥ ಪಡೆಯಿರಿ.
ಕಟಕ
ಏಕಾದಶದಲ್ಲಿ ರಾಹುವು ಸಂತೋಷ ಉಂಟುಮಾಡುವ ಫಲ ನೀಡಿದ್ದಾನೆ. ಆಕಸ್ಮಿಕವಾಗಿ ಧನವು ಬಂದು ನಿಮ್ಮನ್ನು ಸೇರಿದೆ. ವಿನಾಕಾರಣ ವ್ಯಯಮಾಡಬೇಡಿ. ಉಮಾಮಹೇಶ್ವರರನ್ನು ಪೂಜಿಸಿ, ಕಾರ್ತೀಕ ಮಾಸದ ಶುದ್ಧ ಚತುರ್ದಶಿಯಂದು ವಿಷ್ಣು, ಶಂಕರನನ್ನು ಪೂಜೆಮಾಡಿದಲ್ಲಿ ನಿಮ್ಮ ಮನೋಸಂಕಲ್ಪಗಳು ಈಡೇರುತ್ತವೆ. ಸಪ್ತಮ ಶನಿ ಕಲಹ ತಂದುಹಾಕಬಹುದು. ಮೌನವೇ ದಿವ್ಯ ಔಷಧ.
ಸಿಂಹ
ಸಿಂಹ ರಾಶಿಯಲ್ಲಿ ಜನಿಸಿದವರು ಐದರ ಗುರು, ಷಷ್ಠ ಶನಿಯಿಂದ ಒಳ್ಳೆಯ ಕಾರ್ಯ ಮಾಡಿ ಪುಣ್ಯ ಸಂಪಾದನೆ ಮಾಡಬೇಕು. ಇರುವವರಿಗೂ, ಬೇಕಾದವರಿಗೂ ಕೊಟ್ಟು, ಪುಣ್ಯಾಂಶವನ್ನು ಖಾತೆಯಲ್ಲಿ ಇರಿಸಿಕೊಳ್ಳಿ. ಜೇನು ಗೂಡು ಕಟ್ಟಿ ಜೇನನ್ನು ಪರರಿಗಾಗಿ ಬಿಟ್ಟು ಹೋಗುತ್ತದೆ. ಆ ತತ್ತ್ವದಲ್ಲಿ ಪರರಿಗೆ ಸಹಾಯ ಮಾಡಿ. ತಂದೆ-ತಾಯಿ ಋಣವನ್ನು ತೀರಿಸಲು ಮರೆಯದಿರಿ. ಸೂರ್ಯನಾರಾಯಣ ಸ್ತೋತ್ರ ಪಠಿಸಿ. ಲಕ್ಷ್ಮೀ ವೆಂಕಟೇಶ್ವರನನ್ನು ಪೂಜಿಸಿ.
ಕನ್ಯಾ
ಪಂಚಮ ಶನಿ, ಚತುರ್ಥ ಗುರು ಹೇಳಿದ್ದನ್ನು ಕೇಳುವುದಿಲ್ಲ. ಮಾಡಬಾರದ್ದನ್ನು ಮಾಡಲೇಬೇಕೆಂಬುದರ ಸಂಕಲ್ಪ. ಪಂಚಮಕ್ಕೆ ಗುರುವು ಬರುವವನಿದ್ದಾನೆ. ಅಲ್ಪಸಂತೋಷವನ್ನು ಕೊಡುತ್ತಾನೆ. ಶನಿಯ ತಾಪದಿಂದ ಕೆಲವೊಂದು ರೋಗಲಕ್ಷಣಗಳು ಕಾಡುತ್ತವೆ. ಸೂಕ್ತವಾದ ವೈದ್ಯರಿಗೆ ತೋರಿಸಿ. ಸರಿಯಾದ ಚಿಕಿತ್ಸೆ ಮಾಡಿಸಿ. ಆರೋಗ್ಯವಂತರಾಗಿ. ನಿತ್ಯವೂ ತ್ರಯಂಬಕ ಮಂತ್ರ, ಧನ್ವಂತರಿ ಮಂತ್ರವನ್ನು 28 ಬಾರಿ ಜಪಿಸಿ.
ತುಲ
ತೃತೀಯ ಗುರುವು ಸ್ವಕ್ಷೇತ್ರದಲ್ಲಿದ್ದು ಜಯ, ಕೀರ್ತಿ, ಧನಕ್ಕೆ ಕೊರತೆಯಿರುವುದಿಲ್ಲ. 24 ಗಂಟೆಯೂ ಚಿಂತೆ ಮಾಡುತ್ತಾ ಕುಳಿತರೆ ದೇವರು ಕೊಟ್ಟಿರುವ ತಲೆಯ ಕಂಪ್ಯೂಟರ್ ನಿಷ್ಕ್ರಿಯವಾಗುತ್ತದೆ. ತಲೆಯಿರುವುದು ಸುಜ್ಞಾನದ ಹಾದಿಗೆ. ಚಿಂತೆ ಬಿಡಿ. ಅನನ್ಯವಾಗಿ ಚತುರ್ಥ ಶನಿಗೆ ಬಿಡದೆ ದತ್ತಾತ್ರೇಯ ಸ್ತೋತ್ರ, ಅವತಾರ ಕಥನ ನಿತ್ಯವೂ ಪಾರಾಯಣ ಮಾಡಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗಣಪತಿಗೆ ಅಕ್ಕಿ ಕಡುಬನ್ನು ನೈವೇದ್ಯ ಮಾಡಿ. ಬುದ್ಧಿ ಚುರುಕಾಗುತ್ತದೆ.
ವೃಶ್ಚಿಕ
ಗಂಟೆಯಿರುವುದು ಯಾನಕ್ಕಾಗಿ, ಗಂಟೆಯ ನಾದವು ಏಕಾಗ್ರತೆಯನ್ನು ಮೂಡಿಸುವ ಏಕೈಕ ಸಾಧನ. ಹಾಗೆಯೇ ಪ್ರಜೆಗಳ ಯೋಗಕ್ಷೇಮ ಬಯಸಲು ನೀವು ಜಾಗರೂಕರಾಗಿರಬೇಕು. ದುಡ್ಡು, ದವಸ-ಧಾನ್ಯ, ಸಾಲಗಳನ್ನು ತೀರಿಸುವ ಶಕ್ತಿಯನ್ನು ದೇವರು ನಿಡುತ್ತಾನೆ. ಶಿಸ್ತುಗಾರ ಪುಟ್ಟಸ್ವಾಮಿಯಂತೆ ನಡೆಯುವ ಕಾಲ ಹತ್ತಿರದಲ್ಲಿದೆ. ಅಜಾಗರೂಕತೆ ಬೇಡ. ದುರ್ಗಾ ಸಹಸ್ರನಾಮವನ್ನು ಪಠಿಸಿ. ದೇವರೇ ನಿಮ್ಮನ್ನು ಕಷ್ಟದಿಂದ ಪಾರುಮಾಡಿ ದಡ ಸೇರಿಸುತ್ತಾನೆ.
ಧನಸ್ಸು
ಲಗ್ನದಲ್ಲಿ ಗುರು, ಹನ್ನೆರಡರ ಕೇತು, ಆರರ ರಾಹು ಇರುವುದರಿಂದ ಯಾವ ಕೆಲಸವನ್ನಾದರೂ ಯೋಚನೆಮಾಡಿ ಮಾಡಬೇಕು. ಹನ್ನೆರಡರ ಕೇತುವು ವೃಥಾ ಖರ್ಚನ್ನು ಮಾಡಿಸುತ್ತಾನೆ. ಆ ನಂತರದಲ್ಲಿ ಮಾಡಿಸಿದ ಧನವ್ಯಯ ಸಾರ್ಥಕವಾಗುವುದಿಲ್ಲ. ಮುಂದಿನ ದಿನಗಳು ಒಳ್ಳೆಯದು ಬರಲಿದೆ. ಶ್ರೀನಿವಾಸ ಕಲ್ಯಾಣವನ್ನು ಓದಿ. ನಾರಾಯಣ ಸ್ಮರಣೆ ಮಾಡಿ. ಭಕ್ತ ಮಾರ್ಕಂಡೇಯನನ್ನು ಪ್ರಾರ್ಥಿಸಿ. ಮಕ್ಕಳ ಮೇಲೆ ಕೋಪ ಬೇಡ. ಅದೇ ಶಾಪವಾದೀತು.
ಮಕರ
ರಾಶಿಗೆ ಹನ್ನೆರಡರ ಗುರು, ಜನ್ಮ ಶನಿ ನಿಮಗೆ ಸಜ್ಜನಿಕೆಯಿಂದ ದಾರಿತೋರುತ್ತಾನೆ. ಸಜ್ಜನರಿಗೆ, ಧರ್ಮವನ್ನು ಕಾಪಾಡುವವರಿಗೆ, ಪರೋಪಕಾರ ಮಾಡುವವರಿಗೆ ಅವನು ಯಾವ ನಷ್ಟವನ್ನೂ ಕೊಡುವುದಿಲ್ಲ. ಈ ನೀತಿ ಅನುಸರಿಸಿದರೆ ಜಯ ಲಭಿಸುತ್ತದೆ. ದ್ವಾದಶ ಗುರುವಿಗೆ ಶಿವಸಹಸ್ರನಾಮವನ್ನು, ಜನ್ಮಶನಿಗೆ ರಾಮನ ಅಷ್ಟೋತ್ತರ ಪಠಿಸಿ. ‘ಓಂ ಶ್ರೀರಾಮ ರಾಮ ರಾಮಾಯ ನಮಃ’ ಮಂತ್ರವನ್ನು ಧ್ಯಾನಿಸಿ. ಒಳ್ಳೆಯ ಕಾಲಕ್ಕೆ ಕಾಯುತ್ತಿರಿ.
ಕುಂಭ
ಏಳೂವರೆ ವರ್ಷದ ಶನಿಕಾಟದ ಶನಿ ಸಂಚಾರವು ನಿಮಗೆ ಆರಂಭವಾಗಿದ್ದು, ನಿಮ್ಮ ಪಾಪಗಳನ್ನು ತೊಳೆದು ನಿಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸಲು ಬಂದಿರುತ್ತಾನೆ. ಕುಂಭದಲ್ಲಿ ದೇವರನ್ನು ಸ್ಥಾಪಿಸಬಹುದು. ಬಾಯಾರಿದಾಗ ಜಲವನ್ನು ತುಂಬಲು ತಂಬಿಗೆಯೇ ಬೇಕು. ಅಂತೆಯೇ ದೈವಕೃಪೆ ಇದ್ದರೆ ಮಾತ್ರ ಮುಂದೆ ನಡೆಯಲು ಸಾಧ್ಯ. ಪ್ರತಿ ಶನಿವಾರ ಉಪವಾಸವಿದ್ದು, ಶಿವಧ್ಯಾನ ಮಾಡಿ. ಪ್ರತಿ ಮಾಸದಲ್ಲಿ ಚಂಡಿಕಾ ಪಾರಾಯಣ ಮಾಡಿ.
ಮೀನ
ಸ್ವರ್ಗಕ್ಕೆ ಎರಡೇ ಗೇಣು. ಸ್ವರ್ಗಸುಖ ಅನುಭವಿಸಿದ ಮೇಲೆ ದೇವಾನುದೇವತೆಗಳು ಕೂಡ ಭೂಲೋಕಕ್ಕೆ ಮರಳಿಬರುತ್ತಾರೆ. ಇದರಿಂದ ಮಾಡಿದ ಪುಣ್ಯವು ಉಳಿದದ್ದೇನು? 2022ರ ಇಸವಿಯವರೆಗೂ ನಿಮಗೆ ಭಯ ಬೇಕಿಲ್ಲ. ನಿರ್ಭಯ ಅಂತ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಿ ಕಾಪಾಡಿ. ರಾಷ್ಟ್ರಕ್ಕೆ ಬಂದಿರುವ ಕಷ್ಟ ದೂರವಾಗಿಸಲು ನಿಮ್ಮ ಕೈಲಾದ ಸಹಾಯಮಾಡಿ. ದೇಶಕ್ಕಾಗಿ ಮಾಡಿದ ಪುಣ್ಯಕೆಲಸಕ್ಕಾಗಿ ನಿಮ್ಮ ಪಾಲನ್ನು ದೇವರು ನೀಡುತ್ತಾನೆ.