ನಿಮ್ಮ ಪುಣ್ಯದಲ್ಲಿ ಏನು ಬರುತ್ತದೋ ಅದನ್ನೇ ಸ್ವೀಕರಿಸಿ: ವಾರಭವಿಷ್ಯ

Vaara-Bhavishya
Published on
ಮೇಷ

ಕುಜ-ರಾಹು ಸಂಧಿಯಲ್ಲಿ ಕಳೆದ ವಾರದಲ್ಲಿ ನಿಮ್ಮ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅದೇ ರೀತಿಯಲ್ಲೇ ಮುಂದುವರಿದು ಜಾಗರೂಕರಾಗಿದ್ದರೆ ನೀವು ಮಾಡುವ ದೇವಕಾರ್ಯಗಳು ಪರಮೇಶ್ವರನಿಗೆ ಸಂದು ನಿಮ್ಮನ್ನು ಕಾಪಾಡುತ್ತಾನೆ. ಎಚ್ಚರವಿರಲಿ. ಎಲ್ಲವೂ ನಿಮ್ಮಂತೆ ನಡೆಯುವುದಿಲ್ಲ. ಅಪಹಾಸ್ಯ, ಅವಮಾನ ಕೂಡ ಬಂದು ಸೇರುವ ಕಾಲ. ದ್ವಾದಶದಲ್ಲಿ ಗುರು ರಕ್ಷಣೆ ಕೊಡಲಾಗದಿದ್ದರೂ ಗುರುವಿಗೆ ಶರಣೆಂದರೆ ಚನ್ನಬಸವೇಶ್ವರನೇ ಕಾಯುವನು. ಶಿವಪೂಜೆ ಮಾಡಿ. ಅನ್ನದಾನ ಮಾಡಿಸಿ.

ವೃಷಭ

ಶುಕ್ರನು ರವಿ-ಬುಧರ ಜೊತೆಗಿದ್ದು, ಬೆಳಕನ್ನು ಕೊಡುವವನು, ರಾತ್ರಿಯಲ್ಲಿ ಬೆಳದಿಂಗಳನ್ನು ಕೊಡುವವನು ಶುಕ್ರನೊಂದಿಗೆ ಸೇರಿದ್ದಾರೆ. ಏಕಾದಶ ಗುರುವು ನೀವು ಮಾಡುವ ಎಡವಟ್ಟನ್ನು ಸರಿಪಡಿಸಿ ನಿಮ್ಮನ್ನು ಮುಂದೆ ಸಾಗಿಸುತ್ತಾನೆ. ಈ ವಾರದಲ್ಲಿ ದುರ್ಗೆಯನ್ನು ಪೂಜಿಸಿ. ನಂಜನಗೂಡಿನ ಶ್ರೀಕಂಠೇಶ್ವರನನ್ನು ದರ್ಶಿಸಿ ಬನ್ನಿ.

ಮಿಥುನ

ಶನಿಯು ಅಷ್ಟಮದಲ್ಲಿದ್ದು, ಗುರುವು ದಶಮದಲ್ಲಿರುತ್ತಾನೆ. ಗ್ರಹ ಅಷ್ಟೇನು ಶುಭಪ್ರದವಲ್ಲದಿದ್ದರೂ, ರವಿ-ಬುಧ-ಶುಕ್ರರು ದ್ವಿತೀಯದಲ್ಲಿರುವುದರಿಂದ ಪ್ರಯತ್ನಪಟ್ಟರೆ ಕೆಲಸಗಳಲ್ಲಿ ಜಯ ಕಂಡುಕೊಳ್ಳಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಮನಸ್ಸಿಗೆ ಕೊಂಚ ಸಂತೋಷ ನೀಡುವ ಸಂಗತಿಗಳನ್ನು ಕಾಣಬಹುದು.

ಕಟಕ

ಕಟಕ ರಾಶಿಯಲ್ಲಿ ರವಿ ಬುಧ ಶುಕ್ರರು ಏಕರಾಶಿಯಲ್ಲಿ ಇರುವುದರಿಂದ ನಿಮ್ಮ ಪಾಲಿಗೆ ಅಶುಭವೂ ಶುಭವಾಗುತ್ತದೆ. ಮನುಷ್ಯನನ್ನು ನಂಬಿ ಕೆಟ್ಟವರಿದ್ದಾರೆ. ಆದರೆ ದೇವರನ್ನು ನಂಬಿ ಕೆಟ್ಟವರಿಲ್ಲ. ಅಷ್ಟಮ ಗುರುವಿಗಾಗಿ ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ಕೈಮುಗಿದು ಕರೆಯಿರಿ. ಸುಖವಾಗಿರಿಸುತ್ತಾನೆ.

ಸಿಂಹ

ಶನಿ ಮಕರಕ್ಕೆ ಬಂದು, ಷಷ್ಠದ ಫಲವನ್ನು ನೀಡುವ ಸಮಯ. ಶ್ರೀ ಹರಿಯನ್ನು ಪ್ರಾರ್ಥಿಸಿ. ನೀವು ಬೇಕಾದ ವರವನ್ನು ಪಡೆಯಬಹುದು. ಗುರು ವಕ್ರವಾಗಿರುವುದರಿಂದ ಶೇ.80ರಷ್ಟು ಶುಭ ಫಲ ನಡೆಯುತ್ತದೆ. ದುರ್ಗೆ, ಸೂರ್ಯರನ್ನು ಪೂಜಿಸುವುದು ಸಿಂಹ ರಾಶಿಯಲ್ಲಿ ಜನಿಸಿದ ನಿಮ್ಮ ಆದ್ಯ ಕರ್ತವ್ಯ.

ಕನ್ಯಾ

ಶನಿಯು ಪಂಚಮಕ್ಕೆ ಬಂದಿದ್ದರೂ ಸಪ್ತಮದ ಗುರುವು ನಿಮ್ಮನ್ನು ಎಲ್ಲಾ ಕಷ್ಟ-ಕಾರ್ಪಣ್ಯಗಳಿಂದ ಕಾಪಾಡಿ ಮುನ್ನಡೆಸುತ್ತಾನೆ. ವರವನ್ನು ಬೇಡಿದರೆ ಗಣಪತಿಯನ್ನು ಪೂಜಿಸಬೇಕು. ಗಣಪತಿಯನ್ನು ಪೂಜಿಸಿ-ಪ್ರಾರ್ಥಿಸಿ. ವಿಷ್ಣುವನ್ನು ಆರಾಧಿಸಿ.

ತುಲಾ

ಧರ್ಮ-ಕರ್ವಧಿಪತಿಗಳಿಗೆ ಶ್ರಮಪಟ್ಟು ಕೆಲಸ ಮಾಡಿದಾಗ ನಿಮ್ಮ ಪೂರ್ವಪುಣ್ಯದಲ್ಲಿ, ಹಣೆಬರಹವನ್ನು ತಿದ್ದಿ ಕೇಳಿದ್ದನ್ನು ಕೊಡುತ್ತಾನೆ. ದೇವರಲ್ಲಿ ಕೇಳಿದ್ದಕ್ಕೆ ತೃಪ್ತಿಪಟ್ಟು, ಅವನು ಕೊಟ್ಟಿದ್ದನ್ನು ಸ್ವೀಕರಿಸಬೇಕು. ಹಿರಿಯರ ಆಶೀರ್ವಾದ ಇರಲಿ. ತಪ್ಪದೇ ಗುರುಚರಿತ್ರೆಯ ಪಾರಾಯಣ ಮಾಡಿ. ಕೇತುವಿಗೆ ಸುಬ್ರಹ್ಮಣ್ಯನನ್ನು ಪೂಜಿಸುವುದು ಅವಶ್ಯ.

ಧನಸ್ಸು

ಕಷ್ಟಗಳು ಬಂದು ಹೋಗುತ್ತವೆ. ಮಹಾನ್ ಭಾರತ ದೇಶವನ್ನು ಕಾಪಾಡಲು, ರಾಮನು ರಾಕ್ಷಸರು ಕೊಟ್ಟ ಕಷ್ಟವನ್ನು ಸ್ವೀಕರಿಸಿ ಮನುಷ್ಯನಾಗಿ ಹೋರಾಡಿ ಭರತಖಂಡ ನಿರ್ಮಾಣ ಮಾಡಿದ್ದಾನೆ. ರಾಮನನ್ನು ಸತತ ಧ್ಯಾನಿಸಿ- ಪೂಜಿಸಿ. ಲಗ್ನಾಧಿಪತಿ ಗುರುವನ್ನು ಪೂಜಿಸಿ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ.

ವೃಶ್ಚಿಕ

ಬಂದಿರುವ ಕಾಲವು ಶುಭವಯ್ಯ. ನಿಮ್ಮನ್ನು ನೀವು ಸರಿಮಾಡಿಕೊಂಡು ಸುಖವಾಗಿರುವ ಸಮಯ. ಪಂಚಮ ಗುರು, ತೃತೀಯ ಶನಿ ಕಾದು ಕುಳಿತಿದ್ದಾರೆ. ನಿಮ್ಮ ಪಿತೃಗಳು ಮಾಡಿದ ಪುಣ್ಯವೇ ನಿಮಗೆ ಶುಭತಂದು, ಸಾಲಬಾಧೆಯಿಂದ ರಕ್ಷಿಸಿ ಕಾರ್ಯದಲ್ಲಿ ಜಯ ಕೊಡುತ್ತಾನೆ.

ಮಕರ

ಅಚಾತುರ್ಯ-ಆತುರ, ಸತ್ಯವು ಕಠೋರ. ಸುಳ್ಳಿನಿಂದ ಕೂಡಿದ ಸತ್ಯವು ಘೋರ. ಇದನ್ನು ಅರಿತುಕೊಂಡು ಜನ್ಮ ಶನಿಯನ್ನು ದಾಟಲು ದೈವ ಸಹಾಯ ಪಡೆದುಕೊಂಡು ಸಾಗಿದಲ್ಲಿ ನಿಮ್ಮನ್ನು ನಡೆಸಿ ಹರಸುತ್ತಾನೆ. ಶನಿ ಅಷ್ಟೋತ್ತರ ಪಠಿಸಿ. ಶ್ರಾವಣ ಮಾಸದ ಎಲ್ಲಾ ಸೋಮವಾರ ಈಶ್ವರನನ್ನು ಪೂಜಿಸಿ-ದರ್ಶಿಸಿ.

ಕುಂಭ

ದ್ವಾದಶದಲ್ಲಿ ಶನಿಯು, ಗುರುವು ದ್ವಿತೀಯದಲ್ಲಿದ್ದು, ಕುಟುಂಬ ಸೌಖ್ಯವಾಗಲಿ, ಇತರ ಬಾಧೆಗಳಾಗಲಿ ನಿಮಗೆ ಸೋಲನ್ನು ತರುವುದಿಲ್ಲ. ಆಟಕ್ಕೂ-ಓಟಕ್ಕೂ ಮಿತಿಯುಂಟು. ಮಿತಿಮೀರಿದರೆ ಬಳಲುತ್ತಾನೆ. ಅದನ್ನು ಅರ್ಥೈಸಿಕೊಂಡು ಕಾಲಕ್ಕೆ ಅನುಗುಣವಾಗಿ ನಿಮ್ಮ ಪುಣ್ಯದಲ್ಲಿ ಏನು ಬರುತ್ತದೋ ಅದನ್ನೇ ಸ್ವೀಕರಿಸಿ ಶುದ್ಧವಾಗಿ ಬಾಳಿರಿ. ಪಾವಗಡದ ಶನಿಯನ್ನು ಸಂದರ್ಶಿಸಿ, ಶುಭವಾಗುವುದು.

ಮೀನ

ಮೀನ ರಾಶಿಯವರು ಮೈಯನ್ನು ಪರಚಿಕೊಂಡರೆ ಕೆಲಸವಾಗುವುದಿಲ್ಲ. ಏಕಾದಶದಲ್ಲಿ ಶನಿ, ಆತ್ಮಕಾರಕನಾದ ಗುರು ಲಗ್ನದಲ್ಲಿ ನಾನಾತರನಾದ ವಿಚಿತ್ರವಾದ ಸಂದರ್ಭ ಒಂದೊದಗಿ ನಿಮ್ಮನ್ನು ತಿರುಗಿಸುತ್ತಾನೆ. ಮೊಸಳೆಯ ಬಾಯಿಂದ ಯಾರಾದರೂ ಹೊರಬಂದಿರುವರೇ? ದೈವಕೃಪೆಯಿದ್ದರೆ ನೀವು ಬೇಡಲು ಲಗ್ನದ ಗುರುವೇ ರಕ್ಷಣೆಗೆ ಬಂದು ನಿಲ್ಲುತ್ತಾನೆ. ಕುಲಗುರುಗಳನ್ನು ಸಂದರ್ಶಿಸಿ ಸಲಹೆ ಪಡೆದು ಸನ್ಮಾರ್ಗದಲ್ಲಿ ನಡೆದರೆ ಕೆಟ್ಟ ಕಾಲವು ನೀಗಿ ಮುನ್ನಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net