

ಸೂರ್ಯನು ಮಕರದಲ್ಲಿ ಬಂದು ಸಪ್ತಮೀ ಶನಿವಾರ ಸಪ್ತ ಅಶ್ವ ವಾಹನದಲ್ಲಿ ಹೊರಟು ವಿದ್ಯುಕ್ತವಾಗಿ ಬೆಳಕನ್ನು ಜ್ಞಾನವನ್ನು ಕೊಟ್ಟು ಪ್ರಜೆಗಳನ್ನು ವ್ಯಾಧಿ ಮರಣ ಭೀತಿ ಇಲ್ಲದೆ ಆರೋಗ್ಯ ಕೊಟ್ಟು ಮುನ್ನಡೆಸುವ ಸಮಯ ಆರಂಭ ಆಗಿದೆ. ಇಂತಹ ಏಕೈಕ ಗ್ರಹವಾದ ರವಿಯು ಮನುಷ್ಯನಿಗೆ ಜ್ಞಾನವೆಂಬ ಬೆಳಕನ್ನು ಕೊಟ್ಟು ನಡೆಸಲು ಸೂರ್ಯನಾರಾಯಣನನ್ನು ಪೂಜಿಸಬೇಕು. ಆದಿತ್ಯ ಹೃದಯ ಪಾರಾಯಣ ಮಾಡಲೇಬೇಕು. ಮೇಷ ರಾಶಿಗೆ ಗುರು ಬಲ ಇಲ್ಲ. ಲಗ್ನದಲ್ಲೇ ರಾಹುವು ಇದ್ದಾನೆ. ನಾನಾ ತರಹ ವಿಚಾರ ತೆಗೆದುಕೊಂಡು ನಿಮ್ಮ ಮುಖಾರವಿಂದ ಬಾಡಿ ಹೋಗದಂತೆ ನೋಡಿಕೊಳ್ಳಿ. ಸುಬ್ರಹ್ಮಣ್ಯನನ್ನು ಪೂಜಿಸಿ. ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಿ. ವ್ಯವಹಾರವು ಯಥಾವತ್ತಾಗಿ ನಡೆಯುತ್ತದೆ.
9ನೇ ಮನೆಯ ಸೂರ್ಯನು ಮಾಘ ಮಾಸದ ಸಪ್ತಮೀಯಂದು ವಿಶೇಷವಾದ ತೇಜಸ್ಸನ್ನು, ಬಲವನ್ನು ಪಡೆದುಕೊಂಡು ಅರ್ಕ ಪುಷ್ಪದಿಂದ, ಕೆಂಪು ಪುಷ್ಪದಿಂದ ಸೂರ್ಯ ಅಷ್ಟೋತ್ತರ ದಿನದಂದು ಪೂಜಿಸಿದರೆ ಬೇಕಾದ್ದನ್ನು ಪಡೆಯಬಹುದು. ರಾಹು ದ್ವಾದಶದಲ್ಲಿ ಇದ್ದು, ವ್ಯವಹಾರಗಳಲ್ಲಿ ಎಚ್ಚರದಿಂದ ಸಾಗಿ. ಯಾರ ಮಾತಿಗೂ ಹಂಗಿಗೂ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ದುರ್ಗೆಯನ್ನು ಪೂಜಿಸಿ. ಮೂರು ದಿನಗಳ ಕಾಲ ಅಶ್ವತ್ಥ ವೃಕ್ಷ, ಬೇವು ಒಟ್ಟಿಗೇ ಇರುವ ಕಡೆ ಪ್ರದಕ್ಷಿಣೆ ಸಹಿತ ನಮಸ್ಕರಿಸಿ. ಬರುವ ಬಾಧೆಗಳು ದೂರವಾಗಿ ಸಂತೋಷ, ಸುಖ ದೊರೆಯುತ್ತದೆ.
ಅಧಿಪತಿ ಬುಧ, ಕುಂಭ ರಾಶಿಯಲ್ಲಿ ಶನಿ 9ರಲ್ಲಿ ಇದ್ದು, ಶನಿ- ಬುಧರು ಯಾವಾಗಲೂ ಹೊಂದಿಕೊಂಡು ಇರುತ್ತಾರೆ. ಶನಿ ಗ್ರಹಕ್ಕೆ ಅತ್ಯಂತ ಸ್ನೇಹ ಹೊಂದಿರುವ ಗ್ರಹ ಬುಧ. ಸೂರ್ಯನನ್ನು, ಬುಧನ ಅಧಿಪತಿ ಮಹಾ ವಿಷ್ಣುವನ್ನು ಪೂಜಿಸಿ ಎಲ್ಲವನ್ನೂ ಪಡೆದು ಸುಖವಾಗಿರಬಹುದು. ಏಪ್ರಿಲ್ 21ರ ನಂತರ ಗುರು 11ಕ್ಕೆ ಬಂದು ಆಯುಷ್ಯ, ಧನ ಧಾನ್ಯ ವೃದ್ಧಿಸುತ್ತದೆ. ಮನುಷ್ಯನು ದುರ್ಬಲನಾಗುವುದು ದೈವ ಬಲ ಇಲ್ಲದೆ ಇರುವಾಗ. ಜೀವನವಿಡೀ ವಿಷ್ಣುವನ್ನು ಪೂಜಿಸಿ. ವಿಘ್ನವಿಲ್ಲದ ಜೀವನ ನಡೆಸಬಹುದು
ಚಂದ್ರನ ಆಧಿಪತ್ಯ, ಅಷ್ಟಮದಲ್ಲಿ ಶನಿ, ನವಮ ಗುರು. ಸ್ವಕ್ಷೇತ್ರ ಶನಿ ಬಾಧೆ ತಟ್ಟಲಾರದು. ಶನಿ ಗ್ರಹವು ತನ್ನ ಸ್ವಂತ ಮನೆಯಲ್ಲಿ ಇರುವಾಗ ಯಾರನ್ನೂ ಬಾಧಿಸುವುದಿಲ್ಲ ಎಂಬ ಮಾತಿದೆ. ದಶರಥ ವಿರಚಿತ ಶನಿ ಸ್ತೋತ್ರ ಪಠಿಸಿ. ಮನಶ್ಶಾಂತಿಗೆ, ಮನಸಂಕಲ್ಪ ಈಡೇರಲು ಚಂದ್ರಾ ಅಷ್ಟೋತ್ತರ ಪಠಿಸಿ. ಶಿವ ಪೂಜೆ ಮಾಡಿದರೆ ಒಳ್ಳೆಯ ಫಲ ದೊರಕುವುದು.
ಸಪ್ತಮದಲ್ಲಿ ಶನಿ, ಅಷ್ಟಮ ಗುರು , ಸ್ವಕ್ಷೇತ್ರ ಶನಿಯು ಸಹ ಇರುವುದು ನಿಮ್ಮ ಪೂರ್ವಾರ್ಜಿತ ಪಾಪ ಪುಣ್ಯ ಸಮತೋಲನ ಮಾಡಿ ಫಲ ನೀಡುತ್ತದೆ. ಉಪಕಾರ ಮಾಡುವುದು ಮನುಷ್ಯನ ಆದ್ಯ ಕರ್ತವ್ಯ. ಹೊಟ್ಟೆ ತುಂಬಲು ಊಟ ಬೇಕು. ಜೀವನ ಮುಂದೆ ಸಾಗಿಸಲು ಪುಣ್ಯ ಬೇಕು. ಅನಿರೀಕ್ಷಿತ ಘಟನೆ ನಡೆದು ನಿಮ್ಮ ನಿರೀಕ್ಷೆಗೂ ಮೀರಿ ನಡೆದು ಸಂತೋಷ ಉಂಟಾಗುತ್ತದೆ. ಸಬ್ರಮಣ್ಯನನ್ನು ಪೂಜಿಸಿದರೆ ಒಳ್ಳೆಯದೇ ಆಗುವುದೆಂಬುದರಲ್ಲಿ ಎರಡನೇ ಮಾತೇ ಇಲ್ಲ.
ಶನಿಯ ವಿಶೇಷ ಫಲ ಇದ್ದು, ಪಂಚಮ ಶನಿ ಇಂದ ಬಂದ ದೇಹದ ಮನಸ್ಸಿನ ಕೊಳಕನ್ನು ತೆಗೆಯುವ ಕಾಲ. ಮನಸ್ಸನ್ನು ತಿಳಿಯಾಗಿಟ್ಟುಕೊಂಡರೆ ದೈವವು ಹುಡುಕಿ ಬಂದು ಕೆಲಸ ಮುನ್ನಡೆಸುತ್ತದೆ. 6ನೇ ಮನೆಯಲ್ಲಿ ಶನಿ ಇದ್ದು, ನೀವು ಹಣಕಾಸಿನಲ್ಲಿ ಮಾಡಿಕೊಂಡ ಅವಾಂತರ ಸರಿ ಮಾಡಿ, ಋಣ ಭಾದೆ ಹರಿಯುತ್ತದೆ. ಗುರು ಬಲ ಇದ್ದು ಎಲ್ಲವೂ ನಿಮ್ಮಂತೆ ಸಾಗುತ್ತದೆ. ಮಂಗಳವಾರ ಶುಕ್ರವಾರ ದುರ್ಗ ಅಷ್ಟೋತ್ತರ ಪಾರಾಯಣ ಮಾಡಿ.
ಪಂಚಮಕ್ಕೆ ಶನಿ ಬಂದಿದ್ದರೂ ಉಚ್ಚ ಸ್ಥಾನ ಆಗಿರುವುದರಿಂದ ಯಾವ ಅಶುಭ ಫಲ ನಡೆಯದೆ ಕೀರ್ತಿ ಲಾಭವನ್ನು, ನಿರೀಕ್ಷೆಗೂ ಮೀರಿದ ಸಂಪಾದನೆ, ಯಶಸ್ಸನ್ನು ಕೊಡುವ ಕಾಲವು ಬಂದಿದೆ. ಖಡ್ಗಮಾಲ ಸ್ತೋತ್ರ ಪಾರಾಯಣ ಮಾಡಿ. ದತ್ತಾತ್ರೇಯ ಗುರು ಚರಿತ್ರೆಯ ಸಪ್ತಾಹವನ್ನು ಭಕ್ತಿಯಿಂದ ಮಾಡಿದಲ್ಲಿ ಯುಕ್ತಿ ಶ್ರೇಯಸ್ಸನ್ನು ಕೊಡುತ್ತದೆ.
ದ್ವಾದಶದಲ್ಲಿ ಕೇತು ಇದ್ದರೂ ಶನಿ ಸ್ವಕ್ಷೇತ್ರದಲ್ಲಿದ್ದಾನೆ. ಮಕರ ಶನಿಯು ಮೂರನೇ ಮನೆಯಲ್ಲಿ ಇದ್ದಾಗ ಸಾಲ ಸೊಲ ತೀರಿ ಸುಖವಾಗಿರುವ ಕಾಲ ಆರಂಭ ಆಗಿದೆ. ನಾಲ್ಕನೇ ಮನೆಯಲ್ಲೂ ಕೊಡಬೇಕಾದ್ದನ್ನು ಕೊಟ್ಟು ನಿಮ್ಮನ್ನು ಸಂತೋಷದಿಂದ ಇರಿಸಿ, ಋಣ ಭಾದೆ ತೀರಿಸಿ, ಶಾಂತಿ, ನೆಮ್ಮದಿಯನ್ನು ಕೊಡುವುದರಲ್ಲಿ ಸಂದೇಹ ಬೇಡ. ಶರೀರದ ಆರೋಗ್ಯ ಕಾಪಾಡಿಕೊಳ್ಳಿ. 5 ಗುರುವಾರಗಳಂದು ಗಣಪತಿಗೆ ನವನೀತ ನೈವೇದ್ಯ ಮಾಡಿ, ಗರಿಕೆಯಿಂದ ಪೂಜಿಸಿ.
ಶಸ್ತ್ರಾಸ್ತ್ರ ವಿದ್ಯೆಗಳಲ್ಲಿ ಧನುರ್ ಬಾನಾಡಿಗಳ ಶ್ರೀರಾಮ ಚಂದ್ರನಿಂದ ವಿಶೇಷ ಸ್ಥಾನ ಪಡೆದಿದೆ. ಮಾತೆಂಬ ಬಾಣದ ಪ್ರಯೋಗ ನಿಮ್ಮ ಆತ್ಮರಕ್ಷಣೆಗಾಗಿ ಎಂದು ಅರ್ಥೈಸಿಕೊಂಡು, ಶನಿ ತೃತೀಯದಲ್ಲಿ ಬಂದು ಒಳ್ಳೆಯ ಕಾಲ ಸದುಪಯೋಗ ಪಡಿಸಿಕೊಂಡರೆ ನೀವು ಎಷ್ಟು ಎತ್ತರವಾದರೂ ತಲುಪಿ ಕೀರ್ತಿ ಗಳಿಸಿ ಸಂತೋಷ ಕೊಟ್ಟು ಸಂತೋಷ ಪಡೆಯಬಹುದು. ರಾಮಚಂದ್ರನನ್ನು ಪೂಜಿಸಿ. ನೀವು ಕೂಡ ರಾಜ ಸನ್ಮಾರ್ಗದಲ್ಲಿ ಬದುಕುವುದರಲ್ಲಿ ಸಂದೇಹವಿಲ್ಲ. ಗುರು ಪ್ರಾರ್ಥನೆ, ದರ್ಶನ ಇರಲಿ.
ಸ್ವಕ್ಷೇತ್ರ ಶನಿಯು ಮತ್ತೆ ಕುಂಭ ರಾಶಿಯಲ್ಲಿ ಸ್ವಂತ ಮನೆಗೆ ಬಂದು ಸೇರಿದ್ದಾನೆ. ಮುಕ್ಕಾಲು ಭಾಗದ ಶನಿ ಸಂಚಾರವನ್ನು ತಾಳಿಕೊಂಡು ಬಾಳಿದರೆ ಅದು ಅಧ್ಬುತವೇ ಸರಿ. ಹೆದರುವ ಕಾರಣಗಳು ಇನ್ನೂ ಇಲ್ಲ. ಕುಂಭದಲ್ಲಿ ಶನಿ ಇದ್ದು, ನೀವು ಹಿಂಜರಿಕೆ ಪಡೆಯುವುದು ಬೇಡ. ಯಾವ ನಷ್ಟ ಕಷ್ಟ ಬಾರದಿರಲಿ. ಶನಿಯ ಪ್ರಾರ್ಥನೆ ಇರಲಿ. ಶಿವ ಸಹ್ರನಾಮ ಪಾರಾಯಣ ಮಾಡಿದರೆ ಶುಭ ಕಾಣಬಹುದು.
ದ್ವಿತೀಯದಲ್ಲಿ ಗುರು ಇರುವುದರಿಂದ ಶನಿ ಜನ್ಮದಲ್ಲಿ ಇದ್ದರೂ ಏನು ತಾಕಲಾಟ ಪೀಕಲಾಟ ಕೊಡಲು ಆಗುವುದಿಲ್ಲ. ನಿತ್ಯ ಪೂಜೆ ಮಾಡುವವರಿಗೆ ಧರ್ಮ ಮಾರ್ಗಿಗಳಿಗೆ, ಅನ್ಯರಿಗೆ ಉಪಕಾರ ಮಾಡುವವರಿಗೆ ಶನಿ ದುಷ್ಪಲ ನೀಡುವುದಿಲ್ಲ. ಗುರುವಿನಿಂದ ಭೋಗ ಭಾಗ್ಯ ಪಡೆದು ಗುರು ಚರಿತ್ರೆ ಹದಿನಾರನೇ ಅಧ್ಯಾಯ ಪಾರಾಯಣ ಮಾಡಿ. ಅದರಂತೆ ಗುರುಗಳನ್ನು ಪೂಜಿಸಿ. ದತ್ತಾತ್ರೇಯ ನಾಮಸ್ಮರಣೆ ಇರಲಿ. ಸಂಕಷ್ಟಹರ ಗಣಪತಿ ಸ್ತೋತ್ರ ಪಠಿಸಿ.
ಅತ್ಮಕಾರಕ ಗುರು ಲಗ್ನದಲ್ಲೇ ಇದ್ದು ಯಾವ ಭಯವೂ ಬೇಡ. ನಮ್ಮ ಆತ್ಮವನ್ನು ನಾವೇ ನಿಂದಿಸುವುದು ತಪ್ಪು. ಆತ್ಮನೇ ಪರಮಾತ್ಮ ಎಂದು ನಂಬಿಕೆ ಇಟ್ಟು, ಅನುಸಂಧಾನ ಮಾಡಿ ಇಷ್ಟ ದೇವರನ್ನು ಪೂಜಿಸಿ. ದ್ವಾದಶ ಶನಿ ಕೆಲಸ ಕಾರ್ಯಗಳಲ್ಲಿ ನಿಧಾನ ಉಂಟು ಮಾಡಬಹುದು. ಅದನ್ನು ಸಾಧಿಸಿಕೊಳ್ಳಲು ಶಿವನ ದೇವಾಲಯದಲ್ಲಿ ಬಿಲ್ವಾರ್ಚನೆ ಮಾಡಿಸಿ. ನೀಲಿ ಪುಷ್ಪದಿಂದ ಶನಿಯನ್ನು ಪೂಜಿಸಿ. ದೋಷ ನಿವಾರಣೆ ಆಗಿ ಸುಖವು ಸಿಗುತ್ತದೆ.