ಈ ರಾಶಿಯವರ ಜೀವನದಲ್ಲಿ ಆಶ್ಚರ್ಯಕರ ಘಟನೆಗಳು ನಡೆದು ಸುಖಸಂತೋಷ ಉಂಟಾಗುತ್ತದೆ: ವಾರಭವಿಷ್ಯ

1195212
Published on
ಮೇಷ

ಕಾರ್ತಿಕ ಮಾಸದ ಅಂತ್ಯದಲ್ಲಿದ್ದು, ಮೇಷ ರಾಶಿಯವರಿಗೆ ಗ್ರಹಾನುಕೂಲ ಚೆನ್ನಾಗಿರುವುದರಿಂದ ಸಮಯವನ್ನು ಸರಿಯಾಗಿ ಬಳಸಿ ಯಶಸ್ಸು, ಕೀರ್ತಿ ಸಂಪಾದಿಸ ಬಹುದು. ‘ಇಟ್ಟವನು ಕೆಟ್ಟ, ಕೊಟ್ಟವನು ಧರ್ಮರಕ್ಷಣೆ ಮಾಡಿ ದೈವವನ್ನು ಗೆದ್ದ’ ಎಂಬ ನುಡಿಯಿದೆ. ಸಹಾಯಹಸ್ತ ಮುಂದಿರಲಿ. ಸುಬ್ರಹ್ಮಣ್ಯ ಮತ್ತು ಕುಲದೇವರನ್ನು ಏಕಕಾಲದಲ್ಲಿ ಪ್ರಾರ್ಥಿಸಿ.

ವೃಷಭ

ದಶಮದಲ್ಲಿ ಗುರುವಿದ್ದು ಕಾರ್ಯ ವಿಳಂಬ ಮಾಡುತ್ತಾನೆ. ಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಯಾವ ಅರಿಷ್ಟವೂ ಉಂಟಾಗುವುದಿಲ್ಲ. ಧನಕ್ಕಾಗಿ ಕಷ್ಟಪಡಬೇಕಾಗಬಹುದು. ಅತಿಯಾದ ಖರ್ಚು-ವೆಚ್ಚ ಮಾಡದೆ, ಭಯವನ್ನು ನಿವಾರಿಸಲು ‘ನಮಃ ಸಂಸಾರಕಾಂತಾರ- ಮಹಾಭಯ ನಿವಾರಣೆ ಪಿನಾಕಿನೇ ಮಹೇಶಾಯ ಸರ್ವಾಭಿಷ್ಟ ಪ್ರದಾಯಿನೆ’ ಎಂಬ ಮಂತ್ರ ಪಠಿಸಿ.

ಮಿಥುನ

9ರ ಗುರುವು ನಿಮ್ಮನ್ನು ಕಾಪಾಡಿ ಕಷ್ಟಗಳನ್ನು ನಿವಾರಿಸಿ ಮನದಿಚ್ಛೆ ಪೂರ್ಣ ಮಾಡುತ್ತಾನೆ. ಅಷ್ಟಮ ಶನಿಗೆ ಕಡಿವಾಣ ಹಾಕಲು ಶನಿಶ್ಚರ ಅಷ್ಟೋತ್ತರ ಪಠಿಸಿ. 7 ದಿನ ಪರ್ಯಂತ ಸುಂದರಕಾಂಡ ಪಾರಾಯಣ ಮಾಡಿದರೆ ಬೇಕಾದ್ದನ್ನು ಸಾಧಿಸಿ ಎಲ್ಲರಂತೆ ನೀವು ಸುಖವಾಗಿರಬಹುದು.

ಕಟಕ

ಗುರುವಿನ ಕೃಪೆಯಿದ್ದರೆ ಅಷ್ಟಮ ಗುರುವಾಗಲಿ ಸಪ್ತಮ ಶನಿಯಾಗಲಿ ಏನೂ ಮಾಡಲಾಗದು. ಗುರುವನ್ನು ಅರಿತು ಜನ್ಮಕೊಟ್ಟ ತಂದೆ-ತಾಯಿ, ಗುರುವನ್ನು, ಪಾರ್ವತಿ ಸಮೇತ ಈಶ್ವರನನ್ನು ಪ್ರಾರ್ಥಿಸಿ. ಕಾಲವನ್ನು ಸದ್ವಿನಿಯೋಗಿಸಿ ಹೆಜ್ಜೆಹಾಕಿ. ನಿತ್ಯವೂ ಗುರುದತ್ತಾತ್ರೇಯನ ಪೂಜೆ, ಕಷ್ಟ ನಿವಾರಣೆಗೆ ದಕ್ಷಿಣಾಮೂರ್ತಿ ಸ್ತೋತ್ರವನ್ನು ಏಪ್ರಿಲ್ 2022ರವರೆಗೆ ಪಠಿಸಿ.

ಸಿಂಹ

ಅರಣ್ಯದಲ್ಲಿ ಸಿಂಹವನ್ನು ಸೃಷ್ಟಿಸಿದವನು ಪರಮಾತ್ಮ. ಸಿಂಹಕ್ಕೆ ಯಾರ ಹಂಗೂ-ಭಯವೂ ಇಲ್ಲ. ಅರಣ್ಯ ಕಡಿದು ಸಿಂಹವು ನಿಮ್ಮನ್ನು ಕಾಡಿದರೆ ಯಾರು ಏನು ಮಾಡಲು ಸಾಧ್ಯ. ಆದ್ದರಿಂದ ಸಜ್ಜನರ ಸಹವಾಸದಲ್ಲಿರಿ. 7ರ ಗುರು, 6ರ ಶನಿಯು ಇಚ್ಛಿತ ಫಲ ನೀಡುತ್ತಾರೆ. ಉಪಕಾರ ಬುದ್ಧಿಯಿದ್ದರೆ ದೇವರೇ ಕಾಪಾಡುತ್ತಾನೆ. ಸೂರ್ಯಪ್ರಾರ್ಥನೆ, ಷಣ್ಮುಖನ ಪ್ರಾರ್ಥಿಸಿ

ಕನ್ಯಾ

ಬಯಸಿದ ಕೆಲಸ ಕಾರ್ಯಗಳು ಆಗುವ ವಿಶೇಷ ಸಮಯ ಇನ್ನೂ ಪ್ರಾರಂಭವಾಗಿಲ್ಲ. ಪಂಚಮ ಶನಿ, ಷಷ್ಠ ಗುರುವಿನ ಗ್ರಹಬಾಧೆಯಲ್ಲಿ ನಿಮ್ಮನ್ನು ಸಿಲುಕಿಸಿರುತ್ತಾನೆ. ಕಷ್ಟ-ಕಾರ್ಪಣ್ಯ ಬಿಡಿಸಿಕೊಳ್ಳಲು ದೈವಕೃಪೆ ಅತ್ಯಗತ್ಯ. ಮಹಾ ವಿಷ್ಣುವನ್ನು ನಂಬಿ ದೈನಂದಿನ ಪ್ರಾರ್ಥನೆ ಸಲ್ಲಿಸಿದಲ್ಲಿ ಕಷ್ಟ ದೂರಮಾಡಿ ಸಂತೋಷ ಸುಖ ನೀಡುತ್ತಾನೆ. ಭಗವದ್ಗೀತೆಯ 11ನೇ ಅಧ್ಯಾಯ ಪಾರಾಯಣ ಮಾಡಿ.

ತುಲಾ

ಪಂಚಮಕ್ಕೆ ಗುರುವು ಬಂದು ಕೆಲವೊಂದು ಆಶ್ಚರ್ಯಕರ ಘಟನೆಗಳು ನಡೆದು ನಿಮ್ಮನ್ನು ಸುಖ ಸಂತೋಷದಿಂದಿಡಲು ಗುರು ಒಬ್ಬನೇ ಸಾಕು. ಸೃಷ್ಟಿಕರ್ತ ಬ್ರಹ್ಮನ ಲೋಕದಲ್ಲಿ ಶಿವರೂಪ- ವಿಷ್ಣುರೂಪ ಎರಡೇ ಕ್ಷಿಪ್ರ ಫಲ ನೀಡುತ್ತದೆ. ವಿಷ್ಣು ಸಹಸ್ರನಾಮ ಜೊತೆಯಲ್ಲಿ ದುರ್ಗಾಷ್ಟೋತ್ತರ ಪಾರಾಯಣ ಮಾಡಿ. ಸುಖ- ಸಂತೋಷವನ್ನು ವೃದ್ಧಿಸಿಕೊಳ್ಳಿ.

ವೃಶ್ಚಿಕ

ಚತುರ್ಥ ಗುರುವು ಅಶುಭದಲ್ಲಿ ಇರುವುದು ಕುಂಭ ರಾಶಿಯಲ್ಲಿ. ಸ್ವಕ್ಷೇತ್ರದಲ್ಲಿ ತೃತೀಯ ಶನಿಯೇ ಸಾಕು ಕೆಲಸ-ಕಾರ್ಯಗಳು ಮುಂದುವರೆದು ಋಣಮುಕ್ತರಾಗಿ ಧನ, ಸುಖವನ್ನು ಕೊಟ್ಟೇ ಕೊಡುತ್ತಾನೆ. ಕೊಡುವ ದೇವರಿಗೆ ಹತ್ತು ಕೈಗಳಿವೆ. ಭೂ ವ್ಯವಹಾರ ಮಾಡುವವರು ಅನಂತವಾಗಿ ಗಣಪತಿ, ಸುಬ್ರಹ್ಮಣ್ಯನನ್ನು ಪೂಜಿಸಿ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ.

ಧನು

ಮನುಷ್ಯನು ನಾನು-ನನ್ನದು ಎಂದು ಹೇಳಬಾರದು; ನಮ್ಮದು ಎಂಬ ಪ್ರೀತಿ-ವಿಶ್ವಾಸ ಇರಬೇಕು. ಗುರು ತೃತೀಯದಲ್ಲಿ ಇದ್ದಾನೆ. ಅತ್ಯಂತ ಶೀಘ್ರವಾಗಿ ಶನಿಯ ಸಂಚಾರ ಸಂಪರ್ಕವನ್ನು ಮುಗಿಸಿಕೊಳ್ಳುತ್ತಿರುವ ಶನಿಯು ಶುಭ ತರುತ್ತಾನೆ. ದೈವ ಕೊಡದಿದ್ದರೂ ಗುರು ಒಬ್ಬನೇ ಸಾಕು ನೀವು ಬಯಸಿದ್ದೆಲ್ಲ ಸಿಗಲು. ಭಗ ವಂತನ ಚಿಂತನೆ ಇರಲಿ. ದತ್ತಾತ್ರೇಯನನ್ನು ಪ್ರಾರ್ಥಿಸಿ.

ಮಕರ

ಹಳೆಯ ನೆನಪುಗಳು ಮನುಷ್ಯನ ದಾರಿಯನ್ನು ಹಾಳು ಮಾಡುತ್ತದೆ. ಮುಂದಿನ ಕೆಲಸವನ್ನು ಮರೆಯುವಂತೆ ಮಾಡುತ್ತದೆ. ಶನಿಯು ಜನ್ಮದಲ್ಲಿ ದ್ವಿತೀಯದಲ್ಲಿ ಗುರುವಿರುವುದರಿಂದ ಚಿಂತೆ ಬಿಟ್ಟು ರಾಮಾಯಣದ ಪಟ್ಟಾಭಿಷೇಕದ ಸರ್ಗವನ್ನು ಪಠಿಸಿ. ಧನದ ಕೊರತೆ ದೂರವಾಗಿ ನಿಮ್ಮ ಮನದಿಚ್ಛೆ ಈಡೇರುತ್ತದೆ. ಉದ್ವೇಗವು ಶರೀರಕ್ಕೆ ರೋಗ ತರುತ್ತದೆ. ಅದನ್ನು ಜಯಿಸಿ ಮುಂದೆ ಸಾಗಿದರೆ ಬಾಳು ಸುಖಮಯವಾಗಿರುತ್ತದೆ.

ಕುಂಭ

ಅಮೃತ ಕಲಶದಲ್ಲಿ ಅಮೃತವೇ ಇರುತ್ತದೆ. ಗುರುವು ಕುಂಭ ರಾಶಿಯಲ್ಲಿ ಇರುವಾಗ ಧೈರ್ಯದಿಂದ ಎಲ್ಲವನ್ನು ಎದುರಿಸಿ. ನಿಮ್ಮ ಕಾರ್ಯವನ್ನು ಸಲೀಸಾಗಿ ಮಾಡುವ ಕಾಲ. ಶನಿಯು ದ್ವಾದಶದಲ್ಲಿದ್ದರೂ, ಗುರುವು ಲಗ್ನದಲ್ಲಿ ಇರುವುದರಿಂದ ನಿಮ್ಮನ್ನು ಯಾರೂ ಏನೂ ಮಾಡಲಾಗದು. ಅನಂತವಾಗಿ ಶಿವನಾಮ ಸ್ಮರಣೆ ಮಾಡಿ. ಸಹಸ್ರ ಸಂಖ್ಯೆಯಲ್ಲಿ ಶಿವಪಂಚಾಕ್ಷರಿ ಜಪಿಸಿ.

ಮೀನ

ಮೀನ ರಾಶಿಯವರಿಗೆ ಏಕಾದಶದ ಶನಿಯ ಫಲವು ನಡೆಯುತ್ತಿದ್ದು, ಯಾವ ಕೆಲಸ ಕೈಗೆತ್ತಿಕೊಂಡರೂ ಪೂರ್ಣಗೊಳ್ಳುತ್ತದೆ. ಮನುಷ್ಯನ ಜೀವಿತದಲ್ಲಿ ಒಂದು ಗ್ರಹವು ಚೆನ್ನಾಗಿದ್ದರೂ ಎಲ್ಲವನ್ನೂ ಕೊಡಲು ಸಾಧ್ಯವಾಗುತ್ತದೆ. ಕುಟುಂಬದೊಂದಿಗೆ ಬೆರೆತು, ಜೀವನದ ಒಳ್ಳೆಯ ಘಟನೆಗಳನ್ನು ಕಣ್ತುಂಬಿಕೊಳ್ಳಿ. ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ. ಗುರುದೇವರನ್ನು ಪೂಜಿಸಿ. ಗುರುಪರಂಪರಾ ಸ್ತೋತ್ರ ಪಠಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net