

ಮೇಷ ರಾಶಿಯವರಿಗೆ ಗುರುವು ಏಕಾದಶ ಹಾಗೂ ದಶಮ ಭಾವದಲ್ಲಿ ಸಂಚಾರ ಮಾಡುವನು. ಗುರುವು ಕುಂಭ ರಾಶಿಯಲ್ಲಿ ಇರುವುದರಿಂದ ಪೂರ್ಣ ಗುರುಬಲವಿದ್ದು ಶುಭಕಾರ್ಯ ಜರುಗುತ್ತದೆ. ಸೆ. 14ರವರೆಗೂ ಗುರುವಿನ ಕಟಾಕ್ಷ ಇದ್ದು ನಿಮ್ಮನ್ನು ಹಿಂಬಾಲಿಸಿ ಧೈರ್ಯ, ಸ್ಥೈರ್ಯ ಕೊಡುತ್ತಾನೆ. ಈ ಸಂವತ್ಸರದ ರಾಜನಾದ ಸುಬ್ರಹ್ಮಣ್ಯ ದೇವರನ್ನು ಸದಾ ಪೂಜಿಸಿ.
ಮನುಷ್ಯನಿಗೆ ಗುರುಬಲ ಎಷ್ಟು ಮುಖ್ಯವೋ, ದೈವಬಲವೂ ಅಷ್ಟೇ ಮುಖ್ಯ. ಸುಖಶಾಂತಿಯಿಂದ, ಶ್ರೇಯಸ್ಸನ್ನು ಪಡೆದು ಬದುಕಲು ಇಚ್ಛೆಯಿದ್ದರೆ ಸೆ.15ರಿಂದ ಗುರುಬಲ ದ್ವಿಗುಣವಾಗಿ ಕೀರ್ತಿಪಥದಲ್ಲಿ ಕೊಂಡೊಯ್ಯುವನು. ಸಹನೆ ಇರಲಿ. ನವಮದಲ್ಲಿ ಶನಿಯಿರುವುದು. ಶ್ರಮವಹಿಸಿದರೆ ಲಕ್ಷ್ಮೀಕಟಾಕ್ಷ ಒದಗಿ ಬರುತ್ತದೆ. ಜನ್ಮರಾಶಿಯಲ್ಲಿ ರಾಹುವಿರುವುದರಿಂದ ದುರ್ಗೆಯನ್ನು ಪೂಜಿಸಿ.
ಈ ವಾರದಲ್ಲಿ ಗುರುವು ನವಮದಲ್ಲಿದ್ದು, ನಿಮಗೆ ಉತ್ತೇಜನವನ್ನು, ಬಾಳಿನಲ್ಲಿ ಬೆಳಕನ್ನು ತೋರಿಸಿ ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡಿಕೊಳ್ಳಲು ಸೂಚಿಸುತ್ತಾನೆ. ಈ ಪ್ರಸ್ತುತ ಗುರು ಸಂಚಾರದಲ್ಲಿ ಸೋಮವಾರಗಳು ಶುಭವಾಗಿದ್ದು, ಹಸಿರು ಬಣ್ಣದ ಬಟ್ಟೆ, ರತ್ನ, ಪಚ್ಚೆ ಧಾರಣೆ ಮಾಡಿದರೆ ಶುಭದಾಯಕವಾಗಿರುತ್ತದೆ.
ಅಷ್ಟಮ ಭಾಗದ ಗುರು, ಶನಿ ಸಪ್ತಮದಲ್ಲಿದ್ದು, ಶನಿಯು ನಿಮ್ಮ ಪುಣ್ಯಗಳ ದಾನ-ಧರ್ಮಗಳನ್ನು ವಿಶೇಷವಾಗಿ ಅನ್ನದಾನ ಮಾಡಿದ ಪುಣ್ಯಕ್ಕಾಗಿ ಮಂಗಳಕರ ವರವನ್ನು ಕೊಟ್ಟು ನಿಮ್ಮನ್ನು ಸದಾ ರಕ್ಷಿಸುತ್ತಾನೆ. ಪಂಚಮದ ಕೇತುವಿಗೆ ಗಣಪತಿಯನ್ನು ಪೂಜಿಸಿ. ಅರ್ಕಪುಷ್ಪ ದೊರೆತಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.
ಮನುಷ್ಯನು ಕಾಡಿಗೆ ಹೋಗಿ ಪೂರ್ಣ ಬೆಳಕನ್ನು ಬಯಸಿ ದರೆ ಸಿಗುವುದಿಲ್ಲ. ಅದೇ ಹಣತೆಯಲ್ಲಿ ದೀಪವನ್ನು ಹಚ್ಚಿ ದರೆ ಹೇಗೆ ಹೆಜ್ಜೆ ಇಡಬೇಕೆಂದು ತೋರಿಸುತ್ತದೆ. ಷಷ್ಠ ಶನಿ, ಸಪ್ತಮ ಗುರು ನಿಮಗೆ ಶುಭ ತರಲೆಂದು ಬಂದಿದ್ದಾರೆ. ಆಜನ್ಮಪರ್ಯಂತ ಗುರುವಿಗಾಗಿ ದತ್ತಾತ್ರೇಯನನ್ನು ಪೂಜಿಸಿ. ಪಾಪ-ಪುಣ್ಯಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ. ಶನಿಯನ್ನು ಬಿಲ್ವದಿಂದ ಅರ್ಚಿಸಿ.
ಕನ್ಯಾರಾಶಿಯವರಿಗೆ ಮಧ್ಯಮ ಗುರುಬಲವಿದ್ದು, ಪಂಚಮದಲ್ಲಿ ಶನಿಸಂಚಾರವಿದೆ. ಪಂಚಮಶನಿ ದೋಷಕಾರಕನು. ದೋಷಗಳು ನಮ್ಮನ್ನು ಹಿಂದಿಕ್ಕಿ ಕೆಲಸ ಮಾಡಲು ಬಿಡುವುದಿಲ್ಲ. ಇದರಿಂದ ಕಷ್ಟಗಳ ಸರಮಾಲೆಯಿದೆ ಎಂಬ ಭಾವನೆ ಮೂಡುತ್ತದೆ. ಪರಿಹಾರ ನಿಮ್ಮ ಕೈಯಲ್ಲಿದೆ. ರಾಹು ಕೇತುಗಳು ಶುಭಕಾರಕರಾಗಿರುವುದರಿಂದ ದೇಶದ ಇಂದಿನ ಸ್ಥಿತಿ ಅವಲೋಕಿಸಿ ಷಣ್ಮುಖ ಹಾಗೂ ನಾಗದೇವರ ಪೂಜೆ ಮಾಡಿ.
ಚತುರ್ಥ ಶನಿಯಿಂದಾಗಿ, ಕೆಲವೊಂದು ಆತುರದ ನಿರ್ಧಾರಿಂದ ನಿಮ್ಮ ಕಾಲಿನ ಮೇಲೆ ನೀವೇ ಕಲ್ಲನ್ನು ಎತ್ತಿಹಾಕಿಕೊಂಡು ದುಃಖ ತಂದುಕೊಳ್ಳುವ ಸಮಯ. ಯಾರಲ್ಲೂ ದ್ವೇಷವೂ ಬೇಡ, ಚರ್ಚೆಯೂ ಬೇಡ. ಮೌನಧಾರಣೆ ಮಾಡಿ. ಗುರುವಿನ ಪಂಚಮ ಸ್ಥಾನದ ಸುಖವನ್ನು ಅನುಭವಿಸಿ. ಅಷ್ಟಮ ರಾಹುವಿಗೆ ಭವಾನಿಯನ್ನು ಪೂಜಿಸಿ, ಅಷ್ಟೋತ್ತರ ಪಠಿಸಿ.
ಮೂರನೇ ಮನೆಯ ಶನಿ ಸೌಭಾಗ್ಯಕಾರಕನು. ಧನದ ಕೊರತೆ ನೀಗಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುವ ಸಮಯ. ಈ ಸದ್ಯದಲ್ಲಿ ಮಧ್ಯಮಫಲ ಕೊಡುವ ಗುರುವನ್ನು ಆರಾಧಿಸಿ ಕೆಲಸದಲ್ಲಿ ಮುನ್ನುಗ್ಗಿ ಸಾಧಿಸಬಹುದು. ಕೇತು ಜನ್ಮದಲ್ಲಿರುವುದರಿಂದ ವಿನಾಕಾರಣ ಯಾರೊಂದಿಗೂ ಚರ್ಚೆ, ವಾಗ್ಯುದ್ಧ ಬೇಡ. ಗಣಪತಿಯನ್ನು ಪೂಜಿಸಿ. ರಾಹುವನ್ನು ಆರಾಧಿಸಿ. ಭೂವ್ಯವಹಾರದಲ್ಲಿ ಲಾಭ ಬಂದೇ ಬರುತ್ತದೆ.
ವಿಪತ್ತಿಗೂ-ವಿನಾಶಕ್ಕೂ ಹೆಚ್ಚು ಅಂತರವಿಲ್ಲ. ಪದವಿಭಾಗ ಮಾಡಿದರೆ ಎರಡೂ ಒಂದೇ ಅರ್ಥಕೊಡುವುದು. ಗುರುವು ದ್ವಿತೀಯ-ತೃತೀಯದಲ್ಲಿ ಸಂಚರಿಸುವಾಗ ಪೂರ್ಣ ಫಲವಿದ್ದು ನಿಮಗೆ ಸಂರಕ್ಷಣೆ ನೀಡುತ್ತಾನೆ. ಅಂತ್ಯ ಶನಿಯ ಸಂಚಾರ ಇರುವುದರಿಂದ ಜಾಗೃತರಾಗಿ ವ್ಯವಹರಿಸಬೇಕು. ಈಗ ನೀವು ಬೆಳೆಯುವ ಕಾಲ. ಬದುಕನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಸಮಯದಲ್ಲಿ ದೈವಚಿಂತನೆ ಅತ್ಯವಶ್ಯಕ.
ದ್ವಿತೀಯ ಗುರು ಬಯಸಿದ್ದನ್ನು ಕೊಡುತ್ತಾನೆ. ಆದರೆ ಏಳೂವರೆ ವರ್ಷದ ಶನಿಸಂಚಾರವು ಮುಗಿದು ತೊಡಕು, ಧನದ ಕೊರತೆ ಸೂಚಿಸುತ್ತದೆ. ದೃಢವಾದ ಗುರುಭಕ್ತಿ, ಸತ್ಯ ಧರ್ಮ ಪಾಲನೆಯಲ್ಲಿ ವ್ಯವಹಾರ ಮಾಡಿ. ಅನಂತವಾಗಿ ಕಾಲಭೈರವನನ್ನು ಪೂಜಿಸಿ. ಸಮಯ ಸರಿಹೋದಾಗ ಕಾಶಿವಿಶ್ವನಾಥನನ್ನು, ಕಾಶಿಯಲ್ಲೇ ನೆಲೆಸಿರುವ ಕಾಳಿಯನ್ನು ಪೂಜಿಸಿ. ದತ್ತಾಷ್ಟೋತ್ತರ ಪಾರಾಯಣ ಮಾಡಿ.
ಕುಂಭರಾಶಿಯವರಿಗೆ ಏಳೂವರೆ ವರ್ಷದ ಶನಿ ಆರಂಭ ಆಗಿದ್ದು, ಲಗ್ನದಲ್ಲೇ ಗುರುವಿರುವುದರಿಂದ ಅಧಿಕವಾದ ಆಸೆ ಇಟ್ಟುಕೊಂಡು ನಿರಾಸೆ ಬೇಡ. ದೈವಕೊಟ್ಟದ್ದಕ್ಕೆ ತೃಪ್ತಿಯಿದ್ದಲ್ಲಿ ಅದೇ ಅಧಿಕವಾಗಿ ಕಾಣುತ್ತದೆ. ಆದರೂ ಗುರುಕಟಾಕ್ಷಇದ್ದರೆ ನಿಮಿಷಾರ್ಧದಲ್ಲಿ ಅಶುಭವೇ ಶುಭವಾಗುವುದು. ವ್ಯವಹಾರಗಳಿಗೆ ಕುಲಗುರುಗಳ ಆಶೀರ್ವಾದ ಪಡೆದು ನಾರಾಯಣ ಮಂತ್ರ ಜಪಿಸಿ. ನರಸೋಬವಾಡಿಯ ದತ್ತಾತ್ರೇಯನನ್ನು ಪೂಜಿಸಿ.
ಹನ್ನೊಂದನೇ ಮನೆಯ ಶನಿ ಶುಭಕಾರಕನು. ಜೊತೆಯಲ್ಲಿ ರಾಹು-ಕೇತುಗಳು ಶುಭಸ್ಥಾನದಲ್ಲಿರುವುದೇ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಸದ್ಯದಲ್ಲಿ ಗುರುಬಲ ಪೂರ್ಣವಿಲ್ಲವಾದ್ದರಿಂದ ಗುರು ಪ್ರಾರ್ಥನೆಯಿಂದ ನೀವು ಮಾಡಿಕೊಂಡ ಎಡವಟ್ಟಿನಿಂದ ಹೊರತಂದು ಸುಖ ನೀಡುತ್ತಾನೆ. ಮಕ್ಕಳ ವಿಚಾರದಲ್ಲಿ ಚಿಂತೆ ಮಾಡದೆ ದೈವದ ಮೊರೆಹೋಗಿ. ಗುರುನರಸಿಂಹನನ್ನು ಪ್ರಾರ್ಥಿಸಿ.