

ಉತ್ತರಾಯಣ ಪಥದಿಂದ ದಕ್ಷಿಣಾಯನಕ್ಕೆ ಸೂರ್ಯನು ಬಂದು ಇದೇ 17ನೇ ತಾರೀಖು ಸೂರ್ಯನು ಚಂದ್ರನ ಮನೆಯಾದ ಕಟಕ ರಾಶಿಗೆ ಬಂದ ಕೂಡಲೇ ರವಿಯ ಬಲವು ತೇಜಸ್ಸು ಕುಗ್ಗಿ ರವಿಯು ಒಳ್ಳೆಯ ಸ್ಥಾನದಲ್ಲಿ ಇಲ್ಲದಿರುವುದರಿಂದ ಕೆಲವೊಮ್ಮೆ ಸಮಸ್ಯೆಗಳು ಕಾಡುತ್ತವೆ. ಗುರು ರಾಹು ಲಗ್ನದಲ್ಲಿ ಇರುವುದರಿಂದ ತಕ್ಕಮಟ್ಟಿಗೆ ಅಶುಭ ಫಲಗಳು ನಡೆಯುವುದಿಲ್ಲ. ಸೂರ್ಯ ಅಷ್ಟೋತ್ತರ ಪಠಿಸಿ. ರಾಹುವಿಗೆ ಪಳನಿ ಸುಬ್ರಮಣ್ಯನನ್ನು ಪೂಜಿಸಿ.
ಶುಭ್ರವಾದ ಬಟ್ಟೆಯನ್ನು ಹಾಕಿ ಶುಚಿರ್ಬೂತನಾಗಿರುವುದು ಮನುಷ್ಯನ ಕರ್ತವ್ಯ. ಹಾಕುವ ವಸ್ತ್ರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಜನರಿದ್ದಾರೆ. ಬಟ್ಟೆ ಮತ್ತು ಮನಸ್ಸು ಎರಡೂ ಶುದ್ಧವಾಗಿರಬೇಕು. ಮನಸ್ಸಿನಲ್ಲಿ ಸತ್ ಸಂಕಲ್ಪ ಇದ್ದು ಮುಂದೆ ಸಾಗಿದರೆ ದುರ್ಗೆ ನಿಮ್ಮನ್ನು ಕಾಯುತ್ತಾಳೆ. ದುರ್ಗೆಯನ್ನು ಅವಲಂಬಿಸಿ ಅವಳನ್ನು ಪ್ರಾರ್ಥಿಸಿದಲ್ಲಿ ಎಲ್ಲವೂ ನಿಮಗೆ ಶುಭವಾಗುತದೆ.
ಮಿಥುನ ರಾಶಿಗೆ ಗುರು ಏಕಾದಶದಲ್ಲಿದ್ದು ಶನಿಯು 9ರಲ್ಲಿ ಇದ್ದರೂ ಬುದ್ಧಿ ಬಲ ಮನುಷ್ಯನಿಗೆ ಬೇಕೇ ಬೇಕು. ಬುಧನ ಚಾಣಾಕ್ಷತನ ಉಪಯೋಗಿಸಿಕೊಂಡು ಅವಸರ ಪಡದೆ ಯಾವ ಗೊಂದಲವನ್ನು ಮಾಡಿಕೊಳ್ಳದೆ ಜೀವನವನ್ನು ನಡೆಸಲು ಹನ್ನೊಂದನೇ ಮನೆಯ ಗುರು ನಿಮಗೆ ಸಂರಕ್ಷಣೆಯನ್ನು ನೀಡುತ್ತಾನೆ. ವಿಷ್ಣುವನ್ನು ಪೂಜಿಸಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಲಗ್ನದಲ್ಲಿ ರವಿಯು ಬಂದು ಶ್ರೇಯಸ್ ಅನ್ನು ಕೊಟ್ಟು ರವಿ-ಚಂದ್ರರು ಬೆಳಕನ್ನು ನೀಡುತ್ತಾರೆ. ರಾತ್ರಿಯಲ್ಲಿ ಹಗಲಿನಂತೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಕತ್ತಲಲ್ಲಿ ಬೆಳಕನ್ನು ನೀಡುವ ಚಂದ್ರನನ್ನು ಪೂಜಿಸಿ. ಪಾರ್ವತಿ ಸಹಿತ ಉಮಾ ಮಹೇಶ್ವರನನ್ನು ಪೂಜಿಸಿದರೆ, ನಿಮ್ಮ ಅಭಿಷ್ಟಗಳು ಈಡೇರುತ್ತವೆ.
ಲಗ್ನದಲ್ಲಿ ಶುಕ್ರ ಕುಜರಿದ್ದು ನಿಮ್ಮ ಆರೋಗ್ಯಕ್ಕೆ ನೀವೇ ಬೆಲೆ ಕೊಟ್ಟು ಅತಿಯಾದ ಆಯಾಸವನ್ನು ಮಾಡಿಕೊಳ್ಳದೆ ಕೆಲಸವನ್ನು ಮಾಡಿಕೊಂಡು ಹೋಗಬೇಕು. ದೇವರು ಕೊಟ್ಟ ಶರೀರವನ್ನು ಪರೋಪಕಾರಕ್ಕಾಗಿ ಉಪಯೋಗಿಸಿಕೊಂಡು, ಜೀವನದಲ್ಲಿ ದಾನ ಧರ್ಮವನ್ನು ಮಾಡಿದರೆ ಶಿವನೇ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿ ನಿಮ್ಮನ್ನು ಸುಖದಿಂದ ಇರುವಂತೆ ಹರಸುತ್ತಾನೆ. ಪ್ರತಿನಿತ್ಯ ಆದಿತ್ಯ ಹೃದಯ ಪಾರಾಯಣವನ್ನು ಮಾಡಿ.
ಅಷ್ಟಮದಲ್ಲಿ ಗುರುವಿದ್ದು, 9 ಗ್ರಹಗಳ ಬಲ ಇಲ್ಲದಿದ್ದರೂ ಗುರು ಬಲ ಇರಲೇಬೇಕು. ಷಷ್ಟದಲ್ಲಿ ಶನಿ ಇದ್ದು, ದೈವಬಲ ಒಂದಿದ್ದರೆ ದುರ್ಗತಿ ನಾಶವಾಗಿ ಸಕಲ ಸಂಪತ್ತು, ಸುಖವು ದೊರಕುತ್ತದೆ. ಕೊಟ್ಟ ವಚನದಂತೆ ನಡೆದು ಶಾಪ ಮುಕ್ತರಾಗಿ ನಿಮ್ಮ ಜೀವನವನ್ನು ಮುಂದೆ ನಡೆಸಲು ದೈವ ಸಹಾಯವೇ ಬೇಕು. ಗುರುವಿನ ಪ್ರಾರ್ಥನೆ ಇರಲಿ. ಇಷ್ಟಾರ್ಥ ಪೂರೈಸಿಕೊಳ್ಳಲು ಕುಲ ದೇವರ ಮೊರೆ ಹೋಗಿ.
ಸಪ್ತಮದಲ್ಲಿ ಗುರುವಿದ್ದು ಗುರುವೆಂಬ ಏಕೈಕ ಗ್ರಹವೇ ಸಾಕು ನಿಮ್ಮನ್ನು ಕಾಪಾಡಲು ಸಂತೋಷವಾಗಿಡಲು. ಸೋಮವಾರದಿಂದ ಆರಂಭವಾಗಿ ಶುಭವಾರ, ಶುಭ ನಕ್ಷತ್ರ, ಶುಭಯೋಗವನ್ನು ಕೊಡುತ್ತಾನೆ. ನಿಮ್ಮ ಸಮಸ್ಯೆಗಳಿಗೆ ಉಪಾಯವನ್ನು ಹುಡುಕಿ ಅಪಾಯವನ್ನು ತಪ್ಪಿಸುತ್ತಾನೆ. ಶುಕ್ರನ ಆಧಿಪತ್ಯ ಹೊಂದಿರುವ ತುಲಾ ರಾಶಿಯವರು ಜೀವನಪರ್ಯಂತ ದುರ್ಗೆಯನ್ನು ಪೂಜಿಸಲು ಮರೆಯಬಾರದು.
ಮಳೆ ಬಂದಾಗ ಕೆರೆಗೆ ನೀರು ಹರಿಯುವುದು. ನೆಲವು ಸಮವಾಗಿದ್ದರೆ ನಿಧಾನವಾಗಿಯಾದರೂ ನೀರು ಬರಬಹುದು. ಅದರ ಅರ್ಥ ನೀವು ಮಾಡಿದ ಧರ್ಮದ ಪುಣ್ಯಕಾರ್ಯವು ನಡೆಯಬೇಕಾದರೆ ನಿಮ್ಮ ಯೋಗಾನುಯೋಗಗಳಿಂದ ಮಾತ್ರವೇ ಸಾಧ್ಯವಾಗುತ್ತದೆ. ಶನಿಯು ಚತುರ್ಥದಲ್ಲಿದ್ದು ಗುರು ಷಷ್ಟದಲ್ಲಿದ್ದಾನೆ, ಸುಬ್ರಹ್ಮಣ್ಯನನ್ನು ಪೂಜಿಸಿದರೆ ನೀವು ನೆನೆಸಿದ ಕಾರ್ಯಗಳು ಚೆನ್ನಾಗಿ ನಡೆದು ನಿಮಗೆ ಹರ್ಷವನ್ನು ನೀಡುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕುಲದೇವರ ಪ್ರಾರ್ಥನೆ ಅತ್ಯವಶ್ಯಕ.
ಶನಿಯು ಹಿಂದೆ ಸರಿದರೂ ನಿಮ್ಮ ಕೆಲಸಗಳು ತಡವಾಗಬಹುದೇ ಹೊರತು, ನಿಮ್ಮ ಪ್ರಯತ್ನದಿಂದ ಅದು ಒಂದು ರ್ತಾಕ ಹಂತಕ್ಕೆ ಮುಟ್ಟಿ ಶ್ರೇಯಸ್ಸನ್ನು, ಲಾಭವನ್ನು ತಂದು ಮನೋಇಚ್ಛೆಯನ್ನು ಪೂರ್ಣವಾಗಿಸುವ ಕಾಲ. ಪಂಚಮ ಗುರು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯತ್ತಾನೆ. ಗುರುವಿನ ಪ್ರಾರ್ಥನೆ ಇರಲಿ. ಶುಭಾಶುಭಗಳು ಶೇಕಡಾ 85.
ವಕ್ರಿಯಾದ ಶನಿಯು ಮಕರಕ್ಕೆ ಬಂದು ನಿಂತಿದ್ದಾನೆ. ಮಕರ ರಾಶಿಗೆ ಇನ್ನೂ ಶನಿಯ ಕಾಲವು ಮುಗಿದಿಲ್ಲ. ಆದರೂ ನಿಮಗೆ ಯಾವುದೇ ಬೇಸರ, ನಿರಾಸೆ ಆಗುವುದಿಲ್ಲ. ಪೂರ್ಣ ಪ್ರಮಾಣದ ಕೆಲಸಗಳು ಆಗಬೇಕಾದರೆ ಸಾಕ್ಷಾತ್ ಗುರು ದತ್ತಾತ್ರೇನನ್ನು ಪೂಜಿಸಿ, ಭಜಿಸಿ. ಶನಿಯ ಅಷ್ಟೋತ್ತರ ಪಠಿಸಿ. ಸಂತಸ, ಲಾಭ ದೊರಕುತ್ತದೆ.
ಕುಂಭ ರಾಶಿಯವರು ಕಂಬದಂತೆ ನಿಲ್ಲಬಾರದು. ಶನಿಯ ಸಂಚಾರದ ಮಧ್ಯಭಾಗದಲ್ಲಿದ್ದು ಪ್ರಯತ್ನಪೂರ್ವಕವಾಗಿ ಕೆಲಸಗಳನ್ನು ಮುಂದುವರಿಸಬೇಕು. ಪಾರ್ವತಿ ಪರಮೇಶ್ವರ ಸ್ವರೂಪದ ತಂದೆ- ತಾಯಿಯನ್ನು ಪೂಜಿಸಿ. ಅವರೇ ನಿಮ್ಮನ್ನು ಸಂರಕ್ಷಣೆ ಮಾಡಿ ನಿಮ್ಮನ್ನು ಹರಸುತ್ತಾರೆ. ಪ್ರತಿ ಶನಿವಾರ ಹನುಮಂತನ ದರ್ಶನವನ್ನು ತಪ್ಪದೇ ಮಾಡಿ.
ಮೀನ ರಾಶಿ ಗುರುವಿನ ಮನೆಯಾಗಿದ್ದು, ಈ ರಾಶಿಯಲ್ಲಿ ಹುಟ್ಟಿದವರು ಗುರುವಿನ ರಕ್ಷಣೆ, ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು. ಗುರು ದರ್ಶನ ಮಾತ್ರದಿಂದಲೇ ನಿಮ್ಮ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಈಡೇರುತ್ತವೆ. ಶನಿ ಸಂಚಾರದ ಏಳೂವರೆ ವರ್ಷಗಳ ಕಾಲ ಪ್ರತಿನಿತ್ಯ ಗುರು ಚರಿತ್ರೆಯ ಒಂದು ಅಧ್ಯಾಯವನ್ನು ಪಾರಾಯಣ ಮಾಡಿ. ಶನಿಯ ಪ್ರಾರ್ಥನೆ ಇರಲಿ. ಕುಲ ದೇವರನ್ನು ವಾರಕ್ಕೊಮ್ಮೆ ದರ್ಶಿಸಿ ಬನ್ನಿ. ಶನಿ ಬಲ ತಾನೇ ಕುಗ್ಗಿ ನಿಮ್ಮ ಭೀತಿ, ಆತಂಕ ತೆಗೆದು ನಿಮ್ಮನ್ನು ಕಾಪಾಡುತ್ತಾನೆ.