ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಖರ್ಚು ಜಾಸ್ತಿ ಆಗಬಹುದು: ವಾರಭವಿಷ್ಯ

Vara-Bhavishya-2
Published on
ಮೇಷ

ಉದ್ಯೋಗದಲ್ಲಿ, ಜೀವನದಲ್ಲಿ ಬಿಡುವಿಲ್ಲದ ಚಟುವಟಿಕೆ. ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಡಿ. ಮೇಲಧಿಕಾರಿಗಳಿಂದ ಒತ್ತಡ ಸಂಭವ. ಭೂ ವಿವಾದಗಳಲ್ಲಿ ಆತುರ ಮತ್ತು ಭಯ ಬೇಡ. ಸಂಗಾತಿಯೊಂದಿಗೆ ನಿಕಟ ಸಂಬಂಧ ವೃದ್ಧಿ. ಹೊಸವ್ಯಾಪಾರಕ್ಕಾಗಿ ದೃಢ ನಿರ್ಧಾರ ಕೈಗೊಳ್ಳಿ. ಭವಿಷ್ಯದಲ್ಲಿ ಸಂಭವಿಸುವ ವಿಪತ್ತಿನ ನಿವಾರಣೆಗೆ ಕಾಲಭೈರವ ಅಷ್ಟಕವನ್ನು ಪಠಿಸಿ.

ವೃಷಭ

ಸ್ಥಿತಿ ಉತ್ತಮ. ವೈದ್ಯಕೀಯ ಮತ್ತು ಮಾಧ್ಯಮ ಕ್ಷೇತ್ರದವರಿಗೆ ವಾರದ ಮಧ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಾಣಬಹುದು. ಕಬ್ಬಿಣ ಮತ್ತು ಲೋಹ ವ್ಯಾಪಾರಿಗಳಿಗೆ ಉತ್ತಮ ಲಾಭ ಸಾಧ್ಯತೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಹೊರೆ. ವಾರದ ಮಧ್ಯದಲ್ಲಿ ತಾಯಿಯ ಆರೋಗ್ಯದಲ್ಲಿ ಏರಿಳಿತ. ಹಣಕಾಸಿನ ಚಿಂತೆ. ಆರೋಗ್ಯದ ದೃಷ್ಟಿಯಿಂದ ವೈದ್ಯರನ್ನು ಸಂರ್ಪಸಿ. ಧನ್ವಂತರಿ ಮೂಲಮಂತ್ರ ಸಹಸ್ರ ಬಾರಿ ಪಠಿಸಿ.

ಮಿಥುನ

ಪಾಲುದಾರಿಕೆ ವ್ಯವಹಾರದಲ್ಲಿ ವೈಮನಸ್ಯ ಸಂಭವ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ. ವಾರದ ಮಧ್ಯದಲ್ಲಿ ಜೀವನದಲ್ಲಿ ಮಹತ್ವದ ತಿರುವು. ಕೌಟುಂಬಿಕ ಸಮಸ್ಯೆಗಳು ತಾನೇತಾನಾಗಿ ತಿಳಿಯಾಗಲಿದೆ. ವಾರದ ಮಧ್ಯದಲ್ಲಿ ಸಣ್ಣ ಪ್ರವಾಸ ಸಂಭವ. ಅಲರ್ಜಿ, ಉದರವ್ಯಾಧಿ ಇರುವವರು ಶೂಲಿನಿ ದುರ್ಗಾ ಸ್ತೋತ್ರವನ್ನು ಪಠಿಸಿ.

ಕಟಕ

ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭ ಇಲ್ಲ. ಸ್ವಂತ ಉದ್ಯೋಗದಲ್ಲಿ ಹಲವು ಅಡೆತಡೆ ಎದುರಿಸಬೇಕಾಗಬಹುದು. ಧನಾತ್ಮಕವಾಗಿ ಚಿಂತಿಸಿ ನಿಮ್ಮ ಪ್ರಯತ್ನ ಮುಂದುವರಿಸಿ. ಸರ್ಕಾರಿ ಉದ್ಯೋಗಿ ಗಳಿಗೆ ವರ್ಗಾವಣೆ ಆಗಬಹುದು. ಸಂಗಾತಿ ಯೊಂದಿಗೆ ತಪ್ಪು ತಿಳುವಳಿಕೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ತಂದೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಕುಂಜಿಕಾ ಸ್ತೋತ್ರವನ್ನು ಪಠಿಸಿ.

ಸಿಂಹ

ಹಣದ ಕೊರತೆಯಿಂದ ಅನೇಕ ಕೆಲಸಗಳು ನನೆಗುದಿಗೆ ಬೀಳುವ ಸಾಧ್ಯತೆ. ವಾರದ ಮಧ್ಯದಲ್ಲಿ ಹಣಕ್ಕೆ ಸಂಬಂಧಿಸಿದಂತೆ ವಿವಾದದಲ್ಲಿ ಸಿಲುಕಿ ಪರದಾಡಬೇಕಾಗುತ್ತದೆ. ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲಾ ಕಡೆ ಮನ್ನಣೆ ಸಿಗಲಿದೆ. ಉಳಿತಾಯದ ಕಡೆ ಗಮನಹರಿಸಿ. ನೀವು ಕುಟುಂಬದ ಸದಸ್ಯರ ಪ್ರೀತಿ ಮತ್ತು ಬೆಂಬಲ ಪಡೆಯಲಿದ್ದೀರಿ. ಕಣ್ಣಿನ ಸಮಸ್ಯೆ ಇರುವವರು ಸೂರ್ಯಾಷ್ಟಕವನ್ನು ಪಠಿಸಿ.

ಕನ್ಯಾ

ಗ್ರಹಗಳ ಅಶೋಕ ಸ್ಥಿತಿಯಿಂದ ಮನೆಯಲ್ಲಿ ಅಪಶ್ರುತಿ ಹೆಚ್ಚಾಗಬಹುದು. ನೆರೆಯವರೊಂದಿಗೆ ಸಮನ್ವಯ ಸಾಧಿಸಲು ಕಷ್ಟವಾಗಬಹುದು. ಒತ್ತಡದ ಜೀವನದ ಜೊತೆಯಲ್ಲಿ ವೈವಾಹಿಕ ಜೀವನದ ಕಡೆಗೆ ಗಮನ ಹರಿಸಿ. ವಾರಾಂತ್ಯದಲ್ಲಿ ಸಾಲ ಮಾಡುವ ಪರಿಸ್ಥಿತಿ ತಲೆದೋರಬಹುದು. ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆ ಆಗಬಹುದು. ವ್ಯಾಪಾರಿಗಳು ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಮಹಾಲಕ್ಷ್ಮಿ ಅಷ್ಟಕವನ್ನು ಪಠಿಸಿ.

ತುಲಾ

ನಿರುದ್ಯೋಗಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ. ನ್ಯಾಯಾಲಯದಲ್ಲಿರುವ ದೀರ್ಘಕಾಲದ ವ್ಯಾಜ್ಯ ಕೊನೆಗೊಳ್ಳಲಿದೆ. ಶಾಂತಿ ಸಮಾಧಾನ. ನಿಮ್ಮ ಸಂಗಾತಿಗೆ ಉಡುಗೊರೆ ಕೊಡಲು ಇದು ಉತ್ತಮ ಸಮಯ. ಉದ್ಯೋಗದಲ್ಲಿ ನೀವು ಹಲವು ಬದಲಾವಣೆಗಳನ್ನು ಕಾಣಲಿದ್ದೀರಿ. ಕೆಲ ಘಟನೆಗಳಿಂದ ನೀವು ಮಾನಸಿಕವಾಗಿ ಸದೃಢರಾಗಲಿದ್ದೀರಿ. ಆದಿತ್ಯ ಹೃದಯವನ್ನು ಪಠಿಸಿ.

ವೃಶ್ಚಿಕ

ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ತಾಂತ್ರಿಕ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಬಹುದು. ಸ್ವಂತ ಉದ್ಯೋಗಿಗಳಿಗೆ ಪ್ರಗತಿ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಮತ್ತು ವರ್ಗಾವಣೆ ಸಾಧ್ಯತೆ. ಕೌಟುಂಬಿಕ ಜೀವನ ಸುಖಕರ. ಸ್ನಾಯುರೋಗದಿಂದ ತೊಂದರೆಗೆ ಒಳಗಾಗಬಹುದು. ಮಧುರಾಷ್ಟಕವನ್ನು ಪಠಿಸಿ.

ಧನು

ಕಡಿತಗೊಂಡಿರುವ ಉದ್ದಿಮೆ ಪುನರಾರಂಭ. ನಿರೀಕ್ಷೆಯಂತೆ ಫಲಿತಾಂಶ ಸಿಗಲಿದೆ. ಭೂ ವ್ಯವಹಾರಸ್ಥರಿಗೆ ಉತ್ತಮ ಲಾಭ ಸಂಭವ. ಈ ವಾರ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಅದೃಷ್ಟ ನಿಮ್ಮದಾಗಲಿದೆ. ಉದ್ಯೋಗಸ್ಥರಿಗೆ ಸವಾಲಿನ ಸಾಧ್ಯತೆ. ಉನ್ನತ ಅಧಿಕಾರಿಗಳಿಗೆ ಅಪಪ್ರಚಾರದಿಂದ ಕಿರಿಕಿರಿ. ಪ್ರೀತಿಪಾತ್ರರೊಂದಿಗೆ ಪ್ರವಾಸ ಸಾಧ್ಯತೆ. ಮಾನಸಿಕ ನೆಮ್ಮದಿಗೆ ಲಲಿತಾ ಅಷ್ಟೋತ್ತರ ಪಠಿಸಿ.

ಮಕರ

ವೈವಾಹಿಕ ವಿವಾದಗಳು ತಾರಕಕ್ಕೇರಲಿದೆ. ಅನಗತ್ಯ ವಿಷಯಗಳ ಬಗ್ಗೆ ಘರ್ಷಣೆ ಸಾಧ್ಯತೆ. ನಿಮಗೆ ನಂಬಿಕಸ್ಥರ ಮೇಲಿನ ವಿಶ್ವಾಸ ಕಡಿಮೆಯಾಗಬಹುದು. ವಿವಾಹ ಜೀವನದ ಪವಿತ್ರತೆಗೆ ವಾರದ ಅಂತ್ಯದ ದಿನಗಳು ಕಾರಣ ಆಗಬಹುದು. ಗುರಿಮುಟ್ಟಲು ಕಷ್ಟಪಡಬೇಕಾಗಬಹುದು. ಶಸ್ತ್ರಚಿಕಿತ್ಸೆಗೆ ಒಳಗಾದವರು ಎಚ್ಚರಿಕೆಯಿಂದಿರಿ. ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.

ಕುಂಭ

ಸಾಲ ಪಡೆಯುವ ಹಾದಿಯಲ್ಲಿ ಯಶಸ್ಸು. ಉದ್ಯೋಗಸ್ಥರಿಗೆ ಯಾವುದಾದರೂ ಬದಲಾವಣೆ ಬೇಕೆನಿಸಬಹುದು. ಈ ವಾರ ಇತಿಮಿತಿಯಲ್ಲಿ ಖರ್ಚು ಮಾಡಿದರೆ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಆತ್ಮೀಯರ ಅನಾರೋಗ್ಯದಿಂದ ಒತ್ತಡ. ವೈದ್ಯರು ಮತ್ತು ನಟರಿಗೆ ಪ್ರವಾಸ ಮಾಡಬೇಕಾಗಬಹುದು. ಇದ್ದಕ್ಕಿದ್ದಂತೆ ಖರ್ಚು ಜಾಸ್ತಿ ಆಗಬಹುದು.

ಮೀನ

ಏಕಾದಶದ ಶನಿ, ದ್ವಾದಶ ಗುರು ವ್ಯಾಪಾರ- ವ್ಯವಹಾರದ ಮೇಲೆ ಪ್ರಭಾವ ಬೀರಬಹುದು. ಕೌಟುಂಬಿಕ ವ್ಯವಹಾರ ಮಾಡುವಾಗ ಆತ್ಮೀಯ ರೊಂದಿಗೆ ರ್ಚಚಿಸಿ. ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ವಾರಾಂತ್ಯದಲ್ಲಿ ನನಸಾಗಲಿದೆ. ರಾಹುವಿನ ಪ್ರಭಾವದಿಂದ ಸಹೋದರರೊಂದಿಗೆ ವಾಗ್ವಾದ. ಮಕ್ಕಳ ಪ್ರಗತಿ ಕಂಡು ಸಂತೋಷ. ರೋಗ ನಿಯಂತ್ರಣ ತಪ್ಪಬಹುದು. ಕುಜ ಮಂತ್ರವನ್ನು ಪಠಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net