ಬಯಸದೇ ಇದ್ದರೂ ಒಳ್ಳೆಯ ಫಲಗಳನ್ನು ಪರಮಾತ್ಮನು ನೀಡುತ್ತಾನೆ: ವಾರಭವಿಷ್ಯ

Vaara-Bhavishya
Published on
ಮೇಷ

ಮೇಷ ರಾಶಿಯಲ್ಲಿ ಜನಿಸಿದವರು ಮಾಣಿಕ್ಯ. ಮಾತನಾಡುವುದನ್ನು ಕಲಿತು ಕೋಪವನ್ನು ಬಿಟ್ಟು ವರ್ತಿಸಿದರೆ ಗುರುಬಲ ಇಲ್ಲದಿದ್ದರೂ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ನಿಮ್ಮ ಕೆಲಸ-ಕಾರ್ಯಗಳಲ್ಲಿ ಆತುರ ಬೇಡ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಏಕಾದಶಕ್ಕೆ ಶನಿ ಬಂದ ಮೇಲೆ ನಿಮ್ಮ ಕೆಲಸಗಳು ಉತ್ತಮವಾದ ಮಟ್ಟಕ್ಕೆ ತಲುಪಿ ಕಾರ್ಯಗಳಲ್ಲಿ ಸಂತೋಷ ಉಂಟಾಗುತ್ತದೆ. ಆರು ಮುಖಗಳು, ಹನ್ನೆರಡು ಬಾಹುಗಳು ವೇಲುಶಕ್ತಿಯಿರುವ ಸುಬ್ರಹ್ಮಣ್ಯನನ್ನು ವಂದಿಸಿ. ಕಾರ್ತಿಕೇಯ ಸ್ತೋತ್ರ, ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಪಠಿಸಿ.

ವೃಷಭ

ಏಕಾದಶದಲ್ಲಿ ಗುರುವು ಕೆಲಸವನ್ನು ಕೈಗೂಡುವಂತೆ ಮಾಡಿದರೂ ನಿಮ್ಮನ್ನು ಎಚ್ಚರಿಕೆಯಲ್ಲಿ ಕೆಲಸ ಸಾಧಿಸುವಂತೆ ಮಾಡುತ್ತಾನೆ. 9ರ ಶನಿಯು ಆಲಸ್ಯ ಕೊಟ್ಟರೂ ಜವಾಬ್ದಾರಿಯಿಂದ ಶ್ರೇಯಸ್ಸನ್ನು ನೀವು ಪಡೆಯುವ ಕಾಲ. ಕೆಲಸದಲ್ಲಿ ಮೆಚ್ಚುಗೆ ತಂದು ರಕ್ಷಿಸುವಲ್ಲಿ ಪರಿಪೂರ್ಣವಾದ ಗುರುಕಟಾಕ್ಷವು ದೊರೆಯುವುದರಲ್ಲಿ ಸಂದೇಹವಿಲ್ಲ. ಕೆಲಸದ ಕಡೆ ಲಕ್ಷ್ಯ ಕೊಟ್ಟು ನಡೆದರೆ ಪ್ರಗತಿ ಸಿಗುತ್ತದೆ. ಮೂಕ ಜೀವಿಗಳನ್ನು, ಪ್ರಾಣಿಗಳನ್ನು ಸಂರಕ್ಷಿಸುವ ಬನಶಂಕರಿಯನ್ನು ಪೂಜಿಸಿ. ಬನಶಂಕರಿ ಅಷ್ಟೋತ್ತರ ಪಾರಾಯಣ ಮಾಡಿ. ನಿಂಬೆಹಣ್ಣು ಅರ್ಪಿಸಿದರೆ ವಿಶೇಷ ಫಲ.

ಮಿಥುನ

ಹತ್ತರ ಗುರು ದಾರಿಯನ್ನು ತೋರಿಸುತ್ತಾನೆ. ನಮ್ಮ ದಾರಿಯನ್ನು ನಾವು ಪರಿಶೋಧನೆಯನ್ನು ಮಾಡಿ ಸಾಗಿದರೆ ಉತ್ತಮವಾದ ಫಲ ಸಿಗುತ್ತದೆ. ಇನ್ನೇನು ಗುರು ಮೀನ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಬಂದಾಗ ಏಕಾದಶ ಗುರುವು ಸುಖವನ್ನು, ನೆಮ್ಮದಿಯನ್ನು ನೀಡುತ್ತಾನೆ. ಲೋಕಪಾಲಕನಾದ ಮಹಾವಿಷ್ಣುವನ್ನು ಪೂಜಿಸಿದರೆ ಭೋಗ-ಭಾಗ್ಯಗಳನ್ನು ಪಡೆಯುವಿರಿ.

ಕಟಕ

9ರ ಗುರುವು ನೀವು ಏನೇ ಕೇಳಿದರು ಕೊಡಲು ಉದ್ಯುಕ್ತನಾಗಿದ್ದಾನೆ. ಎಲ್ಲ ಗ್ರಹಗಳನ್ನು ದಾಟಿ ಉಲ್ಲಾಸ, ನವಚೈತನ್ಯ ತುಂಬಿ ನಡೆಸುತ್ತಾನೆ. ಕರ್ಕಾಟಕ ರಾಶಿಯವರಿಗೆ ಕೊಡುವ ದೇವರು ದತ್ತಾತ್ರೇಯ. ಮರೆಯದೆ ನಿತ್ಯ ಒಂದು ಅಧ್ಯಾಯ ಗುರು ಚರಿತ್ರೆಯನ್ನು ಪಾರಾಯಣ ಮಾಡಿ. ಪ್ರತಿನಿತ್ಯ ಹದಿನಾಲ್ಕನೇ ಅಧ್ಯಾಯ ಪಾರಾಯಣ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಮನಸ್ಸು ಹಿತವಾಗಿಸಿ ಲೋಕವನ್ನೇ ಗುಡಿಸಿ ಸರಿಸಲು ಛಲ ಬೇಡ. ಲಲಿತಾ ತ್ರಿಪುರ ಸುಂದರಿಯ ತ್ರಿಶತಿ ನಾಮ ಪಾರಾಯಣ ಮಾಡಿರಿ.

ಸಿಂಹ

ಸಿಂಹವು ಎಲ್ಲೇ ಓಡಾಡಿದರೂ ತನ್ನ ಹೆಜ್ಜೆ ಗುರುತು ಬಿಟ್ಟು ಸಾಗುತ್ತದೆ. ರಾಜಾರೋಷವಾಗಿ ಓಡಾಡಿ ಬೇಟೆಯಾಡಿ ಹೋಗುತ್ತದೆ. ಅದರಂತೆ ನೀವು ತೇಜೋಸ್ವರೂಪನಾದ ಸೂರ್ಯನನ್ನು ಪ್ರಾರ್ಥಿಸಿ. ಗಾಯತ್ರಿ ಅಷ್ಟೋತ್ತರ ಪಠಿಸಿ. ನಡೆದರೆ ಬ್ರಹ್ಮ ಚೈತನ್ಯ, ತೇಜಸ್ಸು ಉಂಟಾಗಿ ಆರರ ಶನಿಯು ಜನವರಿ 17, 2023ರವರೆಗೆ ಎಲ್ಲವನ್ನು ಕೊಡುತ್ತಾನೆ. ಏಪ್ರಿಲ್ 2023ರಿಂದ 9ಕ್ಕೆ ಗುರುವು ಬಂದು ಸಂತೋಷವನ್ನು ನೀಡುತ್ತಾನೆ.

ಕನ್ಯಾ

ಸಪ್ತಮದಲ್ಲಿ ಗುರುವಿರುವುದರಿಂದ ಯಾವುದೇ ವಿಷಯವು ಅತಿಯಾಗಿ ಬಾಧಿಸದು. ಆದರೆ, ದುಃಖವನ್ನು ನೀಡಲು ಶನಿ ಪಂಚಮದಲ್ಲಿದ್ದಾನೆ. ದುರಾಸೆಯು ದುಃಖವನ್ನು ನೀಡುತ್ತದೆ. ಅನ್ಯರನ್ನು ನೋಡಿ ಅಸೂಯೆ ಬೇಡ. ತಪು್ಪ ಮಾಡದಿರಿ. ಯಾರಿಗೂ ದ್ರೋಹವಾಗುವ ಹಾಗೆ ನಡೆಯದೆ ಇದ್ದರೆ ಶ್ರೀಕೃಷ್ಣನು ಪಂಚಮ ಶನಿಯ ಕಷ್ಟಕಾಲವನ್ನು ದಾಟಿಸುತ್ತಾನೆ. ಶ್ರೀ ಕೃಷ್ಣ ಅಷ್ಟೋತ್ತರ ಪಠಿಸಿ.

ತುಲಾ

ತುಲಾ ರಾಶಿಯ ಅಧಿಪತಿ ಶುಕ್ರನು. ಬಯಸದೇ ಇದ್ದರೂ ಒಳ್ಳೆಯ ಫಲಗಳನ್ನು ಪರಮಾತ್ಮನು ನೀಡುತ್ತಾನೆ. ಮನುಷ್ಯ ಪ್ರಯತ್ನ, ದೈವಬಲವು ಇರಲೇಬೇಕು. ಭಗವದ್ಗೀತೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಶುಭವನ್ನು ಉಂಟು ಮಾಡಿಕೊಳ್ಳಿ. ಜೊತೆ ಜೊತೆಯಲ್ಲಿ ನರಸಿಂಹನನ್ನು ಪ್ರಾರ್ಥಿಸಿ, ಪೂಜಿಸಿ.

ವೃಶ್ಚಿಕ

ಎಲ್ಲ ಶುಭಸೂಚನೆ ಕಂಡುಬರುವ ಕಾಲ. ಪುಣ್ಯ-ಪಾಪಗಳು ಮನುಷ್ಯನು ಇರುವವರೆಗೂ ಬಿಟ್ಟು ಹೋಗದು. ಕತ್ತಲಿನ ಮೇಲೆ ಬೆಳಕು, ಸೂರ್ಯಚಂದ್ರರ ಚಲನೆಯಿಂದ ಉಂಟಾಗುವ ಹಾಗೆ ಭಾಗ್ಯ ಜ್ಯೋತಿಯು ಬೆಳಗಿ ನಿಮಗೆ ಧನದ ಕೊರತೆ, ಸಾಲದ ಬಾಧೆ ತೀರಿ, ನೀವು ಭವಸಾಗರದಿಂದ ದಾಟಿಸಿ ಸುಖ ಪಡೆಯುವಿರಿ. ಗಣಪತಿಯ ಪ್ರಾರ್ಥನೆ ಇರಲಿ. ಕುಲಗುರುಗಳ ಮಾರ್ಗದಲ್ಲಿ ಸಾಗಿದರೆ ಯಥೇಚ್ಛವಾದ ಧನ, ಕೀರ್ತಿ ಸಂಪಾದಿಸಬಹುದು.

ಧನಸ್ಸು

ಕತ್ತಲೆಯ ನಂತರ ಬೆಳಕು ಬೆಳಕಲ್ಲಿ ಮಾಡುವ ಕೆಲಸ ಶಾಶ್ವತವು. ಪರಮಾತ್ಮನೇ ರಾತ್ರಿಯಲ್ಲಿ ಪವಡಿಸಿ ತಾನು ಸೃಷ್ಟಿಸಿದ ಜನರಿಗೆ ಸುಖನಿದ್ರೆ ಕೊಡುವ ಕಾಲವದು. ನಿಮಗೆ ಜನ್ಮಕೊಟ್ಟವರ ಪುಣ್ಯವು ಹರಿದುಬಂದು ಅವರ ಅನುಗ್ರಹದಿಂದಲೇ ನಿಮ್ಮ ಕಾರ್ಯಚಟುವಟಿಕೆ ಜರುಗಿ ನಿಮಗೆ ಇಷ್ಟಪೂರ್ವಕ ಸ್ಥಾನಮಾನ, ಕೀರ್ತಿ ಒದಗಿಬರುವ ಕಾಲ. ಜನವರಿ 17, 2023ರಿಂದ ನಿಮ್ಮ ಆಶೋತ್ತರ ಈಡೇರುತ್ತದೆ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭ ಆಗಿ ಆನಂದವಿರುತ್ತದೆ. ಗುರು ಮೇಷಕ್ಕೆ ಸೇರಿ ಪರಿಪೂರ್ಣ ಗುರುಕಟಾಕ್ಷ ದೊರಕಿ ಕಾರ್ಯ ಜಯ, ಸಿದ್ಧಿ, ಯಥೇಚ್ಛ ಧನವೂ ದೊರಕುವುದು. ಶ್ರೀರಾಮಚಂದ್ರನನ್ನು ಪೂಜಿಸಿ. ಗುರುಚರಿತ್ರೆಯ 5ನೇ ಅಧ್ಯಾಯವನ್ನು ಪಾರಾಯಣ ಮಾಡಿ.

ಮಕರ

ಜನ್ಮ ಶನಿಯು ದ್ವಿತೀಯಕ್ಕೆ ಬಂದು ನಿಮ್ಮ ಕಾರ್ಯಾಚರಣೆಯು ವೇಗವು ಉಂಟಾಗಿ ಮನೋಧೈರ್ಯ ಪರಿಪೂರ್ಣವಾಗಿರುತ್ತದೆ. ಈ ಸಮಯದಲ್ಲಿ ಶನಿಯು ಕುಂಭಕ್ಕೆ ಬಂದರೂ ವಿಷಯಗಳನ್ನು ರ್ಚಚಿಸಿ ನಿರ್ಧಾರ ತೆಗೆದುಕೊಳ್ಳುವುದರಿಂದ ಕೆಲಸಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಶನಿಯ ಪ್ರಾರ್ಥನೆ ಇರಲಿ. ಆಧ್ಯಾತ್ಮ ರಾಮಾಯಣದ ಸುಂದರಕಾಂಡ ಪಾರಾಯಣ ಮಾಡಿದರೆ ಜೀವನವು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ.

ಕುಂಭ

ದ್ವಾದಶ ಶನಿಯು ಜನ್ಮಕ್ಕೆ ಬಂದು, ದ್ವಿತೀಯದಲ್ಲಿ ಗುರುವಿರುವುದರಿಂದ ವ್ಯಾಪಾರ-ವಹಿವಾಟು ವ್ಯವಹಾರಗಳಲ್ಲಿ ನಿರೀಕ್ಷಿಸಿದ ಫಲಗಳು ದೊರಕುತ್ತವೆ. ಶನಿಯು ಜನ್ಮಕ್ಕೆ ಬರುವುದರಿಂದ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿಚಾರಗಳನ್ನು ರ್ಚಚಿಸಿ ನುರಿತವರಿಂದ ಸಲಹೆ ಪಡೆದು ಮುಂದೆ ಸಾಗಿದರೆ ಕೆಲಸವು ಉತ್ತಮವಾಗಿ ಸಾಗುತ್ತದೆ. ಶನಿ ಅಷ್ಟೋತ್ತರ ಪಠಿಸಿ.

ಮೀನಾ

ಏಕಾದಶ ಶನಿಯು ದ್ವಾದಶಕ್ಕೆ ಇದೇ ಜನವರಿ 17, 2023ಕ್ಕೆ ಬಂದು ಲಗ್ನದಲ್ಲಿ ಗುರುವಿರುವುದು ನಿಮ್ಮ ಕ್ಷೇಮವನ್ನು ಕಾಪಾಡುವುದಕ್ಕಾಗಿ. ಗುರುವಾರದಂದು ಗುರುವಿನ ಪ್ರೀತಿಗಾಗಿ ಗುರು ಅಂಶವಿರುವ ಯಾವುದೇ ದೇವರನ್ನು ಪೂಜಿಸಿದರೂ ಫಲಪ್ರದವಾಗುತ್ತದೆ. ಈ ಸಂದರ್ಭದಲ್ಲಿ ವಿಷಯಗಳನ್ನು ವಿಷದಂತೆ ರ್ಚಚಿಸದೆ, ಬೇಕಾದಷ್ಟು ಭಾಗವನ್ನು ಮಾತ್ರವೇ ತೆಗೆದುಕೊಂಡು ಜೀವನವನ್ನು ಅರಿತು ನಡೆದರೆ ಮನೆಯಲ್ಲಿ ಸುಖ-ಶಾಂತಿಯು ಲಭಿಸುತ್ತದೆ. ಗುರು ದತ್ತಾತ್ರೇಯನನ್ನು ದರ್ಶಿಸಿ ಪೂಜಿಸಿ. ದಕ್ಷಿಣಾಮೂರ್ತಿ ಅಷ್ಟೋತ್ತರ ಪಾರಾಯಣ ಮಾಡಿ. ಶನಿಯಿಂದ ಮುಂದೆ ಬರುವ ಸಂಕಷ್ಟ ದಾಟಲು, ಆರೋಗ್ಯ ಕಾಪಾಡಿಕೊಳ್ಳಲು ಸನ್ನತಿಯ ಚಂದಲಾ ಪರಮೇಶ್ವರಿಯನ್ನು ದರ್ಶಿಸಿ, ಲಲಿತಾ ಸಹಸ್ರನಾಮದಿಂದ ಅರ್ಚಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net