

ಮೇಷ ರಾಶಿಗೆ 11ರ ಶನಿಯು ಹಿಂದೆ ಸರಿದು ದಶಮದಲ್ಲಿ ಗುರು ದ್ವಾದಶದಲ್ಲಿದ್ದು, ಕುಜ- ರಾಹು ಮೇಷದಲ್ಲೇ ಇರುವುದು. ಶುಭಪ್ರದವಾದ ಸಮಯದಲ್ಲಿ ಮೌನೇನ ಕಲಹಂ ನಾಸ್ತಿ ಎಂಬ ವಿಚಾರ ತಲೆಯಲ್ಲಿಟ್ಟು ಮಾತನ್ನು ಕಡಿಮೆ ಆಡಿ. ಶ್ರದ್ಧಾಪೂರ್ವಕ ನಿಮ್ಮ ಕೆಲಸ ಮಾಡಿ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದರೆ ನಿಮ್ಮ ಸಮಯವು ಯಾವ ಕಷ್ಟ ಕೊಡದೆ ಮುಂದೆ ಸಾಗುತ್ತದೆ.
9ರ ಶನಿಯು ಏಕಾದಶ ಗುರುವು ಸಮಸ್ಯೆಗಳನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ನಿಮಗೆ ಮನಃಶಾಂತಿಯನ್ನು ನೀಡುತ್ತಾರೆ. ಮನುಷ್ಯನು ಯಾವಾಗಲೂ ಇಂದಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆ ಹೊರತು ಮುಂದಿನ ಸಂವತ್ಸರದಲ್ಲಿ ಆಗುವುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಪಂಚೇಂದ್ರಿಯಗಳನ್ನು ಶುದ್ಧೀಕರಿಸಿಕೊಂಡು ಸಾಗಿದರೆ ನೀವು ಬಯಸಿದ ಕಾರ್ಯಾನುಕೂಲವಾಗುತ್ತದೆ. ಸೌಂದರ್ಯಲಹರಿ ಪಾರಾಯಣ ಮಾಡಿ.
ಬುಧನ ಮನೆಯಲ್ಲಿ ಶುಕ್ರನಿದ್ದು, ದಶಮದಲ್ಲಿ ಗುರುವಿದ್ದು, ಶನಿಯು ಅಷ್ಟಮದಲ್ಲಿ ಇರುವುದರಿಂದ ಹೆಜ್ಜೆ ಗುರುತು ಕಾಣದಂತೆ ಕಾಪಾಡಿಕೊಂಡು ಸಾಗಿದರೆ ಗುರುವೇ ರಕ್ಷಿಸುತ್ತಾನೆ. ಲಕ್ಷ್ಮೀ ನರಸಿಂಹನನ್ನು ಪ್ರಾರ್ಥಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆಸೆ ಇರಬೇಕು; ಆದರೆ ಎಟುಕದ ಕೆಲಸಗಳನ್ನು ಮಾಡಬಾರದು.
ಕಟಕ ರಾಶಿಗೆ ಇಂದು ಸೂರ್ಯನು ಬಂದು ಚಂದ್ರನ ಮನೆಯಲ್ಲಿ ಸೂರ್ಯನು ಸೇರುವುದು ಮನೋಕ್ರಾಂತಿ ಉಂಟು ಮಾಡುತ್ತದೆ. ಕರ್ಕಾಟಕ ಸಂಕ್ರಮಣದಲ್ಲಿ ಉತ್ತರಾಯಣ ಪುಣ್ಯಕಾಲ ಮುಗಿದು ದಕ್ಷಿಣಪಥದಲ್ಲಿ ರವಿಯು ಸಾಗುವುದರಿಂದ ಸೂರ್ಯನನ್ನು ಒಂದು ಮಾಸ ನವಗ್ರಹ ಸಹಿತವಾಗಿ ಆದಿತ್ಯ ಹೃದಯ ಪಾರಾಯಣ ಮಾಡಿದರೆ ಒಳ್ಳೆಯ ಫಲ ನಿರೀಕ್ಷಿಸಬಹುದು.
ಸಿಂಹ ರಾಶಿಗೆ ದ್ವಾದಶದಲ್ಲಿ ರವಿ-ಬುಧರು ಬರುವುದರಿಂದ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಬೇಕು. ನಿಮ್ಮ ವಿದ್ಯೆಗೆ ಬೆಲೆಕೊಟ್ಟು ಸಲಹೆ ಕೇಳಿದರೆ ಮಾರ್ಗದರ್ಶನ ಮಾಡಿ. ಎಲ್ಲರಿಗೂ ಬುದ್ದಿ ಹೇಳಿದರೆ ಕೇಳುವುದೂ ಇಲ್ಲ. ಸಾರಾಸಗಟಾಗಿ ತಿರಸ್ಕರಿಸಿ ಮನಸ್ಸಿಗೆ ನೋವುಂಟು ಮಾಡುತ್ತಾರೆ. ಮಾನಸಿಕ ಸಮತೋಲನ ಕಾಪಾಡಿಕೊಂಡು ಸೂರ್ಯಾಷ್ಟೋತ್ತರ ಜೊತೆಗೆ ಪಾರ್ವತಿ ಸಾಂಬಸದಾಶಿವನಿಗೆ ರುದ್ರಾಭಿಷೇಕ ಮಾಡಿರಿ.
ಸತ್ಯಂ ಭ್ರೂಯಾತ್ ಅಸತ್ಯಂ ಭ್ರೂಯಾತ್, ಕಟ್ಟು ಕಥೆ, ಸುಳ್ಳು ಕೇಳಲು ಚೆನ್ನಾಗಿರುತ್ತದೆ. ಸತ್ಯ ಎಂಬುದು ಕಠೋರವಾದ ಆಯುಧದಂತೆ. ಸತ್ಯವು ಶಾಶ್ವತ ಕಪಟವು ತಾತ್ಕಾಲಿಕ. ನೀವು ಅನ್ಯರಿಗೆ ಕೊಡಬೇಕಾದ ಋಣ ತೀರಿಸಿ, ಅನ್ಯರ ಶಾಪದಿಂದ ತಪ್ಪಿಸಿಕೊಳ್ಳಬಹುದು. ಮಹಾವಿಷ್ಣು ಪ್ರೀತ್ಯರ್ಥ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ತುಲಾ ರಾಶಿಗೆ ಉಚ್ಚನಾದ ಶನಿ ಚತುರ್ಥದಲ್ಲಿದ್ದು, ಗುರುವು ಕಷ್ಟದಲ್ಲಿದ್ದಾನೆ. ನೀವು ನಿಮ್ಮ ಪ್ರಯತ್ನಗಳನ್ನು, ಕಾರ್ಯಗಳನ್ನು ಶ್ರದ್ಧಾ-ಭಕ್ತಿಯಿಂದ ಮಾಡುವ ಸತ್ಸಂಕಲ್ಪವಿದ್ದರೆ ಗ್ರಹಗಳು ದುಷ್ಪಲ ನೀಡುವುದಿಲ್ಲ. ವಾಮನ ಅಷ್ಟೋತ್ತರ ಪಾರಾಯಣ ಹಾಗೂ ನಿತ್ಯವೂ ತುಳಸಿಯನ್ನು ಪೂಜಿಸಿ. ತುಳಸಿ ಅಷ್ಟೋತ್ತರ ಪಠಿಸಿ. ಕೆಲಸಗಳು ಮುಂದೆ ಸಾಗುತ್ತವೆ.
ಮನುಷ್ಯನಿಗೆ ಒಳ್ಳೆಯ ಸಮಯ ಬಂದಾಗ ಗುರುವು ಪಂಚಮದಲ್ಲಿ ಶನಿಯು ತೃತೀಯದಲ್ಲಿ ಇರುವಾಗ ನಿಮ್ಮ ಕಾಲವನ್ನು ಸದುಪಯೋಗ ಪಡಿಸಿಕೊಂಡು ದುಡಿಮೆಯನ್ನು ಸತ್ಯಸಂಧರಾಗಿ ಮಾಡಿದರೆ ನಿಮ್ಮ ಮೇಲೆ ಹಿಂದೆ ಬಂದ ಅಪವಾದ, ಮನಸ್ಸಿನ ಖಿನ್ನತೆ ಎಲ್ಲ ದುಃಖಗಳು ಹೇಳ ಹೆಸರಿಲ್ಲದೆ ಓಡಿಹೋಗುತ್ತವೆ. ಸಮಯೋಚಿತವಾಗಿ ಧನವ್ಯಯ ಮಾಡಿ.
ಏಕಲವ್ಯನಂತೆ ಬದುಕಬೇಕಾದರೆ ಪ್ರತಿಜ್ಞೆ ಇರಬೇಕು. ಬಾಣ ಪ್ರಯೋಗದಲ್ಲಿ ನಿರತರಾಗಿರಬೇಕು. ಆಧಾರವಿಲ್ಲದೆ ಮಾತನಾಡಿದಲ್ಲಿ ನಿಂದನೆಗೆ ಒಳಗಾಗುತ್ತೀರ. ಗುರುವಿನ ಅನುಗ್ರಹದಿಂದ ನೀವು ಶಾಂತಚಿತ್ತರಾಗಿ ಸಾಗಬೇಕು. ಮಾಡಿದ ಪಾಪಕ್ಕೆ ದತ್ತಚರಿತ್ರೆಯನ್ನು ನಿತ್ಯವೂ ಪಾರಾಯಣ ಮಾಡಿರಿ.
ಜನ್ಮ ಶನಿಯಲ್ಲಿ ಸಿಕ್ಕಿ ನಲಿದಾಡುವ ಕಾಲವಲ್ಲ. ಅಲ್ಪಕಾಲದಲ್ಲಿ ಶನಿಯನ್ನು ಪೂಜಿಸಿದಲ್ಲಿ ಏನನ್ನಾದರೂ ಪಡೆಯಬಹುದು. ಶಿಲ್ಪಿಯು ಕಲ್ಲಲ್ಲಿ ಕೆತ್ತಿದ ವಿಗ್ರಹವನ್ನು ಪೂಜಿಸುತ್ತೀವಿ. ಭಕ್ತಿಯಿರಲಿ. ಶನಿ ಅಷ್ಟೋತ್ತರ ಪಾರಾಯಣ ಮಾಡಿರಿ. ಕರ್ಕಾಟಕ ಸಂಕ್ರಮದಲ್ಲಿ ಪಿತೃಗಳನ್ನು ಪ್ರಾರ್ಥಿಸಿ.
ದ್ವಾದಶ ಶನಿ, ಜನ್ಮ ಶನಿಗೂ ಎರಡಕ್ಕೂ ಅಂತಹ ವ್ಯತ್ಯಾಸವಿರುವುದಿಲ್ಲ. ಎಲ್ಲರೂ ನೀವು ಹೇಳಿದಂತೆ ಇರಲು ಹೇಳಿದ ಮಾತನ್ನು ಕೇಳುವುದೂ ಅಸಾಧ್ಯ. ದುಸ್ಸಾಹಕ್ಕೆ ಕೈ ಹಾಕಿ ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ. ಮಾತನಾಡಿದರೆ ಬೆಲೆಯಿರಬೇಕು. ಆರೋಗ್ಯ, ಮನಸ್ಸಿನ ಶಾಂತಿ ಹಾಗೂ ನಿರ್ದಿಷ್ಟ ಕಾಲದಲ್ಲಿ ಕೆಲಸ ಸಾಗಬೇಕಾದರೆ ಶಿವತ್ರಿಶತಿ ಪಾರಾಯಣ ಮಾಡಿರಿ. ಒಂದು ಗಂಟೆಯ ಕಾಲ ಶಿವ ದೇವಸ್ಥಾನದಲ್ಲಿ ಅಶ್ವಥ ಪ್ರದಕ್ಷಿಣೆ ಮಾಡಿರಿ.
ಶನಿಯು ಮತ್ತೆ ಮಕರಕ್ಕೆ ಜರುಗಿದ್ದಾನೆ. 5 ತಿಂಗಳ ಕಾಲ ಶನಿಯ ಸಂಚಾರ ಆರಂಭವಾಗುತ್ತದೆ. ವಾಹನ ಚಲಿಸುವಾಗ ಎಚ್ಚರವಿರಬೇಕು. ಶನಿಯ ವಾಹನ ಕಾಕಮಹಾರಾಜನೆ. ನಡೆದಾಡುವಾಗ ಎಚ್ಚರವಿರಲಿ. ನಡೆ-ನುಡಿಯು ಹಿತವಾಗಿರಲಿ. ಈ ಸಮಯದಲ್ಲಿ ದತ್ತಾತ್ರೇಯನ ಗುರುಚರಿತ್ರೆಯ 14ನೇ ಅಧ್ಯಾಯ ಓದಿ. ಲಗ್ನದಲ್ಲಿ ಗುರುವು ಅಲ್ಪ-ಸ್ವಲ್ಪ ಕೆಲಸಕಾರ್ಯಗಳಲ್ಲಿ ಸಮಾಧಾನ ಕೊಟ್ಟು ಕಾಪಾಡುತ್ತಾನೆ. ಬೇರೆ ಯಾವ ಪ್ರಾರ್ಥನೆ ಈ ಸಮಯದಲ್ಲಿ ಅತಿ ಮುಖ್ಯವಲ್ಲ. ಭ್ರಮರಾಂಭ ಸಹಿತ ಮಲ್ಲಿಕಾರ್ಜುನನನ್ನು ಪ್ರಾರ್ಥಿಸಿ.