

ಮೇಷ: ಶಾರ್ವರಿ ನಾಮ ಸಂವತ್ಸರದ ಕಡೆಯ ಭಾಗದ ಶಿಶಿರ ಋತು ನಡೆದಿದ್ದು, ಸೂರ್ಯನು ಸಿಂಹ ರಾಶಿಯಲ್ಲಿ ಬರುವುದರೊಂದಿಗೆ ಉತ್ತರಾಯಣ ಪಥದಲ್ಲಿ ಎರಡನೇ ಮನೆ ಸೇರಿದ್ದಾನೆ. ಫೆ.21ರಂದು ಕುಜ ರಾಹು ಸಂಧಿ ಸಂಭವಿಸಿದರೂ ದಶಮ ಗುರುವು ಸಮತೋಲನದಲ್ಲಿ ವ್ಯವಹಾರ ಕೊಂಡೊಯ್ಯುತ್ತಾನೆ. ಆರೋಗ್ಯದ ಗಮನವಿರಲಿ. ಅನನ್ಯವಾಗಿ ನಾಗನನ್ನು ಪೂಜಿಸಿ. ನಾಗರಾಜ ಅಷ್ಟೋತ್ತರ ಪಠಿಸಿ.
ವೃಷಭ: ದ್ವಾದಶ ರಾಶಿಯ ಕುಜನು ರಾಹುವನ್ನು ಕೂಡಿದರೂ ಎರಡು ಪಾಪಗ್ರಹಗಳ ತಾಪವನ್ನು ತಳೆದುಕೊಳ್ಳಲು ದೈವಾನುಗ್ರಹ ಅಗತ್ಯ. 9ರಲ್ಲಿ ಗುರುವಿದ್ದು ಕಾಪಾಡುತ್ತಾನೆ. ನೀವು ಕುಲದೇವರ ಸಹಿತ ಕಾಲಭೈರವನನ್ನು ಪೂಜಿಸಿ ಇಷ್ಟಾರ್ಥ ಪಡೆದುಕೊಳ್ಳಿ. ಯಾವುದೇ ವಿಚಾರದಲ್ಲಿ ಕೊರತೆ ಅಥವಾ ನಷ್ಟ ಉಂಟಾಗಿದ್ದರೆ ಅದನ್ನು ಸರಿಪಡಿಸಿಕೊಡುತ್ತಾನೆ.
ಮಿಥುನ: ಮಿಥುನ ರಾಶಿಗೆ ಹನ್ನೆರಡರ ಕುಜರಾಹು ಅಷ್ಟಮ ಶನಿ ರಾಹು ವಿಶೇಷ ಫಲದಾಯಕನಲ್ಲ. ಆದರೆ ಶುಕ್ರನು 20ನೇ ತಾರೀಖಿನಂದು ಕುಂಭ ರಾಶಿಗೆ ಬಂದು ಸೇರಿ ಸ್ವಲ್ಪಮಟ್ಟಿಗೆ ವ್ಯವಹಾರ, ಧನದ ಕೊರತೆ ಸರಿಪಡಿಸುತ್ತಾನೆ. ಈ ಸದ್ಯದಲ್ಲಿ ಮಹಾವಿಷ್ಣುವನ್ನು ಪೂಜಿಸಿ. ಸಾಧ್ಯವಾದರೆ ಪಂಢರಾಪುರ ವಿಠ್ಠಲನ ದರ್ಶನ ಪಡೆಯಿರಿ.
ಕಟಕ: ಸಪ್ತಮ ಗುರುವು ಸಂತೋಷ, ಸುಖವನ್ನು ಕಡಿಮೆ ಮಾಡಿಲ್ಲ. ಯಾವುದಕ್ಕೂ ಕೊರತೆ ಇಲ್ಲದಂತೆ ಕಾಪಾಡಿ ಇಷ್ಟಾರ್ಥ ತಕ್ಕಮಟ್ಟಿಗೆ ಸುಧಾರಿಸಿದ್ದಾನೆ. ಗ್ರಹಗಳ ಬಲದಲ್ಲಿ ಗುರುಬಲ ಒಂದು ಇದ್ದರೂ ಸಾಕು ತೃಪ್ತಿಯಾದ ಜೀವನ, ಕೆಲಸದಲ್ಲಿ ಬೆಳಕು ಹಾಗೂ ಗುರಿಯನ್ನು ಮುಟ್ಟಿಸುತ್ತಾನೆ. ರಾಮಾಯಣದ ಮಹಾಪುರುಷ ಹನುಮಂತನನ್ನು ಪೂಜಿಸಿ ದೈವಬಲ ಹೆಚ್ಚಿಸಿಕೊಳ್ಳಿ .
ಸಿಂಹ: ಶನೀಶ್ವರಾಯ ಶಾಂತಾಯ ಸರ್ವಾಭಿಷ್ಟ ಪ್ರದಾಯಿನೇ... ಆರರ ಶನಿಯೇ ಸಾಕು ನಿಮ್ಮ ಕೈಹಿಡಿದು ನಡೆಸಲು. ಆರರ ಗುರುವ ನೀಚತ್ವ ಕಳೆಯಲು ನಿತ್ಯವೂ ಶಿವಪೂಜೆಯನ್ನು ಮಾಡಿ. ನಿಮ್ಮ ಕುಲಗುರುಗಳನ್ನು ಸಂದರ್ಶಿಸಿ. ಔದುಂಬರ ವೃಕ್ಷಕ್ಕೆ ಒಂದು ತಂಬಿಗೆ ಜಲ ಹಾಕಿ ಪೂಜಿಸಿ, ಪ್ರದಕ್ಷಿಣೆ ನಮಸ್ಕಾರ ಮಾಡಿ. ಒಳ್ಳೆಯದಾಗುತ್ತದೆ.
ಕನ್ಯಾ: ಕನ್ಯಾರಾಶಿಯವರಿಗೆ ಕೆಲಸಗಳನ್ನು ಆಗಲೂ ಬಿಡುವುದಿಲ್ಲ ಸಮಾಧಾನವನ್ನೂ ಕೊಡುವುದಿಲ್ಲ. ಶನಿಯು ನೀವು ಶ್ರಮಪಟ್ಟು ಮಾಡುವ ಕೆಲಸವನ್ನು ತೃಪ್ತಿಕರವಾಗಿಸುವುದಿಲ್ಲ. ಮನಸ್ಸಿಗೆ ಕಿರಿಕಿರಿ ಉಂಟುಮಾಡುತ್ತಾನೆ. ನಿತ್ಯವೂ ಲಕ್ಷಿ್ಮೕ ಸಹಿತ ಸತ್ಯನಾರಾಯಣ ಕಥೆ ಶ್ರವಣ ಮಾಡಿ. ಕಷ್ಟ ದೂರವಾಗುತ್ತದೆ.
ತುಲಾ: ತಲಕಾವೇರಿಯಲ್ಲಿ ತುಲಾ ಮಾಸದಲ್ಲಿ ಮಾಡಿದ ಸ್ನಾನ, ಕುಡಿದ ಜಲವು ಎಷ್ಟು ಪವಿತ್ರವೋ ಹಾಗೆಯೇ ತುಲಾರಾಶಿ ಜೀವನವು ಅತ್ಯಂತ ಶ್ರಮದಿಂದ ಕೂಡಿ ಕೀರ್ತಿ, ಧನಲಾಭ ಪಡೆಯುತ್ತಾರೆ. ಶನಿಗೆ ತುಲಾ ರಾಶಿಯು ಉಚ್ಛಸ್ಥಾನ. ನಿಮ್ಮನ್ನು ಸುಖಕ್ಕೆ ಕಡಿಮೆ ಇಲ್ಲದ ಹಾಗೆ ರಕ್ಷಿಸುತ್ತಾನೆ. ನಿರ್ಭೀತಿಯಿಂದ ಅರಣ್ಯ ಮಧ್ಯದಲ್ಲಿ ಓಡಾಡುವ ಏಕೈಕ ದೇವರು ಬನಶಂಕರಿ. ಬನಶಂಕರಿ ಸ್ತೋತ್ರ, ಅಷ್ಟೋತ್ತರ ಪಾರಾಯಣ ಮಾಡಿ.
ವೃಶ್ಚಿಕ: ಲಗ್ನದಲ್ಲಿ ಕೇತುವಿದ್ದರೂ ಗಣಪತಿಯನ್ನು ಅರ್ಚಿಸಿದಲ್ಲಿ ವಿಘ್ನಗಳು ದೂರವಾಗುತ್ತದೆ. ಆತ್ಮಾವಲೋಕನ ಮಾಡಿಕೊಳ್ಳಿ. ಎಂದಾದರೂ ಅಜ್ಞಾನದಲ್ಲಿ ಮತ್ತೊಬ್ಬರಿಗೆ ಕಷ್ಟ ಕೊಟ್ಟಿದ್ದಲ್ಲಿ, ಒಂದು ರಹಸ್ಯವನ್ನು ಇಟ್ಟುಕೊಂಡಿರುತ್ತಾರೆ. ಅದನ್ನು ಭೇದಿಸಿ. ನಿಮಗೆ ಮೋಸ ಮಾಡಿದವರು ಏನನ್ನೂ ಪಡೆಯಲಾಗುವುದಿಲ್ಲ. ಲಕ್ಷಿ್ಮೕನರಸಿಂಹನನ್ನು ಪ್ರಾರ್ಥಿಸಿ. ಎಲ್ಲವನ್ನು ದೇವರೇ ಸರಿದೂಗಿಸುತ್ತಾನೆ.
ಧನು: ದೊಡ್ಡವರ ಮಾತನ್ನು ಕೇಳದೆ ದೊಡ್ಡ ಆಲದ ಮರದ ಮೇಲೆ ಕುಳಿತು ಮರವನ್ನು ಕಡಿದರೆ ಉಳಿಯಲು ಸಾಧ್ಯವೇ? ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷ ಶನಿಯ ಸಂಚಾರದಲ್ಲಿ ಸಾಗಿದ್ದು ಅವರ ಸ್ಥಾನಗಳಿಗೆ ಜನ್ಮಾಂತರದ ಶುಭಗಳನ್ನು ಕೊಡುತ್ತಾನೆ. ಬುದ್ಧಿಯನ್ನೂ ಕಲಿಸುತ್ತಾನೆ. ಬೇಡವೆಂಬ ಕೆಲಸ ಬೆಂಕಿಯಲ್ಲಿ ಕೈ ಸುಟ್ಟುಕೊಂಡಂತೆ. ಸತ್ಯಗಣಪತಿ ವ್ರತ ಮಾಡಿ.
ಮಕರ: ಪ್ರಾಣಿಗಳಿಗೂ, ಮನುಷ್ಯನಿಗೂ ನೀರು ಬೇಕು. ಮೊಸಳೆಗೆ ನೀರು ಹಾಕಲು ಹೋದರೆ ಎಳೆದು ತಿನ್ನುತ್ತದೆ. ಶನಿಯ ಸಂಚಾರದಲ್ಲಿ ಹಾಗೆಯೇ ಆಗುತ್ತೀರ. ಮತ್ಸ ್ಯೂಪ ತಾಳಿದವನು ಸಾಕ್ಷಾತ್ ಶ್ರೀಮನ್ನಾರಾಯಣನೇ. ಈ ಕಷ್ಟಕಾಲ ಕಳೆಯಲು ನಾರಾಯಣನ ಅನುಗ್ರಹ ಬೇಕೇ ಬೇಕು. ಶಾರ್ವರಿನಾಮ ಸಂವತ್ಸರದ ಉಳಿದ ಎರಡು ತಿಂಗಳಲ್ಲಿ ಸತ್ಯನಾರಾಯಣ ವ್ರತ ಮಾಡಿ.
ಕುಂಭ: ಮಕರ-ಕುಂಭಗಳಿಗೆ ಅಧಿಪತಿ ಶನಿ. ಮಕರ ರಾಶಿಯ ಫಲವೇ ಕುಂಭಕ್ಕೆ ಅನ್ವಯವಾಗುತ್ತದೆ. ರೋಗ, ಭಯ, ಶತ್ರುಭಯ ಕೊಟ್ಟು ಕಷ್ಟಗಳನ್ನು ದೂರಮಾಡಿಕೊಳ್ಳುತ್ತೀರೋ ಎಂದು ಭಗವಂತನೇ ನೋಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ನೀವು ತ್ರಿಮೂರ್ತಿಸ್ವರೂಪ ದತ್ತಾತ್ರೇಯನನ್ನು ಪೂಜಿಸಿ ಕಷ್ಟಗಳಿಗೆ ಉತ್ತರ ಕಂಡುಕೊಳ್ಳಬಹುದು.
ಮೀನ: ಗುರುವಂಶದಿಂದ ಜನಿಸಿದ ಮೀನರಾಶಿಯವರು ಕಷ್ಟ-ನಷ್ಟ ದುಃಖ ಬಾರದಂತೆ ದೃಢವಾದ ಮನಸಂಕಲ್ಪ, ನಂಬಿಕೆಯಿಂದ ಸಾಗಿರಿ. ಆ ನಂಬಿಕೆಯೇ ಸಾಕ್ಷಾತ್ ದೇವರ ದೇವರಾದ ಮಹಾದೇವರು. ಬಿಟ್ಟ ಭಾಗ್ಯ, ಕೊಟ್ಟ ಮಾತು ಮತ್ತು ಸಮಯ ಹಿಂದೆ ಬರುವುದಿಲ್ಲ. ಒಳ್ಳೆಯದನ್ನು ಮಾಡಿ-ಒಳ್ಳೆಯದನ್ನೇ ಪಡೆಯಿರಿ. ಮಹಾಕಾಳೇಶ್ವರ, ಅಂಬಾಭವಾನಿಯನ್ನು ಪೂಜಿಸಿ.