ಈ ರಾಶಿಯವರಿಗೆ ಅಪಾಯವನ್ನು ದಾಟಿ, ಉಪಾಯದಿಂದ ಬದುಕಲು ಇದೆ ದೇವರು ಸಹಾಯ: ವಾರಭವಿಷ್ಯ

Vaara-Bhavishya
Published on
ಮೇಷ

ಮೇಷ ರಾಶಿಯವರಿಗೆ ಅಂಗಾರಕನೇ ಭಾಗ್ಯದಾಯಕ. ಅಂದರೆ ಪಾರ್ವತಿನಂದನ ಸುಬ್ರಹ್ಮಣ್ಯ ದೇವರು. ಕುಜನು ಶನಿಯ ಸಂಪರ್ಕದಲ್ಲಿದ್ದಾನೆ. ಮಾಡಬೇಕಾದ ಎಲ್ಲ ಕೆಲಸ ಮುಗಿಸಿ. ಭದ್ರಕೋಟೆಯನ್ನು ಕಟ್ಟಿಕೊಂಡು, ಜಾಗ್ರತೆ ಯಿಂದ ಇರಿ. ಸೂರ್ಯನಾರಾಯಣ ಅಷ್ಟಕವನ್ನು ಪಠಿಸಿ.

ವೃಷಭ

ರಾಶ್ಯಾಧಿಪತಿ ಶುಕ್ರನು 9ರಲ್ಲಿದ್ದು, ರಾಹುವು ವೃಷಭ ಬಿಟ್ಟ ಕೂಡಲೇ ನಿಮಗೆ ಅಡೆತಡೆಗಳು ದೂರವಾಗುತ್ತವೆ. ಗುರುವಿನ ಹನ್ನೊಂದರ ಸಂಚಾರದ ಆರಂಭದಲ್ಲಿ ಎಲ್ಲವನ್ನೂ ಕರುಣಿಸಿ, ಶಾಂತಿಯುತರನ್ನಾಗಿಸುತ್ತಾನೆ. ನಿತ್ಯವೂ ಮಾತಾ-ಪಿತರಿಗೆ ವಂದಿಸಿ, ಅವರ ಸೇವೆ ಮಾಡಲು ಮರೆಯದಿರಿ. ನೀಲಾಂಬರಿ ಅಷ್ಟೋತ್ತರ ಪಠಿಸಿ. ಕಾಮಾಕ್ಯ ಮಂತ್ರ ಜಪಿಸಿ.

ಮಿಥುನ

ದಶಮದಲ್ಲಿ ಸೂರ್ಯ, 9ರ ಗುರು ಕೊಡುವುದನ್ನೆಲ್ಲ ಕೊಟ್ಟರೂ, ಅಷ್ಟಮ ಶನಿ ಅಲ್ಲೇ ಇದ್ದು, ತಾವು ಇನ್ನಷ್ಟು ಜಾಗರೂಕರಾಗಿರಬೇಕು. ಇರುವುದನ್ನು ಜೋಪಾನ ಮಾಡಿಕೊಳ್ಳಬೇಕು. ಬುಧವಾರ ಅಥವಾ ಗುರುವಾರದಂದು ಯಾರಿಗಾದರೂ ಸಂತುಷ್ಟಿಯಾಗುವಷ್ಟು ಊಟ ನೀಡಿ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ.

ಕಟಕ

ಮನಸ್ಸು ಚಂಚಲವಾದಾಗ ಬುದ್ಧಿ ಹಾಳಾಗುತ್ತದೆ. ಅತಿಯಾದ ಆಹಾರ ಆರೋಗ್ಯವನ್ನು ಹಾಳುಮಾಡುತ್ತದೆ. ಇದನ್ನು ಅರಿತು ನಡೆದರೆ ಸಪ್ತಮ ಶನಿ, ಅಷ್ಟಮ ಗುರುವು ನಿಮ್ಮನ್ನು ಬಾಧಿಸುವುದಿಲ್ಲ. ರಾಮನಿಗೂ-ಈಶ್ವರನಿಗೂ ಏಕಕಾಲದಲ್ಲಿ ಪೂಜಿಸಿ. ನೀವು ಆನಂದವನ್ನು ಹೊಂದಿ ಸುಖವಾಗಿರಬಹುದು.

ಸಿಂಹ

ನಿಮ್ಮ ಗ್ರಹಗಳು ಉತ್ತಮವಾಗಿದ್ದಾಗ ಉಪಕಾರಿಯಾಗಿ ಬದುಕಿ, ತ್ಯಾಗಬುದ್ಧಿ ಇರಲಿ. ದೈವಪ್ರಾರ್ಥನೆ ನಿರಂತರವಾಗಿರಲಿ. ಯಾವ ಗ್ರಹಗಳು ಎಲ್ಲಿ ಬಂದರೂ ಸಿಂಹ ರಾಶಿಯವರಿಗೆ ತೊಡಕುಂಟು ಮಾಡುವುದಿಲ್ಲ. ದೇವರನ್ನು ನಂಬಿ ಕೆಟ್ಟವರಿಲ್ಲ. ತಾಯಿಯ ಆಶೀರ್ವಾದ ಪಡೆಯದೆ ಶ್ರೇಯಸ್ಸಿಲ್ಲ. ಸೂರ್ಯನ ಪ್ರಾರ್ಥನೆ ಇರಲಿ.

ಕನ್ಯಾ

ಕನ್ಯಾ ರಾಶಿಯವರು ಪಂಚಮ ಶನಿಯ, ಷಷ್ಠ ಗುರುವಿರುವ ದಿನಗಳನ್ನು ದೇವತಾಧ್ಯಾನದೊಂದಿಗೆ ಕಳೆಯಿರಿ. ಕೈಲಾದ ಧನವನ್ನು, ಊಟವನ್ನು, ವಸ್ತ್ರವನ್ನು ಹೆಣ್ಣುಮಕ್ಕಳಿಗೆ ಕೊಟ್ಟು ಪಾಪವನ್ನು ತೊಳೆದುಕೊಂಡು ಮುಂದೆ ಸಾಗಿರಿ. ಮಾತು ಕೊಟ್ಟು ಉಳಿಸಿಕೊಳ್ಳಬೇಕು. ಹೆಣ್ಣುಮಕ್ಕಳನ್ನು ದೇವರಂತೆ ಪೂಜಿಸಿ.

ತುಲಾ

ತುಲಾ ರಾಶಿಯವರು ಧರ್ಮ, ಕರ್ಮ, ಅರ್ಥದೊಂದಿಗೆ ಗುರುಭಕ್ತಿಯಲ್ಲಿ ಸಾಗಬೇಕು. ಯಾವ ಸ್ಥಾನವಾದರೂ ಸಂತೋಷ-ಸಂತೃಪ್ತಿಯೇ ಮುಖ್ಯ ಎಂಬುದನ್ನು ಮರೆಯದಿರಿ. ಈ ವಾರದಲ್ಲಿ ಗಾಯತ್ರಿ ಅಷ್ಟೋತ್ತರ ಪಠಿಸಿ. ಜ್ಞಾನದ ಶಕ್ತಿಯೊಂದಿಗೆ ಕಾರ್ಯದಲ್ಲಿ ಮಗ್ನರಾದರೆ ಶ್ರೇಯಸ್ಸು ಉಂಟಾಗುತ್ತದೆ.

ವೃಶ್ಚಿಕ

ವೃಶ್ಚಿಕ ರಾಶಿಯವರು ಮೂರರ ಶನಿಯಿಂದ ಅದ್ಭುತವಾದ ವಿಜಯಗಳು, ರಾಜಯೋಗವನ್ನು ನೋಡಿದ್ದೀರಿ. ರಾಹು-ಕೇತುಗಳು ಜರುಗಲಿ. ನೀವು ಕೂಡಿಟ್ಟ ಹಣ, ಬರಬೇಕಾದ ಧನ ಕೈಸೇರುತ್ತದೆ. ಹೊಸ ಉದ್ಯೋಗ ಲಭಿಸುವ ಸಾಧ್ಯತೆ ಇದೆ. ಮಾತಾ-ಪಿತರನ್ನು ವಂದಿಸಿ. ಸುಖವಾಗಿದ್ದು ಜೀವನವನ್ನು ಜೋಪಾನ ಮಾಡಿಕೊಳ್ಳಿ.

ಧನು

ಏನಾದರೂ ಇರಲಿ, ದೈವಕೃಪೆಯೊಂದಿರಲಿ. ವಿಶ್ವದಲ್ಲಿ ದತ್ತನೊಬ್ಬನಿಗೆ ಎಲ್ಲವನ್ನೂ ಕೊಡುವ ಶಕ್ತಿ ಇದೆ. ಆದ್ದರಿಂದ ದತ್ತಾತ್ರೇಯನನ್ನು ಗುರುವೆಂದು ಅರ್ಚಿಸಿ. ಕುಲಗುರುಗಳಿಗೆ ಕೈಲಾದ ಸಹಾಯವನ್ನು ಮಾಡಿ. ಸಂತೋಷದಿಂದ ಸಾಗಿ. ತಂದೆ-ತಾಯಿ ಮಾತಿನಂತೆ ನಡೆದು, ಅವರ ಸೇವೆಯನ್ನು ಮಾಡಿ.

ಮಕರ

ಸ್ವಂತ ಮನೆಯಲ್ಲಿ ಇದ್ದವನು ಬಾಡಿಗೆಮನೆಗೆ ಹೋದಾಗಲೇ ಕಷ್ಟ-ನಷ್ಟ, ಅಶಾಂತಿ ತಲೆದೋರುವುದು. ಶನಿಯು ಮುಂದಿನ ದಿನಗಳಲ್ಲಿ 2ನೇ ಮನೆಗೆ ಹೋಗಿ ನಿಮ್ಮ ಸಾಡೇಸಾತಿಯ ತಾಪವನ್ನು ಕುಗ್ಗಿಸಿ, ಸಂರಕ್ಷಿಸುತ್ತಾನೆ. ಗುರು ಈಗಾಗಲೇ ಆಶಾಭಾವನೆಯನ್ನು ತಂದಿದ್ದಾನೆ. ಕುಂಭಕ್ಕೆ ಶನಿ ಹೋಗುವುದರಿಂದ ನಿಮಗೆ ಸ್ವಕ್ಷೇತ್ರ ಶನಿಯು, ಗುರುಸಂಚಾರವು ಶುಭವನ್ನು ತರುವುದು.

ಕುಂಭ

ಕುಂಭದಲ್ಲಿರುವ ಗುರುವು ಮೀನರಾಶಿಗೆ ಬಂದು ದ್ವಿತೀಯದಲ್ಲಿರುತ್ತಾನೆ. ಹನ್ನೆರಡರ ಗುರುವಿನಿಂದ ಸಂಸಾರದಲ್ಲಿ ಹಲವಾರು ತೊಡಕುಗಳು ಕಂಡುಬರುತ್ತವೆ. ಸಂಸಾರವೆಂಬುದು ಸಾಗರ. ರಾಮನು ಲಂಕೆಯನ್ನು ಮುಟ್ಟಲು ಸಾಗರವನ್ನು ಹೇಗೆ ದಾಟಿದ ಎಂಬುದನ್ನು ಮರೆಯದಿರಿ. ಗುರಿ ಮುಟ್ಟಲು ಸುಂದರಕಾಂಡ, ದುರ್ಗಾಷ್ಟಕ ಪಾರಾಯಣ ಮಾಡಿ.

ಮೀನ

ಹನ್ನೆರಡರ ಗುರು ಜನ್ಮಕ್ಕೆ ಬಂದರೂ, ಯಾವುದೇ ವಿಚಾರದಲ್ಲಿ ವ್ಯಸನವು ಕಾಡುತ್ತದೆ. ವ್ಯಸನದಿಂದ ಹೊರಬರಲು ಯತ್ನಿಸಿ. ದುಃಖವನ್ನು ನೀಗಲು ದೈವಕೃಪೆ ಇರಲೇ ಬೇಕು. ಸೋಮವಾರದಂದು ಉಮಾಮಹೇಶ್ವರನನ್ನು ಪೂಜಿಸಿ. ಉಮಾಮಹೇಶ್ವರ ವ್ರತಕಥೆಯನ್ನು ಓದಿ. ಅಪಾಯವನ್ನು ದಾಟಿ, ಉಪಾಯದಿಂದ ಬದುಕಲು ದೇವರು ಸಹಾಯ ಮಾಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net