

ಕೇತು ಅಷ್ಟಮದಲ್ಲಿರುವುದರಿಂದ ಗುರು-ಶನಿ ಮೇಷ ರಾಶಿಯ ವರಿಗೆ ಶುಭಾಶುಭ ಫಲಗಳನ್ನು ಕೊಟ್ಟರೂ, ಮಾನಸಿಕವಾಗಿ ಸುಖ-ಸಂತೋಷ ಕ್ಷೀಣಿಸುತ್ತದೆ. ನ.20ರಿಂದ ಮತ್ತೆ ಗುರುವು ಪರಿಪೂರ್ಣವಾಗಿ ಬಲಪಡೆದು ವರ್ಷಪೂರ್ತಿ ಕೆಲಸ-ಕಾರ್ಯ ನಡೆಸಿಕೊಡುತ್ತಾನೆ. ಕೇತುವಿಗೆ ಜಪವನ್ನು ಹಾಗೂ ವಿಶೇಷವಾಗಿ ಇಡಗುಂಜಿ ಗಣಪತಿಯನ್ನು ಪೂಜಿಸಿ, ಮನೆಯಲ್ಲೇ ಮೋದಕವನ್ನು, ಕಡಲೇಕಾಳು ನೈವೇದ್ಯ ಮಾಡಿ ಕೇತುವಿನ ಅಶುಭ ಫಲಗಳನ್ನು ಶುಭವಾಗಿ ಮಾಡಿಕೊಳ್ಳಬಹುದು.
ಇಂದಿನಿಂದ ಶನಿ ತನ್ನ ವಕ್ರಗತಿಯನ್ನು ಕಳೆದು ನೇರವಾಗಿ ಸಂಚರಿಸುತ್ತಾನೆ. ನ.19ರವರೆಗೂ ಪೂರ್ಣ ಗುರುಬಲವಿದ್ದು, ಈ ಘಟ್ಟದಲ್ಲಿ ನಿಮ್ಮ ಕೆಲಸ ಕಾರ್ಯಗಳು ಮುಂದುವರಿದು ಸಂತೋಷವನ್ನು ಅನುಗ್ರಹಿಸುತ್ತಾನೆ. ಜನ್ಮ ರಾಹುವಿಗೆ ಪಂಚಮಿಯಿಂದ ದಶಮಿಯವರೆಗೆ ದುರ್ಗೆಯನ್ನು ಪೂಜಿಸಿ ಬೇಕಾದ್ದನ್ನು ಪಡೆದುಕೊಳ್ಳಬಹುದು.
ನವಮ ಗುರುವು ಅಷ್ಟಮಕ್ಕೆ ಬಂದು, ಇಲ್ಲದ ವಿಘ್ನಗಳನ್ನು ತಂದು, ಆಗುವ ಕೆಲಸಗಳಿಗೆ ತಡೆತರುತ್ತಾನೆ. ನ.20ರ ನಂತರ ಪರಿಪೂರ್ಣವಾದ ಗುರುಬಲ ನಿಮ್ಮನ್ನು ಒಳ್ಳೆಯ ದಿನಗಳೆಡೆಗೆ ಕೊಂಡೊಯ್ಯುತ್ತದೆ. ವ್ಯಯಸ್ಥಾನದ ರಾಹುವಿಗೆ ಸರಸ್ವತಿಯನ್ನು ಪೂಜಿಸಿ.
ಗುರುವು ಸಪ್ತಮದಲ್ಲಿದ್ದು, ಶನಿ ವಕ್ರತ್ವ ಕಳೆದು ಸಪ್ತಮದಲ್ಲಿ, ಪಂಚಮದಲ್ಲಿ ಕೇತು ಇರುವುದರಿಂದ ಮುಂದಾಲೋಚನೆ ಇಲ್ಲದೆ ಕೆಲವು ವಿಚಾರಗಳನ್ನು ನಿಮ್ಮ ನಾಲಿಗೆಯಿಂದ ಹೊರಡಿಸಿ ಅಪಕೀರ್ತಿ ಒದಗುವ ಸಾಧ್ಯತೆಗಳಿವೆ. ಪಂಚಮ ಕೇತುವಿಗೆ ನಾಗದೇವರನ್ನು, ಸಪ್ತಮ ಶನಿಗೆ ಸುಂದರಕಾಂಡ ಪಾರಾಯಣ ಮಾಡಿ.
ಗುರುವು ನ.15ರವರೆಗೂ 6ನೇ ಮನೆಯಲ್ಲಿದ್ದರೂ, ಶನಿ ಲಾಭಕಾರಕನಾಗಿದ್ದು, ನಿಮ್ಮ ಕೆಲಸ ಕಾರ್ಯ ನಿಮ್ಮಂತೆ ನಡೆದು ಯಶಸ್ಸನ್ನು ಕೊಟ್ಟು ಉತ್ತುಂಗಕ್ಕೆ ಕರೆದೊಯ್ಯುತ್ತಾನೆ. ಜೊತೆಗೆ ರಾಹು-ಕೇತು ಶುಭಫಲ ನೀಡುವುದು. ಕ್ಷೇತ್ರದರ್ಶನ ಮಾಡಿ, ದೈವವನ್ನು ಪೂಜಿಸಿ. ಸಕಲ ಇಷ್ಟಾರ್ಥಗಳು ಸಿದ್ಧಿಸುವುದು.
ಗುರುಬಲ ನ.20ರವರೆಗೆ ಮಾತ್ರ ಇರುವುದರಿಂದ ಈಗಲೇ ನಿಮ್ಮ ಸಮಯವನ್ನು ದೈವಾನುಗ್ರಹದಿಂದ ಸರಿಪಡಿಸಿಕೊಳ್ಳಿ. ರಾಹು-ಕೇತುಗಳು ಆಕಸ್ಮಿಕ ಜಯ, ಲಾಭ ತರುತ್ತಾರೆ. ಅಪ್ಪಟಬೆಣ್ಣೆ ಕಾಯಿಸಿದ ತುಪ್ಪವನ್ನು ದಾನ ನೀಡಿ. ಕಷ್ಟ-ನಷ್ಟ ದೂರವಾಗಿ ಮನಸ್ಸಿಗೆ ಶಾಂತಿಯನ್ನು ಕೊಡುತ್ತದೆ.
ಗುರುವು ಚತುರ್ಥದಲ್ಲಿದ್ದು, ಸದ್ಯದಲ್ಲಿ ಗುರುಬಲವಿಲ್ಲದಿರುವುದರಿಂದ ವ್ಯವಹಾರಗಳಲ್ಲಿ ನಿಧಾನವನ್ನು ಅನುಸರಿಸಿ. ಆತುರ ಬೇಡ. ಪರಿಪೂರ್ಣವಾದ ಗುರುಬಲ ಬಂದರೂ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ನೀವು ಬೆವರು ಸುರಿಸಿ ದುಡಿದ ದುಡ್ಡು ನಿಮಗಾಗಿ, ದಾನ-ಧಮಕ್ಕಾಗಿ ಇರಲಿ. ಅಷ್ಟಮ ರಾಹುವಿಗೆ ಷಣ್ಮುಖನನ್ನು ಪೂಜಿಸಿ.
ಶನಿ ಮೂರನೇ ಮನೆಯಲ್ಲಿ ಇರುವುದರಿಂದ ಸಕಲ ಸೌಭಾಗ್ಯ ಕೊಡುವುದರಲ್ಲಿ ಸಂದೇಹವಿಲ್ಲ. ಜನ್ಮಸ್ಥಿತ ಕೇತು ಕೆಲವೊಮ್ಮೆ ನಿಮ್ಮ ಬುದ್ಧಿಗೆ ಅಂಹಕಾರ, ಸ್ವಾರ್ಥವನ್ನು ಕೊಟ್ಟು, ನಿಮ್ಮ ಕೆಲಸಗಳಿಗೆ ತೊಂದರೆ ಮಾಡಿಕೊಳ್ಳುವ ಸಂಭವವಿದೆ. ಬೇರೆ ಯಾವ ದೋಷವೂ ಇರುವುದಿಲ್ಲ. ದೇವರು ನಿಮ್ಮನ್ನು ಕೈ ಹಿಡಿದು ನಡೆಸುತ್ತಾನೆ, ಭಯ ಬೇಡ. ಧನಕ್ಕೆ ಕೊರತೆಯಿಲ್ಲ. ಚಾಮುಂಡೇಶ್ವರಿಯನ್ನು ಪೂಜಿಸಿ.
ದ್ವಿತೀಯದಲ್ಲಿ ಗುರು ಸಂಚಾರ ಇರುವುದರಿಂದ ಕೆಟ್ಟ ಕಾಲ ಕಳೆದು ಮುಂದಿನ ದಿನಗಳಲ್ಲಿ ಶ್ರೇಯೋವಂತರಾಗಿ ಬಾಳುವಲ್ಲಿ ಸಂದೇಹಬೇಡ. ಸಾಡೆಸಾತಿ ಶನಿಯ ದೋಷವಿರುವುದರಿಂದ ಹಾಗೂ ವ್ಯಯಭಾಗದ ಕೇತು ವಿನಾಶಕಾರಕನಾಗಿದ್ದು, ನಿಮ್ಮ ಕೋಪ-ತಾಪ ಹತೋಟಿಯಲ್ಲಿರಲಿ. ಧನಕ್ಕೆ ಕೊರತೆ ಇಲ. ಕೇತು ವರಸಿದ್ಧಿ ವಿನಾಯಕ ವ್ರತ-ಕಥೆ ಓದಿ. ನ. 20ರವರೆಗೆ ಭೈರವ ಅಷ್ಟೋತ್ತರ ಪಾರಾಯಣ ಮಾಡಿ.
ಜನ್ಮ ರಾಶಿಯಲ್ಲಿ ಶನಿ ಸಂಚಾರವು ಏಳೂವರೆ ವರ್ಷವಿದ್ದು ನಿಮ್ಮ ಸಮಯವನ್ನು ಪರೀಕ್ಷೆ ಮಾಡುತ್ತಿದ್ದಾನೆ. ಮಕರ ಶನಿಗೆ ವಿಷ್ಣು ಅಷ್ಟೋತ್ತರ ಪಾರಾಯಣ ಮಾಡಿ. ಒಣದ್ರಾಕ್ಷಿ, ಕೆಂಪು ಕಲ್ಲುಸಕ್ಕರೆ ದಾನ ಮಾಡಿ. ನ.20ರಿಂದ ಗುರುವು ದ್ವಿತೀಯಕ್ಕೆ ಬಂದು ನಿಂತು ಹೋದ ಕೆಲಸಗಳನ್ನು ಮಾಡಿಕೊಟ್ಟು, ಸಂತೋಷ ಕೊಡುತ್ತಾನೆ.
ದ್ವಾದಶದಲ್ಲಿ ಗುರು ಸಂಚಾರವಿರುವುದರಿಂದ ಮನಸ್ಸನ್ನು, ಬುದ್ಧಿಯನ್ನು ಕೆಡಿಸಿ ಕಾರ್ಯದಲ್ಲಿ ವಿಳಂಬವನ್ನು ತರುತ್ತಾನೆ. ಪಂಚಮ ರಾಹು ವಿಘ್ನಕಾರಕನಾಗಿರುವುದರಿಂದ ಎಲ್ಲ ಕೆಲಸಗಳು ಪರಿಪೂರ್ಣವಾಗಿ ಆಗುವುದಿಲ್ಲ. ಮಧ್ಯದಲ್ಲಿ ನಿಂತು ಸಾಗುತ್ತದೆ. ಅದಕ್ಕಾಗಿ ಕಾಳಿಕಾಷ್ಟೋತ್ತರ, ಶನಿಗೆ ಸುಂದರಕಾಂಡ ಪಾರಾಯಣ ಮಾಡಿದರೆ ಗ್ರಹಗಳ ಯುದ್ಧದಲ್ಲಿ ನೀವು ಗೆಲುವನ್ನು ಸಾಧಿಸಬಹುದು.
ಏಕಾದಶದಲ್ಲಿ ಗುರು-ಶನಿಯಿದ್ದು, ಬೆನ್ನೆಹಿಂದೆ ಕಾಯಲು ದೇವರಿದ್ದಾನೆ. ವ್ಯಾಪಾರದಲ್ಲಿ ಸ್ಥಿರವಾಗಿ ನಿಲ್ಲುವ ಕಾಲವಿದೆ. ಗುರುವಿಗೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯನ್ನು ಪ್ರಾರ್ಥಿಸಿ. ಇಡೀ ವಂಶಕ್ಕೆ ಸುಖ ಬರುವಂತೆ ದೇವರೇ ಅನುಗ್ರಹಿಸುತ್ತಾನೆ. ಶನಿಗಾಗಿ ದಾನ-ಧರ್ಮ ಮುಂದೆ ಸಾಗಲಿ. ದುರ್ಗೆಯನ್ನು ಪೂಜಿಸಿ.