ಈ ರಾಶಿಯವರಿಗೆ ಇದು ಸುಖವಾಗಿರುವ ಕಾಲ: ವಾರ ಭವಿಷ್ಯ

E vara F
Published on

ಮೇಷ: ಜನವರಿ ತಿಂಗಳಿನಲ್ಲಿ 14, 20, 27ರಂದು ರವಿ, ಬುಧ, ಶುಕ್ರ ಚಲನೆಯಿದ್ದು, ಬುಧನು 11ರಲ್ಲೂ ಕುಜನು ತನ್ನ ಶಕ್ತಿಯನ್ನು ತೋರುತ್ತಾನೆ. ಆದ್ದರಿಂದ ದೈವದ ಮೊರೆ ಹೋಗಿ ಶುಭಾಶುಭ ಫಲಗಳನ್ನು ಪಡೆದುಕೊಳ್ಳಿ. 10ರ ಗುರು-ಶನಿ ಸಕಾರಾತ್ಮಕವಾಗಿ ಶುಭಫಲವನ್ನು ಸ್ವೀಕರಿಸಿ. ಅನಂತವಾಗಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

ವೃಷಭ: ಒಂಬತ್ತರ ಗುರು-ಶನಿಯು ಸಮತೋಲನದಲ್ಲಿ ನಿಮ್ಮ ಕೆಲಸದಲ್ಲಿ ಪ್ರಗತಿ, ಜಯವನ್ನು, ಧನಲಾಭವನ್ನು ಮಾಡಿಕೊಡುತ್ತಾನೆ. ಆದರೆ 12ರ ಅಂಗಾರಕನು ತಡೆಯೊಡ್ಡುತ್ತಾನೆ. ಅದ್ದರಿಂದ ಪ್ರಯತ್ನವನ್ನು ಪರಿಪೂರ್ಣವಾಗಿ ಮಾಡಿ. ಗುರು ಅಷ್ಟಕವನ್ನು ಪಠಿಸಿ. ಸಾಧ್ಯವಾದಲ್ಲಿ ಕುಲಗುರುಗಳ ದರ್ಶನ ಪಡೆಯಿರಿ

ಮಿಥುನ: ಗುರುವು ರಾಹುವಿನಿಂದ ಬಂದೊದಗುವ ದುಃಖ, ನಿರಾಸೆಯನ್ನು ತಡೆಯುತ್ತಾನೆ. ನಿಮ್ಮ ಕುಲಗುರುಗಳನ್ನು ಪೂಜಿಸಿ. ಸದ್ಗುಣಗಳು, ಮಾಡಿದ ಉಪಕಾರ, ಆದರ್ಶದ ಮಾರ್ಗವನ್ನು ತೋರಿಸಿ ಜೀವನ ಸಾಫಲ್ಯ ಪಡೆದುಕೊಳ್ಳಬೇಕಾದ ಕಾಲವಿದೆ.

ಕಟಕ: 6ರ ಸೂರ್ಯ ಶನಿ ಮನೆಯಲ್ಲಿದ್ದು ಸಪ್ತಮದಲ್ಲಿ ಗುರುಶನಿ ಬಂದು ಸೇರುವುದರಿಂದ ಕೆಲಸಗಳಲ್ಲಿ ನಿರೀಕ್ಷಿತ ಜಯವನ್ನು ಕೊಟ್ಟು ಕಾಪಾಡುವುದರಲ್ಲಿ ಸಂದೇಹವಿಲ್ಲ. ಆದರೂ ನಿಮ್ಮ ಮನೋವೇಗ ಕಡಿವಾಣಕ್ಕೆ ಲಕ್ಷ್ಮೀ ನರಸಿಂಹನ ಪ್ರಾರ್ಥನೆಯಿರಲಿ.

ಸಿಂಹ: 6ರ ಶನಿ ಬಲಶಾಲಿಯಾಗಿದ್ದು ನಿರೀಕ್ಷಿತ ಕೆಲಸ ನಡೆಯುತ್ತದೆ. ಇದು ಸುಖವಾಗಿರುವ ಕಾಲ. ನಿಮ್ಮ ಆರಾಧ್ಯದೈವವನ್ನು ಭಜಿಸಿ, ಪೂಜಿಸಿ. ಧರ್ಮದ ನಡೆಯಿದ್ದಲ್ಲಿ ನೀವು ಏನನ್ನೂ ಗಳಿಸಬಹುದು. ಸೂರ್ಯ ಅಷ್ಟೋತ್ತರ, ಸೂರ್ಯ ನಮಸ್ಕಾರ ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ.

ಕನ್ಯಾ: ದೇಹವೇ ದೇವಾಲಯ. ಆ ದೇವಾಲಯದ ಒಳಗಿರುವವನೇ ಮಹಾವಿಷ್ಣು. ಅವನ ಸ್ಮರಣೆಯಿದ್ದರೆ ಪ್ರಾಣಕಂಟಕ ನೀಗುವನು. ಗುರುವು 5ನೇ ಮನೆಯಲ್ಲಿದ್ದು, ಸೂಕ್ತ ನಿರ್ಧಾರಗಳನ್ನು ನೀವಿದ್ದೆಡೆಗೆ ತರಿಸಿಕೊಟ್ಟು, ಧನ-ಕೀರ್ತಿ ತರುತ್ತಾನೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ತುಲಾ: ತುಲಾಧಿಪತಿ ಶುಕ್ರನು 27ನೇ ಜನವರಿಯಿಂದ ಶನಿ ಗುರುವನ್ನು ಸೇರಿ ಘರ್ಷಣೆ ಉಂಟುಮಾಡುತ್ತಾನೆ. ಬುದ್ಧಿವಂತರು ಸಮಯ ಹಾಳುಮಾಡದೆ, ಚರ್ಚೆಗೆ ಆಸ್ಪದ ಕೊಡದೆ, ಚಂಡಿಕಾ ಪಾರಾಯಣ ಜತೆಗೆ ದುರ್ಗಾದೀಪ ನಮಸ್ಕಾರ ಮಾಡಿ ಲಾಭ, ಕೀರ್ತಿಯನ್ನು ಪಡೆಯಬಹುದು.

ವೃಶ್ಚಿಕ: ಗಣಪತಿಗೆ ನವನೀತ ನೈವೇದ್ಯ ಮಾಡಿ. ದುಡ್ಡಿನ ಮೂಲ ಹುಡುಕಿದಾಗ ನಿಮಗೆ ಧನವೂ, ಸುಖವೂ ಬರುತ್ತದೆ. ಲಗ್ನದಲ್ಲಿ ಕೇತುವಿರುವುದರಿಂದ ಗಣೇಶನನ್ನು ಗರಿಕೆಯಿಂದ ಆರಾಧಿಸಿ, ಸಂಕಷ್ಟಹರ ಗಣಪತಿ ಸ್ತೋತ್ರವನ್ನು ಪಠಿಸಿ.

ಧನು: ಲಗ್ನಾತ್ ದ್ವಿತೀಯದಲ್ಲಿ ಗುರು-ಶನಿ ಇರುವುದು ನಿಮಗೆ ಹೆಚ್ಚಿನ ಬುದ್ಧಿಬಲವನ್ನು ಕೊಡುತ್ತಾನೆ. ದ್ವಿತೀಯ ಗುರು ಕೆಲವೊಂದು ನಿಷ್ಠುರ ಹಾದಿಯಿಂದ ಕಾಪಾಡಿದ್ದಾನೆ. ಗುರು ಎಂದರೆ ಬ್ರಹ್ಮ- ವಿಷ್ಣು ಮಹೇಶ್ವರರೇ. ಬ್ರಹ್ಮನು ಲಲಾಟದಲ್ಲಿ ಬರೆದಿದ್ದರೆ ದುಡ್ಡಿನ ಕಾರ್ಪಣ್ಯ ಕಡಿಮೆಯಾಗುತ್ತದೆ. ಅಧಿಕಾರ ಸಿಗುತ್ತದೆ. ಆಯಸ್ಸು, ಆರೋಗ್ಯಕ್ಕೆ ಕೊರತೆಯಿಲ್ಲ. ಸದಾ ಇಷ್ಟದೇವರನ್ನು ಭಜಿಸಿ.

ಮಕರ: ನಿಮ್ಮ ಎಚ್ಚರಿಕೆ ನಿಮ್ಮನ್ನು ಕಾಪಾಡಲು ಗುರುವಿನ ಲಗ್ನ ಸಂಚಾರವೇ ಸಾಕು. ಮುಂದಿನ ದಾರಿ ತೋರಿ ಹಿಂದಿನಿಂದ ಚೂರಿ ಹಾಕುವವರನ್ನು ತಡೆಯುತ್ತಾನೆ. ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆ ಪಡೆಯಲು ಗುರುಪರಂಪರಾ ಸ್ತೋತ್ರವನ್ನು ಪಠಿಸಿ. ಧನ್ವಂತರಿ ಪ್ರಾರ್ಥನೆ ಇರಲಿ.

ಕುಂಭ: ದ್ವಾದಶದಲ್ಲಿ ಗುರು ಶನಿ ಇಬ್ಬರೂ ಇದ್ದು, 27ನೇ ಜನವರಿ ಶುಕ್ರನನ್ನು ಸೇರುವುದರಿಂದ ಗೊಂದಲದ ವಾತಾವರಣ ನಿರ್ವಿುಸುವುದರಲ್ಲಿದೆ. ಶನಿ-ಶುಕ್ರರ ಸಂಚಾರದಲ್ಲಿ ನಿಷ್ಠುರಗಳು, ಒಡಕು ಮಾತುಗಳು ಬಂದು ಬುದ್ಧಿಯನ್ನು ಹಾಳುಮಾಡುತ್ತದೆ. ಅದಕ್ಕಾಗಿ ಹನುಮಾನ್ ಚಾಲೀಸಾ ಮೊದಲನೆ ದಿನ ಒಂದು, 2ನೇ ದಿನ 2ರಂತೆ ವೃದ್ಧಿಗೊಳಿಸಿ.

ಮೀನ: ಯಾವುದಕ್ಕೂ ಕೊರತೆಯಿಲ್ಲದ ಈ ವಾರದಲ್ಲಿ ಬುಧನು ತುಲಾರಾಶಿಯಲ್ಲಿ ನಿರೀಕ್ಷಿತ ಸ್ಥಾನಮಾನವನ್ನು ಕೊಟ್ಟು ಆನಂದದಾಯಕ ಸಂಸಾರದಲ್ಲಿ ಕೊರತೆಯಿಲ್ಲದಂತೆ ನೋಡಿಕೊಳ್ಳುತ್ತಾನೆ. ಧನ, ಸುಖ-ಸಂಪತ್ತು, ಅಧಿಕಾರ ಕೊಡುತ್ತಾನೆ. ಶನಿ ಪ್ರೀತ್ಯಾರ್ಥವಾಗಿ ಎಳ್ಳು-ಬೆಲ್ಲ-ಕಡಲೆಕಾಯಿಯನ್ನು ದಾನ ಕೊಟ್ಟು ಇಷ್ಟಾರ್ಥ ಸಿದ್ಧಿಸಿಕೊಳ್ಳಿ. ಗುರು ಪ್ರೀತಿಗಾಗಿ ತಪ್ಪದೇ ಗುರುಕ್ಷೇತ್ರವನ್ನು ಸಂದರ್ಶಿಸಿ. ಕುಲಗುರುಗಳನ್ನು ಆರಾಧಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net