

ಮೇಷ ರಾಶಿಯವರಿಗೆ ಗುರು ಮುಂದೆ ಹೋಗಲಿದ್ದು ಅದಕ್ಕೆ ಮುಂಚೆಯೇ ಎಲ್ಲವನ್ನೂ ಕೊಟ್ಟು ಸಂತಸ ಕೊಡುತ್ತಾನೆ. ದೇವರು ಕೊಟ್ಟಿದ್ದಕ್ಕೆ ತೃಪ್ತಿಪಟ್ಟು ದ್ವೇಷ, ಅಸೂಯೆಬಿಟ್ಟು ದೇವತಾ ಪ್ರಾರ್ಥನೆ ಮಾಡಿದರೆ ಸನ್ಮಾರ್ಗ ತೋರಿಸುತ್ತಾನೆ. ಸುಬ್ರಹ್ಮಣ್ಯನ ಪ್ರಾರ್ಥನೆ ಮರೆಯದಿರಿ.
ರಾಶಿಯಲ್ಲಿ ರಾಹುವಿದ್ದು ಕೆಲವೊಂದು ವಿಷಯಗಳಲ್ಲಿ ಗೊಂದಲವಿದ್ದು, ತೃಪ್ತಿಕರವಾಗಿ ಕೆಲಸವು ಮುಂದೆ ಸಾಗುವು ದಿಲ್ಲ. ಯಾರನ್ನೂ ನಿಂದಿಸಬೇಡಿ. ಇನ್ನೊಬ್ಬರಿಗೆ ನೋವು ಉಂಟು ಮಾಡದೆ ಸಾಗಿದಲ್ಲಿ 11ರ ಗುರು ಕೆಲಸದಲ್ಲಿ ಯಶಸ್ಸು, ವಿಶೇಷ ಧನ, ದ್ರವ್ಯ ಕೊಡುತ್ತಾನೆ. ದೇವಿ ಪ್ರಾರ್ಥನೆ ಮಾಡಿ. ನೀಲಾಂಬಿಕೆ ದೇವಿ ಅಷ್ಟೋತ್ತರ ಪಠಿಸಿ.
9ರ ಗುರುವೂ ಮುಂದೆ ಚಲಿಸುತ್ತಾನೆ. ಮುಂಚೆ ಮಾಡಿದ ಪಾಪ ತೊಳೆದುಕೊಳ್ಳಲೇಬೇಕು. ಗುರುವು ಶಿವನಾಗಿದ್ದಾನೆ. ಅನ್ಯರ ಬಗ್ಗೆ ಚಿಂತೆ ಇರಲಿ. ಹುಸಿಮಾತು, ಸುಳ್ಳಿನ ಆಶ್ವಾಸನೆ ಬೇಡ. ನೀವು ತಿದ್ದಿ ನಡೆದರೆ ಅಷ್ಟಮ ಶನಿಯು ನಿಮ್ಮ ಕರೆಗಳನ್ನು ಓಗೊಟ್ಟು ಕೇಳುತ್ತಾನೆ. ಇಲ್ಲದಿದ್ದರೆ ಶಿಕ್ಷಿಸುತ್ತಾನೆ. ಗುರುವಿಗಾಗಿ ದಕ್ಷಿಣಾಮೂರ್ತಿ ಪ್ರಾರ್ಥನೆ ಇರಲಿ.
ಮಕ್ಕಳು ಏಳುವುದು-ಬೀಳುವುದು ಸಹಜ ಪ್ರಕ್ರಿಯೆ. ಬೀಳುವವನು ಏಳುತ್ತಾನೆ. ಎದ್ದವನು ಪುಣ್ಯ ಕಾರ್ಯ ಮಾಡಿದಲ್ಲಿ ಪಾಪಗಳು ಬಾಧಿಸದೆ ಸುಖ ಜೀವನ ಮಾಡುತ್ತಾನೆ. ಅಷ್ಟಮ ಗುರು ಮುಂದೆ ಸಾಗಿ ದೇಹ ಆರೋಗ್ಯ ಕೊಡುತ್ತಾನೆ. ಶನಿ ಪ್ರಾರ್ಥನೆ ಇರಲಿ. ಸುಂದರಕಾಂಡ ಪಾರಾಯಣ ಮಾಡಿ.
ಸಿಂಹ ರಾಶಿಯವರಿಗೆ ತಾತ್ಕಾಲಿಕವಾಗಿ ಗುರು, ಶನಿ ಮುಂದೆ ಹೋದರೂ ಸಿಂಹ ಗರ್ಜನೆಗೆ ಹೆದರದವರು ಯಾರಿದ್ದಾರೆ? ಸಿಂಹವಾಹಿನಿ ದುರ್ಗೆ. ಅಂದರೆ ಹೆದರಿಸುವವರನ್ನು ಸಿಂಹದಂತೆ ಕಟ್ಟಿ ಹಾಕಿ ಕೂರಿಸುತ್ತಾಳೆ. ಸುಖವಿದ್ದಾಗ ಉಪಕಾರವು ಇರಲಿ. ಸೂರ್ಯನಾರಾಯಣನ ಪ್ರಾರ್ಥನೆ ನಿರಂತರವಾಗಿರಲಿ.
ಕನ್ಯಾ ರಾಶಿಯವರಿಗೆ ಚಂಚಲ ಬುದ್ಧಿ ಹಾಗೂ ಮನಸ್ಸು ಎರಡೂ ವಿಕಾರವೆ. ಬುದ್ಧಿ ವಿಕಾರವಾದರೆ ಸರಿಪಡಿಸಬಹುದು. ಆದರೆ ಮನಸ್ಸು ವಿಕಾರವಾದರೆ ಸರಿಪಡಿಸುವುದು ಕಷ್ಟಕರ. ಅನ್ಯರ ಬಗ್ಗೆ ದುಸ್ತರ ಭಾವನೆ ಬೇಡ. ನೀವು ನಿಮ್ಮಲ್ಲಿ ಬದಲಾವಣೆ ತಂದುಕೊಂಡು ಮುಂದೆ ಸಾಗಿದರೆ ಒಳ್ಳೆಯದು. ದೈವ ಕೃಪೆ ಒದಗಿ ಬರಲಿದೆ. ಶನಿ ಅಷ್ಟೋತ್ತರ ಪಠಿಸಿ.
ಕೊರಗುವುದು, ಅನ್ಯರ ನಿಂದನೆಗೆ ಬೇಸರಪಡುವುದು, ಎಲ್ಲವೂ ಮನಸ್ಸಿನ ದೌರ್ಬಲ್ಯವನ್ನು, ನಿಮ್ಮ ಅಸಹಾಯಕತೆಯನ್ನು ಪ್ರದರ್ಶನ ಮಾಡುತ್ತದೆ. ತುಲಾ ರಾಶಿ ಸಮತೋಲನ ರಾಶಿ. ಯಾರ ಭಯವೂ ಬೇಡ. ನೀವು ಭಾಗ್ಯವಂತರಾಗಿ ಬಾಳುವುದರಲ್ಲಿ ಸಂದೇಹ ಬೇಡ. ಆದರೆ ಪಂಚಮ ಶನಿ, ಲಗ್ನಾಧಿಪತಿ ಶುಕ್ರನ ಪ್ರಾರ್ಥನೆ ಮರೆಯದಿರಿ. ಗುರು ಪ್ರಾರ್ಥನೆ ಸದಾ ಇರಲಿ.
ಸಮಯವು ಯಾರನ್ನೂ ಕಾಯುವುದಿಲ್ಲ. ಶುಭಾಶುಭ ಫಲಗಳನ್ನು ತರಲು ಗ್ರಹಗಳು ಉದ್ಯುಕ್ತರಾಗಿವೆ. ಬಯಸಿದ್ದೆಲ್ಲ ಸಿಗುವ ಕಾಲ ಹತ್ತಿರದಲ್ಲಿದೆ. ಮಾತಾಪಿತರ ಕೃಪೆಯಿಂದ ಹಿಂದೆ ತಿರುಗಿ ನೋಡದೆ ಇರುವಂತಹವರಾಗಲು ಸಿದ್ಧರಾಗಿರಿ. ಕೇತು ಬದಲಾವಣೆಯಿಂದ ದೊಡ್ಡ ವಿಚಾರದಲ್ಲಿ ಜಯ. ಗುರು ಗಣೇಶನನ್ನು ಸದಾ ಹೃದಯದಲ್ಲಿ ಇಟ್ಟು ಪೂಜಿಸಿ.
ಧನುರ್ ರಾಶಿಯವರಿಗೆ ದೇವರು ಶಾಶ್ವತ ಕೀರ್ತಿಯನ್ನು ಕೊಡುತ್ತಾನೆ. ಜನ್ಮ ಜನ್ಮಾಂತರದಲ್ಲಿ ಮಾಡಿದ ಪುಣ್ಯ ದಿಂದಲೆ ಒಳ್ಳೆಯ ಮಾತಾಪಿತರನ್ನು ಪಡೆದು ಸುಖಮಯ ಜೀವನವನ್ನು ಕಟ್ಟಿ ಕೊಂಡಿದ್ದೀರಾ. ಶನಿಯು ದ್ವಿತೀಯದಲ್ಲಿ ಇದ್ದು ಕಡೆಯ ಭಾಗದ ಶನಿ ಯಶಸ್ಸನ್ನೂ, ವಿಜಯವನ್ನೂ ನೀಡುತ್ತಾನೆ. ಗುರು ರಾಶಿಯಲ್ಲಿ ಜನಿಸಿದ ನೀವು ದೇವರನ್ನು ಮರೆತರೆ ಕತ್ತಲೆ ಎಂಬುದು ದೂರವಾಗುವದಿಲ್ಲ.
ಶನಿಯು ಸ್ವಕ್ಷೇತ್ರದಲ್ಲಿದ್ದು ಎರಡನೇ ಮನೆಗೆ ಸಾಗಲಿದ್ದಾನೆ. ಕೆಲವೊಂದು ಕಷ್ಟ ಕೊಟ್ಟು ಪಾಠ ಕಲಿಸಿದ್ದಾನೆ. ಪಾಠ ಕಲಿತರೆ ಸಾಲದು ಅದನ್ನು ಅರ್ಥ ಮಾಡಿಕೊಂಡು ಜೀವನ ಮಾಡಬೇಕು. ಯಾರನ್ನು ನಂಬಬೇಕು ಎಂಬುದು ನಿಮಗೆ ಬಿಟ್ಟ ವಿಚಾರ. ಏನು ಬಂದರೂ ಹೆದರದಿರಿ. ಶನಿ ಪ್ರಾರ್ಥನೆ ಮುಂದುವರಿಯಲಿ. ಗುರು ಅಷ್ಟೋತ್ತರ ಪಾರಾಯಣ ಮಾಡಿ.
ಕುಂಭ ರಾಶಿಗೆ 12ರಲ್ಲಿ ಗುರುವಿದ್ದರು, ಗುರುವೂ ಭಾಗ್ಯ ತರುತ್ತಾನೆ. ನೀವು ದೈವವೆಂದು ಅಮೃತವನ್ನು ಪಾನ ಮಾಡಿದಲ್ಲಿ ಕಾಲವು ಕೆಟ್ಟರೂ ನಿಮ್ಮನ್ನು ದೇವರು ಕೈಬಿಡು ವುದಿಲ್ಲ. ಈ ಸಮಯದಲ್ಲಿ ವಿಶೇಷವಾಗಿ ಪಿತೃಗಳನ್ನು ಪ್ರಾರ್ಥಿಸಿ. ಮಾತಾಪಿತರನ್ನು ಗೌರವದಿಂದ ಕಾಣಿರಿ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ತಿಲ ಹಾಗೂ ಎಳ್ಳೆಣ್ಣೆ ಯನ್ನು ಈಶ್ವರನಿಗೆ ಅರ್ಪಿಸಿ ಕಷ್ಟಕಾರ್ಪಣ್ಯ ಕಳೆದುಕೊಳ್ಳಿ.
ಮೀನ ರಾಶಿ ಅದ್ಭುತವಾದ ರಾಶಿ. ಗುರುವಿನ ಮನೆಯಾ ಗಿದ್ದು ಉತ್ತರಭಾದ್ರ, ರೇವತಿ ನಕ್ಷತ್ರಗಳ ಪುಂಜ ಅಲ್ಲೇ ಕೊನೆಗೊಂಡು ನಿಮ್ಮನ್ನು ಗುರುವು ಯಾವುದೇ ಸಮಯ ದಲ್ಲಿ ಕಾಪಾಡುತ್ತಾನೆ. ಗುರು 12ನೇ ಮನೆಗೆ ಬಂದಾಗ ತಂದೆ ತಾಯಿಯನ್ನು ಪೂಜಿಸಿದರೆ ಒಳ್ಳೆಯ ಫಲಗಳನ್ನು ಅನುಭವಿಸುವಿರಿ. ಆಲಸ್ಯ ಅಹಂಕಾರ ಬೇಡ. ಶಿವ ಪಾರ್ವತಿಯರನ್ನು ಪೂಜಿಸಿ. ಕುಬೇರ ಮಂತ್ರವನ್ನು ಜಪಿಸಿ.