ಈ ರಾಶಿಯವರನ್ನು ಯಾರೂ ಕಟ್ಟಿಹಾಕಲಾರರು, ಶುಭವೇ ನಡೆಯುತ್ತದೆ: ವಾರಭವಿಷ್ಯ

Vaara-Bhavishya
Published on
ಮೇಷ

ಆಂಗ್ಲ ಅಥವಾ ಪಂಚಾಂಗ ರೀತ್ಯಾ ಶನಿಯೇ ಸಂವತ್ಸರ ನಾಯಕ. 11ರಲ್ಲಿ ಗುರುವಿರುವುದರಿಂದ ಏಪ್ರಿಲ್​ವರೆಗೂ ಚೆನ್ನಾಗಿದ್ದು ಸಂಕಲ್ಪ ಕಾರ್ಯಗಳು ನಡೆಯುತ್ತವೆ. ದ್ವಿತೀಯ ರಾಹು 9ರ ಕೇತು ವಿಘ್ನಗಳನ್ನು ಉಂಟುಮಾಡಿದರೂ ಅದನ್ನು ಪರಿಹರಿಸಲು ಗುರುವೇ ಸಾಕು. ಅಂಗಾರಕನಿಗೆ ಸುಬ್ರಹ್ಮಣ್ಯನನ್ನು ದೃಢ ಭಕ್ತಿಯಿಂದ ಪೂಜಿಸಿ. ಎಲ್ಲ ಕಾರ್ಯಗಳು ಆಗುವವು.

ವೃಷಭ

ವೃಷಭ ರಾಶಿ ರಾಹುವಿಗೆ ಉಚ್ಚಸ್ಥಾನವೇ. ಅದು ಶುಕ್ರನ ಮನೆಯಾಗಿರುವುದರಿಂದ ಶುಕ್ರನಂತೆ ಫಲ ನೀಡಬೇಕು. ದಶಮ ಗುರು ಶನಿ ಮನೆಯಲ್ಲಿ ಇರುವುದರಿಂದ, ಶನಿಯು 10ರ ಸ್ವಕೇತ್ರದಲ್ಲಿ ಇರುವುದರಿಂದ ಎಲ್ಲ್ಲ ಕೆಲಸಗಳು ನಿಧಾನವಾದರೂ ನೀವು ಅಂದುಕೊಂಡ ಗುರಿಯನ್ನು ಮುಟ್ಟಬಹುದು. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಹಣದ ವ್ಯವಹಾರದಲ್ಲಿ ಜಾಣ್ಮೆಯಿರಲಿ. ದುರ್ಗೆಯನ್ನು ಷಣ್ಮುಖನನ್ನು ಪ್ರಾರ್ಥಿಸಿ.

ಮಿಥುನ

ಮಿಥುನ ರಾಶಿಗೆ ಬುಧನು ಅಧಿಪತಿಯಾಗಿದ್ದು, 9ರಲ್ಲಿ ಗುರುವು ಶುಭ ತಂದುಕೊಡುತ್ತಾನೆ. ಆದರೆ ಅಷ್ಟಮ ಶನಿಯಿಂದ ಪ್ರಯತ್ನಗಳು ಬಹಳಷ್ಟು ಬೇಕಾಗುತ್ತದೆ. ಲೋಕದ ಸೃಷ್ಟಿಕರ್ತ ದಶಾವತಾರಿ ಮಿಥುನಾಧಿಪತಿ ವಿಷ್ಣುವನ್ನು ಭಜಿಸಿ, ಪೂಜಿಸಿ. ದೇವರಿಗಾಗಿ ಮಾಡಿದ ಭಜನೆಯು ನಿಮ್ಮನ್ನು ಎಂದೂ ವಿಭಜನೆ ಮಾಡುವುದಿಲ್ಲ. ಅಂದುಕೊಂಡ ಕಾರ್ಯವು ನಿಶ್ಚಯವಾಗಿ ಈಡೇರುತ್ತದೆ. ನಾರಾಯಣ ಮಂತ್ರ ತಪ್ಪದೇ ಓದಿ.

ಕಟಕ

ಪುನರ್ವಸು ನಕ್ಷತ್ರದ ಒಂದು ಭಾಗವು ಕಟಕ ರಾಶಿಗೆ ಬಂದು, ಲಗ್ನದಲ್ಲೇ ದಶಾವತಾರದ ಶ್ರೇಷ್ಠ ಅವತಾರಿ ರಾಮಾವತಾರವಾಗಿ ಉದ್ಧರಿಸಿದ್ದಾನೆ. ರಾಮ ಪಟ್ಟಾಭಿಷಶಕ್ತನಾಗಿ ಪ್ರಜೆಗಳ ಸಂಕಷ್ಟ ಗಳನ್ನು ಕಳೆದಿದ್ದಾನೆ. ಹಾಗೆಯೇ ಅಷ್ಟಮ ಗುರು, ಶನಿ ಸಪ್ತಮ ದಲ್ಲಿರುವುದರಿಂದ ಶ್ರೀರಾಮನ ಪ್ರಾರ್ಥನೆಯೇ ನಿಮ್ಮನ್ನು ಎಲ್ಲ ವಿಘ್ನ ನೀಗಿಸಿ ಮನಸ್ಸಿಗೆ ಶಾಂತಿಯನ್ನು, ಮಾಡಿದ ಕೆಲಸಕ್ಕೆ ತೃಪ್ತಿಯನ್ನೂ ನೀಡುತ್ತಾನೆ. ಆರೋಗ್ಯಕ್ಕಾಗಿ ಶ್ರೀರಾಮ ಬಾಲಕಾಂಡ ಸರ್ಗವನ್ನು ಪಾರಾಯಣ ಮಾಡಿರಿ.

ಸಿಂಹ

ಸಿಂಹವು ಮಲಗುವ ಪ್ರಾಣಿಯಲ್ಲ. ಎಚ್ಚರದಿಂದಿದ್ದು ಸದ್ದಾದ ಕಡೆ ಓಡುತ್ತದೆ. ಸದಾ ಎಚ್ಚರದಲ್ಲಿರುವ ಶನಿಯು 6ರಲ್ಲಿ ಕುಳಿತು ನಿಮಗೆ ಉತ್ತಮ ಮಾರ್ಗ, ಧನವನ್ನು ನೀಡುತ್ತಾನೆ. ಅದನ್ನು ಕಾಪಾಡಿಕೊಂಡು, ಗುರುವು 7ರಲ್ಲಿದ್ದಾನೆ. ಬೇಕಾದ್ದನ್ನು ಕೊಟ್ಟು ನಿಮ್ಮನ್ನು ಸಂತೃಪ್ತಿಗೊಳಿಸುತ್ತಾನೆ. ಸೂರ್ಯ ಅಷ್ಟೋತ್ತರ, ಸೂರ್ಯಾಷ್ಟಕ ಪಠಿಸಿ. 2022 ಇಸವಿಯು ಅತ್ಯಂತ ಶುಭದಾಯಕ.

ಕನ್ಯಾ

ಕಷ್ಟ ಬಂದರೆ ಧೃತಿಗೆಡಬಾರದು. ನಷ್ಟವಾದರೆ ಹೆದರಬಾರದು. ಆರೋಗ್ಯ ಮತ್ತು ಆಯಸ್ಸನ್ನು ಎಂದೂ ಬಿಡಬಾರದು. ಇದೇ ನಿಮ್ಮ ಧ್ಯೇಯವಾಗಿರಬೇಕು. ಅಲ್ಪ ಸಮಯದಲ್ಲಿ 5ರ ಶನಿ, ಷಷ್ಠ ಗುರು ಚಲನವಲನ ಮಾಡಿ ಕಳೆದುಹೋದ ಕಹಿ ಘಟನೆ ಮರೆಸಿ ಸುಖವನ್ನು ನೀಡುತ್ತಾರೆ. ವಿಷ್ಣುಪುರಾಣ ಪಾರಾಯಣ ಮಾಡಿ. ಪುಣ್ಯಸಂಪಾದನೆಯನ್ನು ಮಾಡಿಕೊಂಡಲ್ಲಿ ಮುಂದೆ ನಿಮಗೆ ಒಳ್ಳೆಯ ಕಾಲ. ತಾತ್ಕಾಲಿಕ ಸುಖ ದೊರಕುವುದು.

ತುಲಾ

ಬೇಡಿದ ವರವನ್ನೇ ಕೊಡುವ ಗ್ರಹಗಳು ನಿಮಗೆ ಇವೆ. ಈಗ ತತ್ಕಾಲದಲ್ಲಿ ಗುರು 5ರಲ್ಲಿ ಇದ್ದು, ಎಲ್ಲವನ್ನೂ ನೀಡುತ್ತಾನೆ. ನೀಡಿದ ದೇವನಿಗೆ ನಿಮ್ಮ ನಮನವಿರಲಿ. ಅದರಂತೆ ಅನಸೂಯಾ ನಂದನ ಚರಿತ್ರೆಯನ್ನು ತಪ್ಪದೇ ಓದಿ. ದುರ್ಗೆಯನ್ನು ಪೂಜಿಸಿದರೆ ಚತುರ್ಥ ಶನಿಯು ಕೊಡಬಹುದಾದ ಸಂಕಷ್ಟದಿಂದ ಅವಳೇ ತಡೆಯುತ್ತಾಳೆ. ದುರ್ಗಾಸಹಸ್ರನಾಮ ಪಾರಾಯಣ ಮಾಡಲೇಬೇಕು. ಮಂಗಳ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತವೆ.

ವೃಶ್ಚಿಕ

ದೈವವನ್ನು ಬಿಟ್ಟರೆ ನಿಮ್ಮನ್ನು ನಡೆಸುವವರು ಜನ್ಮ ಕೊಟ್ಟ ಮಾತಾಪಿತರು. ತಂದೆ ತಾಯಿಯನ್ನು ಪೂಜಿಸಿ, ಇಷ್ಟಾರ್ಥ ನೆರವೇರುವುದು. ಕ್ಲೇಶಗಳು, ಮನಸ್ಸಿಗೆ ನೋವುಂಟಾದಾಗ ನರಸಿಂಹನೊಬ್ಬನೇ ಪರಿಹಾರವನ್ನು ಕೊಡುವನು. ನರಸಿಂಹನ ಅಷ್ಟೋತ್ತರ, ಮೂಲಮಂತ್ರ ಜಪಿಸಿ ಕಷ್ಟ-ನಷ್ಟ ದೂರವಾಗಿ ನಿಮಗೆ ಎಣಿಸಲಾರದಷ್ಟು ಧನವನ್ನು ಕಾಣುತ್ತೀರ, ಸುಖವಾಗಿರುತ್ತೀರ. ತಾಳ್ಮೆ ಇರಲಿ ಮತ್ತು ದೈವ ನಂಬಿಕೆ ದೃಢವಾಗಿರಲಿ.

ಧನು

ಏಳೂವರೆ ವರ್ಷದ ಶನಿಯ ಅಂತ್ಯಕ್ಕೆ ಬಂದಿದ್ದೀರ. ನಿಮ್ಮ ಆಲೋಚನೆಯನ್ನು ಕಟ್ಟಿಹಾಕಿ. ಇಲ್ಲದಿದ್ದರೆ ಮಾತಾಡುವ ಸಮಯದಲ್ಲಿ ವಾಗ್ದೋಷ ಉಂಟಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಗುರು ರಾಶಿಯಲ್ಲಿ ಹುಟ್ಟಿದ ನೀವು ದೈವವನ್ನು, ಮಾತಾ-ಪಿತರನ್ನು ಮರೆತರೆ ಶೂನ್ಯವಾಗುತ್ತದೆ. ಗುರು ದತ್ತಾತ್ರೇಯನನ್ನು ಅನನ್ಯವಾಗಿ ಪ್ರಾರ್ಥಿಸಿ. ರಾಹುವಿಗೆ ಸ್ಕಂದನ ದರ್ಶನ ಮಾಡಿ. ತಪ್ಪದೆ ಇಷ್ಟಾರ್ಥ ಈಡೇರಿಸುವ ಮಂತ್ರೋಪಾಸನೆ ಮಾಡಿರಿ.

ಮಕರ

14ನೇ ಜನವರಿ ಸಂಕ್ರಮಣವು ಹತ್ತಿರವಿದ್ದು, ಮಕರ ರಾಶಿಗೆ ದ್ವಾದಶದಲ್ಲಿ ಸೂರ್ಯನು ಕೂತಿದ್ದಾನೆ. ತಾಪವೂ ನೀಡಿ, ತಪ್ಪನ್ನೂ ಮಾಡಿಸುತ್ತಾನೆ. ಮಾತು ಹಿತವಾಗಿರಲಿ. ಕುಂಭಕ್ಕೆ ಶನಿ ಬಂದಾಗ ನಿಮ್ಮನ್ನು ಯಾರೂ ಕಟ್ಟಿಹಾಕಲಾರರು. ಶುಭವೇ ನಡೆಯುತ್ತದೆ. ಶನಿ ಅಷ್ಟೋತ್ತರ ಪಠಿಸಿ.

ಕುಂಭ

ಶನಿಯು ದ್ವಾದಶದಲ್ಲಿ, ಗುರುವು ಶನಿಮನೆಯಲ್ಲಿ ದ್ವಾದಶಕ್ಕೆ ಬಂದು ಸೇರಲು ರವಿಯು ಹತ್ತಿರ ದಲ್ಲಿದ್ದಾನೆ. ಇನ್ನು 2 ವಾರಗಳ ಕಾಲ ಯಾವ ಕೊರತೆ ಇರುವುದಿಲ್ಲ. ಮಕರಕ್ಕೆ ಸೂರ್ಯ ಬಂದಾಗ, ಅನಾರೋಗ್ಯ, ಪಿತ್ತ, ಕಫ ಹೆಚ್ಚಾಗಿ ಶರೀರಕ್ಕೆ ತೊಂದರೆ ಕೊಡುವ ಸೂಚನೆ ಇದೆ. ಲಗ್ನದಲ್ಲಿ ಗುರುವು ನಿಮ್ಮನ್ನು ಉಪವಾಸ ಇಟ್ಟು ಚಿಂತೆ ಕೊಟ್ಟಿರುವುದಿಲ್ಲ. ಕಾರ್ತಿಕೇಯ ಸ್ತೋತ್ರ ಪಾರಾಯಣ ಮಾಡಿ. ಸಾಂಬಸದಾಶಿವನನ್ನು ಪೂಜಿಸಿ.

ಮೀನ

ದ್ವಾದಶದಲ್ಲಿ ಗುರುವಿರುವುದರಿಂದ ನೀವು ದೇವರ ಆಶ್ರಯ ಬೇಡಲೇಬೇಕು. ಹನ್ನೊಂದರ ಶನಿ ಎಲ್ಲವನ್ನು ಕೊಟ್ಟರೂ ಮನಶಾಂತಿಯೊಂದನ್ನು ಬಿಟ್ಟು ಮನೋಕ್ಲೇಶದಿಂದ ಆರೋಗ್ಯದಲ್ಲಿ ಹಾನಿಯುಂಟು ಮಾಡುವುದು. ಸಂಸಾರದ ವಿಚಾರದಲ್ಲಿ ಯಾವ ಯಡವಟ್ಟು ಮಾಡಿಕೊಳ್ಳದಿರಿ. ಯಾರೊಂದಿಗೂ ಅನಗತ್ಯ ಚರ್ಚೆಯನ್ನು ಮಾಡಿದಿರಿ. ಸೋಮವಾರ ಶಿವನಿಗೆ ಮಾನಸ ಪೂಜೆ ಮಾಡಿ, ಸಂತೃಪ್ತಿ ಪಡಿಸಿ. ಹನ್ನೊಂದನೇ ಮನೆಯ ಶನಿಯು ಸಮಯವನ್ನು ಹಾಳು ಮಾಡುವುದಿಲ್ಲ. ಒಳ್ಳೆಯದನ್ನಂತೂ ಹಾಳುಮಾಡುವುದೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net