

ಮೇಷ: ಸೂರ್ಯನು 14ನೇ ತಾರೀಕು ವೃಷಭಕ್ಕೆ ಹೋಗಿ ಗುರುವು ಮಿಥುನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಗುರು 3ನೇ ಮನೆಯಲ್ಲಿ ಇರುವುದರಿಂದ ಗುರು ಬಲವು ಕಡಿಮೆಯಾಗಿದ್ದು ದೇವತೆಗಳೇ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ದ್ವಾದಶದಲ್ಲಿ ಶನಿ ಕುಳಿತಿದ್ದು ಸಾಡೇಸಾತಿ ಆರಂಭ ಆಗಿದೆ. ದೈವಕ್ಕೆ ಶರಣು ಹೋದರೆ, ಲಗ್ನಾಧಿಪತಿ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದರೆ ನಿಮ್ಮನ್ನು ಕಾಪಾಡು ತ್ತಾನೆ. ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಆಶೀರ್ವಾದ ಪಡೆದು ನಿಮ್ಮ ಗುರುಗಳ ಮಾರ್ಗದರ್ಶನದಂತೆ ನಡೆಯಿರಿ.
ವೃಷಭ: ದ್ವಿತೀಯದಲ್ಲಿ ಗುರು ಅತ್ಯಧಿಕ ಬಲವಿದ್ದು, ಏಕಾದಶದಲ್ಲಿ ಶನಿ ಲಾಭದಾಯಕ ಆಗಿರುವುದು ಶುಭವನ್ನು ಸೂಚಿಸುತ್ತದೆ. 18ನೇ ತಾರೀಕು ಕೇತು ಸಿಂಹಕ್ಕೆ ಬಂದು ದಶಮ ರಾಹು ಚತುರ್ಥ ಇದ್ದರೂ ಗುರುವು ನಿಮ್ಮನ್ನು ರಕ್ಷಿಸುತ್ತಿದ್ದಾನೆ. ಗುರುಬಲ ಪರಿಪೂರ್ಣವಾಗಿದೆ. ಎಲ್ಲ ವಿಚಾರದಲ್ಲಿ ಯಶಸ್ಸು ಕೀರ್ತಿ ಕೊಟ್ಟು ಜೀವನಕ್ಕೆ ಬೇಕಾದ್ದನ್ನು ಕೂಡಿ ಕಳೆದು ಭಾಗಿಸಿ ಗುಣಿಸಿ ಭಾಗ್ಯವನ್ನು ಕೊಡುತ್ತಾನೆ.
ಮಿಥುನ: ಲಗ್ನದಲ್ಲಿ ಗುರು ಇರುವುದರಿಂದ ಸಣ್ಣ ಪುಟ್ಟ ವಿಚಾರದಲ್ಲಿ ದಾರಿ ಕಾಣದದಂತಾದರೂ ಶನಿಯು ದಶಮದಲ್ಲಿ ಇರುವುದರಿಂದ ನಿಮಗೆ ಸಮಾಧಾನ ಚಿತ್ತವನ್ನು ಕೊಟ್ಟು ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವಂತೆ ಮಾಡಲು ದಕ್ಷಿಣಾಮೂರ್ತಿ ಗುರು ದತ್ತಾತ್ರೇಯನನ್ನು ಏಕಕಾಲದಲ್ಲಿ ಪ್ರಾರ್ಥನೆ ಮಾಡಿ.
ಕಟಕ: ಗುರು ದ್ವಾದಶದಲ್ಲಿ ಇದ್ದಾನೆ. ಅ. 18ರವರೆಗೆ ನಿಮ್ಮ ಹೆಜ್ಜೆಗಳನ್ನು ನೋಡಿ ಹಾಕಬೇಕು. ಹನ್ನೆರಡರ ಗುರುವಿನ ಎಚ್ಚರ ಇರಬೇಕು. ಲಗ್ನದಲ್ಲಿ ಅಂಗಾರಕ ಇರುವುದರಿಂದ ಯಾವುದೇ ವಿಚಾರಕ್ಕೂ ಆತುರ ಮಾಡಬೇಡಿ. 9ರ ಶನಿಯು ದೇವತಾ ಪ್ರಾರ್ಥನೆಯಿಂದ ಶುಭಾಶುಭ ನೀಡುತ್ತಾನೆ. ಶಂಕುಲ ನಾಗ ದೇವರನ್ನು ಪ್ರಾರ್ಥಿಸಿ, ಪೂಜಿಸಿ.
ಸಿಂಹ: ಏಕಾದಶ ಗುರುವು ಧೈರ್ಯ ಕೀರ್ತಿ ಲಾಭ ಕೊಡುತ್ತಾರೆ. ರಾಹು ಕೇತು ಸ್ಥಾನಪಲ್ಲಟದಿಂದ ಯಾವುದೇ ಕೆಲಸ ಮಾಡಿದರೂ ಹತ್ತು ಸಲ ಯೋಚಿಸಿ ಮುಂದೆ ಸಾಗಬೇಕು. ಸಿಂಹದಲ್ಲಿ ಕೇತು ಸ್ಥಿತನಾಗಿದ್ದರಿಂದ ಗಣಪತಿಯನ್ನು ಪೂಜಿಸಿ. ದೈವ ಶಕ್ತಿಯಿಂದ ಅದ್ಭುತ ನಡೆದು ನಡೆದು ಜೇಬು ತುಂಬುತ್ತದೆ. ಮನಸ್ಸಿಗೆ ಸುಖವನ್ನು ನೀಡುತ್ತದೆ.
ಕನ್ಯಾ: ದಶಮದಲ್ಲಿ ಗುರು ಇದ್ದಾನೆ. ಸಪ್ತಮ ಶನಿ ಇರುವುದರಿಂದ ಚಿತ್ತ, ಆರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯೇ. ಅಣ್ಣ ತಮ್ಮಂದಿರೊಂದಿಗೆ ಕಲಹ ಮಾಡಿಕೊಂಡು ನೆಮ್ಮದಿ ಕೆಡಿಸಿಕೊಳ್ಳಬೇಡಿ. ಧರ್ಮ ವಿಚಾರಕ್ಕೆ ನಿಮ್ಮ ಕೈ ಮುಂದೆ ಇರಲಿ. ದೇವರಿಗೆ ಶರಣಾದರೆ ನಿಮ್ಮ ಜೀವನ ನಡೆಸಲು ದೈವವೇ ಸಹಕಾರ ಕೊಡುತ್ತದೆ.
ತುಲಾ: ಮನುಷ್ಯನ ತೂಕ ಜಾಸ್ತಿಯಾದರೆ ನಡೆಯಲು ಬೇಕು. ವ್ಯಾಯಾಮ ಮಾಡಲೇಬೇಕು. ದೈವ ಬಲ ಎಂಬ ತೂಕವೇ ನಿಮ್ಮ ಕೈಲಿರುವಾಗ ಯಾರು ತಾನೆ ನಿಮ್ಮನ್ನು ನಿಲ್ಲಿಸುವವರು? ಗಂಡ, ಮಕ್ಕಳು, ಮಿತ್ರರಿರಲಿ ನಿಮಗೆ ಶರಣು ಬಂದರೆ ಮಾತ್ರವೇ ನಿಮ್ಮ ಜೊತೆ ಅವರ ಜೀವನ ಮುಂದೆ ಸಾಗುತ್ತದೆ. ದುರ್ಗೆಯನ್ನು ಪೂಜಿಸಿ. ಸದಾ ಧ್ಯಾನಿಸಿ.
ವೃಶ್ಚಿಕ: 9ರಲ್ಲಿ ಅಂಗಾರಕನು ಚಂದ್ರನ ಮನೆ ಸೇರಿದ್ದಾರೆ. ದುಡ್ಡೇ ದೊಡ್ಡಪ್ಪ ಎಂಬ ನಾಣ್ಣುಡಿ ಇದೆ. ಅದರಂತೆ ನೀವು ಸುಬ್ರಹ್ಮಣ್ಯನನ್ನು ಅನಂತವಾಗಿ ಪೂಜಿಸಿದರೆ ಹಣವನ್ನು ಕಾಣಬಹುದು. ಅಷ್ಟಮದಲ್ಲಿ ಗುರು ಇದ್ದಾನೆ. ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಧನ್ವಂತರಿಯನ್ನು ಪೂಜಿಸಿ.
ಧನುಸ್ಸು: ಸಪ್ತಮ ಗುರು ಚತುರ್ಥದಲ್ಲಿ ಶನಿ. ಮನೆಯಲ್ಲಿ ಅಷ್ಟಾಂಗ ಸಿದ್ಧಿ ಯೋಗ ಬೇಕಿಲ್ಲ. ಗುರು ಕೃಪೆ ಒಂದಿದ್ದ್ದೆ ಏನನ್ನು ಬೇಕಾದರೂ ಸಾಧಿಸಬಹುದು. ಗುರುವೇ ಶಿವನು ವಿಷ್ಣುವು ಜನ್ಮ ಕೊಟ್ಟ ದಾತರೆ ಪಾರ್ವತಿ ಪರಮೇಶ್ವರ. ಯಾರನ್ನೂ ನಿಂದಿಸಬಾರದು. ಜನ್ಮ ಕೊಟ್ಟವರನ್ನು ಪ್ರಾತಃಕಾಲದಲ್ಲಿ ಸ್ಮರಣೆ ಮಾಡಿದರೆ ನಿಮ್ಮ ಕಾಟ ಓಡಿ ಹೋಗಿ ಸುಖವಾದ ಹೆಜ್ಜೆ ಇಟ್ಟು ಬೇಕಾದ್ದನ್ನು ಗಳಿಸಬಹುದು.
ಮಕರ: ತೃತೀಯ ಶನಿ ಗುರು ಮನೆಯಲ್ಲಿ ಇದ್ದಾನೆ. ಗುರು ಷಷ್ಟಕ್ಕೆ ಬಂದಿದ್ದಾನೆ. ಮನಸ್ಸನ್ನು ಹಾಳು ಮಾಡಿಕೊಳ್ಳದೆ ಶನಿ ಕೊಡುವ ಸಂಪತ್ತನ್ನು ದೈವ ಕೃಪೆಯಿಂದ ಕಾಪಾಡಿಕೊಂಡು ಹೋಗಿ. ಗುರು ನರಸಿಂಹನ ಪೂಜೆ ಮರೆಯದಿರಿ. ನರಸಿಂಹ ಅಷ್ಟೋತ್ತರ ಪಠಿಸಿ. ನಿಮ್ಮ ಜೀವನ ಮತ್ತಷ್ಟು ಶೋಭಾಯಮಾನವಾಗಿರಲಿ. ಸಾಧ್ಯವಾದಲ್ಲಿ ಸಿಂಹಾಚಲಕ್ಕೆ ಹೋಗಿ ಗುರು ನರಸಿಂಹನನ್ನು ಪ್ರಾರ್ಥಿಸಿ ಬನ್ನಿ.
ಕುಂಭ: ಈ ರಾಶಿಯಲ್ಲಿ ರಾಹು ಏಳರಲ್ಲಿ ಕೇತು ನಿಷ್ಠೆ ತಪಸ್ಸು ಇದ್ದ ಕಡೆ ಶಾಂತಿ ನೆಲೆಸುವುದು. ಮನಸ್ಸನ್ನು ಕೆಡಿಸಿಕೊಳ್ಳಬೇಡಿ. ದುಷ್ಟರ ಕಂಡರೆ ದೂರವಿರಿ. ನಿಮ್ಮ ಜೀವನವನ್ನು ಒಳ್ಳೆಯ ರೀತಿಯಿಂದ ಸಾಗಿಸಿಕೊಂಡು ಹೋಗುವ ಸಮಯ ಇದು. ಸತ್ಯ ಗಣಪತಿ ವ್ರತವನ್ನು ಮಾಡಿ ವಿಶೇಷ ಫಲ ಪಡೆಯಬಹುದು.
ಮೀನ: ಈ ರಾಶಿಯಲ್ಲಿ ಶನಿ ಬಂದು ಶುಕ್ರನ ಸಂಯೋಜನೆಯಲ್ಲಿ ಇದ್ದಾನೆ. ಗುರು ಚತುರ್ಥದಲ್ಲಿ ಇದ್ದಾನೆ. ಕುಲದೇವರನ್ನು ಪೂಜಿಸಿದರೆ ಶನಿ ತಾಪ ಕಡಿಮೆ ಮಾಡುತ್ತಾನೆ. ಗುರು ರಾಘವೇಂದ್ರನನ್ನು ಮಂತ್ರಾಲಯದಲ್ಲಿ ದರ್ಶಿಸಿದರೆ ಶ್ರೀರಾಮ ನಿಮ್ಮನ್ನು ಪಾಪಕೂಪದಿಂದ ಹೊರತಂದು ತಿಳಿವಳಿಕೆ ಕೊಟ್ಟು ನಿಮಗೆ ಸಾಕ್ಷಾತ್ಕಾರವಾಗಿ ನಿಮ್ಮ ಹಣೆಬರಹವನ್ನು ಶುಭಾಕ್ಷರವಾಗಿ ಬರೆಯುತ್ತಾನೆ. ರಾಮನ ಉಪಾಸನೆ ಇರಲಿ, ರಾಮ ಅಷ್ಟೋತ್ತರ ಸಾಯಂಕಾಲದಲ್ಲಿ ಮಾಡಲೇಬೇಕು.