

ವೃಷಭ: ಶುದ್ಧಾತ್ಮನಿಗೆ ಪರಮಾತ್ಮನ ಅನುಗ್ರಹ ಇದ್ದರೆ ಆಕಾಶವನ್ನೂ ಮುಟ್ಟಬಹುದು. ಸುಖವನ್ನು ಅನುಭವಿಸಬಹುದು. ವೃಷಭ ರಾಶಿಗೆ ಜನ್ಮದಲ್ಲಿ ಗುರು ಇದ್ದು ಅಭ್ಯುದಯಕ್ಕೆ ಸಕಲ ಪ್ರಯತ್ನ ಹಾಗೂ ಗುರುವಿನ ಅನುಗ್ರಹ ಅಗತ್ಯ. ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ಉದ್ವೇಗ ಬೇಡ. ಮನಸ್ಸಿನ ಚಂಚಲತೆ ಕಟ್ಟಿ ಹಾಕಿ. ಕೆಲಸಮಾಡಿಕೊಳ್ಳಲು ಅನಂತವಾಗಿ ಅನಂತ ಲಕ್ಷ್ಮಿಯನ್ನು ಪೂಜಿಸಿ.
ಮಿಥುನ: ಮಿಥುನ ರಾಶಿಗೆ ದ್ವಾದಶದಲ್ಲಿ ಗುರು ಮುಂದುವರಿದಿದ್ದು ಏಕಾದಶದ ರವಿಯಿಂದ ಕಾರ್ಯ ಗಳಲ್ಲಿ ಜಯವನ್ನು ಕಂಡುಕೊಳ್ಳಬಹುದು. ಆರೋಗ್ಯದ ಬಗ್ಗೆ ನಿಗಾ ಇರಲಿ. ಧನ್ವಂತರಿಯನ್ನು ಪೂಜಿಸಿದರೆ ಆರೋಗ್ಯ ಲಭಿಸುತ್ತದೆ. ದೈನಂದಿನ ಕೆಲಸ ಮಾಡಿಕೊಳ್ಳಬಹುದು. ವಿಷ್ಣು ಅಷ್ಟೋತ್ತರ ಪಾರಾಯಣ ಮಾಡಿ.
ಕಟಕ: ಈ ರಾಶಿಗೆ 9ರಲ್ಲಿ ಶನಿ, ಏಕಾದಶದಲ್ಲಿ ಗುರು ಇರುವುದರಿಂದ ಗುರು ಬಲವಿದೆ. ‘ಸಕಲ ಗ್ರಹ ಬಲ ನೀನೇ’ ಎನ್ನುವ ಆತ್ಮ ಸಿಂಹಾಸನದಲ್ಲಿ ದೇವರೇ ಕುಳಿತಿದ್ದಾನೆ. ಸಾಂಬಸದಾಶಿವನನ್ನು ಪೂಜಿಸಿ. ಮನುಷ್ಯನಿಗೆ ನಿತ್ಯ ಪ್ರಾರ್ಥನೆ ಅಗತ್ಯ. ತ್ರಿಕಾಲದಲ್ಲಿ ಗಾಯತ್ರೀ ಮಂತ್ರ ಜಪ ಮಾಡಿರಿ.
ಸಿಂಹ: ಮೇ 13ರಿಂದ ಗುರು ಬಲ ಬರುತ್ತದೆ. ಆದರೆ ಬುದ್ಧಿ ಬಲದಲ್ಲಿ ಏನೇ ಕೆಲಸವನ್ನು ಮಾಡಿಕೊಳ್ಳ ಬಹುದು. ಸೂರ್ಯನೇ ಅಧಿಪತ್ಯ ಹೊಂದಿ ರುವ ಸಿಂಹ ರಾಶಿಗೆ ಇರುವಷ್ಟು ದೈವ ಬಲ ಬೇರೆ ಯಾವ ರಾಶಿಗೂ ಇರುವುದಿಲ್ಲ. ಸೂರ್ಯ ಪ್ರಾರ್ಥನೆ ಮಾಡಿರಿ. ವಾಕ್ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಜ್ಞಾನವನ್ನು ವೃದ್ಧಿಸಿಕೊಳ್ಳಿ.
ಕನ್ಯಾ: ಸಪ್ತಮದಲ್ಲಿ ಶನಿ ಇದ್ದು, ಈವರೆಗೂ ಇದ್ದ ಸುಖಮಯವಾದ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಸಮಯ. ಮನುಷ್ಯನಿಗೆ ಕಷ್ಟದ ಸಮಯ ದಾಟಲು ಪ್ರಾರ್ಥನೆ ಒಂದೇ ದಾರಿ. ಕೆಟ್ಟ ಮಾರ್ಗದಲ್ಲಿ ನಡೆದರೆ ದುಃಖ ಅನುಭವಿಸಬೇಕಾಗುತ್ತದೆ. ಮೇ 13ರವರೆಗೂ ಗುರುವಿನ ಕರುಣೆ ಇರುವುದರಿಂದ ಸ್ವಲ್ಪಮಟ್ಟಿಗೆ ತೊಂದರೆಯಿಂದ ಪಾರಾಗಬಹುದು.
ತುಲಾ: ಜೀವನದ ಅತ್ಯುತ್ತಮ ಸಮಯ. ಮುಟ್ಟಿದ್ದೆಲ್ಲಾ ಚಿನ್ನವೇ, ಬಾಗಿಲು ತಟ್ಟಿದಲ್ಲೆಲ್ಲ ದೈವವೇ, ನಡೆಯುವುದೆಲ್ಲ ಮಂಗಳ ಕಾರ್ಯಗಳೇ. ನಿಮಗೆ ಏನೇನು ಅವಶ್ಯಕತೆ ಇದೆಯೋ ಭಗವಂತನೇ ಅದನ್ನು ಕೊಡುತ್ತಾನೆ. ಸುಖವನ್ನು ಪಡೆಯಬಹುದು. ಚಂಡಿಕೆಯನ್ನು ದುರ್ಗಾ ರೂಪದಲ್ಲಿ ಪೂಜಿಸಿ.
ವೃಶ್ಚಿಕ: ಪಂಚಮದಲ್ಲಿ ಶನಿ ಸಪ್ತಮದಲ್ಲಿ ಗುರುವಿದ್ದರೂ ಅತ್ಯಲ್ಪ ಭಾಗದ ಗುರು ಬಲ ಇರುತ್ತದೆ. ರಾಶ್ಯಾಧಿಪತಿ ಅಂಗಾರಕನು ನಿಮ್ಮ ಪ್ರಾರ್ಥನೆ ಮಾತ್ರದಿಂದಲೇ ರಕ್ಷಿಸುವನು. ಸುಬ್ರಹ್ಮಣ್ಯನ ಪ್ರಾರ್ಥನೆಯನ್ನು ಬಿಟ್ಟರೆ ಜ್ಞಾನ ಶಕ್ತಿ, ಕ್ರಿಯಾಶಕ್ತಿ, ಇಚ್ಛಾ ಶಕ್ತಿಯು ದೂರವಾಗುತ್ತದೆ. ಎಚ್ಚರಿಕೆಯಿಂದ ಸಾಗಿ. ನಾಗದೇವರನ್ನು ಪೂಜಿಸಿ. ಸರಿಯಾದ ದಾರಿಯನ್ನು ಕಂಡುಕೊಳ್ಳಿ.
ಧನುಸ್ಸು: ಗುರುವು ಮಿಥುನ ರಾಶಿ ತಲುಪುವವರೆಗೂ ಆತುರದ ನಿರ್ಧಾರ ಬೇಡ. ತಾಳ್ಮೆ ಇರಲಿ. ತಕ್ಷಣ ಎಲ್ಲವೂ ಸಿಗಬೇಕೆಂಬ ಹಂಬಲ ಖಂಡಿತ ಬೇಡ. ದಾನದಲ್ಲಿ ಅತ್ಯಂತ ಶ್ರೇಷ್ಠ ದಾನ ವಿದ್ಯಾದಾನ ಹಾಗೂ ಅನ್ನದಾನ. ಮನುಷ್ಯ ತನ್ನ ಸವಾಲು ಎದುರಿಸಲು ನಿಧಾನವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಕೆಲಸ ಮಾಡಬೇಕು. ಕಾಡು ಮೇಡು ಓಡಾಡಿದರೂ ರಾಮನ ಪಾದದ ಗುರುತು ಯಾರಿಗೂ ಸಿಕ್ಕಿಲ್ಲ ಎಂಬುದು ನೆನಪಿರಲಿ.
ಮಕರ: ಸುಖ ಹಾಗು ಸಂತಸ ಪರ್ಯಾಯ ಶಬ್ದಗಳು. ಸುಖವಿದ್ದರೆ ಸಂತಸ. ಸಂತಸ ಇದ್ದರೆ ತೃಪ್ತಿ. ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ದು ಎಲ್ಲವನ್ನೂ ನೀಡಿ, ಒಳ್ಳೆಯ ಮಾರ್ಗವನ್ನು, ಸ್ಥಿರವಾದ ಶಾಂತಿಯನ್ನು ಕರುಣಿಸುವ ಗುರು ಪಂಚಮದಲ್ಲಿ ಇದ್ದಾನೆ. ಗುರು ವಚನ ಮೀರದಿರಿ. ಗುರುವನ್ನು ನಂಬಿ. ಗುರು ಅಷ್ಟೋತ್ತರ ಪಾರಾಯಣ ಮಾಡಿ.
ಕುಂಭ: ಕುಂಭಾಧಿಪತಿ ಶನಿ 2ರಲ್ಲಿ ಇದ್ದು, ಮನೆಯಲ್ಲಿ ಉದ್ವೇಗ , ಕಾರಣ ಇಲ್ಲದೆ ಮನಸ್ತಾಪ, ಜಗಳ ಉಂಟಾಗಬಹುದು. ಅದನ್ನು ತಡೆಯಲು ಅಪರಿಮಿತ ಸಹನೆ ಇರಬೇಕು. ಅದಕ್ಕೆ ತಕ್ಕಂತೆ ಮೌನವನ್ನು ಆಶ್ರಯಿಸಿದರೆ ಜಗಳವೂ ಇಲ್ಲ, ಏನನ್ನೂ ಕಳೆದು ಕೊಳ್ಳುವುದೂ ಇಲ್ಲ. ಎಚ್ಚರಿಕೆಯಿಂದ ಸಾಗಿ. ಶನಿಯು ಗುರು ಮನೆಯಲ್ಲಿ ಇದ್ದರೂ ಯೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳಬಾರದು . ಶನಿಯ ಪ್ರಾರ್ಥನೆ, ಶಿವನ ಪೂಜೆ ಇರಲಿ.
ಮೀನ: ಮೀನ ರಾಶಿಯವರಿಗೆ ಶನಿ ರಾಹು ಏಕಕಾಲದಲ್ಲಿ ರಾಶಿಯಲ್ಲಿದ್ದು, ಗೊಂದಲ ಭೀತಿ ಮನಸ್ಸಿಗೆ ಜಿಗುಪ್ಸೆ. ಭಯವು ಮೂಡುತ್ತದೆ. ಗುರುವು ತೃತೀಯದಲ್ಲಿ ಇರುವುದರಿಂದ ಲೋಕಕ್ಕೆ ಗುರುವಾದ ನಾರಾಯಣನನ್ನು ಪೂಜಿಸಿ. ನಾರಾಯಣನೇ ನರನನ್ನು ಕಾಪಾಡುವವ. ಹರಿಯನ್ನು ಧ್ಯಾನಿಸಿ. ನಿಮ್ಮ ಜೀವನವು ಅನ್ಯ ಮಾರ್ಗದಲ್ಲಿ ಹೋಗದಂತೆ ಕಾಪಾಡುತ್ತಾನೆ.