

ವೃಷಭ: ವೃಷಭ ರಾಶ್ಯಾಧಿಪತಿ ಶುಕ್ರನು ರಾಶಿಯಲ್ಲೇ ಇರುವುದರಿಂದ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ವೃಥಾ ಖರ್ಚು ಜಾಸ್ತಿಯಾಗಿ ಪ್ರಯೋಜನಕಾರಿಯಾಗುವುದಿಲ್ಲ. ಬಿರುಗಾಳಿ ಬೀಸಿದರೂ ನಿಮ್ಮನ್ನು ನೀವು ದೈವಶಕ್ತಿಯಿಂದ ಕಾಪಾಡಿಕೊಳ್ಳುವ ಸಮಯವು ಬಂದಿದೆ. ಲಕ್ಷ್ಮೀ ನಾರಾಯಣನನ್ನು ಪೂಜಿಸಿ.
ಮಿಥುನ: ರವಿ, ಬುಧ, ಗುರು ಒಂದೇ ಮನೆಯಲ್ಲಿ ಇರುವುದರಿಂದ ರವಿ ಸಂಯೋಗದ ಫಲವು ಇರುತ್ತದೆ. ಯಾವ ಶುಭಫಲ ಇರಬೇಕಾದರೂ ಪೂರ್ವ ಪುಣ್ಯ, ದೈವೀ ಸಂಪತ್ತು ನಮ್ಮನ್ನು ಕಾಪಾಡಬೇಕು. ಈ ಸಮಯದಲ್ಲಿ ಸತ್ಯನಾರಾಯಣನನ್ನು ಪೂಜಿಸುವುದು ಅತ್ಯಂತ ಸೂಕ್ತವಾಗಿರುತ್ತದೆ.
ಕಟಕ: ಕಟಕ ರಾಶಿಯವರಿಗೆ ದ್ವಾದಶದಲ್ಲಿ ಮೂರು ಗ್ರಹಗಳು ಇರುವುದು, ದ್ವಿತೀಯದಲ್ಲಿ ಕುಜ -ಕೇತುವಿನಿಂದಾಗಿ ಕೆಲವು ಗೊಂದಲಗಳನ್ನು, ಮನಸ್ಸಿಗೆ ದುಃಖವನ್ನು ಉಂಟುಮಾಡುವ ಸಮಯವಾಗಿರುತ್ತದೆ. ದುಃಖ ದೂರವಾಗಲು ಪ್ರಸನ್ನ ದುರ್ಗೆಯನ್ನು ಪೂಜಿಸಿ. ಚಂದ್ರಾಧಿಪತ್ಯ ಇರುವುದರಿಂದ ಶಿವನನ್ನು ಅಭಿಷೇಕ, ಆರತಿಯಿಂದ ಪ್ರಸನ್ನಗೊಳಿಸಿದರೆ ಬೇಕಾದ್ದನ್ನು ಪಡೆಯಬಹುದು.
ಸಿಂಹ:ಎಲ್ಲಾದರೂ ಇರು, ಎಂತಾದರು ಇರು ಏನು ಬೇಕಾದರೂ ಮಾಡುವಂತಿರು. ಸೂರ್ಯನಿಗೆ ಸರಿಸಾಟಿಯಾದ ಬೆಳಕಿಲ್ಲ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತು ಅನ್ವಯಿಸುತ್ತದೆ. ದೈವವು ಬೆನ್ನ ಹಿಂದಿದೆ. ಕೇಳಿದ್ದನ್ನು ಪಡೆಯುವ ಕಾಲ. ಗಣಪತಿ ಹಾಗೂ ಷಣ್ಮುಖನನ್ನು ಪ್ರಾರ್ಥಿಸಲೇಬೇಕು.
ತುಲಾ: ಜನ್ಮಜನ್ಮಾಂತರಗಳ ಪುಣ್ಯದ ಸಂಗ್ರಹದಿಂದ ತಕ್ಕಡಿಯಲ್ಲಿ ತೂಗುವ ತುಲಾ ರಾಶಿಗೆ ವಿಶೇಷ ಫಲವನ್ನು ಕೊಡುವ ಭಗವಂತನೇ ಮುಂದೆ ನಿಂತಿರುವಾಗ, ನಿಮ್ಮ ಅಪೇಕ್ಷೆಯನ್ನು ಸಾಕಾರಗೊಳಿಸಿಕೊಳ್ಳುವ ಸಮಯವಾಗಿದೆ. ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ.ಲಕ್ಷ್ಮೀನಾರಾಯಣ ನನ್ನು ಸಾಯಂಕಾಲದಲ್ಲಿ ಕಲಶದಲ್ಲಿ ಆವಾಹನೆ ಮಾಡಿ ಪೂಜಿಸಿ.
ಕನ್ಯಾ: ಈ ಜಗತ್ತಿನಲ್ಲಿ ಹೆಣ್ಣು ಎಂಬ ಮಾಯೆ ಇಲ್ಲದಿದ್ದರೆ, ಲೋಕವೇ ಸೃಷ್ಟಿಯಾಗುತ್ತಿರಲಿಲ್ಲ. ಯಾವ ಜೀವ ರಾಶಿಯೂ ಇರುತ್ತಿರಲಿಲ್ಲ. ಜೀವಕ್ಕೆ ಸರಿಸಾಟಿಯಾದ ಉತ್ತರ ಹೆಣ್ಣಿನ ಜನನ ಶಕ್ತಿ. ಅಲ್ಲಿಗೆ ಕನ್ಯಾರಾಶಿಯವರು ಕಣ್ಣಲ್ಲಿ ಕಣ್ಣಿಟ್ಟು, ಫಲಾಪೇಕ್ಷೆ ಪಡೆಯಲು ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ.
ವೃಶ್ಚಿಕ: ರಾಶ್ಯಾಧಿಪತಿಯು ಜಗತ್ತಿನೊಡೆಯನಾದ ಷಣ್ಮುಖನೇ 12 ಕಣ್ಣುಗಳಿಂದ, 12 ಬಾಹುಗಳಿಂದ ಇಚ್ಛಾಶಕ್ತಿ, ಜ್ಞಾನಶಕ್ತಿಯನ್ನು ಕೊಡುವವನು. ಅನಂತವಾಗಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಶುಭ ಫಲವನ್ನು ಪಡೆಯಬಹುದು.
ಧನಸ್ಸು: ಯಾರ ಹಂಗೂ ಇಲ್ಲದೆ ನಮ್ಮೆಲ್ಲರನ್ನು ವಿನ್ಯಾಸ ಮಾಡಿದ ಸಾಕಾರ ಮೂರ್ತಿ ಭಗವಂತನೇ. ಆರೋಗ್ಯಕ್ಕಾಗಿ ಬೆಟ್ಟದ ನೆಲ್ಲಿಕಾಯಿ ತಿನ್ನಿರಿ. ನೇರಳೆ ಹಣ್ಣಿನ ರಸವನ್ನು ಸವಿಯಿರಿ. ಸಪ್ತಮ ಗುರುವಿನ ಅನುಗ್ರಹದಿಂದ ವಿಶೇಷವಾದ ಫಲಹೊಂದಿ, ನಿಮ್ಮ ಸಾಧನೆ ಎಲ್ಲರೂ ಮೆಚ್ಚುವಂತೆ ಕಾಲವೂ ಅತ್ಯುತ್ತಮವಾಗಿದೆ.
ಮಕರ:ಮಕರ ರಾಶಿ ದ್ವಿತೀಯದಲ್ಲಿ ರಾಹುವಿದ್ದಾನೆ. ಒಮ್ಮೊಮ್ಮೆ ದಿಕ್ಕುತೋಚದಂತೆ ಮಾಡುವುದು ರಾಹುಗ್ರಹವೇ. ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಅನಂತ ಪದ್ಮನಾಭನನ್ನು ಪೂಜಿಸುವ ಕಾಲವಿದು. ಶೇಷಾದಿ ನಾಗ ದೇವರನ್ನು ಪೂಜಿಸಿ ಇಷ್ಟಾರ್ಥವನ್ನು ಸಿದ್ದಿಸಿಕೊಳ್ಳಿ. ಆರೋಗ್ಯವನ್ನು ಕೊಟ್ಟು ಹರಸುತ್ತಾನೆ.
ಕುಂಭ: ಕುಂಭ ರಾಶಿಯವರಿಗೆ ಎರಡನೇ ಮನೆಯಲ್ಲಿ ಶನಿಯಿದ್ದು, ಮನೆಯಲ್ಲಿ ಎಲ್ಲರಿಗೂ ತೊಳಲಾಟ, ನಿಮ್ಮಿಂದ ಉಪಯೋಗ ಪಡೆದುಕೊಂಡ ನಿಮ್ಮವರೆಲ್ಲರೂ ನಿಮ್ಮ ಮೇಲೆ ತಿರುಗಿ ಬಿದ್ದು, ಶಾಂತತೆಯನ್ನು, ಚಿತ್ತವನ್ನು ಕದಲಿಸುತ್ತಾರೆ. ಶನಿ ಅಷ್ಟೋತ್ತರ ಪಠಿಸಿ, ಪ್ರತಿ ಶನಿವಾರದಂದು ಆಂಜನೇಯನನ್ನು ದರ್ಶಿಸಿ ಬನ್ನಿ.
ಮೀನ: ರಾಜ್ಯಾಧಿಪತಿಯು ಚತುರ್ಥದಲ್ಲಿ ಇದ್ದರೂ ಸ್ವಲ್ಪ ಮಟ್ಟಿಗೆ ನಿಮ್ಮನ್ನು ಕಾಪಾಡುತ್ತಾನೆ. ಗುರು ಅಷ್ಟೋತ್ತರ ಪಾರಾಯಣ ಮಾಡಿ. ಹುರಿಗಡಲೆ, ಕೊಬ್ಬರಿ, ಬೆಲ್ಲ ಅದಕ್ಕೆ ತಕ್ಕ ಹಾಗೆ ಕೇಸರಿ, ಏಲಕ್ಕಿ, ಲವಂಗ ಹಾಕಿದ ಭಕ್ಷ್ಯ ಗಣಪತಿಗೆ ಇಟ್ಟು ಪೂಜಿಸಿ, ಪ್ರಸಾದವನ್ನು ಸ್ವೀಕರಿಸಿ. ನಿಮ್ಮ ಇಚ್ಛೆ ಪೂರ್ಣಗೊಳ್ಳುತ್ತದೆ.