

ಬೆಂಗಳೂರು: ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿ, ಸಾಧಕರ ಕುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಈ ಮೂಲಕ ತಮ್ಮ ಬಾಲ್ಯ ಜೀವನದಿಂದ ಹಿಡಿದು ಪ್ರಸ್ತುತ ಡಿಸಿಎಂ ವರೆಗಿನ ಅನೇಕ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ.
‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಆಗಮಿಸಿ ಕುತೂಹಲ ಎಂದೆನಿಸುವ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆಯ ಸಂದರ್ಭದ ಕ್ಷಣಗಳನ್ನು ವೇದಿಕೆಯಲ್ಲಿ ಇಬ್ಬರೂ ನೆನಪಿಸಿಕೊಂಡಿದ್ದಾರೆ. ಮೂರು ದಶಕಗಳಿಂದ ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಪತ್ನಿ ಮಾತನಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪತ್ನಿ ಉಷಾ ಸಾಕಷ್ಟು ಕುತೂಹಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕವಾಗಿ ಅವರು(ಡಿಕೆಶಿ) ಟಫ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಭಾವನಾತ್ಮಕವಾಗಿ (ಎಮೋಷನಲ್) ವರ್ತಿಸುತ್ತಾರೆ. ಏನಾದರು ಆದರೆ ಯಾವುದನ್ನೂ ಹೊರಗೆ ಹೇಳಿಕೊಳ್ಳುವುದಿಲ್ಲ. ಮನೆಗೆ ಬಂದು ಬಂದು ಚಿಕ್ಕ ಮಗುವಿನಂತೆ ಅಳುತ್ತಾರೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ ಸಾಕಷ್ಟು ಸವಾಲುಗಳನ್ನು ಧೈರ್ಯದಿಂದಲೇ ಎದುರಿಸಿರುವ ಡಿ.ಕೆ.ಶಿವಕುಮಾರ್ ಇಂಜೆಕ್ಷನ್ಗೆ ಹೆದರುತ್ತಾರೆ ಎಂಬ ಸಂಗತಿಯನ್ನು ಪತ್ನಿ ಉಷಾ ಬಿಚ್ಚಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ಇಂಜೆಕ್ಷನ್ ತೆಗೆದುಕೊಳ್ಳುವುದು ಅಂದ್ರೆ ಅವರಿಗೆ ಇಷ್ಟ ಆಗಲ್ಲ… ಹೆದರಿಕೊಳ್ಳುತ್ತಾರೆ. ಮಾತನಾಡಿಸುತ್ತಾ ಇಂಜೆಕ್ಷನ್ ಕೊಡಿಸಬೇಕು' ಎಂದು ಹೇಳಿದ್ದಾರೆ.
ಒಂದೇ ದಿನ ಮೈಸೂರಿನಲ್ಲಿ 6-7 ಹುಡುಗಿಯರನ್ನು ನೋಡಿದ್ದೆ. ಉಷಾ ಕುಟುಂಬಸ್ಥರು ನನ್ನನ್ನು ಒಪ್ಪಿರಲಿಲ್ಲ. ನಾನೇ ಒತ್ತಡ ಹಾಕಿ ಅವಳನ್ನು ಆಯ್ಕೆ ಮಾಡಿದೆ. ನಾನು ರಾಜಕಾರಣಿ ಎಂಬುದು ಉಷಾ ಕುಟುಂಬಸ್ಥರಿಗೆ ಗೊತ್ತಿದ್ದರಿಂದ ನಮ್ಮ ಸಂಬಂಧ ಒಪ್ಪಿಕೊಳ್ಳುವುದು ಅವರಿಗೆ ಕಷ್ಟವಾಗಿತ್ತು. ಬಂಗಾರಪ್ಪ, ಖರ್ಗೆ, ಧರಮ್ ಸಿಂಗ್ ಅಂತಹ ನಾಯಕರೆಲ್ಲ ಎಲ್ಲಾ ಸೇರಿ ರಾಜಕಾರಣಿ ಮನೆಯಲ್ಲೇ ನನಗೆ ಹೆಣ್ಣು ಕೊಡಿಸಬೇಕು ಅಂತ ಪ್ರಯತ್ನಿಸಿದ್ದರು' ಎಂದು ಡಿಕೆಶಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿರು.