ಮದುವೆಯಾದ ಎರಡನೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ವಧು; ಸಂತಸದಲ್ಲಿದ್ದ ವರನಿಗೆ ಎದುರಾಯ್ತು ಬಿಗ್​ ಶಾಕ್​!

baby
Published on

ಪ್ರಯಾಗ್​ರಾಜ್​: ಮದುವೆಯಾದ ಎರಡನೇ ದಿನಕ್ಕೆ ವಧುವೊಬ್ಬಳು ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ಸಂಭ್ರಮ ತುಂಬಿದ್ದ ಮನೆಯಲ್ಲಿ ವಿಚಾರ ತಿಳಿಯುತ್ತಿದ್ದಂತೆ ಗದ್ದಲ ಆವರಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ಫೆಬ್ರವರಿ 24ರಂದು ಪ್ರಯಾಗ್​ರಾಜ್​ ಮೂಲದ ಯುವಕನೊಂದಿಗೆ ಯವತಿಯ ಮದುವೆಯಾಗಿದ್ದು, 25ರಂದು ಗಂಡನ ಮನೆಗೆ ಕಳುಹಿಸಿಕೊಡಲಾಗಿತ್ತು. 26ರಂದು ಎಂದಿನಂತೆ ಗಂಡನ ಮನೆಯವರೊಂದಿಗೆ ಮಾತನಾಡುತ್ತಿದ್ದಾಗ ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದುಉ, ಕೂಗಲು ಪ್ರಾರಂಭಿಸಿದ್ದಾಳೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಕೆಲ ಕ್ಷಣದ ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ವಧುವಿನ ಕುಟುಂಬಸ್ಥರ ನಡೆಯನ್ನು ವರನ ಮನೆಯವರು ಖಂಡಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಜಕೊಂಡು ವಿಚಾರಣೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರನ ಸಹೋದರಿ ಮಾತನಾಡಿ, ಆಕೆ ಮದುವೆ ಹಾಗೂ ಶಾಸ್ತ್ರದ ಸಮಯದಲ್ಲಿ ಹೆಚ್ಚಾಗಿ ಲೆಹೆಂಗಾವನ್ನು ಧರಿಸಿದ್ದಳು. ಮೊದಲಿಗೆ ನಮಗೆ ಏಕೆ ಎಂದು ಅರ್ಥವಾಗಲಿಲ್ಲ. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ಏಕೆ ಎಂದು ನಮಗೆ ತಿಳಿಯಿತು. ಮಗುವಿನ ತಂದೆ ಯಾರೆಂದು ತಿಳಿಯಬೇಕು. ಈ ವಿಚಾರವನ್ನು ಮುಚ್ಚಿಟ್ಟು ನಮಗೆ ಮೋಸ ಮಾಡಿದ ವಧುವಿನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವರನ ಸಹೋದರಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net