

| ಯಂಕಣ್ಣ ಸಾಗರ್ ಬೆಂಗಳೂರು
ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧಕ ಪ್ರಕರಣಗಳ ಪರಿಣಾಮಕಾರಿ ತನಿಖೆ ದೃಷ್ಟಿಯಿಂದ ರಾಜ್ಯದ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ಮೇಲ್ದರ್ಜೆಗೇರಿಸುವ ಕುರಿತು ಸೆ.14ರ ಮಧ್ಯಾಹ್ನ 12 ಗಂಟೆಯೊಳಗೆ ಡಿಜಿಪಿ ಕೇಂದ್ರ ಕಚೇರಿಗೆ ಅಭಿಪ್ರಾಯ ಕಳಿಸುವಂತೆ ಎಲ್ಲ ಜಿಲ್ಲಾ ಎಸ್ಪಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದು, ಅಭಿಪ್ರಾಯ ಸ್ವೀಕೃತವಾದ ಬಳಿಕ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಶುರುವಾಗಲಿದೆ.
ಮೇಲ್ದರ್ಜೆಗೇರಿಸಲು ಆಯ್ಕೆಯಾಗಿರುವ ಪೊಲೀಸ್ ಠಾಣೆಗಳಲ್ಲಿ ಸದ್ಯ ಸಬ್ ಇನ್ಸ್ಪೆಕ್ಟರ್ಗಳ ಉಸ್ತುವಾರಿ ಇದೆ. ಸರ್ಕಲ್ ಇನ್ಸ್ಪೆಕ್ಟರ್ಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇನ್ಸ್ಪೆಕ್ಟರ್ಗಳ ಅನುಮತಿ ಇಲ್ಲದೆ ಅಥವಾ ಅವರ ಗಮನಕ್ಕೆ ತರದೆ ನೇರವಾಗಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಬ್ ಇನ್ಸ್ಪೆಕ್ಟ್ಗಳಿಗೆ ಅಧಿಕಾರವಿಲ್ಲ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ನಿರ್ವಹಣೆ ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಪಿಎಸ್ಐ ಠಾಣಾಧಿಕಾರಿಗಳಿರುವ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಠಾಣಾಧಿಕಾರಿಗಳನ್ನಾಗಿಸಿ ಮೇಲ್ದರ್ಜೆಗೇರಿಸಲು ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಶಿವಮೊಗ್ಗ ಸೇರಿದಂತೆ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಗುರುತಿಸಲಾಗಿದೆ ಎಂದು ಎಡಿಜಿಪಿ ಡಾ. ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ
ಹಾಸನ
ಚಾಮರಾಜನಗರ
ಮಂಡ್ಯ
ಹಾವೇರಿ
ಶಿವಮೊಗ್ಗ
ದಕ್ಷಿಣ ಕನ್ನಡ
ಚಿಕ್ಕಮಗಳೂರು
ಉಡುಪಿ
ಬಾಗಲಕೋಟೆ
ಗದಗ
ಧಾರವಾಡ
ವಿಜಯಪುರ
ಬಳ್ಳಾರಿ
ಕೊಪ್ಪಳ
ಮಂಡ್ಯ
ಉತ್ತರ ಕನ್ನಡ
ಶಿವಮೊಗ್ಗ