Web Exclusive: ಪಿ.ಜಿ. ಪ್ರೀ-ಪ್ಯಾರಾ ಕ್ಲಿನಿಕಲ್ ಕೋರ್ಸ್​ಗಳಿಗಿಲ್ಲ ಬೇಡಿಕೆ; 979 ಸೀಟುಗಳು ಉಳಿಕೆ

Pre Para
Published on

 | ದೇವರಾಜ್ ಎಲ್. ಬೆಂಗಳೂರು

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳಲ್ಲಿ ಎಲ್ಲರೂ ಕ್ಲಿನಿಕಲ್ ಕೋರ್ಸ್​ಗಳಾದ ಚರ್ಮರೋಗ, ಮಕ್ಕಳ ರೋಗ, ಸ್ತ್ರೀರೋಗ ಕೋರ್ಸ್​ಗಳಿಗೆ ಡಿಮ್ಯಾಂಡ್ ಇದ್ದು, ಪ್ರೀ-ಪ್ಯಾರಾ ಕ್ಲಿನಿಕಲ್ ಕೋರ್ಸ್​ಗಳಾದ ವಿಧಿ ವಿಜ್ಞಾನ, ರೋಗಶಾಸ್ತ್ರ, ಫಾರ್ವಕಾಲಜಿ, ಮೈಕ್ರೋಬಯೋಲಜಿಯನ್ನು ಕೇಳುವವರೇ ಇಲ್ಲದಂತಾಗಿದೆ.

2020ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳ ಸೀಟು ಹಂಚಿಕೆ ನಡೆದಿದ್ದು, ವೈದ್ಯಕೀಯದಲ್ಲಿ 715 ಮತ್ತು ದಂತವೈದ್ಯಕೀಯದಲ್ಲಿ 264 ಸೀಟುಗಳು ಖಾಲಿ ಉಳಿದಿವೆ. ವೈದ್ಯಕೀಯದಲ್ಲಿ ಉಳಿಕೆಯಾಗಿರುವ ಸೀಟುಗಳೆಲ್ಲಾ ಪ್ರೀ ಮತ್ತು ಫ್ಯಾರಾ ಕ್ಲಿನಿಕಲ್ ಕೋರ್ಸ್​ಳಾಗಿವೆ. ಇದನ್ನೂ ಓದಿ: Web Exclusive: 48 ಲಕ್ಷ ವಾಹನಗಳು ಗುಜರಿಗೆ; 15 ವರ್ಷಕ್ಕಿಂತ ಹಳೆಯ ವಾಹನಗಳೆಲ್ಲ ಸ್ಕ್ರ್ಯಾಪ್​

ಕಳೆದ ಮೂರು ವರ್ಷಗಳಲ್ಲಿ ಉಳಿಕೆಯಾಗುತ್ತಿರುವ ಸೀಟುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಉದ್ಯೋಗವಕಾಶದ ಕುಂಠಿತ ಮತ್ತು ಪ್ರೀ ಮತ್ತು ಫ್ಯಾರಾ ಕ್ಲಿನಿಕಲ್ ಕೊರ್ಸ್​ಗಳಲ್ಲಿ ಪ್ರಾಕ್ಟಿಸ್ ಮಾಡುವುದಕ್ಕೆ ಅವಕಾಶ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದು ಕೂಡ ಕಡಿಮೆಯಾಗಿದೆ. ಕಳೆದ ಮೂರು ವರ್ಷದ ಅಂಕಿ -ಅಂಶಗಳನ್ನು ಗಮನಿಸಿದಾಗ 1,662 ವೈದ್ಯಕೀಯ ಮತ್ತು 609 ದಂತವೈದ್ಯಕೀಯ ಸೀಟುಗಳು ಉಳಿದಿವೆ.

4 ಬಾರಿ ಕೌನ್ಸೆಲಿಂಗ್: 2020ರ ಪಿಜಿ ಕೌನ್ಸೆಲಿಂಗ್ ಅನ್ನು ಇದೇ ಮೊದಲ ಬಾರಿಗೆ ಆನ್​ಲೈನ್ ಮೂಲಕ ನಡೆಸಲಾಯಿತು. ಲಭ್ಯವಿದ್ದ 2,955 ವೈದ್ಯಕೀಯ 924 ದಂತ ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಿತು. ಮೇನಲ್ಲಿ ಆರಂಭವಾದ ಪ್ರವೇಶ ಪ್ರಕ್ರಿಯೆ ಆಗಸ್ಟ್ ಕೊನೆಯವಾರದವರೆಗೂ ನಡೆಯಿತು. ಸತತ ಮೂರು ಬಾರಿ ಆನ್​ಲೈನ್ ಕೌನ್ಸೆಲಿಂಗ್ ಹಾಗೂ ಒಂದು ಬಾರಿ ಮುಂದುವರೆದ ಕೌನ್ಸೆಲಿಂಗ್ ನಡೆಸಿ ಸೀಟುಗಳನ್ನು ಕೆಇಎ ಭರ್ತಿ ಮಾಡಿತು.

ಕೋರ್ಸ್​ಗಳು: ಪ್ರೀ-ಕ್ಲಿನಿಕಲ್: ಅನಾಟಮಿ, ಬಯೋ ಕೆಮಿಸ್ಟ್ರಿ, ಸೈಕೋಲಜಿ, ಪ್ಯಾರಾ ಕ್ಲಿನಿಕಲ್: ವಿಧಿ ವಿಜ್ಞಾನ, ಸಮುದಾಯ ಔಷಧ, ರೋಗಶಾಸ್ತ್ರ, ಫಾರ್ವಕಾಲಜಿ, ಮೈಕ್ರೋಬಯೋಲಜಿ. ಇದನ್ನೂ ಓದಿ: WEB EXCLUSIVE|ಪ್ರಕೃತಿ ಶಿಬಿರಗಳು ಜೆಎಲ್​ಆರ್ ತೆಕ್ಕೆಗೆ ?ವನ್ಯಜೀವಿ ಪ್ರಿಯರಿಂದ ಆಕ್ಷೇಪ  

ಕ್ಲಿನಿಕಲ್: ಚರ್ಮರೋಗ, ಮಕ್ಕಳ ರೋಗ, ಸ್ತ್ರೀರೋಗ, ಅರವಳಿಕೆ, ಇಎನ್​ಟಿ, ನೇತ್ರಶಾಸ್ತ್ರ, ಮೊಳೆ ಚಿಕಿತ್ಸೆಕರು ಈ ಕೋರ್ಸ್​ಗಳು ಬರಲಿವೆ.

ಬೇಡಿಕೆ ಏಕೆ?: ಪ್ರೀ-ಪ್ಯಾರಾ ಕ್ಲಿನಿಕಲ್​ನಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗವಕಾಶಗಳು ಕಮ್ಮಿ. ಅಲ್ಲದೆ, ಅವರು ಸ್ವಂತವಾಗಿ ಕ್ಲಿನಿಕಲ್ ಆರಂಭಿಸುವುದು ಕೂಡ ಕಷ್ಟ. ಇದರಿಂದಾಗಿ ಹೆಚ್ಚಿನವರು ವ್ಯಾಸಂಗ ಮಾಡುವುದಿಲ್ಲ. ಕ್ಲಿನಿಕಲ್ ಕೋರ್ಸ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಅಪ್ತ ಸಮಾಲೋಚನೆಗೆ 450 ರೂ.ಗಳಿಂದ 800 ರೂ. ಪ್ರತಿ ರೋಗಿಯಿಂದ ವಸೂಲಿ ಮಾಡುತ್ತಿದ್ದಾರೆ. ಈ ಸೀಟುಗಳು ಸಹ ಖಾಸಗಿ ಕಾಲೇಜಿನಲ್ಲಿ ಕೋಟ್ಯಾಂತರ ರೂಪಾಯಿಗಳಿಗೆ ಹರಾಜಾಗುತ್ತದೆ.

ಪಿಜಿ ಸೀಟುಗಳ ಮಾಹಿತಿ

2020: ಕೋರ್ಸ್ ಇನ್​ಟೇಕ್ ಭರ್ತಿ ಖಾಲಿ

ವೈದ್ಯಕೀಯ 2955 2240 715

ದಂತವೈದ್ಯಕೀಯ 924 660 264

2019: ವೈದ್ಯಕೀಯ 2600 1958 642

ದಂತವೈದ್ಯಕೀಯ 912 670 242

2018: ವೈದ್ಯಕೀಯ 2275 1970 305

ದಂತವೈದ್ಯಕೀಯ 913 810 103

ಪ್ರತಿ ವರ್ಷ ಈ ಸೀಟು ಪಡೆದುಕೊಳ್ಳುವ ವಿಚಾರದಲ್ಲಿ ಟ್ರೆಂಡ್ ಬದಲಾಗುವುದಿಲ್ಲ. ಪ್ರೀ ಮತ್ತು ಫ್ಯಾರಾ ಕ್ಲಿನಿಕಲ್ ಕೋರ್ಸ್​ಗಳನ್ನು ತೆಗೆದುಕೊಳ್ಳವರೇ ಇಲ್ಲದಂತಾಗಿದೆ.   |ಡಾ.ಸಚ್ಚಿದಾನಂದ, ಕುಲಪತಿ,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net