

ಅರಕಲಗೂಡು: ಪಟ್ಟಣದಲ್ಲಿ ಸೋಮವಾರ ಮುಸ್ಲಿಮರು ಈದ್ ಉಲ್ ಫಿತರ್‌ಅನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ವಿವಿಧ ಬಡಾವಣೆಗಳಿಂದ ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಜಾಮಿಯಾ ಮಸೀದಿಯ ಧರ್ಮಗುರು ಹಫೀಜ್ ನಯಾಜುಲ್ಲಾ ಷರೀಫ್ ಅವರು ಹಬ್ಬದ ಸಂದೇಶ ನೀಡಿದರು. ಶಾಸಕ ಎ.ಮಂಜು ಜಾಮೀಯಾ ಮಸೀದಿಗೆ ಭೇಟಿ ನೀಡಿ ನೆರೆದಿದ್ದವರಿಗೆ ಶುಭ ಕೋರಿದರು.
ವಿವಿಧೆಡೆ ಪ್ರಾರ್ಥನೆ: ತಾಲೂಕಿನ ಕೊಣನೂರು, ರಾಮನಾಥಪುರ, ರುದ್ರಪಟ್ಟಣ, ಬಸವಾಪಟ್ಟಣ, ಕಟ್ಟೇಪುರ, ಮಧುರನಹಳ್ಳಿ, ಸಿದ್ದಾಪುರ, ಹಂಡ್ರಂಗಿ, ಅಬ್ಬೂರು ಮಾಚಗೌಡನಹಳ್ಳಿ, ಹೊಳಲಗೋಡು ಗ್ರಾಮದಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಸಿದರು.