

ಹೊಳೆನರಸೀಪುರ: ಪಟ್ಟಣದಲ್ಲಿ ಈದ್ ಉಲ್ ಫಿತರ್ ಹಬ್ಬ ಆಚರಿಸಿದ ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆಗೆ ತೊಡಗುವ ಮೂಲಕ ಮೌನವಾಗಿ ವಕ್ಛ್ ಕಾಯ್ದೆ ತಿದ್ದುಪಡಿ ವಿರೋಧಿಸುವ ಸಂದೇಶ ಬೀರಿದರು.
ರಂಜಾನ್ ಮಾಸಾಚರಣೆಯ ಉಪವಾಸ ನಂತರ ಸೋಮವಾರ ಹಬ್ಬ ಆಚರಿಸಿ, ಪರಸ್ಪರ ಶುಭಾಶಯ ಕೋರಿದರು. ಸಂಸದ ಶ್ರೇಯಸ್ ಎಂ.ಪಟೇಲ್ ಸಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಶುಭ ಕೋರಿದರು. ಗುರುಗಳಾದ ಅಲಿ ರಜಾ ಮೌಲಾನಾ, ಶಾಂತಿ, ಸೌರ್ಹಾದತೆ ಹಾಗೂ ಸಹಬಾಳ್ವೆಯ ಸಂದೇಶ ನೀಡಿದರು. ಹಲವು ಮುಸ್ಲಿಂ ಹಿರಿಯ ಮುಖಂಡರು ಹಾಗೂ ಮೌಲ್ವಿಗಳು ಹಾಜರಿದ್ದರು.