

ನವದೆಹಲಿ: ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಮಧ್ಯೆ ಭಾರೀ ಹಣಾಹಣಿ ನಡೆಯುತ್ತಿದ್ದು, ಪ್ರಸ್ತುತ 270 ಸೀಟ್ಗಳಿಂದ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 217 ಸೀಟ್ಗಳನ್ನು ಪಡೆದುಕೊಂಡಿದೆ.
ಈಗಾಗಲೇ ಗೆಲುವಿನ ನಗೆ ಬೀರಿರುವ ಬಿಜೆಪಿ ನಾಯಕರು, ಹಲವು ರಾಜ್ಯಗಳಲ್ಲಿ ಸಿಹಿ ಹಂಚಿ, ಸಂಭ್ರಮಾಚರಣೆ ಪ್ರಾರಂಭಿಸಿದ್ದಾರೆ. ಮೇಲ್ನೋಟಕ್ಕೆ ಎನ್ಡಿಎಗೆ ಗೆಲುವು ಖಚಿತ ಎಂದು ಅನಿಸಿದರೂ ಸಹ ಅಧಿಕೃತ ಘೋಷಣೆಗಾಗಿ ಮಧ್ಯಾಹ್ನ 12 ಗಂಟೆಯವರೆಗೂ ಕಾದು ನೋಡಬೇಕಿದೆ. ಸದ್ಯ ಗೆಲುವಿನ ಖುಷಿಯಲ್ಲಿರುವ ಬಿಜೆಪಿ ನಾಯಕ ಶಹನವಾಜ್ ಹುಸೇನ್, ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ 300ಕ್ಕೂ ಅಧಿಕ ಸೀಟ್ಗಳನ್ನು ನಾವು ಗೆಲ್ತೇವೆ ಎಂದು ಹೇಳಿದ್ದರು. ಬರೆದಿಟ್ಟುಕೊಳ್ಳಿ, ಖಂಡಿತವಾಗಿ ಬಿಜೆಪಿ 400 ಸೀಟ್ಗಳ ಗಡಿದಾಟಲಿದೆ. ಅಂತಿಮ ಫಲಿತಾಂಶದಲ್ಲಿ ಎನ್ಡಿಎಗೆ ಮೇಲುಗೈ. ಪ್ರಧಾನಿ ನರೇಂದ್ರ ಮೋದಿ ಗೆಲುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹುಸೈನ್ ಹೆಚ್ಚಿನ ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).