

ಇರಾನ್ ಮೇಲೆ ರಾತ್ರಿಯಿಡೀ ಇಸ್ರೇಲ್ ವೈಮಾನಿಕ ಪಡೆ ನಡೆಸಿದ ಭೀಕರ ದಾಳಿಯಲ್ಲಿ ಇರಾನ್‌ನ ಮೋಸ್ಟ್ ಸೀನಿಯರ್ ಕಮಾಂಡರ್ ಅಲಿ ಶಾನ್ಮಾನಿ ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ.
ಟೆಹ್ರಾನ್: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಸಂಘರ್ಷ ತೀವ್ರಗೊಂಡಿದ್ದು, ಇಂದು(17) ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ಮಿಲಿಟರಿಯ ಉನ್ನತ ಕಮಾಂಡರ್, ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಪರಮಾಪ್ತ అలి ಶಾದ್ಮಾನಿಯನ್ನು ಹ*ತ್ಯೆ ಮಾಡಲಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಂಘರ್ಷ 5ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳಿಂದ ಕ್ಷಿಪಣಿ ದಾಳಿಗಳ ಸುರಿಮಳೆಯೇ ಹರಿದುಬರುತ್ತಿವೆ. ಕ್ಷಿಪಣಿ, ಡೋನ್ ದಾಳಿಗಳ ಸುಳಿಯಲ್ಲಿ ಸಿಲುಕಿ ನೂರಾರು ನಾಗರೀಕರು ಪ್ರಾಣಬಿಟ್ಟರೂ ಎರಡೂ ದೇಶಗಳ ಮಧ್ಯೆ ಭುಗಿಲೆದ್ದಿರುವ ದ್ವೇಷದ ಕಿಚ್ಚು ಸದ್ಯ ಆರುವಂತೆ ಕಾಣುತ್ತಿಲ್ಲ.
ಯುದ್ಧದ ಐದನೇ ದಿನದಲ್ಲಿ ಐಡಿಎಫ್ ಇರಾನ್‌ನ ಸೇನಾ ಮುಖ್ಯಸ್ಥ, ಆಡಳಿತದ ಉನ್ನತ ಮಿಲಿಟರಿ ಕಮಾಂಡರ್ ಅವರನ್ನು ಕೊಲ್ಲಲಾಗಿದೆ. ನಿಖರವಾದ ಗುಪ್ತಚರ ವರದಿಯ ಬಳಿಕ, ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಮತ್ತು ಖಮೇನಿಯ ಆಪ್ತ ಮಿಲಿಟರಿ ಸಲಹೆಗಾರ ಅಲಿ ಶಾದ್ಮಾನಿ ಮಧ್ಯ ಟೆಹ್ರಾನ್‌ನಲ್ಲಿ IAF ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು IDF ತನ್ನ X ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್ ಅಲಿ ಶಾದ್ಮಾನಿಯನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಶಾದ್ಮಾನಿ 'ಖತಮ್-ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ'ಯ ಮುಖ್ಯಸ್ಥರಾಗಿದ್ದರು. ಇಸ್ರೇಲಿ ಮಿಲಿಟರಿ ವಕ್ತಾರರ ಪ್ರಕಾರ, ಶಾದ್ಮನಿ ಇರಾನ್‌ನ ಅತ್ಯಂತ ಹಿರಿಯ ಮಿಲಿಟರಿ ಕಮಾಂಡರ್ ಆಗಿದ್ದರು. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಅತ್ಯಂತ ಹತ್ತಿರದವರಾಗಿದ್ದರು ಎಂದು ಹೇಳಲಾಗಿದೆ.
(ಏಜೆನ್ಸೀಸ್)