ಚುನಾವಣೆ ಸಮಯದಲ್ಲಿ ಬರುವವರು ನಮಗೆ ಬೇಡ; ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ

ಕೋಲಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಬಿಜೆಪಿ ಕೋಲಾರ ವಿಧಾನಸಭಾ ಕ್ಷೇತ್ರದ ಬೂತ್​ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಸಚಿವ ಮುನಿರತ್ನ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಮಾಜಿ ಶಾಸಕರಾದ ವೈ.ಸಂಪಂಗಿ, ಮಂಜುನಾಥಗೌಡ, ಬೂತ್​ ವಿಜಯ ಅಭಿಯಾನ ಜಿಲ್ಲಾ ಸಂಚಾಲಕ ಕೆ.ಚಂದ್ರಾರೆಡ್ಡಿ, ವಿಸ್ತಾರಕಿ ನಿರ್ಮಲಾ ಇದ್ದರು.
ಕೋಲಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಬಿಜೆಪಿ ಕೋಲಾರ ವಿಧಾನಸಭಾ ಕ್ಷೇತ್ರದ ಬೂತ್​ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಸಚಿವ ಮುನಿರತ್ನ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಮಾಜಿ ಶಾಸಕರಾದ ವೈ.ಸಂಪಂಗಿ, ಮಂಜುನಾಥಗೌಡ, ಬೂತ್​ ವಿಜಯ ಅಭಿಯಾನ ಜಿಲ್ಲಾ ಸಂಚಾಲಕ ಕೆ.ಚಂದ್ರಾರೆಡ್ಡಿ, ವಿಸ್ತಾರಕಿ ನಿರ್ಮಲಾ ಇದ್ದರು.
Published on

ಕೋಲಾರ: ಲಾಭಕ್ಕಾಗಿ ಚುನಾವಣೆ ಸಮಯದಲ್ಲಿ ಬರುವ ನಾಯಕರು ನಮಗೆ ಬೇಡ. ಪಕ್ಷಕ್ಕಾಗಿ ದುಡಿಯುವವರು ಮಾತ್ರ ನಮ್ಮೊಂದಿಗೆ ಇರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಬಿಜೆಪಿ ಕೋಲಾರ ವಿಧಾನಸಭೆ ಕ್ಷೇತ್ರದ ಬೂತ್​ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆ ಹತ್ತಿರ ಬಂದಾಗ ನನ್ನ ಬಳಿ ಜನ ಇದ್ದಾರೆ ಎಂದು ಲೆಕ್ಕ ಕೊಡಲು ಬರುವವರು ಬಿಜೆಪಿ ಮುಖಂಡರಲ್ಲ. ನಮ್ಮ ಬಳಿ 20 ಕಾರ್ಯಕರ್ತರು ಇದ್ದಾರೆ ಎಂದು ಹೇಳುತ್ತಾರೆ. ಆದರೆ, ಅವರಲ್ಲಿ 10 ಮಂದಿ ಬೇರೆ ಪಕ್ಷದವರ ಜತೆ ಗುರುತಿಸಿಕೊಂಡಿರುತ್ತಾರೆ. ಅಂತಹ ವಿಚಾರಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

ನಮ್ಮೆಲ್ಲರನ್ನೂ ಶಾಸಕರನ್ನಾಗಿಸುವ ಶಕ್ತಿ ನಿಮಗೆ ಇರುತ್ತದೆ. ಶಾಸಕರು ನಿಮ್ಮವರೇ ಆದರೆ ನೀವು ಹೇಳಿದ ಕೆಲಸಗಳಾಗುತ್ತದೆ. ಒಂದು ವೇಳೆ ನಿಮ್ಮ ಶಾಸಕರು ಇಲ್ಲದಿದ್ದರೆ ಬೇರೆಯವರ ಎಂಎಲ್​ಎ ಎಂದು ಹೇಳಬೇಕಾಗುತ್ತದೆ. ಅದಕ್ಕಾಗಿ 2-&3 ತಿಂಗಳು ಕಷ್ಟ ಪಟ್ಟರೆ 5 ವರ್ಷ ಸುಖವಾಗಿ ಇರಬಹುದು ಎಂದರು.

ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಈ ಬಾರಿ ಕೋಲಾರ ಕ್ಷೇತ್ರ ಸೇರಿದಂತೆ 4 ಶಾಸಕರು ಆಯ್ಕೆಯಾಗಬೇಕು. ಅದಕ್ಕಾಗಿ ಬೂತ್​ ಮಟ್ಟದಲ್ಲಿ ಶ್ರಮ ಹಾಕಿದರೆ, ಪ್ರತಿ ಬೂತ್​ನಲ್ಲಿ 400 ಮತ ಪಡೆದರೂ 1 ಲಕ್ಷ ಮತಗಳು ಬರುತ್ತವೆ ಎಂದರು.

ಓಂಶಕ್ತಿ ಚಲಪತಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಇಬ್ಬರಲ್ಲಿ ಯಾರಿಗೇ ಟಿಕೆಟ್​ ನೀಡಿದರೂ ಎಲ್ಲರೂ ಕೆಲಸ ಮಾಡಬೇಕು. ಇವರಿಬ್ಬರೂ ಅಣ್ಣ&ತಮ್ಮಂದಿರು. ಅಭಿಯಾನದ ಹೆಸರಿನಲ್ಲೇ ವಿಜಯ ಇದೆ. ಅದನ್ನು ನಮ್ಮದಾಗಿಸಿಕೊಳ್ಳಬೇಕು. ಅದಕ್ಕಾಗಿ ಸರ್ಕಾರದ ಸಾಧನೆಗಳು, ಯೋಜನೆಗಳನ್ನು ಜನರ ಮುಂದಿಡಬೇಕು ಎಂದರು.

ಮಾಜಿ ಸಚಿವ ವರ್ತೂರು ಪ್ರಕಾಶ್​ ಮಾತನಾಡಿ, ಕೋಲಾರಕ್ಕೆ ನರೇಂದ್ರ ಮೋದಿ, ಅಮಿತ್​ ಷಾ, ಸಿಎಂ ಬಂದಾಗ ಲಕ್ಷ ಮಂದಿ ಸೇರಿ, ಕೋಲಾರ ಪೂರ್ತಿ ಜಾಮ್​ ಆಗಬೇಕು. ಸಿದ್ದರಾಮಯ್ಯ ಜ.9ರಂದು ಕೋಲಾರಕ್ಕೆ ಬರುವುದಾದರೆ ಅಂದು ನಾವು ಏನು ಮಾಡಬೇಕು ಎನ್ನುವುದನ್ನು ಜ.8ರಂದು ರಾತ್ರಿ ಹೇಳುತ್ತೇನೆ ಎಂದು ಹೊಸ ಬಾಂಬ್​ ಸಿಡಿಸಿದರು.

ಅಂದು ಇತಿಹಾಸ ಸೃಷ್ಟಿಯಾಗಿ ದೆಹಲಿಗೆ ವಿಚಾರ ತಲುಪಬೇಕಿದ್ದು, ಆ ಶಕ್ತಿ ನಿಮ್ಮಿಂದ ಬರಬೇಕು. 50 ಸಾವಿರಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕು. ಸಚಿವ ಮುನಿರತ್ನ ಆನೆ ಬಲದಂತೆ ನನ್ನ ಜತೆಗಿದ್ದಾರೆ, ಪೊಲೀಸ್​, ತಹಸೀಲ್ದಾರ್​, ಅಧಿಕಾರಿಗಳು ನಮ್ಮ ಮಾತು ಕೇಳುವಂತೆ ಅಧಿಕಾರ ಕೊಟ್ಟಿರುವುದು ಬಿಜೆಪಿ ಎಂದು ತಿಳಿಸಿದರು.

ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್​, ಬಂಕ್​ ಮಂಜುನಾಥ್​, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಮತ್ತಿತರರು ಇದ್ದರು.

ಕೋಲಾರಕ್ಕೆ ಸಿದ್ದರಾಮಯ್ಯ ಅಲ್ಲ ಸೋನಿಯಾಗಾಂಧಿ, ರಾಹುಲ್​ಗಾಂಧಿ ಬಂದರೂ ಸೋಲು ಖಚಿತ ಎನ್ನುವ ಎಚ್ಚರಿಕೆಯನ್ನು ಬೂತ್​ ಮಟ್ಟದಿಂದಲೇ ನಾವು ಸಿದ್ಧರಾಗಿ ನೀಡಬೇಕು. ಸಿಎಂ ಆಗಿದ್ದವರು ತಿಂಗಳಾನುಗಟ್ಟಲೆ ಕ್ಷೇತ್ರಕ್ಕಾಗಿ ಹುಡುಕಾಟ ಎಂದರೆ ಯಾವ ಪರಿಸ್ಥಿತಿ?. ರಾಹುಲ್​ಗಾಂಧಿ ಕೇರಳಕ್ಕೆ ಬರುತ್ತಾರೆ ಎಂದರೆ ಯಾವ ಮಟ್ಟಕ್ಕೆ ಕಾಂಗ್ರೆಸ್​ನವರ ಸ್ಥಿತಿ ಇದೆ ಎಂಬುದು ಅರ್ಥವಾಗುತ್ತದೆ. | ಎಸ್​.ಮುನಿಸ್ವಾಮಿ, ಸಂಸದ

ನಮ್ಮಲ್ಲಿ ಪ್ರಬಲ ಅಭ್ಯರ್ಥಿ ಇದ್ದಾರೆ;ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ

ಸಚಿವ ಮುನಿರತ್ನ

 ಕೋಲಾರ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಎಂದು ಅವರು ಘೋಷಣೆ ಮಾಡಲಿ, ಮಾಡದೇ ಇರಲಿ, ಅದು ನಮಗೆ ಬೇಡವಾದ ವಿಷಯ. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್​ ವಿಜಯ ಅಭಿಯಾನ ಕುರಿತು ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಎನ್ನುವುದನ್ನು ಯಾರೂ ಊಹೆ ಮಾಡಲಾಗುವುದಿಲ್ಲ. ನಮ್ಮಲ್ಲಿ ಪ್ರಬಲ ಅಭ್ಯರ್ಥಿ ಇದ್ದಾರೆ. ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಯಾಗಿದ್ದವರು ಬಂದು ಗೆಲ್ತಾರೆ ಎನ್ನುವುದು ಕಾಂಗ್ರೆಸ್ಸಿಗರ ಭ್ರಮೆ ಎಂದರು.

ಸಿದ್ದುನ್ಯಾಮಗೌಡರು ಸಣ್ಣವರಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಗಡೆ ಅವರನ್ನು ಸೋಲಿಸಿದ ಉದಾಹರಣೆ ಇದೆ. ಹಾಗಾಗಿ ನಾನೇ ಗೆದ್ದು ಬಿಡುವೆ ಎಂದುಕೊಳ್ಳುವುದು ಅವರ ಭ್ರಮೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತನಾಡಿದ ಅವರು, ಅದು ಮುಖ್ಯಮಂತ್ರಿಗಳಿಗಿರುವ ಪರಮಾಧಿಕಾರ. ಅವರು ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳಬಹುದು ಎಂದು ಹೇಳಿದರು.

ನಮ್ಮ ಗುರಿ 125. ಅದನ್ನು ಸಾಧಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಂಗ್ರೆಸ್​ನಿಂದ ಬಿಜೆಪಿ ಸೇರಲು ಕಾಯುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ನಮ್ಮೊಂದಿಗೆ ಇರುತ್ತಾರೆ. 7 ಗಂಟೆಗೆ ಅವರೊಂದಿಗೆ ಇರುತ್ತಾರೆ. ಇದರಲ್ಲಿ ಯಾರನ್ನು ತೆಗೆದುಕೊಳ್ಳಬೇಕು. ಯಾರನ್ನು ತೆಗೆದುಕೊಳ್ಳಬಾರದು ಎಂಬ ಯೋಚನೆಯಲ್ಲಿದ್ದೇವೆ ಎಂದರು.

ಉದ್ಯಮಿ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ವ್ಯಕ್ತಿಯಾದರೂ ಕಾನೂನು ಏನು ಮಾಡಬೇಕೊ ಅದೇ ಮಾಡುತ್ತದೆ. ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net