VIDEO ಜೆಎನ್​ಯು ಹಿಂಸಾಚಾರ| ನಾವು ಕಲಿಯುತ್ತಿದ್ದಾಗ ಇಂತಹ ತುಕ್ಡೆ ತುಕ್ಡೆ ಗ್ಯಾಂಗ್​ಗಳು ಜೆಎನ್​ಯು ನಲ್ಲಿ ಇರಲಿಲ್ಲ ಎಂದ ವಿದೇಶಾಂಗ ಸಚಿವ ಎಸ್​ ಜೈಶಂಕರ್​

Jaishankar
Published on

ನವದೆಹಲಿ: ನಾವು ಕಲಿಯುತ್ತಿದ್ದ ಸಂದರ್ಭದಲ್ಲಿ ಇಂತಹ ತುಕ್ಡೆ ತುಕ್ಡೆ ಗ್ಯಾಂಗ್​ಗಳು ಜವಾಹರಲಾಲ್ ನೆಹರು ವಿವಿಯಲ್ಲಿ ಇರಲಿಲ್ಲಿ ಎಂಬುದನ್ನು ನಿಶ್ಚಿತವಾಗಿ ಹೇಳಬಲ್ಲೆ ಎಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

ಜೆಎನ್​ಯು ಕ್ಯಾಂಪಸ್​ನಲ್ಲಿ ಭಾನುವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಕ್ಯಾಂಪಸ್​ನಲ್ಲಿ ನಡೆದ ಹಿಂಸಾಚಾರ ಖಂಡನೀಯ. ಅದು ವಿಶ್ವವಿದ್ಯಾನಿಲಯದ ಸಂಪ್ರದಾಯವೂ ಅಲ್ಲ, ಸಂಸ್ಕೃತಿಯೂ ಅಲ್ಲ ಎಂದು ಆ ವಿವಿಯ ಹಳೆಯ ವಿದ್ಯಾರ್ಥಿ ಎಂಬ ನೆಲೆಯಲ್ಲಿ ಕ್ಷಿಪ್ರ ಪ್ರತಿಕ್ರಿಯೆ ನೀಡಿ ಗಮನಸೆಳೆದಿದ್ದಾರೆ.

ತುಕ್ಡೆ ತುಕ್ಡೆ ಎಂಬ ಪದವನ್ನು ಜೆಎನ್​ಯುನಲ್ಲಿ ಕೆಲವು ವಾಮಪಂಥೀಯ ಮತ್ತು ಕಾಂಗ್ರೆಸ್ ಬೆಂಬಲಿತ ಸಂಘಟನೆಗಳು ಬಳಸಿದ್ದು, ದೇಶ ವಿರೋಧಿ ಘೋಷಣೆಗಳನ್ನು ಕೂಗಿ ದೇಶದ ಗಮನಸೆಳೆದಿದ್ದರು. ಈಗ ಆ ಪದವನ್ನು ಬಹುತೇಕರು ಈ ಸಂಘಟನೆಗಳನ್ನು ಗುರುತಿಸುವ ಸಲುವಾಗಿ ಬಳಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net